ಬೆಂಗಳೂರಿನಲ್ಲಿ ಡೆಂಘೀಗೆ 27 ವರ್ಷದ ಯುವಕ ಬಲಿ: ರಾಜ್ಯಾದ್ಯಂತ ಸಾವಿನ ಸಂಖ್ಯೆ 6ಕ್ಕೆ ಏರಿಕೆ

Date:

Advertisements

ಬೆಂಗಳೂರಿನ 27 ವರ್ಷದ ಯುವಕ ಡೆಂಘೀ ಸೋಂಕಿನಿಂದಲೇ ಸಾವಿಗೀಡಾಗಿದ್ದಾರೆ. ಮೃತಪಟ್ಟ ಯುವಕ ಕಗ್ಗದಾಸಪುರದ ನಿವಾಸಿ ಎಂದು ಬಿಬಿಎಂಪಿ ಖಚಿತಪಡಿಸಿದೆ.

ಕಳೆದ ಶುಕ್ರವಾರ ಎರಡು ಡೆಂಘೀ ಶಂಕಿತ ಸಾವಿನ ಪ್ರಕರಣಗಳು ಸಂಭವಿಸಿದ್ದವು. ಇದರಲ್ಲಿ ಒಂದು ಸಾವು ಡೆಂಘೀವಿನಿಂದಾಗಿದೆ ಎಂದು ಬಿಬಿಎಂಪಿ ಹೆಲ್ತ್ ಆಡಿಟ್ ಖಚಿತಪಡಿಸಿದೆ. ಮತ್ತೊಂದು ಕ್ಯಾನ್ಸರ್ ಕಾರಣ ಎಂದು ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಹಳ ಕಾಲ ನೆನಪಿನಲ್ಲುಳಿಯುವ ಫೈನಲ್ ಪಂದ್ಯ

Advertisements

ಬೆಂಗಳೂರು ನಗರದಲ್ಲಿ 1743 ಡೆಂಘೀ ಪ್ರಕರಣಗಳು ದಾಖಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಡೆಂಘೀ ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ. ಗರ್ಭಿಣಿಯರಲ್ಲಿ ಡೆಂಗ್ಯು ಹೆಚ್ಚಿನ ಹಾನಿ ಎಸಗುತ್ತಿರುವುದರಿಂದಾಗಿ ಎಚ್ಚರ ವಹಿಸಲು ಬಿಬಿಎಂಪಿಯಿಂದ ಸಲಹೆ ನೀಡಲಾಗಿದೆ. ಇದೂವರೆಗೂ ನಗರದಲ್ಲಿ ಇಬ್ಬರು ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾರೆ. ರಾಜ್ಯಾದ್ಯಂತ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಜನರು ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಡೆಂಘೀ ಲಕ್ಷಣಗಳು

ಗಮನಾರ್ಹವಾಗಿ ಹರಡುತ್ತಿರುವ ಡೆಂಘೀ ಜ್ವರವು ಏಡಿಸ್ ಈಜಿಪ್ಟಿ ಎಂಬ ಸೋಂಕುಪೀಡಿತ ಹೆಣ್ಣು ಸೊಳ್ಳೆಯಿಂದ ಹರಡುವ ವೈರಸ್ ಮೂಲಕ ಬರುವ ಸೋಂಕು. ಡೆಂಘೀ ಜ್ವರ ಇರುವ ರೋಗಿಯ ರಕ್ತ ಹೀರಿದ ಸೊಳ್ಳೆಯು ಬೇರೆ ವ್ಯಕ್ತಿಗಳಿಗೆ ಕಚ್ಚುವುದರಿಂದ ಈ ವೈರಸ್ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಡೆಂಘೀ ಜ್ವರ ಹರಡುವ ಸೊಳ್ಳೆಗಳು ಸಾಮಾನ್ಯವಾಗಿ ಹಗಲುಹೊತ್ತಿನಲ್ಲಿ ಕಡಿಯುತ್ತವೆ.

