‘ಬಾ**ರ್ಡ್ಸ್‌ ಆಫ್‌ ಬಾಲಿವುಡ್’ ವಿವಾದ: ಮಾನನಷ್ಟ ಮೊಕದ್ದಮೆಯಲ್ಲಿ ಆರ್ಯನ್ ಖಾನ್ ಮತ್ತು ಸಮೀರ್ ವಾಂಖೆಡೆ ಫೈಟ್

Date:

‌ಇತ್ತೀಚೆಗಷ್ಟೇ ಬಿಡುಗಡೆಯಾದ ಆರ್ಯನ್‌ ಖಾನ್‌ ನಿರ್ದೇಶನದ ‘ದಿ ಬಾ**ರ್ಡ್ಸ್‌ ಆಫ್‌ ಬಾಲಿವುಡ್‌’ (ಬಾಲಿವುಡ್‌ ಬಾ**ರ್ಡ್‌ಗಳು) ವೆಬ್‌ ಸರಣಿಯು ಹಿಂದಿ ಸಿನಿಮಾರಂಗದಲ್ಲಿ ವಿವಾದ ಹುಟ್ಟುಹಾಕಿದೆ. ಸರಣಿಯ ವಿರುದ್ಧ ಐಆರ್‌ಎಸ್ ಅಧಿಕಾರಿ ಮತ್ತು ಮಾಜಿ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಆಕ್ರೋಶಗೊಂಡಿದ್ದಾರೆ. ಸರಣಿಯನ್ನು ನಿರ್ಮಾಣ ಮಾಡಿರುವ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್, ನೆಟ್‌ಫ್ಲಿಕ್ಸ್ ಹಾಗೂ ಇತರರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

- Advertisement -

‘ಬಾ**ರ್ಡ್ಸ್‌ ಆಫ್‌ ಬಾಲಿವುಡ್‌’ ವೆಬ್‌ ಸರಣಿಯು ಮಾನನಷ್ಟ ವಿಷಯವನ್ನು ಹೊಂದಿದೆ. ಮಾತ್ರವಲ್ಲದೆ, ‘ಸತ್ಯಮೇವ ಜಯತೆ’ ಎಂಬುದನ್ನು ಹೇಳುವಾಗ ‘ಆಶ್ಲೀಲವಾಗಿ ಸನ್ಹೆ’ ಮಾಡುವುದನ್ನು ಒಳಗೊಂಡಿದೆ ಎಂದು ವಾಂಖೆಡೆ ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗವು ತಾನೇ ಹಾಕಿಕೊಂಡ ಗಂಟುಗಳನ್ನು ಬಿಡಿಸಿಕೊಳ್ಳಬಲ್ಲದೇ? ಇದೇ...

SIR ನಡೆಸುವ ನಿರ್ಧಾರ ಸರ್ವಾನುಮತದಿಂದ ಕೂಡಿತ್ತು ಎಂದು ಜನ ನಂಬಬೇಕಾದರೆ, ಆಯೋಗವು ಸಂಬಂಧಿಸಿದ ಸಭೆಯ ಅಧಿಕೃತ ನಡಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ಆ ಮೂಲಕ ಚುನಾವಣಾ ಆಯೋಗವು ತಾನೇ ಸೃಷ್ಟಿಸಿಕೊಂಡಿರುವ ಗೋಜಲುಗಳಿಂದ ಬಿಡಿಸಿಕೊಳ್ಳಬೇಕು. ಭಾರತೀಯ...

ನೊಬೆಲ್‌ ಪ್ರಶಸ್ತಿ ಸರಣಿ | ಕಣ ಭೌತವಿಜ್ಞಾನ-ಖಗೋಳವಿಜ್ಞಾನಗಳೆರಡರ ಸಮ್ಮಿಳನದ...

ಫ್ರಾನ್ಸಿಸ್ ಹಾಲ್ಜೆನ್ ಅವರ ಮೂಲ ಆಲೋಚನೆ ಕೇವಲ ಹಿಮದೊಳಗೆ ಸಂವೇದಕಗಳನ್ನು ಇಡುವ ಯೋಜನೆಯಾಗಿರಲಿಲ್ಲ. ಅದು ವಿಶ್ವವನ್ನು ನೋಡುವ ಹೊಸ ವಿಧಾನಕ್ಕೆ ಬಾಗಿಲು ತೆರೆಯುವ ಆಲೋಚನೆಯಾಗಿತ್ತು. ಅಗೋಚರವಾಗಿರುವ ಕಣಗಳನ್ನು ಹಿಡಿಯುವ ಮೂಲಕ, ವಿಶ್ವದ ಅತ್ಯಂತ...

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ವಾಂಖೆಡೆ ಅವರು ವೆಬ್‌ ಸೀರಿಸ್‌ ತಂಡದ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, 2 ಕೋಟಿ ರೂ. ಪರಿಹಾರ ಕೋರಿದ್ದಾರೆ. ಜೊತೆಗೆ, ಸರಣಿಯ ಪ್ರಸಾರ ಮತ್ತು ವಿತರಣೆಯನ್ನು ನಿಲ್ಲಿಸುವಂತೆ ಹಾಗೂ ಸರಣಿಯನ್ನು ಮಾನನಷ್ಟಕರವೆಂದು ಅಧಿಕೃತವಾಗಿ ಘೋಷಿಸಲು ಮನವಿ ಮಾಡಿದ್ದಾರೆ.

