ಬಾಲಿವುಡ್‌ನಲ್ಲಿ ಆಂತರಿಕ ರಾಜಕಾರಣ ಕೊನೆಗೊಳ್ಳಬೇಕು: ಪ್ರಿಯಾಂಕಾ ಚೋಪ್ರಾ

Date:

Advertisements
  • ಆಂತರಿಕ ರಾಜಕಾರಣಕ್ಕೆ ಬೇಸತ್ತು ಬಾಲಿವುಡ್‌ ತೊರೆದಿದ್ದ ಪ್ರಿಯಾಂಕಾ
  • ಪ್ರತಿಭೆಯ ಆಧಾರದ ಮೇಲೆ ಅವಕಾಶ ಸಿಗಬೇಕು ಎಂದ ಸ್ಟಾರ್‌ ನಟಿ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾವು ಬಾಲಿವುಡ್‌ ತೊರೆದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಸದ್ಯ ʼಸಿಟಾಡೆಲ್‌ʼ ವೆಬ್‌ ಸರಣಿಯ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇದೇ ವೇಳೆ ಬಾಲಿವುಡ್‌ನಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ಚರ್ಚಿಸಿದ್ದಾರೆ.

ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್‌ ಮಂದಿಯ ಆಂತರಿಕ ರಾಜಕಾರಣ ಬಗ್ಗೆ ಪ್ರಿಯಾಂಕಾ ಚೋಪ್ರಾ ಮುಕ್ತವಾಗಿ ಮಾತನಾಡಿದ್ದಾರೆ. “ಕಲಾವಿದರ ಪ್ರತಿಭೆ ಮತ್ತು ಬಾಲಿವುಡ್‌ನಲ್ಲಿ ಅವರಿಗೆ ಸಿಗುವ ಅವಕಾಶಗಳ ಕುರಿತು ಮಾತನಾಡುವ ಅಗತ್ಯವಿದೆ. ಒಟಿಟಿ ವೇದಿಕೆಗಳು ಜನಪ್ರಿಯಗೊಂಡಿರುವ ಇವತ್ತಿನ ಕಾಲಘಟ್ಟದಲ್ಲಿ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ. ಚಿತ್ರರಂಗದ ಯಾವುದೇ ಹಿನ್ನೆಲೆ ಇರದ ಹೊರಗಿನ ಪ್ರತಿಭೆಗಳು ಕೂಡ ಹೆಚ್ಚಾಗಿ ಕಾಣ ಸಿಗುತ್ತಿರುವುದು ಖುಷಿಯ ಸಂಗತಿ. ಆದರೆ, ನಾವು ಬಾಲಿವುಡ್‌ ಪ್ರವೇಶಿಸಿದ ಕಾಲದಲ್ಲಿ ಹೀಗಿರಲಿಲ್ಲ. ಸಿನಿಮಾಗಳಿಗೆ ಕಲಾವಿದರನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಹಿಂದೆ ರಾಜಕಾರಣವೇ ನಡೆಯುತ್ತಿತ್ತು. ಕಲಾವಿದರ ಆಯ್ಕೆಯ ತೀರ್ಮಾನ ನಿರ್ದೇಶಕರದ್ದಾಗಿರಬೇಕೇ ಹೊರತು ಅದರ ಹಿಂದೆ ರಾಜಕಾರಣ ಇರಬಾರದು. ಪ್ರತಿಭೆಯ ಆಧಾರದ ಮೇಲೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಬೇಕು. ಇವತ್ತಿಗೂ ಬಾಲಿವುಡ್‌ನಲ್ಲಿ ಆಂತರಿಕ ರಾಜಕಾರಣ ಚಾಲ್ತಿಯಲ್ಲಿದೆ. ಅದನ್ನು ಮಟ್ಟ ಹಾಕದ ಹೊರತು ಹೊಸ ಮುಖಗಳಿಗೆ ಇನ್ನಷ್ಟು ಹೆಚ್ಚು ಅವಕಾಶ ಸಿಗುವುದಿಲ್ಲ” ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಅಮೆರಿಕದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಪ್ರಿಯಾಂಕಾ, ತಾವು ಬಾಲಿವುಡ್‌ ತೊರೆದಿದ್ದರ ಬಗ್ಗೆ ಮಾತನಾಡಿದ್ದರು. “ಬಾಲಿವುಡ್‌ನಲ್ಲಿ ನನ್ನನ್ನು ತುಳಿಯುವ ಪ್ರಯತ್ನಗಳು ನಡೆದವು. ಆಂತರಿಕ ರಾಜಕಾರಣದಿಂದಾಗಿ ಹಲವು ಸಿನಿಮಾ ಅವಕಾಶಗಳು ಕೈತಪ್ಪಿದವು. ಕೆಲವರ ಜೊತೆಗೆ ಮನಸ್ತಾಪಗಳೂ ಆದವು. ಈ ರೀತಿಯ ಕೀಳುಮಟ್ಟದ ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿ ಬಾಲಿವುಡ್‌ನಿಂದ ಹೊರಬಂದೆ” ಎಂದಿದ್ದರು.

Advertisements

ಈ ಸುದ್ದಿ ಓದಿದ್ದೀರಾ? ನಟ ಚೇತನ್‌ ವೀಸಾ ರದ್ದು: ಸರ್ಕಾರದ ಅತಿರೇಕ ಎಂದ ಕಿಶೋರ್‌

ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಸಿಟಾಡೆಲ್‌ʼ ವೆಬ್‌ ಸರಣಿ ಏಪ್ರಿಲ್‌ 28ರಂದು ʼಅಮೆಜಾನ್‌ ಪ್ರೈಂʼ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಹಾಲಿವುಡ್‌ನ ಖ್ಯಾತ ನಟ ರಿಚರ್ಡ್‌ ಮ್ಯಾಡನ್‌ ಈ ಸರಣಿಯಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

c6d189e709d010a95cabcbe8c5246c21
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X