ಕಲ್ಯಾಣರಾಮನ್ ಮತ್ತು ಪುಲಿವಲ್ ಕಲ್ಯಾಣಂನಂತಹ ಸಿನಿಮಾಗಳಿಗೆ ಹೆಸರುವಾಸಿಯಾದ ಖ್ಯಾತ ಮಲಯಾಳಂ ಚಲನಚಿತ್ರ ನಿರ್ಮಾಪಕ ಶಫಿ ಭಾನುವಾರ ಮುಂಜಾನೆ ನಿಧನರಾದರು.
56 ವರ್ಷ ಪ್ರಾಯದ ಶಫಿ ಜನವರಿ 16ರಂದು ಪಾರ್ಶ್ವವಾಯುವಿಗೆ ಒಳಗಾಗಿದ್ದು ಅವರಿಗೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಫಿ ಮಧ್ಯ ರಾತ್ರಿ 12:25ಕ್ಕೆ ನಿಧನರಾದರು ಎಂದು ವರದಿಯಾಗಿದೆ.
ಶಫಿ ನಿಧನದ ಬಗ್ಗೆ ನಟ ವಿಷ್ಣು ಉನ್ನಿಕೃಷ್ಣನ್ ಫೇಸ್‌ಬುಕ್‌ನಲ್ಲಿ ಖಚಿತಪಡಿಸಿದ್ದಾರೆ. “ಶಫಿ ಸರ್ ಅವರು ನಗು ಮತ್ತು ಮರೆಯಲಾಗದ ಕಥೆಗಳನ್ನು ಬಿಟ್ಟು ಹೋಗಿದ್ದಾರೆ. ಅವರಿಗೆ ಗೌರವಗಳು:” ಎಂದು ಉನ್ನಿಕೃಷ್ಣನ್ ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಖ್ಯಾತ ಪರಮಾಣು ವಿಜ್ಞಾನಿ ಡಾ ಆರ್ ಚಿದಂಬರಂ ನಿಧನ
ಶಫಿ ಹುಟ್ಟಿನ ಹೆಸರು ಎಂ.ಎಚ್. ರಶೀದ್. ಮಲಯಾಳಂ ಚಲನಚಿತ್ರೋದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿ ಬಳಿಕ ಶಫಿ ಎಂದು ಹೆಸರು ಬದಲಾಯಿಸಿಕೊಂಡರು. ಶಫಿ, ಪ್ರಸಿದ್ಧ ಚಿತ್ರಕಥೆಗಾರ ರಫಿ ಅವರ ಕಿರಿಯ ಸಹೋದರ ಆಗಿದ್ದಾರೆ. ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ದಿವಂಗತ ಸಿದ್ದಿಕ್ ಅವರ ಸೋದರಳಿಯ ಆಗಿದ್ದಾರೆ.
ಶಫಿ ಅವರ ಪಾರ್ಥಿವ ಶರೀರವನ್ನು ಕೊಚ್ಚಿಯ ಎಡಪ್ಪಳ್ಳಿಯಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಕಲೂರಿನ ಕೊಚ್ಚಿನ್ ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್ ಹಾಲ್‌ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಂತ್ಯಕ್ರಿಯೆಯನ್ನು ಸಂಜೆ 4 ಗಂಟೆಗೆ ಕಲೂರು ಮುಸ್ಲಿಂ ಜುಮಾ ಮಸೀದಿಯಲ್ಲಿ ನಡೆಸಲಾಗುತ್ತದೆ.
ಇದನ್ನು ಓದಿದ್ದೀರಾ? ಕೋಲಾರ | ದಲಿತ ಹೋರಾಟಗಾರ ಕೊಮ್ಮಣ್ಣ ಎಂ ನಿಧನ
1995ರಲ್ಲಿ ರಫಿ-ಮೆಕಾರ್ಟಿನ್ ಮತ್ತು ನಿರ್ದೇಶಕ ರಾಜಸೇನನ್ ಅವರಿಗೆ ಆದ್ಯತೇ ಕಣ್ಮಣಿ ಚಿತ್ರದಲ್ಲಿ ಸಹಾಯ ಮಾಡುವ ಮೂಲಕ ಶಫಿ ಮಲಯಾಳಂ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು 2001ರಲ್ಲಿ ಜಯರಾಮ್, ಲಾಲ್ ಮತ್ತು ಸಂಯುಕ್ತ ವರ್ಮಾ ಅವರ ಒನ್ ಮ್ಯಾನ್ ಶೋ ಮೂಲಕ ನಿರ್ದೇಶನ ಆರಂಭಿಸಿದರು. ಅದಕ್ಕೂ ಮುನ್ನ ಐದು ಇತರ ಮಲಯಾಳಂ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಕಲ್ಯಾಣರಾಮನ್ (2002), ಮೇರಿಕ್ಕುಂಡೋರು ಕುಂಜಾಡು (2010), ಟು ಕಂಟ್ರೀಸ್ (2015), ಮೇರಿಕ್ಕುಂಡೋರು ಕುಂಜಾಡು (2010), ತೊಮ್ಮನುಮ್ ಮಕ್ಕಳುಮ್ (2005), ಪುಲಿವಲ್ ಕಲ್ಯಾಣಂ (2003), ಮಾಯಾವಿ (2007), ಚಟ್ಟಂಬಿನಾಡು (2009) ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದರು.