ಎಲ್ಲ ಡೆಂಘೀ ಸೋಂಕು ಪೀಡಿತ ವ್ಯಕ್ತಿಗಳಲ್ಲಿ ತೀವ್ರವಾದ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಹೆಚ್ಚಿನ  ಜನರಲ್ಲಿ ಯಾವುದೇ ರೋಗ ಲಕ್ಷಣಗಳು ಇರದೇ ಇರಬಹುದು. ಇನ್ನು ಕೆಲವು ಜನರಲ್ಲಿ ವಿಪರೀತ ಆಯಾಸ, ಮೈಕೈ ನೋವು , ಮಾಂಸಖಂಡ ಮತ್ತು ಗಂಟುಗಳ ನೋವು, ಸ್ನಾಯು ಸೆಳೆತ, ತಲೆನೋವು, ವಾಂತಿ ಇತ್ಯಾದಿ ಸಾಮಾನ್ಯ ಜ್ವರದ ಲಕ್ಷಣಗಳು ಮಾತ್ರ ಇದ್ದು, ಒಂದೆರಡು ವಾರಗಳಲ್ಲಿ ಗುಣಮುಖರಾಗಬಹುದು.

ಬೆರಳೆಣಿಕೆಯಷ್ಟು ಜನರಲ್ಲಿ ಮಾತ್ರ ಜ್ವರವು ಉಲ್ಬಣಿಸಿ ತೀವ್ರವಾದ ಹೊಟ್ಟೆನೋವು, ಭೇದಿ, ರಕ್ತಸ್ರಾವ, ಉಸಿರಾಟದ ಲಕ್ಷಣಗಳು, ಅಂಗಾಂಗಗಳ ವೈಫಲ್ಯ ಮತ್ತು ಆಘಾತ ಕಾಣಿಸಿಕೊಳ್ಳಬಹುದು.

ಸೊಳ್ಳೆ ನಿಯಂತ್ರಣ ಮುಖ್ಯ

ಡೆಂಘೀ ಜ್ವರದ ಹರಡುವಿಕೆಯನ್ನು ತಡೆಗಟ್ಟಲು ಸೊಳ್ಳೆಗಳ ನಿಯಂತ್ರಣ ಬಹಳ ಮುಖ್ಯ. ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಆದುದರಿಂದ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ಎಲ್ಲಿಯೂ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು ಅಥವಾ ನೀರು ನಿಲ್ಲುವಂತಹ ಯಾವುದೇ ರೀತಿಯ ವಸ್ತುಗಳನ್ನು ಹೊರಗೆ ಎಸೆಯದೆ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು.

ಮನೆಯ ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಬಳಸಬಹುದು. ಕೈಕಾಲುಗಳಿಗೆ ಸೊಳ್ಳೆ ನಿವಾರಕವನ್ನು
ಹಚ್ಚಬಹುದು. ಆದರೆ ಮಕ್ಕಳಲ್ಲಿ ಯಾವುದೇ ಸೊಳ್ಳೆ ನಿವಾರಕಗಳನ್ನು ಬಳಸುವಾಗ ವೈದ್ಯರ ಸಲಹೆ ಮತ್ತು ತಯಾರಕರ ಸೂಚನೆಗಳನ್ನು ತಪ್ಪದೆ ಅನುಸರಿಸಬೇಕು. ಸೊಳ್ಳೆ ಕಡಿತದಿಂದ ಸುರಕ್ಷಿತವಾಗಿರಲು ಮೈ ಮುಚ್ಚುವಂತಹ ಬಟ್ಟೆಗಳನ್ನು ಧರಿಸಬೇಕು.

ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸುವುದು ಉತ್ತಮ. ಪ್ರತಿಯೊಬ್ಬರೂ ಡೆಂಗ್ಯೂ ಎಂಬ ಮಾರಕ ಜ್ವರ ಹರಡುವ ರೀತಿ ಮತ್ತು ಡೆಂಗ್ಯೂ ಹರಡದಂತೆ ತಡೆಗಟ್ಟುವ ವಿಧಾನಗಳನ್ನು ಅರ್ಥ
ಮಾಡಿಕೊಂಡು, ಸುತ್ತಮುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟು ಡೆಂಘೀ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಬೀದಿ ನಾಯಿ ದಾಳಿಗೆ ಗಾಯಗೊಂಡು ರೇಬೀಸ್ ತಗುಲಿದ್ದ ಮಗು ಸಾವು

ದಾವಣಗೆರೆ ನಗರದ ಶಾಸ್ತ್ರೀನಗರದಲ್ಲಿ ಮನೆ ಮುಂದೆ ಆಟ ಆಡುವ ವೇಳೆ ಬೀದಿ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X