ಕೆಜಿಎಫ್ ಚಾಪ್ಟರ್-2 ತೆರೆಕಂಡು 3 ವರ್ಷ ಕಳೆದಿದೆ. ಇದೀಗ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ 3ನೇ ಭಾಗದ ಬಗ್ಗೆ ಅಪ್‌ಡೇಟ್ ಕೊಟ್ಟಿದೆ.
ನಟ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿಯ ಮೂಲಕ ಮೂಡಿಬಂದ ʻಕೆಜಿಎಫ್-1, ಕೆಜಿಎಫ್-2ʼ ಸರಣಿ ಸೂಪರ್ ಹಿಟ್ ಆಗಿದ್ದವು. ಅಲ್ಲದೆ ಗಲ್ಲಪೆಟ್ಟಿಗೆಯಲ್ಲಿ ದಾಖಲೆ ಬರೆದು ರಾಷ್ಟ್ರಮಟ್ಟದಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿದ್ದವು. ಕೆಜಿಎಫ್-2 ವಿದೇಶಗಳಲ್ಲೂ ಸದ್ದು ಮಾಡಿತ್ತು, ಇದೀಗ ಈ ಸರಣಿಯ 3ನೇ ಭಾಗದ ಬಗ್ಗೆ ಉತ್ತರ ಸಿಕ್ಕಿದೆ.
ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ತನ್ನ ಇನ್‌ಸ್ಟಾ ಖಾತೆಯಲ್ಲಿ ವಿಶೇಷ ಎಐ ವಿಡಿಯೋವೊಂದನ್ನ ಹಂಚಿಕೊಳ್ಳುವ ಮೂಲಕ ಸಿನಿಮಾ ಆರಂಭಿಸುವ ಸೂಚನೆ ನೀಡಿದೆ.
ವಿಡಿಯೋದಲ್ಲಿ ʻನೀವು ರಾಕಿ ಭಾಯ್ ಜೊತೆಗೆ ಮುಂದುವರಿಯಿರಿ, ಇದು ನಿಯಂತ್ರಿಸಲಾಗದ ಶಕ್ತಿʼ ಎಂದು ಬರೆದುಕೊಂಡಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಭಾಷಾ ಸಾಮರಸ್ಯ ಕದಡಿದ್ದ ಗಾಯಕ ಸೋನು ನಿಗಮ್ ವಿರುದ್ಧ ಎಫ್‌ಐಆರ್
ಹೊಂಬಾಳೆ ಫಿಲ್ಮ್ಸ್‌ನ ಈ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳು ಕೆಜಿಎಫ್-3 ಯಾವಾಗ ಬರುತ್ತೆ? ಯಶ್ ಅವರನ್ನು ಕೆಜಿಎಫ್‌ನಲ್ಲಿ ನೋಡುವುದು ಯಾವಾಗ ಮುಂತಾದ ಪ್ರಶ್ನೆಗಳನ್ನು ಕೇಳಿದ್ದಾರೆ.
ಸದ್ಯ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಜೂ. ಎನ್‌ಟಿಆರ್ ಜೊತೆಗಿನ ಚಿತ್ರದಲ್ಲಿ ನಿರತರಾಗಿದ್ದಾರೆ. ಇದರ ಬಳಿಕ ಅವರು ‘ಸಲಾರ್ 2’ ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. 2026ರಲ್ಲಿ ಸಲಾರ್ ಚಿತ್ರೀಕರಣ ಶುರುವಾದರೆ 2027ಕ್ಕೆ ಸಿನಿಮಾ ಬಿಡುಗಡೆಯಾಗಬಹುದು. ಆದ್ದರಿಂದ ‘ಕೆಜಿಎಫ್ 3’ ಚಿತ್ರ 2027 ಅಥವಾ 2028ರ ನಂತರ ಬರಬಹುದು ಎಂದು ಹೇಳಲಾಗುತ್ತಿದೆ. ನಟ ಯಶ್ ಕೂಡ ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.