ಬಾಲಿವುಡ್‌ ಮಂದಿಗಿಂತ ದಕ್ಷಿಣದ ಕಲಾವಿದರಿಗೇ ವೃತ್ತಿಪರತೆ ಹೆಚ್ಚೆಂದ ಅಮೋಲ್‌ ಪಾಲೇಕರ್‌

Date:

Advertisements

ʼಕನ್ನೇಶ್ವರ ರಾಮʼ ಚಿತ್ರದಲ್ಲಿ ನಟಿಸಿದ್ದ ಅಮೋಲ್‌ ಪಾಲೇಕರ್‌

ಮಲಯಾಳಂ ಚಿತ್ರರಂಗದಲ್ಲೂ ಮಿಂಚಿದ್ದ ಬಾಲಿವುಡ್‌ ನಟ

ಕೊರೊನಾ ಕಾಲ ಘಟ್ಟದ ಬಳಿಕ ದಕ್ಷಿಣ ಸಿನಿ ರಂಗದ ಎದುರು ಬಾಲಿವುಡ್‌ ಮಂಕಾಗಿದೆ ಎಂಬ ಚರ್ಚೆ ಚಾಲ್ತಿಯಲ್ಲಿದೆ. ಈ ಮಾತಿಗೆ ಪುಷ್ಠಿ ನೀಡುವಂತೆ ಬಾಲಿವುಡ್‌ನ ಬಹುತೇಕ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಹೀನಾಯವಾಗಿ ಸೋಲನುಭವಿಸುತ್ತಿವೆ. ಇದೇ ಹೊತ್ತಿನಲ್ಲಿ ಬಾಲಿವುಡ್‌ನ ಹಿರಿಯ ನಟ ಅಮೋಲ್‌ ಪಾಲೇಕರ್‌, ದಕ್ಷಿಣದ ಸಿನಿಮಾ ಕಲಾವಿದರಿಗಿರುವ ವೃತ್ತಿಪರತೆ ಹಿಂದಿ ಚಿತ್ರರಂಗದವರಿಗಿಲ್ಲ ಎಂದಿದ್ದಾರೆ.

