ಸ್ವಾತಂತ್ರ್ಯ ಪೂರ್ವದಲ್ಲಿ ಕೋಲಾರದ ಚಿನ್ನದ ಗಣಿಯಲ್ಲಿ ತಮಿಳುನಾಡು ಮೂಲದ ಜನರು ಕೆಲಸ ಮಾಡುತ್ತಿದ್ದಾಗ ಏನಾಗಿತ್ತು ಎಂಬುದನ್ನು ವಿವರಿಸಲಿರುವ, ಪಾ ರಂಜಿತ್ ಅವರ ಬಹು ನಿರೀಕ್ಷಿತ ‘ತಂಗಲಾನ್’ ಸಿನಿಮಾ 2024ರ ಜನವರಿಯಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸಿದೆ.
ಕರ್ನಾಟಕದ ಕೋಲಾರದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ತಮಿಳು ನಟ ಚಿಯಾನ್ ವಿಕ್ರಮ್ ಅವರು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಬರೀ ತುಂಡು ಕಚ್ಚೆಯಲ್ಲಿ ವಿಕ್ರಮ್ ಇಡೀ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
It’s a wrap for #Thangalaan 🔥 Get ready to meet him soon ⚡@Thangalaan @chiyaan @beemji @kegvraja @StudioGreen2 @officialneelam @parvatweets @MalavikaM_ @PasupathyMasi @DanCaltagirone @thehari___ @ActorMuthukumar @preethy_karan @arjun_anbudan @gvprakash @Lovekeegam pic.twitter.com/B9SYLBbhXs
— Thangalaan (@Thangalaan) July 4, 2023
‘ಸ್ಟುಡಿಯೋ ಗ್ರೀನ್’ ಸಂಸ್ಥೆಯ ಮೂಲಕ ಕೆ.ಇ. ಜ್ಞಾನವೇಲ್ ರಾಜಾ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಆಗಿದ್ದು, ಬಜೆಟ್ ನೂರು ಕೋಟಿ ದಾಟಿದೆ ಎಂದು ಹೇಳಲಾಗುತ್ತಿದೆ. ಸಿನಿಮಾವು ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುವ ಮೂಲಕ, ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಈಗಾಗಲೇ ಬಿಡುಗಡೆಗೊಂಡಿರುವ ಸಿನಿಮಾದ ಪೋಸ್ಟರ್ನಲ್ಲಿ ಈ ಎಲ್ಲ ಭಾಷೆಗಳಲ್ಲಿ ‘ತಂಗಲಾನ್’ ಹೆಸರನ್ನು ಹಾಕಲಾಗಿದೆ.
ಚಿಯಾನ್ ವಿಕ್ರಮ್ ಹಾಗೂ ನಿರ್ದೇಶಕ ಪಾ ರಂಜಿತ್
ಈಗಾಗಲೇ ಚಿತ್ರದ ಶೂಟಿಂಗ್ ಮುಗಿಸಲಾಗಿದ್ದು, ಚಿತ್ರವು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.
