ಹುಣಸೂರು | ನೆರಳಕುಪ್ಪೆ ಭೂ ವಿವಾದ: ಎಸಿ ಅವರಿಗೆ ಕೆಂಪಮ್ಮ, ಸೀತೆ ಮನವಿ

Date:

ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕಿನ ನೆರಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಚುವಿನಹಳ್ಳಿ ಕಾಡಂಚಿನ ನೆರಳಕುಪ್ಪೆ .ಬಿ ಹಾಡಿಯ ಹಿರಿಯರಾದ ಕೆಂಪಮ್ಮ ಹಾಗೂ ಸೀತೆ ಅವರು ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರನ್ನು ಭೇಟಿ ಮಾಡಿ, ತಾವು ಹಲವು ದಶಕಗಳಿಂದ ಕೃಷಿ ಮಾಡುತ್ತಿರುವ ಭೂಮಿಗೆ ಹಕ್ಕುಪತ್ರ ನೀಡುವಂತೆ ಮನವಿ ಸಲ್ಲಿಸಿದರು.

- Advertisement -

ನೆರಳಕುಪ್ಪೆ ಸರ್ವೇ ನಂ. 24 ಹಾಗೂ 25ರಲ್ಲಿ ಕಾಡಿನಿಂದ ಹೊರಬಂದ ನಂತರ ಸುಮಾರು 50 ವರ್ಷಗಳಿಂದ 11 ಎಕರೆ 5 ಗುಂಟೆ ಕಂದಾಯ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಆದರೆ, ಈ ಭೂಮಿಯನ್ನು ಇತರರು ಸಾಗುವಳಿ ಪಡೆದು ಮಾರಾಟ ಮಾಡಿದ್ದು, ಪ್ರಸ್ತುತ ಭೂಮಿಯ ವಿಚಾರದಲ್ಲಿ ತೊಂದರೆ ನೀಡುತ್ತಿದ್ದಾರೆ. ಹೀಗಾಗಿ ಅವರ ಹೆಸರಿನಲ್ಲಿರುವ ಸಾಗುವಳಿಯನ್ನು ರದ್ದುಪಡಿಸಿ, ತಮಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿಯಲ್ಲಿ ಕೋರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡ: ಹಾಲಕ್ಕಿಗಳ ಹಾಡು-ಪಾಡು ಮತ್ತು ಮರೀಚಿಕೆಯಾದ ಮೀಸಲಾತಿ

ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ಮರೀಚಿಕೆ ಆಗುತ್ತಿದೆ. ಮೀಲಾತಿ ಕೊಡಿಸುವ ಬಣ್ಣ-ಬಣ್ಣದ ಮಾತುಗಳಿಂದ ಹಾಲಕ್ಕಿಗಳ ಮತ ದೋಚಿ ಗೆದ್ದವರು ಕೃತಘ್ನರಾಗಿದ್ದಾರೆ. ಎಸ್ಟಿ ಮೀಸಲಾತಿ ಸೌಲಭ್ಯ ಅಷ್ಟು ಸುಲಭಕ್ಕೆ ಹಾಕ್ಕಿಗಳಿಗೆ ದಕ್ಕಲು ಪ್ರಬಲ ಮೇಲ್ವರ್ಗದ...

ವಿಜಯಪುರದಲ್ಲಿ ಜಿ.ಪಂ ತಾ.ಪಂ ಚುನಾವಣೆಯ ಕಾವು; AI ಪೋಸ್ಟರ್‌ಗಳಲ್ಲೂ...

ಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಅಂತಿಮ ಪಟ್ಟಿಯೂ ಸಿದ್ಧವಾಗಿಲ್ಲ. ಆದರೆ, ಗ್ರಾಮೀಣ ರಾಜಕಾರಣದಲ್ಲಿ ಮಾತ್ರ ಈಗಾಗಲೇ ಚುನಾವಣೆಯ ಕಾವು ಏರತೊಡಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ...

