ಕಾಡಿನ ಸಂರಕ್ಷಣೆ, ಸಂವಿಧಾನದ ಮಹತ್ವ ಹಾಗೂ ಕಾಡಿನ ಮೂಲ ನಿವಾಸಿಗಳ ಬದುಕು ಮತ್ತು ಸಂಘರ್ಷವನ್ನು ತೆರೆದಿಡುವ ‘ಅಡವಿ’ ಚಿತ್ರದ ಲಿರಿಕಲ್ ಹಾಡನ್ನು ತಮಿಳಿನ ಸ್ಟಾರ್ ನಿರ್ದೇಶಕ ಪ ರಂಜಿತ್ ಬಿಡುಗಡೆ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ಕೆಜೆಎಫ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಸಾಹಿತ್ಯ ನೀಡಿರುವ, ಖ್ಯಾತ ಗಾಯಕ ನವೀನ್ ಸಜ್ಜು ಹಾಡಿರುವ ‘ಸಿಂಗಾರ ಸಿಂಗಾರ ತ್ವಾಟ’ ಹಾಡನ್ನು ಪ ರಂಜಿತ್ ಬಿಡುಗಡೆ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪ ರಂಜಿತ್, “ಅಡವಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಈ ನೆಲದ ಮಣ್ಣಿನ ಮಕ್ಕಳ ಕಥೆಯೊಂದಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ಬಿಂಬಿಸಿದೆ. ಇಂತಹ ಮತ್ತಷ್ಟು ಚಿತ್ರಗಳು ಬರಲಿ. ಸಿನಿಮಾ ಬಿಡುಗಡೆಗೆ ಮತ್ತೆ ಕರ್ನಾಟಕಕ್ಕೆ ಬರುತ್ತೇನೆ” ಎಂದು ಶುಭ ಹಾರೈಸಿದರು.
“ಕನ್ನಡದಲ್ಲಿ ಧ್ವನಿ ಇಲ್ಲದವರ ಕುರಿತ ಸಿನಿಮಾಗಳು ಇತ್ತೀಚಿಗೆ ಸದ್ದು ಮಾಡತೊಡಗಿವೆ. ಬಡವರ ಬವಣೆಗಳನ್ನು ಸಾಕಷ್ಟು ಚಿತ್ರಗಳು ಬಿಂಬಿಸಿವೆ. ಅಂತಹ ಚಿತ್ರಗಳ ಸಾಲಿನಲ್ಲಿ ಮತ್ತಷ್ಟು ವಿಭಿನ್ನವಾಗಿ ನಿಲ್ಲುತ್ತದೆ ಆಡವಿ.
ಅರಣ್ಯವೇ ಸರ್ವಸ್ವ ಎಂದು ನಂಬಿರುವ ಕಾಡಿನ ಮೂಲ ನಿವಾಸಿಗಳ ಜೀವನ. ತಮ್ಮ ಸ್ವಚ್ಛಂದ ಬದುಕಿಗಾಗಿ ಹೋರಾಟದ ಕಥೆಯೇ ಈ ಚಿತ್ರದ ಮುಖ್ಯ ಸಾರಾಂಶ. ತಳ ಸಮುದಾಯದ ಬುಡಕಟ್ಟು ಜನರು ಮತ್ತು ಪ್ರಸ್ತುತ ವ್ಯವಸ್ಥೆಯ ನಡುವಿನ ಸಂಘರ್ಷವನ್ನು ತೆರೆದಿಡುವ ಪ್ರಯತ್ನ ಚಿತ್ರದಲ್ಲಿದೆ” ಎಂದು ಚಿತ್ರತಂಡ ಹೇಳಿದೆ.
“ಅನಾದಿಕಾಲದಿಂದಲೂ ಕಾಡಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರ ಸಾಮಾಜಿಕ ಜೀವನ ಅರಣ್ಯ ಸಂಸ್ಕೃತಿ ಆಚರಣೆ ಆರ್ಥಿಕತೆ ಇವುಗಳ ಮೇಲೆ ಆಳುವ ನಾಗರಿಕ ವರ್ಗಗಳ ದಬ್ಬಾಳಿಕೆ ಮತ್ತು ಸಂಘರ್ಷವನ್ನು ಪರಿಣಾಮಕಾರಿಯಾಗಿ ತೋರಿಸುತ್ತಿದೆ. ಜೊತೆಗೆ ಅರಣ್ಯದಲ್ಲಿ ತಮ್ಮ ವಸತಿ, ಶಿಕ್ಷಣ ಮತ್ತು ಆರೋಗ್ಯದ ಹಕ್ಕುಗಳ ಬಗ್ಗೆ ದನಿ ಎತ್ತಲು ಅಗದ ಅಸಹಾಯಕ ಸ್ಥಿತಿಯಲ್ಲಿರುವ ಕಾಡು ವಾಸಿಗಳ ಸ್ಥಿತಿಯ ಬಗ್ಗೆ ಗಮನ ಸೆಳೆದಿದ್ದು ಸ್ಯಾಂಡಲ್ ವುಡ್ ನಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ನಿರೀಕ್ಷೆ ಗಳಿದ್ದು ಬಿಡುಗಡೆಗೂ ಮುನ್ನವೇ ಬಾರೀ ಸದ್ದು ಮಾಡಿದ್ದು ಜನವರಿ ತಿಂಗಳಲ್ಲಿ ತೆರೆಗೆ ಬರಲಿದೆ” ಎಂದು ತಿಳಿಸಿದೆ.
ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಟೈಗರ್ ನಾಗ್ ಅವರು ಚಿತ್ರಕಥೆ ಬರೆದು ಅಡವಿ ಚಿತ್ರವನ್ನು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಮಂಜು ಮಹಾದೇವ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಅಡವಿ ಚಿತ್ರದ ಸ್ಕ್ರಿಪ್ಟ್ ಏನು..?
ಅರಣ್ಯವೇ ಸರ್ವಸ್ವ ಎಂದು ನಂಬಿರುವ ದ್ರಾವಿಡ ಬಡಜನರ ಜೀವನವೇ ಚಿತ್ರದ ನಿಜ ಜೀವನ “ಚಿತ್ರದ ಮುಖ್ಯ ಸಾರಾಂಶ ಶೋಷಿತ ವರ್ಗದ ಕಥೆಯನ್ನು ಆಧರಿಸಿದೆ” ಕೆಳ ಸಮುದಾಯದ ನೋವು ಪ್ರಮುಖ ಪಾತ್ರ ವಹಿಸುತ್ತದೆ. ಬುಡಕಟ್ಟು ಜನರು ಮತ್ತು ಪ್ರಸ್ತುತ ವ್ಯವಸ್ಥೆಯ ನಡುವಿನ ಸಂಘರ್ಷವನ್ನು ತೆರೆಯುವ ಪ್ರಯತ್ನ ಕಥೆಯಲ್ಲಿದೆ.
ಅನಾದಿ ಕಾಲದಿಂದಲೂ ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನರ ಸಾಮಾಜಿಕ ಜೀವನ, ಅರಣ್ಯ ಸಂಸ್ಕೃತಿ, ಆಚರಣೆ, ಆರ್ಥಿಕತೆ ಮತ್ತು ಸಂಘರ್ಷ ಮತ್ತು ಆಳುವ ನಾಗರಿಕ ವರ್ಗಗಳ ವಿರುದ್ಧದ ಸಂಘರ್ಷವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರೀಕರಿಸಲಾಗಿದೆ ಮತ್ತು ಅರಣ್ಯದ ಭೂಮಿ, ವಸತಿ, ಶಿಕ್ಷಣ ಮತ್ತು ಆರೋಗ್ಯದ ಸಮಸ್ಯೆಯನ್ನು. ಜನರನ್ನು ಗಂಭೀರವಾಗಿ ಚಿತ್ರೀಕರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ?: ಚೆನ್ನೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ‘ಮಾಮಣ್ಣನ್’ ಚಿತ್ರದ ನಟ ವಡಿವೇಲುಗೆ ಅತ್ಯುತ್ತಮ ನಟ ಪ್ರಶಸ್ತಿ
ಚಿತ್ರದ ಪ್ರಮುಖ ಪಾತ್ರದಲ್ಲಿ ರಾಮಾನಾಯಕ್ ಉಗ್ರಂ ದೇವು. ರವಿಕುಮಾರ್ ಸನ, ಅನಂತರಾಜು, ವಕೀಲ ಜಗದೀಶ್ ಮಹಾದೇವ್, ಹ. ರ. ಮಹೇಶ್, ವಾಲೆ ಚಂದ್ರಣ್ಣ, ಮಂಜೀವ, ವೃಶ್ಚಿಕ ಶಿಲ್ಪಾ ಟೈಗರ್ ನಾಗ್, ಸ್ಯಾಂಡಲ್ ವುಡ್ ಫಿಲಂ ಇನ್ಸ್ಟಿಟ್ಯೂಟ್ ಆನಂದ್, ಪತ್ರಕರ್ತರಾದ ಶಿವಾನಂದ್ , ನವೀನ್, ಅರುಣ್, ಸಿದ್ದರಾಜು, ಕೆ.ಆರ್. ಓಬಳರಾಜು, ಕುಣಿಗಲ್ ರಮೇಶ್, ಮಂಜುಳಾ ರಾಜಕುಮಾರ್, ನಾಗಮಣಿ, ಬೇಬಿ ಸಿಂಚನಾ, ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ವಿಪಿನ್ ವಿ ರಾಜ್ ಅವರ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಕೆ ಮಂಜು ಕೋಟೆಕೆರೆ ಟೈಗರ್ ನಾಗ್ ಸಂಭಾಷಣೆ, ಕೆ.ಮಂಜು ಕೋಟೆಕೆರೆ, ನಿರ್ಮಾಣ ನಿರ್ವಹಣೆ ವಿಜಯಕುಮಾರ್ ಎ ವಿ, ಸಹ ನಿರ್ದೇಶನವಿದೆ. ಬಾಬು ಖಾನ್ ಕಲಾ ನಿರ್ದೇಶನವಿದೆ.
ಅಡವಿ ಚಿತ್ರದ ನಿರ್ಮಾಪಕ ಟೈಗರ್ ನಾಗ್ ಅವರು ಈ ಹಿಂದೆ ಸೆನ್ಸಾರ್ ಮಂಡಳಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ, ಸಿಬಿಐಗೆ ದೂರು ನೀಡಿದ್ದರು. ಸಿಬಿಐ ಅಧಿಕಾರಿಗಳು ಬೀಸಿದ ಬಲೆಗೆ ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು, ಬಂಧನಕ್ಕೊಳಗಾಗಿದ್ದರು. ದಶಕಗಳಿಂದ ನಿರ್ಮಾಪಕರನ್ನು ಕಿತ್ತು ತಿನ್ನುತಿದ್ದ ಚಿತ್ರರಂಗದ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿ ಹಲವು ನಿರ್ಮಾಪಕ ನಿರ್ದೇಶಕ ರಿಂದ ಪ್ರಶಂಸೆ ಪಡೆದಿದ್ದಾರೆ.