ಖ್ಯಾತ ಸಿನಿಮಾ ನಿರ್ದೇಶಕ, ಸಾಕ್ಷ್ಯಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್ ಅವರು ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
90 ವರ್ಷದ ಶ್ಯಾಮ್ ಬೆನಗಲ್ ಅವರಿಗೆ ಕಿಡ್ನಿ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಮುಂಬೈನ ವೊಕಾರ್ಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಪುತ್ರಿ ಪಿಯಾ ಬೆನಗಲ್ ದೃಢಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ವಾರಣಾಸಿ | ಪ್ರಧಾನಿ ಮೋದಿ ವಿರುದ್ಧ ಸ್ಫರ್ಧಿಸಿದ್ದ ಕಾಮೆಡಿಯನ್ ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕೃತ
‘ಮಂಥನ್’ ಮತ್ತು ‘ಜುಬೇದಾ’ ಚಿತ್ರಗಳ ಮೂಲಕವೇ ಹೆಸರುವಾಸಿಯಾದ ಶ್ಯಾಮ್ ಬೆನಗಲ್ ಅವರು ಡಿಸೆಂಬರ್ 14ರಂದು ತಮ್ಮ 90 ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು.
News Alert! Parallel cinema pioneer Shyam Benegal has died at the age of 90 in Mumbai's Wockhardt hospital: hospital sources
— Press Trust of India (@PTI_News) December 23, 2024
ಬೆನಗಲ್ ಅವರಿಗೆ 1976 ರಲ್ಲಿ ಪದ್ಮಶ್ರೀ ಮತ್ತು 1991ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
