ಕೈ ಚೀಲದಲ್ಲಿ ಮಲ್ಲಿಗೆ ಹೂ: ಆಸ್ಟ್ರೇಲಿಯಾದಲ್ಲಿ ನಟಿ ನವ್ಯಾ ನಾಯರ್‌ಗೆ 1.14 ಲಕ್ಷ ರೂ. ದಂಡ

Date:

Advertisements

ಮಲಯಾಳಂ, ಕನ್ನಡ ಹಾಗೂ ದಕ್ಷಿಣ ಭಾರತದ ಭಾಷೆಗಳ ಹಲವು ಚಿತ್ರಗಳಲ್ಲಿ ನಟಿಸಿರುವ ಚಿತ್ರನಟಿ ನವ್ಯಾ ನಾಯರ್‌ ಅವರ ಆಸ್ಟ್ರೇಲಿಯಾದ ಓಣಂ ಆಚರಣೆಯ ಪ್ರವಾಸವು ಅನಿರೀಕ್ಷಿತವಾಗಿ ದುಬಾರಿಯಾಗಿ ಪರಿಣಮಿಸಿತು. ಮೆಲ್ಬರ್ನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 15 ಸೆಂ.ಮೀ. ಉದ್ದದ ಮಲ್ಲಿಗೆ ಹೂವಿನ ಗೇಣನ್ನು ಒಯ್ದಿದ್ದಕ್ಕಾಗಿ ಅವರಿಗೆ 1.14 ಲಕ್ಷ ರೂಪಾಯಿಗಳಿಗೆ ಸಮನಾದ 1,980 ಆಸ್ಟ್ರೇಲಿಯನ್‌ ಡಾಲರ್‌ ದಂಡ ವಿಧಿಸಲಾಗಿದೆ.

ವಿಕ್ಟೋರಿಯಾದ ಮಲಯಾಳಿ ಅಸೋಸಿಯೇಷನ್ ಆಯೋಜಿಸಿದ್ದ ಓಣಂ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ನವ್ಯಾ, ತಮ್ಮ ತಂದೆ ನೀಡಿದ ಮಲ್ಲಿಗೆ ಹೂವನ್ನು ಕೈಚೀಲದಲ್ಲಿ ಒಯ್ದಿದ್ದರು. ಆದರೆ, ಆಸ್ಟ್ರೇಲಿಯಾದ ಕಟ್ಟುನಿಟ್ಟಾದ ಜೈವಿಕ ಸುರಕ್ಷತಾ ನಿಯಮಗಳ ಬಗ್ಗೆ ತಿಳಿದಿರದೆ, ಘೋಷಣಾ ಪತ್ರದಲ್ಲಿ ಈ ವಿಷಯವನ್ನು ಉಲ್ಲೇಖಿಸದಿರುವುದು ದಂಡಕ್ಕೆ ಕಾರಣವಾಯಿತು.

ನವ್ಯಾ ತಮ್ಮ ಅನುಭವವನ್ನು ತಾವು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಹಂಚಿಕೊಂಡರು. “ನಾನು ಇಲ್ಲಿಗೆ ಬರುವ ಮೊದಲು, ನನ್ನ ತಂದೆ ಮಲ್ಲಿಗೆ ಹೂವನ್ನು ಖರೀದಿಸಿ, ಎರಡು ಭಾಗವಾಗಿ ಕತ್ತರಿಸಿ ನನಗೆ ನೀಡಿದರು. ಕೊಚ್ಚಿಯಿಂದ ಸಿಂಗಾಪುರದವರೆಗೆ ಒಂದನ್ನು ಧರಿಸಿ, ಉಳಿದದ್ದನ್ನು ಸಿಂಗಾಪುರದಿಂದ ಮುಂದಿನ ಪ್ರಯಾಣಕ್ಕೆ ಕೈಚೀಲದಲ್ಲಿ ಇಡಲು ಹೇಳಿದರು. ನಾನು ಅದನ್ನು ಕೈಚೀಲದಲ್ಲಿ ಇಟ್ಟುಕೊಂಡಿದ್ದೆ. ಆದರೆ, ಈ ಸಣ್ಣ ಕೃತ್ಯವು ಆಸ್ಟ್ರೇಲಿಯಾದ ಕಾನೂನಿಗೆ ವಿರುದ್ಧವಾಗಿತ್ತು. ಇದು ನನಗೆ ತಿಳಿಯದೆ ಮಾಡಿದ ತಪ್ಪು. ಆದರೆ ತಿಳಿಯದಿರುವುದು ಕ್ಷಮೆಗೆ ಕಾರಣವಲ್ಲ. 15 ಸೆಂ.ಮೀ. ಮಲ್ಲಿಗೆ ಹೂವಿಗೆ 1.14 ಲಕ್ಷ ರೂ. ದಂಡ ತುಂಬಲು 28 ದಿನಗಳ ಕಾಲಾವಕಾಶ ನೀಡಲಾಗಿದೆ,” ಎಂದು ಅವರು ಹೇಳಿದರು.