“ವೆಬ್‌ ಸರಣಿಯಲ್ಲಿರುವ ವಿಷಯವು ತನ್ನ ವೈಯಕ್ತಿಕ ಖ್ಯಾತಿಯನ್ನು ಹಾನಿಗೊಳಿಸಿದೆ. ಮಾತ್ರವಲ್ಲದೆ, ಮಾದಕವಸ್ತು ಕಾನೂನುಗಳನ್ನು ಜಾರಿಗೊಳಿಸುವ ಕೆಲಸದಲ್ಲಿ ತೊಡಗಿರುವ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಸಹ ಕುಗ್ಗಿಸಿದೆ” ಎಂದು ವಾಂಖೆಡೆ ಆರೋಪಿಸಿದ್ದಾರೆ.

ಪ್ರಕರಣದ ಪ್ರಮುಖ ಅಂಶಗಳು;

  • ಸರಣಿಯನ್ನು ನಿರ್ಮಾಣ ಮಾಡಿರುವ ಬಾಲಿವುಡ್‌ ನಟ ಶಾರೂಖ್‌ ಖಾನ್ ಅವರ ಪತ್ನಿ ಗೌರಿ ಖಾನ್ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್’, ಸರಣಿಯ ನಿರ್ದೇಶಕ ಆರ್ಯನ್ ಖಾನ್, ಸರಣಿಯ ಪ್ರಸಾರ ಹಕ್ಕು ಪಡೆದಿರುವ ನೆಟ್‌ಫ್ಲಿಕ್ಸ್ ಹಾಗೂ ಇತರರ ವಿರುದ್ಧ ವಾಂಖೆಡೆ ಪ್ರಕರಣ ದಾಖಲಿಸಿದ್ದಾರೆ.
  • ಸರಣಿಯಲ್ಲಿ ‘ಸುಳ್ಳು, ದುರುದ್ದೇಶಪೂರಿತ ಹಾಗೂ ಮಾನನಷ್ಟಕರ’ ಚಿತ್ರಣವಿದೆ. ಸರಣಿಯು ಮಾದಕವಸ್ತು ವಿರೋಧಿ ಕಾನೂನುಗಳನ್ನು ಜಾರಿಗೊಳಿಸುವ ಸಂಸ್ಥೆಗಳ ಕುರಿತು ನಕಾರಾತ್ಮಕ ಚಿತ್ರಣವನ್ನು ನೀಡುತ್ತದೆ. ಇದರಿಂದಾಗಿ ಕಾನೂನು ಜಾರಿ ಸಂಸ್ಥೆಗಳ ಮೇಲೆ ಸಾರ್ವಜನಿಕ ವಿಶ್ವಾಸ ಕುಸಿಯುತ್ತದೆ ಎಂದು ವಾಂಖೆಡೆ ವಾದಿಸಿದ್ದಾರೆ.
  • ಸರಣಿಯು ರಾಷ್ಟ್ರೀಯ ಲಾಂಛನದ ಭಾಗವಾಗಿರುವ ‘ಸತ್ಯಮೇವ ಜಯತೆ’ಯನ್ನು ಪಠಿಸುವಾಗ ಮಧ್ಯದ ಬೆರಳಿನ ಸನ್ಹೆ ಮಾಡುವುದನ್ನು ತೋರಿಸಿದೆ. ಇದು ‘ರಾಷ್ಟ್ರೀಯ ಲಾಂಛನಗಳಿಗೆ ಅವಮಾನ ತಡೆಗಟ್ಟುವಿಕೆ ಕಾಯ್ದೆ-1971’ಅನ್ನು ಉಲ್ಲಂಘಿಸುತ್ತದೆ. ಅಲ್ಲದೆ, ಅಶ್ಲೀಲ ವಿಷಯದ ಮೂಲಕ ರಾಷ್ಟ್ರೀಯ ಭಾವನೆಯನ್ನು ಕೆರಳಿಸುವುದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದ್ದಾರೆ.
    • ಮಾನಹಾನಿಕರ ವಿಷಯವನ್ನು ಪ್ರಸಾರ ಮಾಡಿರುವ ಕಾರಣಕ್ಕಾಗಿ ವಾಂಖೆಡೆ ಅವರು ಸರಣಿಯ ನಿರ್ಮಾಣ ತಂಡದಿಂದ 2 ಕೋಟಿ ರೂ. ಪರಿಹಾರವನ್ನು ಕೋರಿದ್ದಾರೆ. ಆ ಮೊತ್ತವನ್ನು ಕ್ಯಾನ್ಸರ್ ರೋಗಿಗಳಿಗಾಗಿ ‘ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆ’ಗೆ ದೇಣಿಗೆ ನೀಡಲು ಉದ್ದೇಶಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್ ಸಿಎಂ ಭಗವಂತ್ ಮಾನ್ ಕ್ಯಾಂಪ್ ಕಚೇರಿ, ಒಎಸ್‌ಡಿ ಮನೆ ಮೇಲೆ ಸಿಬಿಐ ದಾಳಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪಗಳ...

ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ

ಕೇಂದ್ರ ಸರ್ಕಾರವು ಭಾರತೀಯ ವಾಯುಪಡೆಯ (IAF) ಮುಂದಿನ ಮುಖ್ಯಸ್ಥರನ್ನಾಗಿ ಏರ್ ಮಾರ್ಷಲ್...