ಜೀವನ ಶೈಲಿ ಬದಲಿಸಿ, ಹೃದಯಾಘಾತ ತಪ್ಪಿಸಿ

Date:

ಗೊತ್ತಿರಲಿ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದರಿಂದ ರಕ್ತನಾಳಗಳಲ್ಲಿ ಉರಿಯೂತ ಉಂಟಾಗುತ್ತದೆ. ಹಾಗೆಯೇ ಕೊಬ್ಬು ಶೇಖರಣೆಯಾಗುವುದನ್ನು ಹೆಚ್ಚಿಸುತ್ತದೆ. ಹೀಗಾಗಿ ಮಧುಮೇಹವನ್ನು ಅಧಿಕೃತವಾಗಿ ಪತ್ತೆಹಚ್ಚುವ ಮೊದಲೇ, ಸಕ್ಕರೆ ಮಟ್ಟ ಹೆಚ್ಚಾಗಿ ಹೃದಯಾಘಾತವೂ ಹೆಚ್ಚಾಗುತ್ತಿವೆ

- Advertisement -

ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ವೇಗವಾಗಿ ಏರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಎರಡು ಕೋಟಿಗೂ ಹೆಚ್ಚು ಜನರು ಹೃದ್ರೋಗದಿಂದ ಜೀವ ಬಿಡುತ್ತಿದ್ದಾರೆ. ಹೀಗಾಗಿ ಹೃದ್ರೋಗ ಎಂಬ ಪದ ಇವತ್ತು ಸಾಮಾನ್ಯ ಸಂಗತಿಯಾಗಿ ಎಲ್ಲೆಡೆ ಕೇಳಿರುತ್ತೀರಿ. ಇದನ್ನು ಅವರಿವರ ಬಾಯಿಂದ ಕೇಳಿದ ಸಾಮಾನ್ಯ ರೋಗಿಗಳ ಮನಸ್ಸಿನಲ್ಲಿಯೂ ಬಹಳಷ್ಟು ಭೀತಿಯನ್ನುಂಟು ಮಾಡಿರುತ್ತದೆ.

ಕನ್ನಡ ನಟ ದಿಲೀಪ್ ರಾಜ್ 47ನೇ ವಯಸ್ಸಿನಲ್ಲಿ, ವಕೀಲ ಕನಕೇಶ ಮುರುಡಿ 26ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಇವರಿಬ್ಬರ ಅಗಲಿಕೆ ಚಿಕ್ಕ ವಯಸ್ಸಿನವರಲ್ಲಿಯೂ ಹೃದಯಾಘಾತ ಸಂಭವಿಸುತ್ತವೆ ಎಂಬುದನ್ನು ಮತ್ತೊಮ್ಮೆ ಸಾರಿದೆ. ನಟ ದಿಲೀಪ್ ರಾಜ್ ಅವರ ಕುಟುಂಬ ನೀಡಿದ ಮಾಹಿತಿಯಂತೆ, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೂ, ವೈದ್ಯರು ಅವರ ಜೀವವನ್ನು ಉಳಿಸಲು ಸಾಧ್ಯವಾಗಿಲ್ಲ.

ಹೀಗೆ ಇವತ್ತಿನ ಒತ್ತಡದ ಜೀವನಶೈಲಿಯಲ್ಲಿ ಹೃದಯಾಘಾತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗಂಭೀರವಾದ ಆರೋಗ್ಯ ಅಪಾಯವಾಗಿ ಕಾಡುತ್ತಿದೆ. ಹಾಗಂತ ಯಾರೂ ಹೆದರುವ ಅಗತ್ಯವಿಲ್ಲ. ಆಧುನಿಕ ತಂತ್ರಜ್ಞಾನ ಮತ್ತು ಕೌಶಲ್ಯಪೂರ್ಣ ವೈದ್ಯಕೀಯ ಕೈಗಳ ಸಹಾಯದಿಂದ , ಅಸಾಧ್ಯವೆಂದು ತೋರುತ್ತಿದ್ದ ಹೃದಯ ಶಸ್ತ್ರಚಿಕಿತ್ಸೆಗಳಿಗೆ ಯಶಸ್ವಿಯಾಗುತ್ತಿವೆ. ಹೃದ್ರೋಗದಿಂದ ಬಳಲುತ್ತಿರುವ ರೋಗಿಗಳು ಸಹ ಯಾವುದೇ ಬಗೆಯ ಭೀತಿ ಇಲ್ಲದೆ ನೆಮ್ಮದಿಯಾಗಿ ಇರಬಹುದು. ಹೃದಯಾಘಾತವು ಇದ್ದಕ್ಕಿದ್ದಂತೆ ಸಹಿಸಲಾಗದ ನೋವಿನೊಂದಿಗೆ ಬರುತ್ತದೆ ಎಂಬುದು ಜನರ ನಂಬಿಕೆ. ಆದರೆ ವಾಸ್ತವದಲ್ಲಿಯೇ ಇದರ ಲಕ್ಷಣಗಳು ಗೋಚರಿಸಿಕೊಳ್ಳುತ್ತವೆ. ಹೀಗಾಗಿ ಜೀವ ಉಳಿಸಲು ರೋಗಲಕ್ಷಣಗಳನ್ನು ಸಕಾಲಿಕವಾಗಿ ಗುರುತಿಸಿ ತಕ್ಷಣದ ಚಿಕಿತ್ಸೆ ನೀಡುವುದು ಅತ್ಯಗತ್ಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರದಲ್ಲಿ ಜಿ.ಪಂ ತಾ.ಪಂ ಚುನಾವಣೆಯ ಕಾವು; AI ಪೋಸ್ಟರ್‌ಗಳಲ್ಲೂ...

ಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಅಂತಿಮ ಪಟ್ಟಿಯೂ ಸಿದ್ಧವಾಗಿಲ್ಲ. ಆದರೆ, ಗ್ರಾಮೀಣ ರಾಜಕಾರಣದಲ್ಲಿ ಮಾತ್ರ ಈಗಾಗಲೇ ಚುನಾವಣೆಯ ಕಾವು ಏರತೊಡಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ...

ಸ್ಟಿಂಗ್ ಆರೋಪದ ಸುತ್ತ ರಾಜಕೀಯ ಲೆಕ್ಕಾಚಾರ; ಸತ್ಯಾಸತ್ಯತೆ ಹೊಣೆಗಾರಿಕೆಯ...

ಸಿದ್ದರಾಮಯ್ಯ ಅವರ ನಿರಾಕರಣೆ, ಕುಮಾರಸ್ವಾಮಿ ಅವರ ಆರೋಪಗಳು, ಆರ್. ಅಶೋಕ್ ಅವರ ಹಣಕಾಸಿನ ಕುರಿತ ಹೇಳಿಕೆಗಳು ಮತ್ತು ಸರ್ಕಾರದ ತನಿಖೆಯ ಭರವಸೆ—ಇವೆಲ್ಲವೂ ಪ್ರಕರಣದ ವಿವಿಧ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಆದರೆ ಇವುಗಳಲ್ಲಿ ಯಾವುದೂ ಸ್ವತಃ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಹಾಗಾದರೆ ಹೃದಯಾಘಾತದ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳು ಯಾವುವು, ಒಂದೊಮ್ಮೆ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡರೆ ಹೃದಯಾಘಾತವನ್ನು ತಡೆಯಬಹುದೇ? ಎಂಬೆಲ್ಲ ಪ್ರಶ್ನೆಗಳು ತಮ್ಮಲ್ಲಿ ಎದ್ದಿರಬಹುದು. ಇನ್ನೂ ಹೃದಯಾಘಾತಕ್ಕೆ ಪುರುಷರು ಮಾತ್ರವಲ್ಲದೆ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಒಳಗಾಗುತ್ತಿರುವುದು ಅಚ್ಚರಿ ಮೂಡಿಸುತ್ತದೆ. ಇದರ ಬಗ್ಗೆ ಹೊಸ , ಹೊಸ ಸಂಶೋಧನೆ ಕೂಡ ನಡೆಯುತ್ತಿದೆ. ಇದರ ಮಧ್ಯೆ , ಇತ್ತೀಚೆಗೆ ನಡೆದ ಅಧ್ಯಯನ ಒಂದು ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಇದರಂತೆ, 35 ವರ್ಷ ವಯಸ್ಸಾದವರಲ್ಲಿ ಹೃದ್ರೋಗದ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಸಹಜವಾಗಿ, ವಯಸ್ಸಾದಂತೆ ಹೃದ್ರೋಗದ ಅಪಾಯವೂ ಹೆಚ್ಚಾಗುತ್ತಲೇ ಇರುತ್ತದೆ.

ಆರೋಗ್ಯ ತಜ್ಞರ ಪ್ರಕಾರ, ಹೃದ್ರೋಗ ಎಂಬುದು ಅನಿರೀಕ್ಷಿತವಾಗಿ ಎದುರಾಗುವ ರೋಗವಲ್ಲ. ಹಲವು ವರ್ಷಗಳ ಕಾಲ ದೇಹದೊಳಗಡೆ ನಡೆಯುವ ಬದಲಾವಣೆಗಳ ಪರಿಣಾಮದಿಂದ ಎದುರಾಗುತ್ತದೆ.

heart attack 2

ಹೃದ್ರೋಗದ ಹಿಂದಿನ ಪ್ರಮುಖ ಪ್ರಕ್ರಿಯೆಯನ್ನು ಅಥೆರೊಸ್ಲೀ ರೋಸಿಸ್ ಎಂದು ಕರೆಯುತ್ತಾರೆ. ಇದರ ಮೂಲಕ, ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಉರಿಯೂತದ ಕೋಶಗಳು ರಕ್ತನಾಳಗಳಲ್ಲಿ ಸಂಗ್ರಹವಾಗಲು ಆರಂಭಿಸುತ್ತವೆ. ಕಾಲಾನಂತರದಲ್ಲಿ, ಇಂತಹ ಶೇಖರಣೆಯು ಪ್ಲೇಕ್‍ನ್ನು ರೂಪಿಸುತ್ತದೆ . ಜೊತೆಗೆ ರಕ್ತನಾಳಗಳನ್ನು ಕೂಡ ಕಿರಿದಾಗಿಸುತ್ತದೆ. ಇದು ರಕ್ತ ಪರಿಚಲನೆಗೂ ಅಡ್ಡಿಯಾಗುತ್ತದೆ. ಇನ್ನೂ ವಯಸ್ಸಾದಂತೆ, ರಕ್ತನಾಳಗಳ ನೈಸರ್ಗಿಕ ಸ್ಥಿತಿಸ್ಥಾಪಕತ್ವ ಕಡಿಮೆಯಾಗಲು ಮುಂದಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟ ಕೂಡ ಹೆಚ್ಚಾಗುತ್ತವೆ. ಇಂತಹ ಬದಲಾವಣೆಯಿಂದಾಗಿ ಹೃದಯಕ್ಕೆ ರಕ್ತವನ್ನು ಪೂರೈಸುವ ಅಪಧಮನಿಗಳಲ್ಲಿ ಪ್ಲೇಕ್ ರಚನೆಯ ಪ್ರಕ್ರಿಯೆಯು ವೇಗಗೊಳ್ಳುತ್ತದೆ. ಅಪಧಮನಿಗಳಲ್ಲಿನ ಇಂತಹ ಪ್ಲೇಕ್ ಛಿದ್ರಗೊಂಡಾಗ, ರಕ್ತ ಹೆಪ್ಪುಗಟ್ಟುವಿಕೆ ರೂಪುಗೊಳ್ಳಲು ಆರಂಭವಾಗುತ್ತದೆ. ಆಗ ಸಹಜವಾಗಿ ಹೃದಯ ಸ್ನಾಯುಗಳಿಗೆ ರಕ್ತ ಸಂಚಾರ ನಿಲ್ಲುತ್ತದೆ . ಜೊತೆಗೆ ಹೃದಯಾಘಾತ ಕೂಡ ಸಂಭವಿಸುತ್ತದೆ.

