ಫ್ರಾನ್ಸ್‌ನ ಅಂತಾರಾಷ್ಟ್ರೀಯ ಮಟ್ಟದ 77ನೇ ಕಾನ್ಸ್ ಸಿನಿಮಾ ಚಿತ್ರೋತ್ಸವದಲ್ಲಿ ಮೈಸೂರಿನ ನಿರ್ದೇಶಕ ಚಿದಾನಂದ್ ಎಸ್ ನಾಯ್ಕ್ ಅವರ ‘ಸನ್‌ಫ್ಲವರ್ ವರ್ ದಿ ಫಸ್ಟ್ ಒನ್ಸ್ ಟು ನೋ’ ಸಾಕ್ಷಚಿತ್ರ ಮೊದಲ ಬಹುಮಾನ ಗಳಿಸಿದೆ.
ಮೈಸೂರು ಮೂಲದ ಚಿದಾನಂದ್ ನಾಯ್ಕ್ ಅವರು ಪುಣೆಯ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಲ್ಲಿ ಒಂದು ವರ್ಷದ ಕೋರ್ಸ್ ಮುಗಿಸಿದ್ದಾರೆ. ಇವರ ‘ಸನ್‌ಫ್ಲವರ್ ವರ್ ದಿ ಫಸ್ಟ್ ಒನ್ಸ್ ಟು ನೋ’ ಸಾಕ್ಷಚಿತ್ರವು ಕನ್ನಡ ಜಾನಪದ ಮೂಲವಾಗಿದ್ದು, ಹುಂಜವನ್ನು ಕದಿಯುವ ಒಬ್ಬ ಅಜ್ಜಿಯ ಕಥೆ ಇದರ ಮೂಲ ಸಾರಾಂಶವಾಗಿದೆ. ಅಜ್ಜಿಯ ಕೃತ್ಯದ ಫಲವಾಗಿ ಸೂರ್ಯ ಆ ಹಳ್ಳಿಯಲ್ಲಿ ಉದಯಿಸುವುದನ್ನು ನಿಲ್ಲಿಸುವುದು ಕಥೆಯನ್ನು ಒಳಗೊಂಡಿದೆ.
ಈ ಸುದ್ದಿ ಓದಿದ್ದೀರಾ? ಒಪ್ಪಿಗೆಯಿಲ್ಲದೆ ಹಾಡು ಬಳಕೆ: ‘ಮಂಜುಮ್ಮೆಲ್ ಬಾಯ್ಸ್’ ನಿರ್ಮಾಪಕರಿಗೆ ಇಳಯರಾಜ ನೋಟಿಸ್
ಬೆಲ್ಜಿಯಂ ನಟಿ ಲುಬ್ನಾ ಅಜಾಬಾಲ್ ಅವರ ಅಧ್ಯಕ್ಷತೆಯ ಐವರು ತೀರ್ಪುಗಾರರು 16 ನಿಮಿಷದ ಈ ಸಾಕ್ಷಚಿತ್ರಕ್ಕೆ ಪ್ರಶಸ್ತಿ ಘೋಷಿಸಿದ್ದಾರೆ. ಮೂರು ಬಹುಮಾನಕ್ಕೆ ಒಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ 18 ಸಾಕ್ಷಚಿತ್ರಗಳು ಪ್ರಶಸ್ತಿ ಸುತ್ತಿನಲ್ಲಿದ್ದವು.
ಇದೇ ಕಾನ್ಸ್ ಚಿತ್ರೋತ್ಸವದಲ್ಲಿ ಮೂರನೇ ಪ್ರಶಸ್ತಿಯು ಭಾರತ ಮೂಲದ ಮಾನ್ಸಿ ಮಹೇಶ್ವರಿ ಅವರ ಅನಿಮೇಷನ್ ಚಿತ್ರ ಬನ್ನಿಹುಡ್‌ಗೆ ಲಭಿಸಿದೆ. ಮಾನ್ಸಿ ಮಹೇಶ್ವರಿ ಅವರು ಉತ್ತರ ಪ್ರದೇಶದ ಮೀರತ್‌ನಲ್ಲಿ ಜನಿಸಿದ್ದು ಇಂಗ್ಲೆಂಡ್‌ನ ಸಿನಿಮಾ ಕೋರ್ಸ್ ಪೂರೈಸಿದ್ದಾರೆ.
ಕಾನ್ಸ್ ಪ್ರಶಸ್ತಿಯ ಮೊದಲನೆ ಬಹುಮಾನ 15 ಸಾವಿರ ಯೂರೋ(13 ಲಕ್ಷ ರೂ) ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಎರಡನೇ ಬಹುಮಾನ 11,250 ಯೂರೋ ಹಾಗೂ ಮೂರನೇ ಬಹುಮಾನ 7500 ಯೂರೊ ಒಳಗೊಂಡಿದೆ.
