ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಐಎಂಡಿಬಿ ಪ್ರಕಟಿಸಿದ ಟಾಪ್ 100 ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಲಭಿಸಿದೆ. ಶಾರುಖ್ ಖಾನ್ ಆಮಿರ್ ಖಾನ್, ಸಲ್ಮಾನ್ ಖಾನ್ ಮುಂತಾದ ಘಟಾನುಘಟಿ ನಟರನ್ನು ದೀಪಿಕಾ ಹಿಂದಿಕ್ಕಿ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ.
2014ರ ಏಪ್ರಿಲ್ನಿಂದ 2024ರ ಏಪ್ರಿಲ್ ತನಕ ಐಎಂಡಿಬಿ ವೆಬ್ಸೈಟ್ನಲ್ಲಿ ಜನರು ಅತಿ ಹೆಚ್ಚು ವೀಕ್ಷಿಸಿದ ಸೆಲೆಬ್ರಿಟಿ ಪ್ರೊಫೈಲ್ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸಿನಿಮಾಗಳು, ವೆಬ್ ಸಿರೀಸ್ಗಳು, ಕಲಾವಿದರು ಹಾಗೂ ತಂತ್ರಜ್ಞರ ಮಾಹಿತಿಯನ್ನು ಐಎಂಡಿಬಿ ವೆಬ್ಸೈಟ್ ಒಳಗೊಂಡಿದೆ. ದೀಪಿಕಾ ಪಡುಕೋಣೆ ಅವರ ಪುಟವನ್ನು ಇಂಟರ್‌ನೆಟ್‌ನಲ್ಲಿ ಅತಿ ಹೆಚ್ಚಿನ ಜನರು ವೀಕ್ಷಿಸಿದ್ದಾರೆ.
ಮೊದಲ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಇದ್ದರೆ, 2ನೇ ಸ್ಥಾನ ಶಾರುಖ್ ಖಾನ್ ಪಾಲಾಗಿದೆ. ಮೂರನೇ ಸ್ಥಾನದಲ್ಲಿ ಐಶ್ವರ್ಯಾ ರೈ ಬಚ್ಚನ್, 4ನೇ ಸ್ಥಾನದಲ್ಲಿ ಆಲಿಯಾ ಭಟ್ ಇದ್ದಾರೆ. 5ನೇ ಸ್ಥಾನವನ್ನು ಇರ್ಫಾನ್ ಖಾನ್ ಪಡೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾನ್ಸ್ ಚಿತ್ರೋತ್ಸವದಲ್ಲಿ ಮೈಸೂರಿನ ನಿರ್ದೇಶಕನ ಸಾಕ್ಷಚಿತ್ರಕ್ಕೆ ಮೊದಲ ಬಹುಮಾನ
ಆಮಿರ್ ಖಾನ್ ಅವರು 6ನೇ ಸ್ಥಾನ, 7ನೇ ಸ್ಥಾನ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ದೊರಕಿದೆ. 8ನೇ ಸ್ಥಾನದಲ್ಲಿ ಸಲ್ಮಾನ್ ಖಾನ್, 9ನೇ ಸ್ಥಾನದಲ್ಲಿ ಹೃತಿಕ್ ರೋಷನ್ ಹಾಗೂ 10ನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಇದ್ದಾರೆ. ಈ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ನಟ ಯಶ್ ಅವರು 89ನೇ ಸ್ಥಾನದಲ್ಲಿದ್ದಾರೆ.
ದೀಪಿಕಾ ಪಡುಕೋಣೆ ಅವರು ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈಗಲೂ ಅವರಿಗೆ ಹೆಚ್ಚಿನ ಬೇಡಿಕೆ ಇದೆ. ಸದ್ಯಕ್ಕೆ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ಅವರು ಸಿನಿಮಾ ಕೆಲಸಗಳಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ‘ಸಿಂಗಂ ಅಗೇನ್’, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅವರು ನಟಿಸಿದ್ದು, ಈ ಸಿನಿಮಾಗಳು ಬಿಡುಗಡೆಯಾಗಬೇಕಿದೆ.