ಒಬ್ಬ ವ್ಯಕ್ತಿಗೆ ಮೊದಲ ಬಾರಿಗೆ ಹೃದಯಾಘಾತ ಅಥವಾ ಪಾರ್ಶ್ವವಾಯು ಸಂಭವಿಸಿದಾಗ ಎಲ್ಲವೂ ಇದ್ದಕ್ಕಿದ್ದಂತೆ ಸಂಭವಿಸುತ್ತದೆ ಎಂಬ ಹೇಳಿಕೆಯನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಹೃದಯಾಘಾತ, ಪಾರ್ಶ್ವವಾಯು ಅಥವಾ ಹೃದಯ ವೈಫಲ್ಯದಂತಹ ಗಂಭೀರ ಘಟನೆಗಳು ಮೂಲದಲ್ಲಿ ನಾಲ್ಕು ಗುಪ್ತ ಅಪಾಯಕಾರಿ ಅಂಶಗಳನ್ನು ಹೊಂದಿರುತ್ತವೆ . ನಮ್ಮ ಅರಿವಿಲ್ಲದೆಯೇ ದೇಹದಲ್ಲಿ ಅವುಗಳ ಅಪಾಯ ಹೆಚ್ಚಾಗುತ್ತಿರುತ್ತದೆ. ಆದರೂ , ಇದನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸಬಹುದು. ಜೊತೆಗೆ ಸಂಭಾವ್ಯ ಅಪಾಯಗಳನ್ನು ತಡೆಗಟ್ಟಬಹುದು. ಶೇಕಡ 99ರಷ್ಟು ಹೃದಯಾಘಾತ ಮತ್ತು ಪಾರ್ಶ್ವವಾಯು ನಿಜವಾಗಿಯೂ ಇದ್ದಕ್ಕಿದ್ದಂತೆ ಘಟಿಸುತ್ತವೆಯೇ…? ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಹಲವರಲ್ಲಿದೆ.

ಹೃದಯಾಘಾತ ಅಥವಾ ಪಾರ್ಶ್ವವಾಯುವಿನಂತಹ ವೈದ್ಯಕೀಯ ತುರ್ತುಸ್ಥಿತಿ ಹಠಾತ್ ಅಥವಾ ಅನಿರೀಕ್ಷಿತವಾಗಿ ಸಂಭವಿಸುತ್ತವೆ ಎಂದು ಹೆಚ್ಚಿನವರು ನಂಬಿರುತ್ತಾರೆ. ಮೊದಲ ಬಾರಿಗೆ ಪಾರ್ಶ್ವವಾಯುವಿಗೆ ಒಳಗಾದ ಶೇಕಡ 99ರಷ್ಟು ರೋಗಿಗಳು ಕನಿಷ್ಠ ಒಂದಲ್ಲ ಒಂದು ಬಗೆಯ ದೈಹಿಕ ಸಮಸ್ಯೆಯನ್ನು ಹೊಂದಿರುತ್ತಾರೆ.

ಇಷ್ಟಕ್ಕೂ ಹೃದಯಾಘಾತದ ಮೊದಲ ಗಂಟೆಯನ್ನು ಸುವರ್ಣ ಗಂಟೆ ಅಂದರೆ ಗೋಲ್ಡನ್ ಅವರ್ ಎಂದೇ ಕರೆಯಲಾಗುತ್ತದೆ. ಆಗ ತೆಗೆದುಕೊಳ್ಳುವ ನಿರ್ಧಾರವೇ ರೋಗಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಗೊತ್ತಿರಲಿ, ಹೃದಯಾಘಾತ ಎಂಬುದು ಕೆಲವು ನಿಮಿಷಗಳಿಂದ ಹಲವು ಗಂಟೆಗಳವರೆಗೆ ಭಾಧಿಸಬಹುದು. ಕೆಲವೊಮ್ಮೆ ಇದರ ಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳದೆ ನಿಧಾನವಾಗಿಯೂ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿದು ಒಂದು ಅಥವಾ ಎರಡು ದಿನಗಳ ಮೊದಲು ಎದೆಯಲ್ಲಿ ಕೊಂಚ ಅಸ್ವಸ್ಥತೆ, ಭಾರ ಅಥವಾ ಒತ್ತಡದ ಮೂಲಕ ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ಬಂದು ಹೋಗುತ್ತವೆ, ಎಂಬ ಸಾಮಾನ್ಯ ಅಂದಾಜಿನಿಂದ ಹಲವರು ಇದನ್ನು ನಿರ್ಲಕ್ಷಿಸುತ್ತಾರೆ.

