ನಿರೀಕ್ಷೆ ಹೆಚ್ಚಿಸಿದ ʼಆದಿಪುರುಷ್‌ʼ ಟ್ರೈಲರ್‌

Date:

Advertisements

ಈ ಹಿಂದೆ ಟೀಕೆಗೆ ಗುರಿಯಾಗಿದ್ದ ಆದಿಪುರುಷ್‌ ಟೀಸರ್‌

ಜೂನ್‌ 16ಕ್ಕೆ ತೆರೆಗೆ ಬರಲಿದೆ ಪ್ರಭಾಸ್‌ ನಟನೆಯ ಚಿತ್ರ

ತೆಲುಗಿನ ಖ್ಯಾತ ನಟ ಪ್ರಭಾಸ್‌ ಅಭಿನಯದ ಆದಿಪುರುಷ್‌ ಚಿತ್ರದ ಬಹುನಿರೀಕ್ಷಿತ ಟ್ರೈಲರ್‌ ಮಂಗಳವಾರ ಬಿಡುಗಡೆಯಾಗಿದೆ. ಈ ಹಿಂದೆ ಇದೇ ಚಿತ್ರದ ಟೀಸರ್‌ ಭಾರೀ ಟೀಕೆಗೆ ಗುರಿಯಾಗಿತ್ತು. ಇದೀಗ ಬಿಡುಗಡೆಯಾಗಿರುವ ಅಂದಾಜು ಮೂರು ನಿಮಿಷಗಳ ಟ್ರೈಲರ್‌ ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Advertisements

ರಾಮಾಯಣದ ಸುತ್ತ ಮೂಡಿಬಂದಿರುವ ʼಆದಿಪುರುಷ್‌ʼ ಚಿತ್ರದಲ್ಲಿ ಪ್ರಭಾಸ್‌ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬಾಲಿವುಡ್‌ನ ಸ್ಟಾರ್‌ ನಟಿ ಕೃತಿ ಸನೋನ್‌ ಸೀತೆಯ ಪಾತ್ರದಲ್ಲಿ ಮಿಂಚಿದ್ದಾರೆ. ಖ್ಯಾತ ನಟ ಸೈಫ್‌ ಅಲಿಖಾನ್‌ ರಾವಣನ ಪಾತ್ರದಲ್ಲಿ ನಟಿಸಿದ್ದು, ಮುಖ್ಯವಾಗಿ ಸೀತೆಯ ಅಪಹರಣ ಮತ್ತು ಲಂಕಾದಹನದ ಸುತ್ತ ಕತೆ ಹೆಣೆಯಲಾಗಿದೆ ಎಂಬುದನ್ನು ಟ್ರೈಲರ್‌ನಲ್ಲಿ ಸೂಚ್ಯವಾಗಿ ತೋರಿಸಲಾಗಿದೆ. ʼಗ್ರಾಫಿಕ್ಸ್‌ʼ ಮತ್ತು ʼವಿಎಫ್‌ಕ್ಸ್‌ʼ ʼಎಫೆಕ್ಟ್‌ʼಗಳು ಗಮನ ಸೆಳೆಯುತ್ತವೆ.

ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ ಆದಿಪುರುಷ್‌ ಚಿತ್ರದ ಟೀಸರ್‌ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ʼಅನಿಮೇಷನ್‌ʼ ಟೀಸರ್‌ ನೋಡಿದ್ದ ಸಿನಿ ರಸಿಕರು ಕಾರ್ಟೂನ್‌ಗಿಂತ ಕಳಪೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ನಿರ್ದೇಶಕ ಓಂ ರಾವತ್‌ ಅವರನ್ನು ಕೂಡ ಟೀಕಿಸಿದ್ದ ನೆಟ್ಟಿಗರು ʼ700 ಕೋಟಿ ಮೊತ್ತದಲ್ಲಿ ಕಾರ್ಟೂನ್‌ ಸಿನಿಮಾʼ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು.

ಟೀಸರ್‌ಗೆ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾದ ಬಳಿಕ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದ ಚಿತ್ರತಂಡ ಮತ್ತೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ನಡೆಸಿ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಈ ಹಿನ್ನೆಲೆ ಹಳೆಯ ಟೀಸರ್‌ಗೆ ಹೋಲಿಸಿಕೊಂಡರೆ ಸದ್ಯ ಬಿಡುಗಡೆಯಾಗಿರುವ ಟ್ರೈಲರ್‌ ಬಹುಪಾಲು ಉತ್ತಮ ಎಂಬ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ʼಆದಿಪುರುಷ್‌ʼ ಚಿತ್ರ ಜೂನ್‌ 16ರಂದು ಪ್ಯಾನ್‌ ಇಂಡಿಯಾ ಮಾದರಿಯಲ್ಲಿ ತೆರೆಗೆ ಬರಲಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X