ಇದನ್ನು ಓದಿದ್ದೀರಾ? ಮಲಯಾಳಂ ಚಿತ್ರದಲ್ಲಿ ಕರ್ನಾಟಕದ ಜನತೆಗೆ ಅವಮಾನ: ಚಿತ್ರತಂಡ ಕ್ಷಮೆಯಾಚನೆ

ಆಸ್ಟ್ರೇಲಿಯಾದ ಜೈವಿಕ ಸುರಕ್ಷತಾ ನಿಯಮಗಳು ದೇಶದ ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳ ಸಂರಕ್ಷಣೆಗಾಗಿ ಅತ್ಯಂತ ಕಟ್ಟುನಿಟ್ಟಾಗಿವೆ. ತಾಜಾ ಅಥವಾ ಒಣಗಿದ ಹೂವುಗಳು, ತಾಜಾ ಹಣ್ಣು-ತರಕಾರಿಗಳು, ಔಷಧೀಯ ಸಸ್ಯಗಳು, ಮಸಾಲೆ, ಕಾಯಿಪಲ್ಯ, ಡೈರಿ ಉತ್ಪನ್ನಗಳು, ಸಿಹಿತಿಂಡಿಗಳಾದ ಬರ್ಫಿ, ರಸಗುಲ್ಲ, ಮೈಸೂರ್ ಪಾಕ್, ಚಾವಡಿ, ಚಹಾ, ಗೃಹ ಆಹಾರ, ಜೇನು, ಪಿಕ್ಕು, ಗರಿಗಳು, ಚರ್ಮ, ಮೂಳೆಗಳು, ಸಾಕುಪ್ರಾಣಿಗಳ ಆಹಾರ, ಸಸ್ಯ ಅಥವಾ ಪ್ರಾಣಿ ಆಧಾರಿತ ಸಾಂಪ್ರದಾಯಿಕ ಔಷಧಿಗಳು ಸೇರಿದಂತೆ ಅನೇಕ ವಸ್ತುಗಳನ್ನು ಒಯ್ಯುವುದು ನಿಷೇಧಿಸಲಾಗಿದೆ.

ನಿಷೇಧಿತ ಅಥವಾ ಘೋಷಿಸದ ವಸ್ತುಗಳನ್ನು ಒಯ್ದರೆ, ಅವುಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗುತ್ತದೆ. ಪ್ರಯಾಣಿಕರಿಗೆ ತಕ್ಷಣದ ದಂಡ, ಗಂಭೀರ ಉಲ್ಲಂಘನೆಗಳಿಗೆ ವೀಸಾ ರದ್ದತಿ, ಮತ್ತು ಕೆಲವು ಸಂದರ್ಭಗಳಲ್ಲಿ ಭಾರೀ ದಂಡ ಅಥವಾ ಜೈಲು ಶಿಕ್ಷೆಯೂ ವಿಧಿಸಬಹುದು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಲಯಾಳಂ ನಟ ದುಲ್ಕರ್ ಸಲ್ಮಾನ್‌ಗೆ ಕಸ್ಟಮ್ಸ್‌ನಿಂದ ಸಮನ್ಸ್: ಐಷಾರಾಮಿ ಕಾರುಗಳು ವಶಕ್ಕೆ

ಮಲಯಾಳಂನ ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರ ಕೊಚ್ಚಿಯ ಎಲಂಕುಲಂ ನಿವಾಸದ...

ಪ್ರತಿಷ್ಠಿತ ‘ಫಾಲ್ಕೆ’ಯ ಮೆರಗು ಹೆಚ್ಚಿಸಿದ ಮೋಹನ್ ಲಾಲ್

ವೈವಿಧ್ಯಮಯ ಅಭಿನಯ, ಸಹಜ ಸರಳತೆ ಹಾಗೂ ಸೌಹಾರ್ದ ನಡವಳಿಕೆಯಿಂದ ಸಿನಿಪ್ರಿಯರ ಮನಗೆದ್ದ...

ಬಿಂಬ-ಬಿಂಬನ: ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳ ಆತ್ಮಕತೆ

ಗಿರೀಶ್ ಕಾಸರವಳ್ಳಿಯವರು ತಮ್ಮ ಕೃತಿಯುದ್ದಕ್ಕೂ ಚರ್ಚಿಸಿರುವುದು ಬಿಂಬ ಮತ್ತು ಬಿಂಬನ ಹಾಗೂ...

ಮಲಯಾಳಂ ನಟ ಮೋಹನ್‌ಲಾಲ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

ಮಲಯಾಳಂ ಸಿನಿಮಾದ ಹಿರಿಯ ನಟ ಮೋಹನ್‌ಲಾಲ್ ಅವರಿಗೆ 2023ರ ಸಾಲಿನ ದಾದಾಸಾಹೇಬ್...

Download Eedina App Android / iOS

X