ನೆನಪಿಡಿ ಎದೆಯ ಒತ್ತಡ, ನೋವು ಅಥವಾ ಭಾರವು 15 ರಿಂದ 20 ನಿಮಿಷಗಳಿಗಿಂತ ಹೆಚ್ಚು ಕಾಲ ಇದ್ದರೆ, ಅದು ಗಂಭೀರ ಲಕ್ಷಣವಾಗಿರುತ್ತದೆ. ನೋವು ಅಲ್ಪಕಾಲಿಕವಾಗಿದ್ದರೂ ಮತ್ತು ಮರುಕಳಿಸುತ್ತಿದ್ದರೂ ಸಹ ಅದನ್ನು ನಿರ್ಲಕ್ಷಿಸಬಾರದು. ಇಂತಹ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಒಂದೊಮ್ಮೆ ರೋಗಿಗೆ ಸರಿಯಾದ ಚಿಕಿತ್ಸೆ ದೊರೆತರೆ, ನಿರ್ಬಂಧಿತ ರಕ್ತದ ಹರಿವನ್ನು ಪುನರಾರಂಭಿಸಬಹುದು. ಆಗ ಹೃದಯ ಸ್ನಾಯುವಿಗೆ ಆಗುವ ಶಾಶ್ವತ ಹಾನಿಯನ್ನು ಕಡಿಮೆ ಮಾಡಬಹುದು. ಹೃದಯಕ್ಕೆ ರಕ್ತ ಪೂರೈಕೆ ಸ್ಥಗಿತಗೊಂಡ ಕೆಲವೇ ನಿಮಿಷಗಳಲ್ಲಿ, ಹೃದಯ ಕೋಶಗಳು ಆಮ್ಲಜನಕದ ಕೊರತೆಯಿಂದ ನರಳುತ್ತವೆ. ಇದು ದಿನಕಳೆದಂತೆ ಜೀವಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಹೀಗಾಗಿ ರೋಗಿಯು ಆದಷ್ಟು ಬೇಗ ಚಿಕಿತ್ಸೆ ಪಡೆದರೆ ಬದುಕುಳಿಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಗೋಲ್ಡನ್ ಅವರ್ ಹೊತ್ತಲ್ಲಿ ರೋಗಿಯು ಚಿಕಿತ್ಸೆ ಪಡೆದರೆ, ಹಲವು ಗಂಭೀರ ಪ್ರಮಾಣದ ತೊಡಕುಗಳನ್ನು ತಪ್ಪಿಸಬಹುದಾಗಿದೆ.

ಇನ್ನೂ ಹೃದ್ರೋಗ ಎಂಬುದು ವಯಸ್ಸಾದವರನ್ನು ಕಾಡುವ ರೋಗವೆಂದು ಭಾವಿಸಲಾಗಿತ್ತು. ಆದರೀಗ ಆಧುನಿಕ ಜೀವನಶೈಲಿ ಯುವಜನರನ್ನು ಅಪಾಯಕ್ಕೆ ಸಿಲುಕಿಸುತ್ತಿದೆ. ಆಘಾತಕಾರಿ ಸಂಗತಿ ಎಂದರೆ, ಕೆಲವು ವರ್ಷಗಳಿಂದೀಚೆಗೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದ್ರೋಗ ಹೆಚ್ಚುತ್ತಾ ಸಾಗುತ್ತಿದೆ.

ಅಲ್ಲದೆ ಮೂವತ್ತರ ನಂತರದ ವಯಸ್ಸಾದವರಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಅಧಿಕ ರಕ್ತದೊತ್ತಡ ಉಂಟಾಗುತ್ತಿದೆ. ಜೊತೆಗೆ ಬೊಜ್ಜು ಹೆಚ್ಚಾಗಿ ಇನ್ಸುಲಿನ್ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಹೀಗಾಗಿ ಮೂವತ್ತರ ಹರೆಯದ ಯುವಕರು ಕೂಡ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಹಾಗೆಯೇ ತಮ್ಮ ಜೀವನಶೈಲಿಯನ್ನು ಸಹ ಸುಧಾರಿಸಿಕೊಳ್ಳಬೇಕಿದೆ.

ಇಷ್ಟಲ್ಲದೆ ಅಧಿಕ ಕಾರ್ಯದೊತ್ತಡ, ಹಣಕಾಸಿನ ಒತ್ತಡ ಮತ್ತು ನಿದ್ರೆಯ ಕೊರತೆ ಕೂಡ ಸೇರಿಕೊಂಡು ದೇಹದೊಳಗಡೆ ಒತ್ತಡದ ಹಾರ್ಮೋನುಗಳನ್ನು ಹೆಚ್ಚಾಗಿಸುತ್ತದೆ. ಆಗ ದೇಹದೊಳಗಡೆ ರಕ್ತದೊತ್ತಡ , ಚಯಾಪಚಯ ಮತ್ತು ಉರಿಯೂತದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಧೂಮಪಾನ ಮತ್ತು ಅತಿಯಾದ ಮದ್ಯಪಾನ ಕೂಡ ಹೃದ್ರೋಗ ಹೆಚ್ಚಾಗಲು ಕಾರಣವಾಗುತ್ತಿದೆ.

ಹೃದಯಾಘಾತವು ಹೃದಯಕ್ಕೆ ಹೋಗುವ ರಕ್ತನಾಳದಲ್ಲಿನ ಅಡಚಣೆಯಿಂದ ಉಂಟಾಗುತ್ತದೆ. ಇಂತಹ ಅಡಚಣೆಯಿಂದ ಹೃದಯ ಸ್ನಾಯುವಿಗೆ ಅಗತ್ಯವಿರುವ ಆಮ್ಲಜನಕವನ್ನು ಪಡೆಯುವುದನ್ನು ತಡೆಯುತ್ತದೆ. ಇದೇ ಸ್ಥಿತಿ ದೀರ್ಘಕಾಲದವರೆಗೆ ಮುಂದುವರಿದರೆ, ಅದರಿಂದ ಶಾಶ್ವತ ಸ್ನಾಯು ಹಾನಿಗೆ ಕಾರಣವಾಗುತ್ತದೆ. ಚಿಕಿತ್ಸೆ ತಡವಾದರೆ, ಹೃದಯ ವೈಫಲ್ಯದ ಅಪಾಯವೂ ಹೆಚ್ಚಾಗುತ್ತದೆ.