ಸ್ಟಿಂಗ್ ಆರೋಪದ ಸುತ್ತ ರಾಜಕೀಯ ಲೆಕ್ಕಾಚಾರ; ಸತ್ಯಾಸತ್ಯತೆ ಹೊಣೆಗಾರಿಕೆಯ...

ಸಿದ್ದರಾಮಯ್ಯ ಅವರ ನಿರಾಕರಣೆ, ಕುಮಾರಸ್ವಾಮಿ ಅವರ ಆರೋಪಗಳು, ಆರ್. ಅಶೋಕ್ ಅವರ ಹಣಕಾಸಿನ ಕುರಿತ ಹೇಳಿಕೆಗಳು ಮತ್ತು ಸರ್ಕಾರದ ತನಿಖೆಯ ಭರವಸೆ—ಇವೆಲ್ಲವೂ ಪ್ರಕರಣದ ವಿವಿಧ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಆದರೆ ಇವುಗಳಲ್ಲಿ ಯಾವುದೂ ಸ್ವತಃ...

ತಮ್ಮ ತಂದೆಯ ಕಾಲದಿಂದಲೇ ಈ ಭೂಮಿಯನ್ನು ಅನುಭವಿಸುತ್ತಾ ಕೃಷಿ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದ ಅವರು, 1987ರಲ್ಲಿ ಚೆನ್ನೆಗೌಡ ಅವರ ಪುತ್ರ ಸಂಜೀವ ಭೂಮಿ ತನ್ನದೆಂದು ತಕರಾರು ಎತ್ತಿದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ವಿ.ಪಿ. ಬಳಿಗಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು ಎಂದು ವಿವರಿಸಿದರು. ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಆರು ಕುಟುಂಬಗಳ ಹೆಸರಿಗೆ ಕೈಬರಹದ ಫಸಲು ಪಹಣಿ ಬರೆಯಲು ಸೂಚನೆ ನೀಡಿದ್ದರು. ಅದರಂತೆ ನಂತರದ ವರ್ಷಗಳಿಂದ ಪಹಣಿಯಲ್ಲಿ ತಮ್ಮ ಹೆಸರು ದಾಖಲಾಗಿದ್ದು, ತಾವು ಭೂಮಿಯನ್ನು ಸ್ವಾಧೀನದಲ್ಲಿಟ್ಟುಕೊಂಡು ಕೃಷಿ ಮಾಡುತ್ತಿರುವುದನ್ನು ಕಂದಾಯ ಇಲಾಖೆ ಮಹಜರ್ ಮೂಲಕವೂ ದಾಖಲಿಸಿದೆ ಎಂದು ತಿಳಿಸಿದ್ದಾರೆ.

ನಂತರ ದಾಖಲೆಗಳನ್ನು ಪರಿಶೀಲಿಸಿದಾಗ, ಮೊದಲಿಗೆ ಮಲ್ಲೇಗೌಡ ಹಾಗೂ ಬೀರೆಗೌಡ ಅವರು ಸಾಗುವಳಿ ಪಡೆದು, ಬಳಿಕ ಕೊಡಗಿನ ಚೆನ್ನೆಗೌಡ ಅವರಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ. ಚೆನ್ನೆಗೌಡ ನಿಧನರಾದ ಬಳಿಕ ಅವರ ಪತ್ನಿ ನೀಲಮ್ಮ ಅವರ ಹೆಸರಿಗೆ ಖಾತೆ ವರ್ಗಾವಣೆಯಾಗಿದ್ದು, ನಂತರ ಸಂಜೀವ ತಮ್ಮ ಹೆಸರಿಗೆ ಖಾತೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದಾಗ ತಾವು ತಕರಾರು ಅರ್ಜಿ ಸಲ್ಲಿಸಿದ್ದರೂ ಅವರ ಹೆಸರಿಗೆ ಖಾತೆ ಮಂಜೂರಾಗಿರುವುದು ದಾಖಲೆಗಳಿಂದ ತಿಳಿದುಬಂದಿದೆ ಎಂದು ಅವರು ದೂರಿದ್ದಾರೆ.

