ನಟ ಸುದೀಪ್ ಅಭಿನಯದ, ವಿಜಯ್ ಕಾರ್ತಿಕೇಯ ನಿರ್ದೇಶನದ ಸಿನಿಮಾ ‘ಮ್ಯಾಕ್ಸ್’ಗೆ ಸೆನ್ಸಾರ್ ಮಂಡಳಿಯಿಂದ ‘U/A’ ಪ್ರಮಾಣಪತ್ರ ದೊರೆತಿದೆ. ಸಿನಿಮಾ ಡಿಸೆಂಬರ್ 25ರಂದು ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿದ್ದು, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಡಿಸೆಂಬರ್ 27ರಂದು ತೆರೆಗೆ ಬರಲಿದೆ. ಹಿಂದಿ, ಮಲೆಯಾಳಂ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ.
ಸಿನಿಮಾದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ಸಿನಿಮಾದಲ್ಲಿ ನಾಯಕ ನಟಿ ಪಾತ್ರವೇ ಇಲ್ಲವೆಂದು ಹೇಳಲಾಗಿದೆ. ಸಂಯುಕ್ತಾ ಹೊರನಾಡ್, ಉಗ್ರಂ ಮಂಜು ಸೇರಿದಂತೆ ಹಲವು ಕಲಾವಿದರು ಸುದೀಪ್ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಸದ್ಯ ಇನ್ನೂ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿಲ್ಲ. ಸಿನಿಮಾ ಬಿಡುಗಡೆಯಾಗುವ ಒಂದೆರಡು ದಿನಗಳ ಮುಂಚೆ ಟ್ರೇಲರ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಯು ಚಿತ್ರದ ವಿತರಣೆಯ ಹಕ್ಕು ಪಡೆದುಕೊಂಡಿದೆ.
Jgjfjhfu