ಇನ್ನಿದರ ಅಪಾಯಕಾರಿ ಅಂಶಗಳ ಬಗ್ಗೆ ಸದಾ ಜಾಗೃತರಾಗಿರುವುದು ಉತ್ತಮ. ಗುಪ್ತ ಅಪಾಯಗಳು ಒಂದು ಪ್ರಮುಖ ಘಟನೆ ಸಂಭವಿಸುವ ಮೊದಲು ವರ್ಷಗಳವರೆಗೆ ಹೃದಯ ಮತ್ತು ರಕ್ತನಾಳಗಳನ್ನು ನಿಧಾನವಾಗಿ ಮತ್ತು ಸದ್ದಿಲ್ಲದೆ ಹಾನಿಗೊಳಿಸುತ್ತವೆ. ಗೊತ್ತಿರಲಿ, ಇಂತಹ ದುರಂತ ಘಟನೆಗಳು ಆಕಸ್ಮಿಕವಾಗಿ ಅಥವಾ ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ. ಇಷ್ಟಕ್ಕೂ ಹೃದಯ ಕಾಯಿಲೆಯು ಹಠಾತ್ ಆಗಿ ಎರಗುವ ಬೇಟೆಯೂ ಅಲ್ಲ. ಹೀಗಾಗಿ ದೇಹವು ನೀಡುವ ಹಲವು ಸಣ್ಣ ಮತ್ತು ದೊಡ್ಡ ಎಚ್ಚರಿಕೆಗಳನ್ನು ನಿರ್ಲಕ್ಷಿಸಬಾರದು ಅಧಿಕ ರಕ್ತದೊತ್ತಡವು ಕಡೆಗಣಿಸಲ್ಪಟ್ಟ “ಮೂಕ ಕೊಲೆಗಾರ ” ಇದ್ದಂತೆ . ಅಧಿಕ ರಕ್ತದೊತ್ತಡವು ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ. ಹೀಗಾಗಿಯೇ ಇದನ್ನು ” ಮೂಕ ಕೊಲೆಗಾರ ” ಎಂದು ಕರೆಯಲಾಗುತ್ತದೆ. ಇದನ್ನರಿಯದ ನಮ್ಮವರು ವರ್ಷಗಳ ಕಾಲ ಅಧಿಕ ರಕ್ತದೊತ್ತಡದೊಂದಿಗೆ ಬದುಕುತ್ತಾರೆ. ಒಂದೊಮ್ಮೆ ಎಚ್ಚರಿಕೆ ತಪ್ಪಿದರೆ ಒತ್ತಡವು ಕ್ರಮೇಣ ರಕ್ತನಾಳಗಳಿಗೆ ಹಾನಿ ಉಂಟು ಮಾಡುತ್ತದೆ. ಅಲ್ಲದೆ, ಅಪಧಮನಿಗಳನ್ನು ಕೂಡ ಗಟ್ಟಿಗೊಳಿಸುತ್ತದೆ. ಆಗ ಸಹಜವಾಗಿ ಹೃದಯದ ಮೇಲಿನ ಕೆಲಸದ ಹೊರೆ ಕೂಡ ಹೆಚ್ಚಿಸುತ್ತದೆ.

ಅಧಿಕ ಕೊಲೆಸ್ಟ್ರಾಲ್ ಅಪಧಮನಿಗಳನ್ನು ಕಿರಿದಾಗಿಸುವ ಶತ್ರು ಇದ್ದಂತೆ. ರಕ್ತದಲ್ಲಿ ಎಲ್‍ಡಿಎಲ್ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ರಕ್ತನಾಳಗಳ ಒಳಗೆ ಕೊಬ್ಬಿನ ನಿಕ್ಷೇಪಗಳು, ಪ್ಲೇಕ್‍ಗಳು ಉಂಟಾಗುತ್ತವೆ. ದಿನಗಳು ಉರುಳಿದಂತೆ, ಇವು ಅಪಧಮನಿಗಳನ್ನು ಕಿರಿದಾಗಿಸುತ್ತವೆ. ಆಗ ರಕ್ತ ಪರಿಚಲನೆಗೂ ಅಡ್ಡಿಪಡಿಸುತ್ತದೆ.

ಇದೇನಾದರೊಮ್ಮೆ ಇದ್ದಕ್ಕಿದ್ದಂತೆ ಒಡೆದರೆ, ಕೆಲವೇ ನಿಮಿಷಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೂ ಕಾರಣವಾಗಬಹುದು.ಹಲವರಿಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿರುತ್ತದೆ. ಆದರೆ ಅವರಿಗೆ ಮಧುಮೇಹ ಇರುವುದೇ ಗೊತ್ತಿರುವುದಿಲ್ಲ. ಇದನ್ನು ಪ್ರಿ-ಡಯಾಬಿಟಿಸ್ ಎನ್ನುತ್ತಾರೆ.

ಗೊತ್ತಿರಲಿ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದರಿಂದ ರಕ್ತನಾಳಗಳಲ್ಲಿ ಉರಿಯೂತ ಉಂಟಾಗುತ್ತದೆ. ಹಾಗೆಯೇ ಕೊಬ್ಬು ಶೇಖರಣೆಯಾಗುವುದನ್ನು ಹೆಚ್ಚಿಸುತ್ತದೆ. ಹೀಗಾಗಿ ಮಧುಮೇಹವನ್ನು ಅಧಿಕೃತವಾಗಿ ಪತ್ತೆಹಚ್ಚುವ ಮೊದಲೇ, ಸಕ್ಕರೆ ಮಟ್ಟ ಹೆಚ್ಚಾಗಿ ಹೃದಯಾಘಾತವೂ ಹೆಚ್ಚಾಗುತ್ತಿವೆ.

