ಒಂದು ತಿಂಗಳ ವಿರಾಮದ ಬಳಿಕ ಸಂಪೂರ್ಣ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇನೆ ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.
ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾಗಿ ಬೆಂಗಳೂರಿಗೆ ಆಗಮಿಸಿದ ಬಳಿಕ ತಮ್ಮ ನಿವಾಸದ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು, ಹೋಗಬೇಕಿದ್ದರೆ ಬಹಳ ಎಮೋಷನ್ ಆಗಿದ್ದೆ. ಏನೇ ಇದ್ದರೂ ಎದುರಿಸಬೇಕಿತ್ತು. ಧೈರ್ಯವಾಗಿ ಹೋಗಬೇಕಿತ್ತು, ಹೋಗಿ ಬಂದೆ. ಹೋಗಬೇಕಿದ್ದರೆ ಸ್ವಲ್ಪ ಭಯ ಇತ್ತು. ಅಭಿಮಾನಿಗಳ ಆಶೀರ್ವಾದದಿಂದ ಹೋಗಿಬಂದೆ. ವಿಮಾನ ನಿಲ್ದಾಣದಿಂದ ಇಳಿದು ಆಸ್ಪತ್ರೆ ಮುಂದೆ ಹೋಗಬೇಕಿದ್ದಾಗಲೇ ಧೈರ್ಯ ಬಂತು. ಆಪರೇಷನ್ ಮುಗಿದ ಮೇಲೆ ಬಂದು ಹೇಳಿದ ಮೇಲೆ ಎಲ್ಲವೂ ಆಗಿದೆ ಅಂತ ಗೊತ್ತಾಯ್ತು ಎಂದರು.
ವಿಮಾನದಲ್ಲಿ 20 ಗಂಟೆಯಾಯಿತು. ಆರು ಗಂಟೆ ಕಾಲ ಸರ್ಜರಿ ನಡೆಯಿತು. ಎರಡನೇ ದಿನದಿಂದಲೇ ನಡೆಯಲು ಶುರು ಮಾಡಿದೆ. ಆ ಶಕ್ತಿ ಎಲ್ಲಿಂದ ಬಂತೋ ಗೊತ್ತಿಲ್ಲ. ಅಭಿಮಾನಿಗಳಷ್ಟೇ ಅಲ್ಲ, ಇಂಡಸ್ಟ್ರಿ ಅವರು ಧೈರ್ಯ ತುಂಬಿದರು. ಗೀತಾ ಅವರ ಬಗ್ಗೆ ಮಾತಾಡಲ್ಲ. ಗೀತಾ ಹೆಂಡತಿನೂ ಹೌದು, ತಾಯಿನೂ ಹೌದು. ಈ ಬಾರಿ ಮಗಳು ನಿವೇದಿತಾ ತಾಯಿಗಿಂತ ಹೆಚ್ಚು ನೋಡಿಕೊಂಡಿದ್ದಾಳೆ. ನಿವೇದಿತಾ ಗೆಳತಿ ಅನು ಒಂದು ತಿಂಗಳು ನಮ್ಮ ಜೊತೆ ಇದ್ದರು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಭಾರತೀಯ ಕಿರುಚಿತ್ರ ‘ಅನುಜಾ’ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ
ಇಂಡಸ್ಟ್ರಿ ಆರೈಕೆ, ಜನರ ಆರೈಕೆ, ಮಾಧ್ಯಮ ಆರೈಕೆ ಇವತ್ತು ಒಳ್ಳೆಯದಾಗಿದೆ. ಗಂಡಸರಿಗೆ ತಾಯಂದಿರು ತುಂಬಾ ಇರುತ್ತಾರೆ. ಅಮ್ಮ, ಹೆಂಡತಿ ಮಗಳು ಹೀಗೆ. ಈ ಬಾರಿ ನಿವೇದಿತಾ ಕೂಡ ನಮ್ಮ ಜೊತೆ ಇದ್ದಳು. ವಿಶ್ರಾಂತಿ ಹೇಳಿದ್ದಾರೆ. ನಾರ್ಮಲ್ ಕೆಲಸ ಮಾಡುತ್ತೇನೆ. ಮಾರ್ಚ್ ಬಳಿಕ ಚಿತ್ರೀಕರಣ ಶುರು ಮಾಡುತ್ತೇನೆ ಎಂದು ಹೇಳಿದರು.
ಎರಡು ಮೂರು ದಿನ ದ್ರವ ಆಹಾರದಲ್ಲಿ ಇದ್ದೆ. ಎರಡು ದಿನ, ಮೂರು ದಿನದ ಬಳಿಕ ನಿಧಾನವಾಗಿ ನಡೆಯಲು ಶುರು ಮಾಡಿದೆ. ಜೀವನವೇ ಒಂದು ಪಾಠ, ಜೀವನದಲ್ಲಿ ಇದೆಲ್ಲ ತಾನಾಗಿ ಬರುತ್ತೆ. ನಾನು ಎಲ್ಲವನ್ನೂ ಧೈರ್ಯವಾಗಿ ಮಾಡಿದೆ ಎಂದರು.