Behind all the serious making and hectic shoots, it’s a wrap, filled with all laughter and smiles for #Thangalaan✨
We will see you all soon ❤️@Thangalaan @chiyaan @beemji @kegvraja @StudioGreen2 @officialneelam @parvatweets @MalavikaM_ @PasupathyMasi @DanCaltagirone… pic.twitter.com/kLmtIUhxnJ
— Studio Green (@StudioGreen2) July 4, 2023
ಹೆಸರಾಂತ ವಿದೇಶಿ ಹಂಚಿಕೆದಾರರು ಸದ್ಯದಲ್ಲೇ ಈ ಸಿನಿಮಾಕ್ಕೆ ಅಧಿಕೃತವಾಗಿ ಸೇರ್ಪಡೆ ಆಗಲಿದ್ದಾರೆ. ಚಿತ್ರವನ್ನು ಹಾಲಿವುಡ್ ಗುಣಮಟ್ಟಕ್ಕೆ ಹೊಂದಿಕೆಯಾಗುವಂತೆ ತಯಾರಿಸುತ್ತಿದ್ದೇವೆ ಎಂದು ಚಿತ್ರದ ನಿರ್ಮಾಪಕ ಜಿ.ಧನಂಜೇಯನ್ ಅವರು ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಸಹ-ನಿರ್ಮಾಪಕ ಜ್ಞಾನವೇಲ್ ರಾಜ ಪ್ರಸ್ತುತ ಮುಂಬೈನಲ್ಲಿದ್ದಾರೆ. ಚಿತ್ರವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಕೊಂಡೊಯ್ಯುವ ವಿಚಾರದಲ್ಲಿ ಹೆಸರಾಂತ ಬ್ಯಾನರ್ನೊಂದಿಗೆ ಸಹಕರಿಸಲು ಮಾತುಕತೆ ನಡೆಸುತ್ತಿದ್ದಾರೆ. ತಂಗಳಾನ್ನ ಕೆಲವು ದೃಶ್ಯಗಳು ಹೊಸ ದಾಖಲೆಗಳನ್ನು ಬರೆಯಲಿದೆ ಮತ್ತು ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸುತ್ತವೆ ಎಂದು ನಿರ್ಮಾಪಕ ಜಿ.ಧನಂಜೇಯನ್ ಗಲಟ್ಟಾ ಡಾಟ್ ಕಾಮ್(Galatta.com)ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಮುಂದಿನ ವಾರದಲ್ಲಿ ಬಹಳ ಅದ್ಧೂರಿಯಾಗಿ ಟೀಸರ್ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸುತ್ತಿದ್ದು, ಟೀಸರ್ ಬಿಡುಗಡೆಯ ವೇಳೆಯಲ್ಲಿ ಅಧಿಕೃತವಾಗಿ ಸಿನಿಮಾದ ಬಗ್ಗೆ ಜನರಲ್ಲಿ ಮೂಡಿರುವ ಎಲ್ಲ ಕುತೂಹಲಗಳಿಗೆ ತೆರೆ ಎಳೆಯಲಿದೆ ಎಂದು ವರದಿಯಾಗಿದೆ.
Update Alert!! 💛💛
— Vikram (@chiyaan) October 24, 2023
ಈ ನಡುವೆ ಚಿತ್ರದ ಪ್ರಮುಖ ಪಾತ್ರಧಾರಿ, ನಟ ಚಿಯಾನ್ ವಿಕ್ರಮ್ ಅವರು ‘ಅಪ್ಡೇಟ್ ಅಲರ್ಟ್’ ಎಂದು ಅ.24ರಂದು ಟ್ವೀಟ್ ಮಾಡಿದ್ದು, ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.
ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದ ಚಿತ್ರ ತಂಡ
ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿಯಾನ್ ವಿಕ್ರಮ್ ಹುಟ್ಟಿದ ದಿನ ‘ತಂಗಲಾನ್’ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಈ ಮೇಕಿಂಗ್ ವಿಡಿಯೋದಲ್ಲಿ ವಿಕ್ರಮ್ ಹೇಗೆ ‘ಚೇಂಜ್ ಓವರ್’ ಆಗಿದ್ದರು, ಆ ಲುಕ್ಗಾಗಿ ಏನೆಲ್ಲಾ ಕಸರತ್ತು ಮಾಡಿದ್ದರು, ತನ್ನ ಪಾತ್ರಕ್ಕಾಗಿ ಹೇಗೆ ಸಿದ್ದರಾಗಿದ್ದರು ಎನ್ನುವುದನ್ನು ತೋರಿಸಲಾಗಿತ್ತು.