ಇದಲ್ಲದೆ, ಧೂಮಪಾನ ಮಾಡುವುದರಿಂದ ರಕ್ತಪರಿಚಲನಾ ವ್ಯವಸ್ಥೆಯ ಮೇಲೂ ನೇರವಾಗಿ ಪರಿಣಾಮ ಬೀರುತ್ತದೆ. ಅಲ್ಲದೇ ದೇಹದೊಳಗಿನ ಆಮ್ಲಜನಕದ ಪೂರೈಕೆಯನ್ನು ಕಡಿಮೆಗೊಳಿಸುತ್ತದೆ. ಇದರಿಯದಿದ್ದರೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ.

quit smoking

ಇದೇನೆ ಇರಲಿ, ಎದೆ ನೋವು ಕಾಣಿಸಿಕೊಂಡಾಗಲೇ ಹೃದ್ರೋಗದ ಆರಂಭಿಕ ಲಕ್ಷಣ ಕಾಣಿಸಿಕೊಂಡಿತೆಂದು ಅರಿಯಬೇಕು. ನಮ್ಮಲ್ಲಿ ಇದನ್ನರಿಯದವರು ಆರಂಭಿಕ ಲಕ್ಷಣವನ್ನು ನಿರ್ಲಕ್ಷಿಸುತ್ತಾರೆ. ಯಾವುದೇ ಕಾರಣವಿಲ್ಲದೆ ಕಾಣಿಸಿಕೊಳ್ಳುವ ದಣಿವಿನ ಭಾವನೆ, ಸಣ್ಣ ಸಣ್ಣ ಕೆಲಸದ ಮಧ್ಯೆ ಎದುರಾಗುವ ಉಸಿರಾಟದ ತೊಂದರೆ, ಎದೆ ಬಡಿತ ಅಥವಾ ತಲೆತಿರುಗುವಿಕೆ, ದವಡೆ, ಕುತ್ತಿಗೆ ಅಥವಾ ಎಡಗೈಯಲ್ಲಿ ಅಸ್ವಸ್ಥತೆ, ಅತಿಯಾಗಿ ಬೆವರುವುದು ಕಂಡು ಬಂದಾಗ ಕೂಡಲೇ ತಜ್ಞ ವೈದ್ಯರ ಬಳಿಗೆ ಹೋಗಬೇಕು. ಇದನ್ನರಿಯದೆ, ಗ್ಯಾಸ್ಟ್ರಿಕ್ ಎಂದು ತಪ್ಪಾಗಿ ಭಾವಿಸುವವರೇ ಹೆಚ್ಚಾಗಿದ್ದಾರೆ. ಸೂಕ್ತ ಕಾಲದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡರೆ, ಅಪಾಯವನ್ನು ಖಂಡಿತವಾಗಿಯೂ ತಪ್ಪಿಸಬಹುದಾಗಿದೆ.

ನೆನಪಿಡಿ ಹೃದಯ ನೋವು ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುತ್ತದೆ. ಇನ್ನಿಲ್ಲಿ ಆರ್ಥಿಕವಾಗಿ ದುರ್ಬಲಗೊಂಡವರು ಕೂಡ ಹೃದಯ ಶಸ್ತ್ರಚಿಕಿತ್ಸೆಯನ್ನು ಪಡೆಯಲು ಸಾಧ್ಯವಿದೆ.

ಇಂತಹ ಶಸ್ತ್ರಚಿಕಿತ್ಸೆ ಗಳನ್ನು ಕಳೆದೊಂದು ದಶಕದಿಂದ ಸಾವಿರಾರು ಬೈಪಾಸ್ ಶಸ್ತ್ರಚಿಕಿತ್ಸೆಗಳನ್ನು ಹೃದಯ ಕವಾಟಗಳಿಗೆ ಸಂಬಂಧಿಸಿದ ಕವಾಟ ಬದಲಿ ಮತ್ತು ದುರಸ್ತಿ ಶಸ್ತ್ರಚಿಕಿತ್ಸೆಗಳನ್ನು ಕೂಡ ನಡೆಸಿರುವೆ. ಸಂಕೀರ್ಣ ಹೃದಯ ಕಾಯಿಲೆಗಳ ಚಿಕಿತ್ಸೆ ಎರಡನೇ ಬಾರಿ ಹೃದಯ ಶಸ್ತ್ರಚಿಕಿತ್ಸೆ, ಮತ್ತು ಹೃದಯ ಗೆಡ್ಡೆಗಳ ಮೇಲೆ ಹೆಚ್ಚಿನ ಅಪಾಯದ ಶಸ್ತ್ರಚಿಕಿತ್ಸೆಗಳನ್ನು ಸಹ ಯಶಸ್ವಿಯಾಗಿ ನಡೆಸಿರುವೆ. ಇದರೊಂದಿಗೆ ರಕ್ತನಾಳಗಳಿಗೆ ಸಂಬಂಧಿಸಿದ ನಾಳೀಯ ಶಸ್ತ್ರಚಿಕಿತ್ಸೆಯನ್ನು ಸಹ ಮಾಡಿರುವೆ.