Advertisements

ಚಿತ್ರೀಕರಣಕ್ಕೆ ತಡವಾಗಿ ಬರುವವರೇ ದೊಡ್ಡ ಸ್ಟಾರ್‌ ಎಂಬ ಮಾತಿತ್ತು

ಇತ್ತೀಚೆಗೆ ಯುಟ್ಯೂಬ್‌ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅಮೋಲ್‌ ಪಾಲೇಕರ್‌, “ಬಾಲಿವುಡ್‌ ಮಂದಿಗೆ ಹೋಲಿಸಿದರೆ ದಕ್ಷಿಣ ಸಿನಿಮಾ ರಂಗದ ಕಲಾವಿದರು ಮತ್ತು ತಂತ್ರಜ್ಞರು ಅತ್ಯಂತ ವೃತ್ತಿಪರತೆಯನ್ನು ಹೊಂದಿದ್ದಾರೆ. ತಾಂತ್ರಿಕವಾಗಿಯೂ ಸಮರ್ಥರು. ಎಲ್ಲರ ಜೊತೆಗೆ ವಿನಮ್ರತೆಯಿಂದ ನಡೆದುಕೊಳ್ಳುತ್ತಾರೆ. ಎದುರಿಗಿರುವ ವ್ಯಕ್ತಿ ತಮ್ಮಂತೆ ಗೌರವಯುತವಾಗಿ ನಡೆದುಕೊಳ್ಳಬೇಕೆಂದು ಬಯಸುತ್ತಾರೆ. ಆದರೆ, ನಮ್ಮ ಬಾಲಿವುಡ್‌ನಲ್ಲಿ ವೃತ್ತಿಪರತೆಯ ಮಾತು ಹಾಗಿರಲಿ ನಿಗದಿತ ಸಮಯಕ್ಕೆ ಶೂಟಿಂಗ್‌ ಸ್ಥಳಕ್ಕೆ ಹಾಜರಾಗುವ ಸೌಜನ್ಯ ಕೂಡ ಕಲಾವಿದರಿಗೆ ಇರಲಿಲ್ಲ. ನಾನು, ದೇವಾನಂದ್‌ ಮತ್ತು ಅಮಿತಾಬ್‌ ಬಚ್ಚನ್‌ ಮಾತ್ರ ನಿಗದಿತ ಸಮಯಕ್ಕೆ ಸರಿಯಾಗಿ ಶೂಟಿಂಗ್‌ ಸ್ಥಳದಲ್ಲಿರುತ್ತಿದ್ದೆವು. ಆವತ್ತಿಗೆ ಚಿತ್ರೀಕರಣಕ್ಕೆ ತಡವಾಗಿ ಬರುವುದೇ ದೊಡ್ಡ ಸ್ಟಾರ್‌ಗಿರಿ ಎಂಬ ಮಾತಿತ್ತು. ಆದರೆ, ದಕ್ಷಿಣ ಸಿನಿ ರಂಗದ ಕಲಾವಿದರಲ್ಲಿ ತಮ್ಮ ಕೆಲಸದ ಬಗ್ಗೆ ಈ ರೀತಿಯ ಅಸಡ್ಡೆ ಎಂದಿಗೂ ಕಾಣಸಿಗಲಿಲ್ಲ. ಸೂಪರ್‌ ಸ್ಟಾರ್‌ ಎನ್ನಿಸಿಕೊಂಡಿದ್ದ ರಜನಿಕಾಂತ್‌ ಶೂಟಿಂಗ್‌ ಶುರುವಾಗುವ ಮುಂಚೆಯೇ ಸೆಟ್‌ನಲ್ಲಿ ಹಾಜರಿರುತ್ತಿದ್ದರು. ಮೇಕಪ್‌ ಮುಗಿಸಿಕೊಂಡು ಚಹಾ ಸವಿಯುತ್ತಾ ಸೆಟ್‌ ಹುಡುಗರ ಜೊತೆ ಸಾಮಾನ್ಯನಂತೆ ಕಾಲ ಕಳೆಯುತ್ತಿದ್ದರು. ನಿರ್ದೇಶಕರು ಬಂದೊಡನೆ ಶೂಟಿಂಗ್‌ನಲ್ಲಿ ತೊಡಗಿಕೊಳ್ಳುತ್ತಿದ್ದರು” ಎಂದು ದಕ್ಷಿಣ ಸಿನಿ ತಾರೆಯರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಬಾಲಿವುಡ್‌ ಮಂದಿ ಪ್ರಾದೇಶಿಕ ಚಿತ್ರರಂಗಗಳನ್ನು ಕೆಳಸ್ಥರದವು ಎಂಬಂತೆ ಕಾಣುತ್ತಿದ್ದರು

“ಬಾಲಿವುಡ್‌ನಲ್ಲಿ ಯಶಸ್ಸು ಕಂಡ ನಟ, ನಟಿಯರು ಪ್ರಾದೇಶಿಕ ಭಾಷೆಯ ಚಿತ್ರಗಳಲ್ಲಿ ನಟಿಸಬಾರದು ಎಂಬ ನಿಯಮವೂ ಇತ್ತು. ಬಾಲಿವುಡ್‌ ಹೊರತುಪಡಿಸಿ ಉಳಿದೆಲ್ಲ ಚಿತ್ರರಂಗಳನ್ನು ಕೆಳಸ್ಥರದವು ಎಂಬಂತೆ ನೋಡಲಾಗುತ್ತಿತ್ತು. ಆದರೆ, ಬಾಲಿವುಡ್‌ ಮಂದಿಯ ಈ ನಡೆ ನನಗೆ ಇಷ್ಟವಾಗುತ್ತಿರಲಿಲ್ಲ. ಭಾರತೀಯ ಚಿತ್ರರಂಗಕ್ಕೆ ಪ್ರಾದೇಶಿಕ ಚಿತ್ರಗಳ ಕೊಡುಗೆ ಅಪಾರವಾದದ್ದು. ಹೀಗಾಗಿಯೇ ನಾನು ಬಂಗಾಳಿ, ಮಲಯಾಳಂ, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯ ಚಿತ್ರಗಳಲ್ಲಿ ನಟಿಸುವ ನಿರ್ಧಾರವನ್ನು ಕೈಗೊಂಡೆ. ಆ ಕಾಲಕ್ಕೆ ಬಾಲು ಮಹೇಂದ್ರ ನಿರ್ದೇಶನದಲ್ಲ ಮೂಡಿಬಂದಿದ್ದ ʼಓಲಂಗಲ್‌ʼ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದೆ. ಆ ಚಿತ್ರ ಸಿಲ್ವರ್‌ ಜ್ಯುಬಿಲಿ ಆಚರಿಸುವ ಮಟ್ಟಿಗೆ ಪ್ರದರ್ಶನ ಕಂಡಿತ್ತು” ಎಂದಿದ್ದಾರೆ.

