ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್‌ಎ) 2024ರ ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 28ರಂದು ಅಬುಧಾಬಿಯಲ್ಲಿ ನಡೆದಿದ್ದು, ಅತ್ಯುತ್ತಮ ನಟ-ನಟಿ ಪ್ರಶಸ್ತಿಯನ್ನು ಬಾಲಿವುಡ್‌ನ ಸ್ಟಾರ್ ನಟ ಶಾರುಖ್ ಖಾನ್ ಮತ್ತು ನಟಿ ರಾಣಿ ಮುಖರ್ಜಿ ಬಾಚಿಕೊಂಡಿದ್ದಾರೆ.
ರಣಬೀರ್ ಕಪೂರ್ ನಟನೆಯ ಅನಿಮಲ್ ಸಿನಿಮಾಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿದ್ದು, ತಂಡದ ಪರವಾಗಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ನಿರ್ಮಾಪಕ ಭೂಷಣ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.
ಜವಾನ್ ಸಿನಿಮಾದಲ್ಲಿ ಅತ್ಯುತ್ತಮ ಪಾತ್ರಕ್ಕಾಗಿ ಶಾರುಖ್ ಖಾನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರೆ, ಮಿಸಸ್ ಚಟರ್ಜಿ ವರ್ಸಸ್ ನಾರ್ವೆಯಲ್ಲಿ ತಾಯಿಯ ಪಾತ್ರ ನಿರ್ವಹಿಸಿದ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
ಇದನ್ನು ಓದಿದ್ದೀರಾ? 2024ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಪ್ರೊ. ಜಿ.ಬಿ. ಶಿವರಾಜು ಆಯ್ಕೆ
ಐಪಿಎಸ್ ಅಧಿಕಾರಿ ಮನೋಜ್ ಶರ್ಮಾ ಅವರ ಸ್ಪೂರ್ತಿದಾಯಕ ಪ್ರಯಾಣವನ್ನು ಆಧರಿಸಿದ ವಿಕ್ರಾಂತ್ ಮಾಸ್ಸೆ ಅಭಿನಯದ 12ತ್ ಫೇಲ್ ಸಿನಿಮಾಕ್ಕಾಗಿ ವಿನೋದ್ ಚೋಪ್ರಾ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು.
ಐಐಎಫ್‌ಎ 2024 ಪ್ರಶಸ್ತಿ: ಸಂಪೂರ್ಣ ಪಟ್ಟಿ
ಅತ್ಯುತ್ತಮ ಚಿತ್ರ: ಅನಿಮಲ್ (ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಪ್ರಣಯ್ ರೆಡ್ಡಿ ವಂಗಾ)
ಅತ್ಯುತ್ತಮ ನಿರ್ದೇಶಕ: ವಿಧು ವಿನೋದ್ ಚೋಪ್ರಾ – 12ತ್ ಫೇಲ್
ಅತ್ಯುತ್ತಮ ನಟ: ಶಾರುಖ್ ಖಾನ್ – ಜವಾನ್
ಅತ್ಯುತ್ತಮ ನಟಿ: ರಾಣಿ ಮುಖರ್ಜಿ – ಮಿಸಸ್ ಚಟರ್ಜಿ ವರ್ಸಸ್ ನಾರ್ವೆ
ಅತ್ಯುತ್ತಮ ಪೋಷಕ ನಟ: ಅನಿಲ್ ಕಪೂರ್ – ಅನಿಮಲ್
ಅತ್ಯುತ್ತಮ ಪೋಷಕ ನಟಿ: ಶಬಾನಾ ಅಜ್ಮಿ – ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
ನೆಗೆಟಿವ್ ಪಾತ್ರದಲ್ಲಿ ಅತ್ಯುತ್ತಮ ಪ್ರದರ್ಶನ: ಬಾಬಿ ಡಿಯೋಲ್ – ಅನಿಮಲ್
ಅತ್ಯುತ್ತಮ ಸಂಗೀತ ನಿರ್ದೇಶನ: ಪ್ರೀತಮ್, ವಿಶಾಲ್ ಮಿಶ್ರಾ, ಮನನ್ ಭಾರದ್ವಾಜ್, ಶ್ರೇಯಸ್ ಪುರಾಣಿಕ್, ಜಾನಿ, ಭೂಪಿಂದರ್ ಬಬ್ಬಲ್, ಆಶಿಮ್ ಕೆಮ್ಸನ್, ಹರ್ಷವರ್ಧನ್ ರಾಮೇಶ್ವರ್ – ಅನಿಮಲ್
ಅತ್ಯುತ್ತಮ ಹಿನ್ನೆಲೆ ಗಾಯಕ: ಭೂಪಿಂದರ್ ಬಬ್ಬಲ್ – ಅರ್ಜನ್ ವೈಲಿ (ಅನಿಮಲ್)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಶಿಲ್ಪಾ ರಾವ್ – ಚಲೇಯ (ಜವಾನ್)
ಇದನ್ನು ಓದಿದ್ದೀರಾ? ಶಾರುಖ್ ಖಾನ್ ನಟಿಸಿದ ‘ಜವಾನ್’ ಸಿನಿಮಾ ಯಾಕೆ ರಾಜಕೀಯವಾಗಿ ಚರ್ಚೆಯಲ್ಲಿದೆ?
ವಿಶೇಷ ಪ್ರಶಸ್ತಿಗಳು:
ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆ: ಹೇಮಾ ಮಾಲಿನಿ
ವರ್ಷದ ಚೊಚ್ಚಲ ನಟನೆ: ಅಲಿಜೆ ಅಗ್ನಿಹೋತ್ರಿ
ಅತ್ಯುತ್ತಮ ಕಥೆ: ಇಶಿತಾ ಮೊಯಿತ್ರಾ, ಶಶಾಂಕ್ ಖೈತಾನ್, ಸುಮಿತ್ ರಾಯ್ – ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
ಅತ್ಯುತ್ತಮ ಸಾಹಿತ್ಯ: ಸಿದ್ಧಾರ್ಥ್ ಸಿಂಗ್ ಮತ್ತು ಗರಿಮಾ ವಾಹಲ್ – ಸತ್ರಾಂಗ (ಅನಿಮಲ್)