ಇದರೊಂದಿಗೆ ಕಳೆದೊಂದು ವರ್ಷದಲ್ಲಿ ಹಲವಾರು ಕನಿಷ್ಠ ಆಕ್ರಮಣಕಾರಿ ಅಥವಾ ಪಿನ್-ಹೋಲ್ ಶಸ್ತ್ರಚಿಕಿತ್ಸೆಯನ್ನು ಮಾಡಿರುವೆ . ಇವುಗಳಲ್ಲಿ ಬೈಪಾಸ್, ಕವಾಟ ಬದಲಿ ಮತ್ತು ಮಕ್ಕಳಲ್ಲಿ ಕೆಲವು ಜನ್ಮಜಾತ ಹೃದಯ ದೋಷಗಳನ್ನು ಸರಿಪಡಿಸಿರುವೆ. ನಮ್ಮ ದೇಶದಲ್ಲಿ ಹೃದ್ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ ವೈಜ್ಞಾನಿಕ ಅಧ್ಯಯನವೊಂದು ಬೆಳಕಿಗೆ ಬಂದಿದೆ. ಅದು ನಮ್ಮ ದೇಶವಾಸಿಗಳಲ್ಲಿ ಹೃದಯ ಕಾಯಿಲೆಗೆ ಕಾರಣವಾಗುವ ಹೊಸ ಆಣ್ವಿಕ ಮಾರ್ಗಗಳನ್ನು ಕಂಡುಹಿಡಿಯಲಾಗಿದೆ. ಇದು ಭವಿಷ್ಯದ ಚಿಕಿತ್ಸೆಯಲ್ಲಿ ಪ್ರಮುಖ ಬದಲಾವಣೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಇಷ್ಟಕ್ಕೂ ಸಂಶೋಧನೆ ಅಮೆರಿಕದಲ್ಲಿ ನಡೆಸಲಾಗಿದ್ದರೂ, ಇದರ ಗುರಿ ನಮ್ಮವರ ಮೇಲೆಯೇ ಇತ್ತು. ಸಂಶೋಧನೆಯು ಅಮೆರಿಕದ ಒಕ್ಲಹೋಮ್‌ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ಕೇಂದ್ರದಲ್ಲಿ ನಡೆಸಲಾಗಿದೆ. ಇದರ ಅಧ್ಯಯನದಲ್ಲಿ ನಮ್ಮ ಮೂಲದ ಸುಮಾರು ಮೂರು ಸಾವಿರ ಜನರನ್ನು ಬಳಸಲಾಗಿದೆ. ಹೀಗೆ ಆಳವಾಗಿ ಅಧ್ಯಯನ ಮಾಡುವ ಮೂಲಕ ಹೃದ್ರೋಗಕ್ಕೆ ಸಂಬಂಧಿಸಿದ ಜೈವಿಕ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ.

ಸಂಶೋಧನೆಯು ಲಿಪಿಡ್ ಮೆಟಾಬಾಲೈಟ್‍ಗಳ ಮೇಲೆ ಕೇಂದ್ರೀಕರಿಸಲಾಗಿತ್ತು. ಇದು ದೇಹದಲ್ಲಿನ ಚಯಾಪಚಯ, ಉರಿಯೂತ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತವೆ. ಕೆಲವು ಆಣ್ವಿಕ ಮಾರ್ಗಗಳು ಹೃದ್ರೋಗ, ಮಧುಮೇಹ ಮತ್ತು ಬೊಜ್ಜು ಮುಂತಾದ ರೋಗಗಳಿಗೆ ನೇರವಾಗಿ ಸಂಬಂಧವಿದೆ ಎಂಬುದನ್ನು ಅಧ್ಯಯನ ಬಹಿರಂಗಪಡಿಸಿದೆ.

ಹೃದಯ ಕಾಯಿಲೆಯ ಲಕ್ಷಣಗಳು ಹೆಚ್ಚಾಗಿ ನಿರ್ದಿಷ್ಟವಾಗಿರುತ್ತವೆ. ಮುಖ್ಯವಾಗಿ ಒತ್ತಡ , ಬಿಗಿತ ಅಥವಾ ಎದೆಯಲ್ಲಿ ಭಾರ ಇರುತ್ತದೆ. ಇಂತಹ ನೋವು ಹೆಚ್ಚಾಗಿ ಎಡಗೈ, ದವಡೆ, ಕುತ್ತಿಗೆ ಅಥವಾ ಬೆನ್ನಿಗೆ ಹರಡಬಹುದು. ಬೆವರುವುದು, ಉಸಿರಾಟದ ತೊಂದರೆ, ವಾಕರಿಕೆ ಅಥವಾ ಹಠಾತ್ ಅಸ್ವಸ್ಥತೆಯ ಭಾವನೆಯು ಮೂಡಬಹುದು. ಇದು ಸ್ನಾಯು ನೋವು ಅಥವಾ ಆಮ್ಲೀಯತೆಯಿಂದ ಉಂಟಾಗುವ ಅಸ್ವಸ್ಥತೆ. ಸಾಮಾನ್ಯವಾಗಿ ವಿಶ್ರಾಂತಿ ಅಥವಾ ಔಷಧಿಗಳೊಂದಿಗೆ ಕಡಿಮೆಯಾಗುತ್ತದೆ. ನೋವು ಮುಂದುವರಿದರೆ, ಅದು ಹೃದಯಕ್ಕೆ ಸಂಬಂಧಿಸಿದ ರೋಗವಾಗಿರುವ ಸಾಧ್ಯತೆಗಳೇ ಹೆಚ್ಚು.

ಇಷ್ಟಕ್ಕೂ ಹೃದಯಾಘಾತ ಅಥವಾ ಪಾರ್ಶ್ವವಾಯು ಆನುವಂಶಿಕ ರೋಗವಲ್ಲ. ನಮ್ಮ ದೈನಂದಿನ ಜೀವನವನ್ನು ಸುಧಾರಣೆ ಮಾಡಿಕೊಂಡು ಸಾಗಿದರೆ ಇಂತಹ ಅಪಾಯವನ್ನು ಕಡಿಮೆ ಮಾಡುತ್ತದೆ.

ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬೇಕೆಂದರೆ, ರಕ್ತದೊತ್ತಡವನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳಬೇಕು. ಸೂಕ್ತವಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ವೈದ್ಯರ ಸಲಹೆಯಂತೆ ಔಷಧಿಗಳ ಸಹಾಯದಿಂದ ಕೊಲೆಸ್ಟ್ರಾಲ್‍ನ್ನು ನಿಯಂತ್ರಿಸಿಕೊಳ್ಳಬಹುದಾಗಿದೆ. ರಕ್ತದೊಳಗಿನ ಸಕ್ಕರೆ ಮಟ್ಟವನ್ನು ಕಾಲಕಾಲಕ್ಕೆ ಪರಿಶೀಲಿಸಿಕೊಳ್ಳಬೇಕು. ತಂಬಾಕು ಮತ್ತು ಸಿಗರೇಟ್‍ಗಳನ್ನು ತ್ಯಜಿಸುವುದರಿಂದಲೂ ಹೃದಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಕೆಲವೊಮ್ಮೆ ಹೃದಯಾಘಾತದ ಲಕ್ಷಣಗಳು ತುಂಬಾ ಸೌಮ್ಯವಾಗಿರುತ್ತವೆ. ಇದನ್ನು ಮೂಕ ಹೃದಯಾಘಾತ ಎಂದು ಕರೆಯಲಾಗುತ್ತದೆ. ಅನೇಕರಲ್ಲಿ ತೀವ್ರವಾದ ಎದೆ ನೋವು ಇಲ್ಲದ ಕಾರಣ ಇದರ ದಾಳಿಯನ್ನು ಗುರುತಿಸುವುದಿಲ್ಲ. ಇಂತಹ ಹೊತ್ತಲ್ಲಿ ವ್ಯಕ್ತಿಯು ಆಯಾಸ, ಸೌಮ್ಯ ಅಸ್ವಸ್ಥತೆ, ತಲೆತಿರುಗುವಿಕೆ ಅಥವಾ ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳನ್ನು ಅನುಭವಿಸುತ್ತಾರೆ. ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಕೊಲೆಸ್ಟ್ರಾಲ್ ಇರುವ ಜನರು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಹೀಗಾಗಿ ನಿಯಮಿತ ತಪಾಸಣೆ ಮತ್ತು ಆರೋಗ್ಯ ರಕ್ಷಣೆ ಬಹಳ ಮುಖ್ಯವಾಗಿರುತ್ತದೆ. ಹೃದಯಾಘಾತವು ಮಾರಕವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸೂಕ್ತ ಹೊತ್ತಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರಿಂದ ಜೀವ ಉಳಿಯುತ್ತದೆ. ರೋಗಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಂತ ಪರಿಣಾಮಕಾರಿ ಹೆಜ್ಜೆಯಾಗಿದೆ. ಗೋಲ್ಡನ್ ಅವರ್ ನಲ್ಲಿ ಪ್ರತಿ ನಿಮಿಷವೂ ಮುಖ್ಯವಾದ ಕಾರಣ, ಯಾವುದೇ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದರೆ ವಿಳಂಬವಿಲ್ಲದೆ ಆಸ್ಪತ್ರೆಗೆ ಹೋಗುವುದನ್ನು ಮರೆಯದಿರಿ ಆರೋಗ್ಯಕರ ಜೀವನಶೈಲಿ, ನಿಯಮಿತ ತಪಾಸಣೆ ಮತ್ತು ರೋಗಲಕ್ಷಣಗಳ ಸರಿಯಾದ ಜ್ಞಾನದ ಸಹಾಯದಿಂದ, ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.

WhatsApp Image 2026 05 31 at 5.02.44 PM
ಡಾ ನಾಗೇಶ್ ಬಸವರಾಜು
+ posts

ಹೃದ್ರೋಗ ತಜ್ಞರು,
ಸ್ಪಷ್೯ ಆಸ್ಪತ್ರೆ,
ಬೆಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಡಾ ನಾಗೇಶ್ ಬಸವರಾಜು
ಡಾ ನಾಗೇಶ್ ಬಸವರಾಜು
ಹೃದ್ರೋಗ ತಜ್ಞರು, ಸ್ಪಷ್೯ ಆಸ್ಪತ್ರೆ, ಬೆಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿ ಬುಲ್ಡೋಜರ್ ರಾಜಕೀಯ: ಬಂಗಾಳದಲ್ಲಿ ಮುಂದುವರೆದ ಎಡಪಂಥೀಯರ ಪುಸ್ತಕ ಮಳಿಗೆಗಳ ಮೇಲೆ ದಾಳಿ

ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯೆಂದರೆ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಅದು...

‘ಗ್ರಾಮೀಣ ಕಾರ್ಮಿಕರ ಕೂಲಿ ಕಳವು’: ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎಂನರೇಗಾ) ಯೋಜನೆಗೆ ಬದಲಾಗಿ...

ವಿಜಯಪುರ | ಸಾಧಕ ಗಣ್ಯರಿಗೆ ರಾಜ್ಯೋತ್ಸವ ಸನ್ಮಾನದ ಗೌರವ; ಅರ್ಜಿ ಆಹ್ವಾನ

2026 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನ. 1ರಂದು ವಿಜಯಪುರ...

ವನ್ಯಜೀವಿಗಳ ಸಂಖ್ಯೆಯಲ್ಲಿ ಶೇ. 73ರಷ್ಟು ಭಾರಿ ಕುಸಿತ; ಭೂಮಿಯ ಉಳಿವಿಗೀಗ ‘ಭರವಸೆಯ ವಿಜ್ಞಾನ’ವೇ ದಾರಿ

​"ನಮ್ಮ ಕಣ್ಣೆದುರೇ ಪ್ರಕೃತಿಯ ಉಸಿರು ಕ್ಷೀಣಿಸುತ್ತಿದೆ. ಕೇವಲ ಐದು ದಶಕಗಳಲ್ಲಿ ಶೇ....