ಕೋಲಾರದ ಕೆಜಿಎಫ್ ಗಣಿ ಸೇರಿದಂತೆ ಕಾಡು, ಬೆಟ್ಟ ಗುಡ್ಡಗಳ ನಡುವೆ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಆಕ್ಷನ್ ದೃಶ್ಯಗಳ ಚಿತ್ರೀಕರಣದ ಝಲಕ್ ಕೂಡ ತೋರಿಸಲಾಗಿತ್ತು. ಈ ವಿಡಿಯೋದಲ್ಲಿ ವಿಕ್ರಮ್ ಲುಕ್ ನೋಡಿದವರು ಅಚ್ಚರಿ ವ್ಯಕ್ತಪಡಿಸಿದ್ದರು.
ಸ್ಯಾಂಡಲ್ವುಡ್ ನಟ ಯಶ್ ನಟನೆಯ ಕೆ ಜಿ ಎಫ್ ಸಿನಿಮಾದ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್, ಕಾಲ್ಪನಿಕ ಕಥೆ ಕಟ್ಟಿಕೊಟ್ಟಿದ್ದರು. ಆದರೆ ನಿರ್ದೇಶಕ ಪಾ. ರಂಜಿತ್ ಅವರು, ಅಲ್ಲಿ ನಡೆದ ನಿಜವಾದ ಘಟನೆಗಳನ್ನು ಆಧರಿಸಿ, ಆ ಬಗ್ಗೆ ಸಂಶೋಧನೆ ನಡೆಸಿ ಸಿನಿಮಾ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದರು.
It’s a wrap for #Thangalaan 🔥 Get ready to meet him soon ⚡@Thangalaan @chiyaan @beemji @kegvraja @StudioGreen2 @officialneelam @parvatweets @MalavikaM_ @PasupathyMasi @DanCaltagirone @thehari___ @ActorMuthukumar @preethy_karan @arjun_anbudan @gvprakash @Lovekeegam… pic.twitter.com/YF9AOhSby5
— Yuvraaj (@proyuvraaj) July 4, 2023
ನೂರು ವರ್ಷಗಳ ಹಿಂದೆ ಅಲ್ಲಿನ ಗಣಿ ಕಾರ್ಮಿಕರ ಪರಿಸ್ಥಿತಿ ಹೇಗಿತ್ತು, ಆ ಪ್ರದೇಶದ ಸ್ಥಳೀಯ ಜನರು ಮತ್ತು ವಿದೇಶಿ ಶಕ್ತಿಗಳ ನಡುವಿನ ಭೂಮಿಯ ಮೇಲಿನ ಹೋರಾಟದ ಯಾವ ರೀತಿ ಇತ್ತು ಎನ್ನುವುದರ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ ಎಂದು ತಿಳಿದುಬಂದಿದೆ.
Welcoming the huntsman🔪@DanCaltagirone to the sets of #Thangalaan and social media✨@Thangalaan @beemji @kegvraja @StudioGreen2 @officialneelam pic.twitter.com/sJfr9EnpNz
— Vikram (@chiyaan) February 21, 2023
ಎ. ಕಿಶೋರ್ ಸಿನಿಮಾಟೋಗ್ರಫಿ, ಜಿ.ವಿ ಪ್ರಕಾಶ್ ಕುಮಾರ್ ಸಂಗೀತ ‘ತಂಗಲಾನ್’ ಚಿತ್ರಕ್ಕಿದೆ. ಚಿತ್ರದಲ್ಲಿ ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನನ್, ಪಶುಪತಿ, ಹರಿಕೃಷ್ಣನ್ ಅನ್ಬುದುರೈ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಇಂಗ್ಲಿಷ್ ನಟ ಡೇನಿಯಲ್ ಕ್ಯಾಲ್ಟಗಿರೋನ್ ಚಿತ್ರಕ್ಕಾಗಿ ನಟಿಸಿದ್ದಾರೆ ಎಂದು ಖುದ್ದು ಚಿಯಾನ್ ವಿಕ್ರಮ್ ಮಾಹಿತಿ ಹಂಚಿಕೊಂಡಿದ್ದರು. ಈ ಸುದ್ದಿ ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸಿತ್ತು.