ನಟ ಶಿವ ರಾಜ್‌ಕುಮಾರ್ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿದ್ದಾರೆ. ಅದಕ್ಕೂ ಮುನ್ನ, ತಮ್ಮ ಕುಟುಂಬ ಸಮೇತ ತಿರುಪತಿಗೆ ತೆರಳಿದ್ದ ಶಿವ ರಾಜ್‌ಕುಮಾರ್ ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ.
ಇದೇ ತಿಂಗಳು (ಡಿಸೆಂಬರ್) 18ರಂದು ಚಿಕಿತ್ಸೆಗಾಗಿ ಶಿವರಾಜ್ ಕುಮಾರ್ ಅಮೆರಿಕಗೆ ತೆರಳಲಿದ್ದಾರೆ. ಹೀಗಾಗಿ, ಶನಿವಾರ ಶಿವ ರಾಜ್‌ಕುಮಾರ್ ತಮ್ಮ ಪತ್ನಿ ಗೀತಾ, ಮಗಳು ನಿವೇದಿತಾ ಹಾಗೂ ಆಪ್ತರೊಂದಿಗೆ ತಿರುಪತಿಗೆ ತೆರಳಿದ್ದರು. ಗೀತಾ ಅವರೂ ಕೂಡ ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ.
ಈ ಹಿಂದೆಯೇ, ತಮ್ಮ ಅನಾರೋಗ್ಯದ ಬಗ್ಗೆ ಮಾತನಾಡಿರುವ ಶಿವ ರಾಜ್‌ಕುಮಾರ್, “ʻʻನನಗೆ ಅನಾರೋಗ್ಯ ಇರುವುದು ನಿಜ. ಟ್ರೀಟ್‌ಮೆಂಟ್ ನಡಿತಿದೆ. ಯಾರೂ ಆತಂಕ ಪಡಬೇಕಿಲ್ಲ. ಒಟ್ಟು 4 ಸೆಷನ್ ಮೂಲಕ ಟ್ರೀಟ್‌ಮೆಂಟ್ ನಡಿಯುತ್ತದೆ. ಆನಂತರ ಶಸ್ತ್ರಚಿಕಿತ್ಸೆ ನಡೆಯಲಿದೆ” ಎಂದು ಹೇಳಿದ್ದರು.
ಶಿವ ರಾಜ್‌ಕುಮಾರ್ ಅವರು ಕೆಲವು ತಿಂಗಳು ನಟನೆಯಿಂದ ದೂರ ಇರಲಿದ್ದಾರೆ. ಚಿಕಿತ್ಸೆ ಪಡೆದು, ಸಂಪೂರ್ಣ ಚೇತರಿಕೆ ಕಂಡ ಬಳಿಕವೇ ಮತ್ತೆ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.