ಕನ್ನಡ ಚಿತ್ರರಂಗವನ್ನು ನೆನೆದ ಅಮೋಲ್‌ ಪಾಲೇಕರ್‌

ಎಂ.ಎಸ್‌ ಸತ್ಯು ಅವರು ʼಕನ್ನೇಶ್ವರ ರಾಮʼ ಚಿತ್ರದಲ್ಲಿ ನಟಿಸುವಂತೆ ಕೇಳಿದಾಗ ಖುಷಿಯಿಂದಲೇ ಒಪ್ಪಿಕೊಂಡೆ. ಕಲಾವಿದರು ತಮ್ಮದಲ್ಲದ ಭಾಷೆಯಲ್ಲಿ ನಟಿಸುವ ನಿರ್ಧಾರ ಕೈಗೊಂಡಾಗ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಚಿತ್ರದ ಸನ್ನಿವೇಶ ಮತ್ತು ಸಂಭಾಷಣೆಗಳ ವಿಚಾರದಲ್ಲಿ ಹಲವರು ಗೊಂದಲಕ್ಕೆ ಸಿಲುಕಿಕೊಳ್ಳುತ್ತಾರೆ. ಆದರೆ, ನನ್ನ ಕನ್ನಡದ ಉಚ್ಛಾರಣೆಯನ್ನು ಕಂಡು ಬೆರಗಾದ ಸತ್ಯು, ʼನಿನ್ನ ಪಾತ್ರಕ್ಕೆ ನೀನೇ ಕನ್ನಡದಲ್ಲಿ ಡಬ್ಬಿಂಗ್‌ ಮಾಡಬೇಕುʼ ಎಂದಿದ್ದರು. ʼಕನ್ನೇಶ್ವರ ರಾಮʼ ಚಿತ್ರದಲ್ಲಿ ನಾನು ಮತ್ತು ಅನಂತ್‌ ನಾಗ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದೆವು. ನನ್ನ ಪಾತ್ರದ ಎಲ್ಲ ಸಂಭಾಷಣೆಗಳನ್ನು ಕಂಠಪಾಠ ಮಾಡಿಕೊಂಡು ಚಿತ್ರೀಕರಣಕ್ಕೆ ತಯಾರಾದೆ. ಇನ್ನೇನೂ ಚಿತ್ರೀಕರಣ ಶುರುವಾಗಬೇಕು ಎನ್ನುವಾಗ ಎದುರಿಗಿರುವ ಅನಂತ್‌ ನಾಗ್‌ ಯಾವ ಡೈಲಾಗ್‌ ಹೇಳುತ್ತಾರೆ, ಅದಕ್ಕೆ ಪ್ರತಿಯಾಗಿ ನಾನೇನು ಉತ್ತರಿಸಬೇಕು ಎಂಬ ಗೊಂದಲಕ್ಕೆ ಸಿಲುಕಿಕೊಂಡೆ. ನನಗೆ ನನ್ನ ಪಾತ್ರದ ಡೈಲಾಗ್‌ ನೆನಪಿತ್ತೆ ಹೊರತು, ಅನಂತ್‌ ನಾಗ್‌ ಮಾತಿಗೆ ಪ್ರತಿಯಾಗಿ ನಾನು ಯಾವ ಡೈಲಾಗ್‌ ಹೇಳಬೇಕು ಎಂಬ ತಯಾರಿಯೇ ನಡೆಸಿರಲಿಲ್ಲ. ಅತ್ತ ಶೂಟಿಂಗ್‌ ಶುರುವಾಗುತ್ತಿದೆ. ಆದರೆ, ನಾವು ಪರಸ್ಪರ ಸಂಭಾಷಣೆಗೆ ಸಿದ್ಧತೆಯನ್ನೇ ಮಾಡಿಕೊಂಡಿರಲಿಲ್ಲ. ಸತ್ಯು ಅವರಿಗೆ ವಿಚಾರ ತಿಳಿಸಿ ತಯಾರಾಗಲು ಸಮಯವಕಾಶ ಕೇಳಿದೆ. ಕತ್ತಲಾಗುತ್ತಿದ್ದರಿಂದ ಅವರು ಚಿತ್ರೀಕರಣಕ್ಕೆ ತಡವಾಗುತ್ತಿದೆ. ಹೇಗಾದರೂ ಮಾಡಿ ಬೇಗ ತಯಾರಾಗಿ ಎಂದರು. ಅನಂತ್‌ ನಾಗ್‌ ಅವರನ್ನು ಜೊತೆ ಕೂತು ಅವರ ಪಾತ್ರದ ಸಂಭಾಷಣೆಗಳನ್ನು ಮನದಟ್ಟು ಮಾಡಿಕೊಂಡೆ. ಆದರೆ, ಪೂರ್ಣ ಪ್ರಮಾಣದಲ ಚಿತ್ರದಲ್ಲಿ ಹಳ್ಳಿ ಹೈದನ ಪಾತ್ರ, ಪಾತ್ರಕ್ಕೆ ಹೊಂದುವಂತೆ ಕೀವಿಯ ಮೇಲೊಂದು ಬೀಡಿ ಇಟ್ಟುಕೊಂಡಿದ್ದೆ. ಶೂಟಿಂಗ್‌ ಶುರುವಾದಾಗ ನನ್ನ ಪಾತ್ರದ ಸಂಭಾಷಣೆಯನ್ನಷ್ಟೇ ಹೇಳುತ್ತಿದ್ದೆ. ಅನಂತ್‌ ನಾಗ್‌ ಮಾತನಾಡಲು ಶುರು ಮಾಡುತ್ತಲೇ ಕೀವಿಯ ಮೇಲಿದ್ದ ಬೀಡಿ ಬಾಯಲ್ಲಿಟ್ಟುಕೊಂಡು ಸಂದರ್ಭಕ್ಕೆ ತಕ್ಕಂತೆ ತಲೆಯಾಡಿಸುತ್ತಿದ್ದೆ. ಅಂತೂ ಶೂಟಿಂಗ್‌ ಮುಗಿಸಿದೆ. ಸಿನಿಮಾ ನೋಡಿದ ಜನಕ್ಕೆ ನನ್ನ ಪಾತ್ರವೂ ಹಿಡಿಸಿತ್ತು. ನಮ್ಮದೇ ಭಾಷೆಯ ಚಿತ್ರಗಳಲ್ಲಿ ನಟಿಸುವಾಗ ಎಲ್ಲವೂ ಸಲೀಸಾಗಿರುತ್ತದೆ. ಆದರೆ, ಪರಭಾಷೆಯ ಚಿತ್ರಗಳ ಭಾಗವಾದಾಗ ಕಲಾವಿದರು ಹೆಚ್ಚು ಶ್ರಮ ವಹಿಸಿ ಅಲ್ಲಿನ ವಿಚಾರಗಳನ್ನು ಕಲಿಯುವುದು ಬಹಳ ಮುಖ್ಯ ಎಂಬುದು ನನಗೆ ಕನ್ನಡದ ಚಿತ್ರದಲ್ಲಿ ನಟಿಸಿದಾಗ ಅರ್ಥವಾಯಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X