ಈ ಕುರಿತು ಹಲವು ಬಾರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಹಳೆಯ ಸಾಗುವಳಿ ಮಂಜೂರಾತಿ ಹಾಗೂ ಕಂದಾಯ ದಾಖಲೆಗಳನ್ನು ರದ್ದುಪಡಿಸಿ, ಭೂಮಿಯ ನೈಜ ಅನುಭವದಾರರಾದ ತಮಗೆ ಹಕ್ಕುಪತ್ರ ನೀಡುವಂತೆ ಕೋರಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ.

ಸ್ವಾಭಾವಿಕ ನ್ಯಾಯದ ಮಾನದಂಡದ ಆಧಾರದ ಮೇಲೆ ಹಳೆಯ ಮಂಜೂರಾತಿಯನ್ನು ರದ್ದುಪಡಿಸಿ, ಕೈಬರಹದ ಆರ್‌ಟಿಸಿ, ಪಹಣಿ ಹಾಗೂ ಕಂದಾಯ ಮಹಜರ್ ದಾಖಲೆಗಳನ್ನು ಪರಿಗಣಿಸಿ, ತಲೆಮಾರುಗಳಿಂದ ಭೂಮಿಯನ್ನು ಅನುಭವಿಸುತ್ತಿರುವ ತಮಗೆ ಸಾಗುವಳಿ ಮಂಜೂರು ಮಾಡಬೇಕೆಂದು ಕೆಂಪಮ್ಮ ಮತ್ತು ಸೀತೆ ಅವರು ಒತ್ತಾಯಿಸಿದ್ದಾರೆ.

ಮನವಿಗೆ ಸ್ಪಂದಿಸಿದ ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರು ತಹಶೀಲ್ದಾರ್ ಅವರಿಂದ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?ಮೈಸೂರು | ನೀಲಗಿರಿ ಅಭಿವೃದ್ಧಿಗೆ ಇ. ಕೃಷ್ಣಮೂರ್ತಿ ಕೊಡುಗೆ ಅಪಾರ: ಡಾ. ಮೋಹನ್ ದಾಸ್

ಮನವಿ ಸಲ್ಲಿಸುವಾಗ ಡೀಡ್ ಸಂಸ್ಥೆ ನಿರ್ದೇಶಕ ಡಾ. ಶ್ರೀಕಾಂತ್ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಉಸ್ತುವಾರಿ ಸಚಿವರ ಕಾರ್ಯವೈಖರಿ ಬಗ್ಗೆ ಬೇಸರ; ಶಾಸಕ ಸ್ವರೂಪ್ ಪ್ರಕಾಶ್

ಜಿಲ್ಲೆಗೆ ಸಚಿವ ಶಿವಲಿಂಗೇಗೌಡರು ದೊಡ್ಡಮಂಡಿಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂಬಂಧಪಟ್ಟ...

ಕೋಲಾರ | ರಾಸುಗಳ ವಿಮಾ ಮೊತ್ತ ₹80 ಸಾವಿರಕ್ಕೆ ಏರಿಕೆ: ಹಸು ಕಳೆದುಕೊಂಡ ರೈತರಿಗೆ ನೆರವು

ರಾಸುಗಳ ವಿಮಾ ಸೌಲಭ್ಯದ ಮೊತ್ತವನ್ನು ₹60 ಸಾವಿರದಿಂದ ₹80 ಸಾವಿರಕ್ಕೆ ಹೆಚ್ಚಿಸಲಾಗಿದ್ದು,...

ಹಾಸನ | ರಾಜ್ಯದ ಹಲವು ಕಡೆ ಮಳೆ ಮುನ್ಸೂಚನೆ 

ನಾಳೆ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆ ಅಲರ್ಟ್ ಘೋಷಿಸಲಾಗಿದೆ. ಹಿಂಗಾರು ಚುರುಕಾಗಿರುವ...