ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ರೆಸ್ಟೋರೆಂಟ್ ಬಾಸ್ಟಿಯನ್ ಪಾರ್ಕಿಂಗ್‌ನಿಂದ ಐಷಾರಾಮಿ ಕಾರು ಕಳ್ಳತನವಾಗಿದೆ. ರುಹಾನ್ ಫಿರೋಜ್ ಖಾನ್ ಎಂಬ 33 ವರ್ಷದ ಉದ್ಯಮಿಯೊಬ್ಬರು ತಮ್ಮ ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ಗೆ ಬಂದಾಗ 80 ಲಕ್ಷ ರೂ. ಮೌಲ್ಯದ ಐಷಾರಾಮಿ ಎರಡು ಆಸನಗಳ ಕನ್ವರ್ಟಿಬಲ್ BMW Z4 ಅನ್ನು ಹೋಟೆಲ್‌ನ ಪಾರ್ಕಿಂಗ್ ಸ್ಥಳದಿಂದ ಕಳವು ಮಾಡಲಾಗಿದೆ.
ಕಳ್ಳತನವಾಗಿರುವ ಬಗ್ಗೆ ಕಾರಿನ ಮಾಲೀಕ ರುಹಾನ್ ಫಿರೋಜ್ ಖಾನ್ ತಿಳಿದ ತಕ್ಷಣ ಅವರು ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಕಾರಿನ ಮಾಲೀಕ ಬಾಂದ್ರಾ ಮೂಲದ ಉದ್ಯಮಿ ರುಹಾನ್ ಫಿರೋಜ್ ಖಾನ್ (34) ತನ್ನ ಇಬ್ಬರು ಸ್ನೇಹಿತರೊಂದಿಗೆ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಬಾಸ್ಟಿಯನ್ ತಲುಪಿ ತನ್ನ ಕಾರಿನ ಕೀಯನ್ನು ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹಸ್ತಾಂತರಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾಹೀರಾತುಗಳಲ್ಲಿ ಸೆಲೆಬ್ರಿಟಿಗಳು; ರಾಜ್‌ರಿಂದ ಕಲಿಯುವುದು ಬಹಳಷ್ಟಿದೆ
ರೆಸ್ಟೋರೆಂಟ್ ಮುಚ್ಚಿದ ನಂತರ, ರುಹಾನ್ ತನ್ನ ಕಾರನ್ನು ವಾಪಸ್ ಪಡೆಯುವ ಸಂದರ್ಭದಲ್ಲಿ ಕಾರು ಕಾಣೆಯಾಗಿರುವುದು ತಿಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳು ಪರಿಶೀಲಿಸಿದ ನಂತರ ಅಪರಿಚಿತ ವ್ಯಕ್ತಿಯೊಬ್ಬ ಕಾರನ್ನು ಕದ್ದಿರುವುದು ದೃಢಪಟ್ಟಿದೆ.
ರುಹಾನ್ ಅವರ ದೂರಿನ ನಂತರ, ಶಿವಾಜಿ ಪಾರ್ಕ್ ಪೊಲೀಸರು ಶಂಕಿತರ ವಿರುದ್ಧ 2023 ರ ಸೆಕ್ಷನ್ 303 (2) (ಕಳ್ಳತನಕ್ಕೆ ಶಿಕ್ಷೆ )
ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಪರಾಧಿಗಳನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು
ಪರಿಶೀಲಿಸುತ್ತಿದ್ದಾರೆ.
