‘ಶಾರೂಕ್ ಖಾನ್ ಆ‌್ಯಕ್ಟಿಂಗ್ ಕಿ ಭಗವಾನ್’ ಎಂದ ಪ್ರೇಕ್ಷಕ; ಟ್ವಿಟರ್ ಟ್ರೆಂಡಿಂಗ್‌ನಲ್ಲಿ ‘ಡಂಕಿ’ ಸಿನಿಮಾ

Date:

Advertisements

ಈ ವರ್ಷ ಶಾರೂಖ್​ ಖಾನ್​ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ಈ ಮೊದಲು ತೆರೆಕಂಡಿದ್ದ ಜವಾನ್​, ಪಠಾಣ್​ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ, ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿತ್ತು.

ಇಂದು(ಡಿ.21) ಅವರ ಮೂರನೇ ಚಿತ್ರ ಡಂಕಿ (Dunki) ದೇಶಾದ್ಯಂತ ಹಲವಾರು ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆ​ ಆಗಿದೆ. ಬಾಲಿವುಡ್‌ನ ಸ್ಟಾರ್ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರ ಜೊತೆ ಶಾರೂಖ್​ ಖಾನ್​ ಇದೇ ಮೊದಲ ಬಾರಿಗೆ ಕೈ ಜೋಡಿಸಿ, ನಟಿಸಿದ್ದಾರೆ. ಇಂದು ಬಿಡುಗಡೆಗೊಂಡಿರುವ ಸಿನಿಮಾದ ಮೊದಲ ಶೋ ಈಗಾಗಲೇ ಮುಗಿದಿದ್ದು, ಮತ್ತೊಮ್ಮೆ ಸೂಪರ್ ಹಿಟ್ ಆಗುವ ಲಕ್ಷಣಗಳು ಕಾಣುತ್ತಿವೆ. ಥಿಯೇಟರ್‌ನಿಂದ ಹೊರಬಂದ ಜನರು, “ಶಾರೂಕ್ ಖಾನ್ ಆ‌್ಯಕ್ಟಿಂಗ್ ಕಿ ಭಗವಾನ್” ಎಂದು ಹೊಗಳುತ್ತಿದ್ದಾರೆ.

ಒಂದು ವಿಶೇಷವಾದ ಕಾನ್ಸೆಪ್ಟ್​ ಇಟ್ಟುಕೊಂಡು ರಾಜ್​ಕುಮಾರ್​ ಹಿರಾನಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ‘ಡಂಕಿ’ಯಲ್ಲಿ ಶಾರೂಖ್​ ಖಾನ್​ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್​, ವಿಕ್ರಂ ಕೊಚ್ಚಾರ್, ಅನಿಲ್ ಗ್ರೋವರ್ ಮುಂತಾದವರು ನಟಿಸಿದ್ದಾರೆ. ಎರಡು ವಾರಗಳ ಹಿಂದೆ ಬಿಡುಗಡೆಗೊಂಡಿದಗದ ಚಿತ್ರದ ಟ್ರೇಲರ್ ಈಗಾಗಲೇ ಯೂಟ್ಯೂಬ್‌ನಲ್ಲಿ 74 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿತ್ತು.

Advertisements

ದೇಶ ಬಿಟ್ಟು ವಿದೇಶಕ್ಕೆ ಹೋಗಿ ನೆಲೆ ನಿಲ್ಲಲು ಕನಸು ಕಾಣುವವರ ರೋಚಕ ಪಯಣದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ತಮ್ಮ ಈ ಹಿಂದಿನ ‘ಪಿಕೆ’ ಸೇರಿದಂತೆ ಇತರ ಸಿನಿಮಾಗಳ ರೀತಿಯೇ ಒಂದು ಗಂಭೀರವಾದ ವಿಷಯವನ್ನು ಕಾಮಿಡಿ‌ ಮೂಲಕ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಜನರ ಮುಂದಿಟ್ಟಿದ್ದಾರೆ. ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಎಂದು ಜನರು ಮಾಹಿತಿ ನೀಡುತ್ತಿದ್ದಾರೆ.

ಈ ನಡುವೆ #DunkiReview ಎಂಬ ಹ್ಯಾಷ್‌ಟ್ಯಾಗ್ ಟ್ವಿಟ್ಟರ್, ಫೇಸ್‌ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್ ಆಗಿದೆ.

dunki live
‘ಲೈವ್ ಸ್ಟ್ರೀಮ್’ ಮಾಡಿದ ಕಿಡಿಗೇಡಿ ಅಭಿಮಾನಿ!

50 ನಿಮಿಷ ‘ಲೈವ್ ಸ್ಟ್ರೀಮ್’ ಮಾಡಿದ ಕಿಡಿಗೇಡಿ ಅಭಿಮಾನಿ!
ಕಿಡಿಗೇಡಿ ಅಭಿಮಾನಿಯೊಬ್ಬ ಗುರುವಾರ ಬೆಳಗ್ಗೆ ಸಿನಿಮಾ ಹಾಲ್‌ನಿಂದ ಟ್ವಿಟ್ಟರ್‌ನಲ್ಲಿ ಡಂಕಿಯನ್ನು ‘ಲೈವ್ ಸ್ಟ್ರೀಮ್’ ಮಾಡಿದ್ದಾರೆ. ಈ ವೀಡಿಯೋವನ್ನು ಡಿಲೀಟ್ ಮಾಡುವುದಕ್ಕೂ ಮೊದಲು ಅವರು ಚಿತ್ರದ ಮೊದಲ 50 ನಿಮಿಷಗಳನ್ನು ‘ಲೈವ್ ಸ್ಟ್ರೀಮ್’ ಮೂಲಕ ಹಂಚಿಕೊಂಡಿದ್ದರು. ಸ್ಟ್ರೀಮ್ ಒಂದು ಹಂತದಲ್ಲಿ 1,37,000 ವೀಕ್ಷಕರನ್ನು ಹೊಂದಿತ್ತು ಎಂದು ‘ಹಿಂದುಸ್ಥಾನ್ ಟೈಮ್ಸ್’ ವರದಿ ಮಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X