ದಾದಾಸಾಹೇಬ್‌ ಫಾಲ್ಕೆ ಪುರಸ್ಕೃತ ಬಾಲಿವುಡ್‌ ನಟ ಮನೋಜ್‌ ಕುಮಾರ್‌ ನಿಧನ

Date:

Advertisements

ದಾದಾಸಾಹೇಬ್‌ ಫಾಲ್ಕೆ, ಪದ್ಮಶ್ರೀ ಪುರಸ್ಕೃತ ಹಿರಿಯ ಬಾಲಿವುಡ್‌ ನಟ ಮನೋಜ್‌ ಕುಮಾರ್‌‌ ಅವರು ನಿಧನರಾಗಿದ್ದಾರೆ.

87 ವಯಸ್ಸಿನ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಮನೋಜ್‌ ಕುಮಾರ್‌ ಅವರದ್ದು ಪ್ರಸಿದ್ಧ ಹೆಸರು. ಶಹೀದ್ (1965), ಉಪಕಾರ್ (1967), ಪುರಬ್ ಔರ್ ಪಶ್ಚಿಮ್ (1970) ಸೇರಿದಂತೆ ದೇಶಭಕ್ತಿ ಚಿತ್ರಗಳಿಗೆ ಹೆಸರುವಾಸಿಯಾಗಿದ್ದರು

ಮನೋಜ್ ಕುಮಾರ್ ಅವರ ನಿಜವಾದ ಹೆಸರು ಹರಿ ಕಿಶನ್ ಗಿರಿ ಗೋಸ್ವಾಮಿ. ಹಿಂದಿ ಚಿತ್ರರಂಗದಲ್ಲಿ ಈ ಗ್ಲಾಮರಸ್ ಜಗತ್ತಿಗೆ ಪ್ರವೇಶಿಸಿದ ತಕ್ಷಣ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಅನೇಕ ನಟರು ಇದ್ದಾರೆ. ಅವರ ಅಭಿಮಾನಿಗಳು ಇಲ್ಲಿಯವರೆಗೆ ಅವರನ್ನು ಆ ಹೊಸ ಹೆಸರಿನಿಂದಲೇ ತಿಳಿದಿದ್ದಾರೆ. ಮನೋಜ್ ಕುಮಾರ್ ಕೂಡ ಅವರಲ್ಲಿ ಒಬ್ಬರು.

Advertisements

ಬಾಲಿವುಡ್‌ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ 1992 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ನಂತರ 2015 ರಲ್ಲಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ದೇಶಭಕ್ತಿಯ ಚಲನಚಿತ್ರಗಳಿಗಾಗಿ ‘ಭಾರತ್ ಕುಮಾರ್’ ಎಂದು ಕರೆಯಲ್ಪಡುವ ಅವರು ಹರಿಯಲಿ ಔರ್ ರಾಸ್ತಾ, ವೋ ಕೌನ್ ಥಿ, ಹಿಮಾಲಯ ಕಿ ಗಾಡ್ ಮೇ, ನೀಲ್‌ರನ್ ಕೇತಿ, ಕಮಲ್, ಪಾತನ್, ಕ್ತಿ ಮುಂತಾದ ಕ್ಲಾಸಿಕ್‌ಗಳ ಮೂಲಕ ಗುರುತಿಸಿಕೊಂಡಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಲೆ ಏರಿಸಿ ಆರಿಸಿದವರನ್ನೇ ಮೂರ್ಖರನ್ನಾಗಿಸುತ್ತಿರುವ ಸರ್ಕಾರಗಳು

ಹರಿಕಿಶನ್ ಗಿರಿ ಗೋಸ್ವಾಮಿ (ಮನೋಜ್ ಕುಮಾರ್) ಜುಲೈ 24, 1937 ರಂದು ಅಬೋಟಾಬಾದ್‌ನಲ್ಲಿ ಜನಿಸಿದರು. ಇದು ಭಾರತ ವಿಭಜನೆಯ ನಂತರ ಪಾಕಿಸ್ತಾನದ ಭಾಗವಾಯಿತು. ಆ ದಿನಗಳಲ್ಲಿ ಮನೋಜ್ ಕುಮಾರ್ ಅವರ ಪೋಷಕರು ಭಾರತವನ್ನು ಆರಿಸಿಕೊಂಡು ದೆಹಲಿಗೆ ಆಗಮಿಸಿ ಇಲ್ಲಿಯೇ ಜೀವನವನ್ನು ಕಂಡುಕೊಂಡರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

3 ಈಡಿಯಟ್ಸ್ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತರ್ ನಿಧನ

3 ಈಡಿಯಟ್ಸ್ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತರ್ ಅವರು ಆಗಸ್ಟ್...

ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್‌ ಆಯ್ಕೆ

ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)...

ಮತಗಳವು ಆರೋಪ ಸಂವಿಧಾನಕ್ಕೆ ಮಾಡಿದ ಅಪಮಾನ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌

ವಿಪಕ್ಷಗಳು ಮಾಡಿರುವ ಮತಗಳವು ಆರೋಪ ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ಮುಖ್ಯ...

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ನಿಧನ

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು...

Download Eedina App Android / iOS

X