ಮಹಾಕಾಳನಿಗೆ ಪೂಜೆ ಸಲ್ಲಿಸಿದ್ದಕ್ಕೆ ಟ್ರೋಲ್‌ : ತಲೆ ಕೆಡಿಸಿಕೊಳ್ಳಲ್ಲ ಎಂದ ಸಾರಾ ಅಲಿ ಖಾನ್

Date:

Advertisements
  • ಹಿಂದೂ ಧರ್ಮಕ್ಕೆ ಮತಾಂತರವಾಗಿ ಎಂದ ಮುಸ್ಲಿಂ ಮೂಲಭೂತವಾದಿಗಳು
  • ನಟಿಯಿಂದ ದೇವಸ್ಥಾನ ಅಪವಿತ್ರ ಎಂದ ಹಿಂದೂ ಮೂಲಭೂತವಾದಿಗಳು

ಬಾಲಿವುಡ್‌ನ ಖ್ಯಾತ ನಟ ವಿಕ್ಕಿ ಕೌಶಲ್‌ ಮತ್ತು ಸಾರಾ ಅಲಿಖಾನ್‌ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ತೆರೆಗೆ ಸಜ್ಜಾಗಿದೆ. ಸದ್ಯ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ವಿಕ್ಕಿ ಮತ್ತು ಸಾರಾ ಬುಧವಾರ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಟಿಯನ್ನು ಟ್ರೋಲ್‌ ಮಾಡಲಾಗುತ್ತಿದ್ದು, ಟೀಕಾಕಾರರಿಗೆ ನಟಿ ತಿರುಗೇಟು ನೀಡಿದ್ದಾರೆ.

ವಿಕ್ಕಿ ಕೌಶಲ್‌ ಮತ್ತು ಚಿತ್ರತಂಡದ ಜೊತೆಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಾರಾ, ಭಸ್ಮಾರತಿಯಲ್ಲಿ ಭಾಗಿಯಾಗಿದ್ದಾರೆ. ಪೂಜೆ ಸಲ್ಲಿಸಿದ ಸಂದರ್ಭದ ಫೋಟೋಗಳನ್ನು ನಟಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಹಲವರು ಮುಸ್ಲಿಂ ಮೂಲಭೂತವಾದಿಗಳು ʼಹಿಂದೂ ಧರ್ಮಕ್ಕೆ ಮತಾಂತರವಾಗಿ ಬಿಡಿʼ ಎಂದು ನಟಿಯನ್ನು ಟೀಕಿಸಿದ್ದಾರೆ. ಅಷ್ಟೇ ಅಲ್ಲ ಅಶ್ಲೀಲ ಪದಬಳಕೆಯನ್ನೂ ಮಾಡಿದ್ದಾರೆ.

“ಯಾರು ಬೇಕಾದರೂ ಭೇಟಿ ನೀಡಲು ದೇವಸ್ಥಾನ ಪ್ರವಾಸಿ ಸ್ಥಳವಲ್ಲ. ನಟಿಯ ಪ್ರವೇಶದಿಂದಾಗಿ ದೇವಸ್ಥಾನ ಅಪವಿತ್ರಗೊಂಡಿದೆ. ಇಡೀ ದೇವಸ್ಥಾನವನ್ನು ಶುದ್ಧೀಕರಿಸಬೇಕು” ಎಂದು ಹಿಂದು ಮೂಲಭೂತವಾದಿಗಳೂ ಸಾರಾ ಅಲಿಖಾನ್‌ ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ.

Advertisements

ಈ ಎರಡೂ ಕಡೆಯವರ ಟೀಕೆಯನ್ನು ಉಲ್ಲೇಖಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಾರಾ, “ನಾನು ನನ್ನ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುತ್ತೇನೆ. ಜನರಿಗಾಗಿ ಕೆಲಸ ಮಾಡುತ್ತೇನೆ. ಒಂದು ವೇಳೆ ಜನರಿಗೆ ನನ್ನ ಕೆಲಸ ಇಷ್ಟವಾಗದಿದ್ದರೆ ನನಗೆ ಬೇಸರವಾಗುವುದು ಸಹಜ. ಆದರೆ, ನನ್ನ ವೈಯಕ್ತಿಕ ನಂಬಿಕೆಗಳು ನನಗಷ್ಟೇ ಸಂಬಂಧಿಸಿದ್ದು. ನಾನು ʼಅಜ್ಮೇರ್‌ ಶರೀಫ್‌ʼಗೆ ಹೋಗುವಷ್ಟೇ ಭಕ್ತಿಯಿಂದ ʼಬಾಂಗ್ಲಾ ಸಾಹೀಬ್‌ʼ ಮತ್ತು ಮಹಾಕಾಳ ದೇವಸ್ಥಾನಕ್ಕೂ ಹೋಗುತ್ತೇನೆ. ಮುಂದೆಯೂ ಇದೇ ರೀತಿ ದೇವಸ್ಥಾನಕ್ಕೆ ಹೋಗುತ್ತಲಿರುತ್ತೇನೆ. ನನ್ನ ನಡೆಯ ಬಗ್ಗೆ ಯಾವುದೇ ರೀತಿಯ ಟೀಕೆಗಳು ಬಂದರೂ ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದಿದ್ದಾರೆ

ಇದೇ ವೇಳೆ ಸಾರಾ ಅವರನ್ನು ಬೆಂಬಲಿಸಿ ಮಾತನಾಡಿರುವ ವಿಕ್ಕಿ ಕೌಶಲ್‌, “ಮಾಧ್ಯಮದವರು ಟೀಕೆಗೆ ಒಳಗಾದ ವ್ಯಕ್ತಿಗಳನ್ನೇ ಪ್ರಶ್ನಿಸುವುದು ಸರಿಯಲ್ಲ. ಉದಾಹರಣೆಗೆ ನಾನು ನನ್ನ ಪಾಡಿಗೆ ಹಾದಿಯಲ್ಲಿ ಹೋಗುತ್ತಿದ್ದಾಗ ಯಾರಾದರೂ ನನ್ನನ್ನು ನಿಂದಿಸಿದರೆ, ನೀವು ನಿಂದಿಸಿದವರನ್ನು ಪ್ರಶ್ನೆ ಮಾಡಬೇಕೇ ಹೊರತು ನಿಂದನೆಗೆ ಒಳಗಾದವರನ್ನಲ್ಲ. ಈ ಶೈಲಿ ಬದಲಾಗಬೇಕು” ಎಂದು ಮನವಿ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X