ಸಿನಿಮಾ ಗಾಯಕಿ ಮಂಗ್ಲಿ ಹುಟ್ಟುಹಬ್ಬದ ಸಮಾರಂಭದ ವೇಳೆ ಪೊಲೀಸರು ದಾಳಿ ನಡೆಸಿ, ಮಾದಕ ವಸ್ತು ಸೇವಿಸಿದ್ದ ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಹೈದರಾಬಾದ್‌ನ ಎರ್ಲಪಲ್ಲಿರುವ ತ್ರಿಪುರಾ ರೆಸಾರ್ಟ್‍ನಲ್ಲಿ ಬರ್ತಡೇ ಪಾರ್ಟಿ ನಡೆಯುತ್ತಿತ್ತು. ಈ ವೇಳೆ, ಚೆವೆಲ್ಲಾ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಗಾಂಜಾ, ವಿದೇಶಿ ಮದ್ಯ ಪತ್ತೆಯಾಗಿದೆ.
ಪಾರ್ಟಿಯಲ್ಲಿ ಭಾಗಿಯಾಗಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೆಡಿಕಲ್ ಟೆಸ್ಟ್‌ನಲ್ಲಿ ಹಲವರು ಮಾದಕ ವಸ್ತು ಸೇವಿಸಿರುವುದು ಪತ್ತೆಯಾಗಿದೆ. ಈ ಸಂಬಂಧ ಚೆವೆಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿದ್ದೀರಾ? ‘ಥಗ್ ಲೈಫ್’ ವಿವಾದ | ಜೂ.10ಕ್ಕೆ ವಿಚಾರಣೆ ಮುಂದೂಡಿಕೆ; ರಾಜ್ಯದಲ್ಲಿ ಸಿನಿಮಾ ಬಿಡುಗಡೆಯಿಲ್ಲ
ದಾಳಿ ವೇಳೆ ಪೊಲೀಸರು ವಿಡಿಯೋ ಮಾಡಿದ್ದು, ಮಂಗ್ಲಿ, ವಿಡಿಯೋ ಮಾಡೋದು ನಿಲ್ಲಿಸಿ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
“ಚೆವೆಲ್ಲಾ ಪೊಲೀಸರು ಸಮಾಜ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದ ರೆಸಾರ್ಟ್ ಮೇಲೆ ದಾಳಿ ನಡೆಸಿದರು. ನಾವು ಕಾನೂನುಗಳನ್ನು ಪಾಲಿಸದಿದ್ದರೆ, ನಾವು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಅವರು ಎಷ್ಟೇ ಪ್ರಸಿದ್ಧರಾಗಿದ್ದರೂ, ಮಾದಕ ದ್ರವ್ಯ ಸೇವಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುತ್ತಾರೆ” ಎಂದು ತೆಲಂಗಾಣ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.
ದಾಳಿಯ ಸಮಯದಲ್ಲಿ ರೆಸಾರ್ಟ್‌ನಲ್ಲಿ ಮಂಗ್ಲಿಯ 50 ಆಪ್ತ ಸ್ನೇಹಿತರು ಇದ್ದರು. ಪೊಲೀಸರು ಒಟ್ಟು 48 ಜನರನ್ನು ಮಾದಕ ದ್ರವ್ಯ ಪರೀಕ್ಷೆಗೆ ಒಳಪಡಿಸಿದರು.
అసాంఘిక కార్యకలాపాలు జరుగుతున్న రిసార్ట్ పై దాడిచేసిన చేవెళ్ల పోలీసులు. చట్టాలు పాటించకుండా ఎలాపడితేఅలా వ్యతిరేకంగా వ్యవహరిస్తామంటే పోలీసులు ఝులిపించి గాడినపెట్టాల్సి వస్తుంది. ఎంతటిప్రముఖులైనా డ్రగ్స్ లాంటి వాటిని వాడే వారిపట్ల కఠినచర్యలు తీసుకోవడానికి వెనుకాడం. #TelanganaPolice pic.twitter.com/s4IbSzhIkM
— Telangana Police (@TelanganaCOPs) June 11, 2025