ಮನುಷ್ಯನಿಗೆ ಅತಿ ವಿರಳವಾಗಿ ತಗುಲುವ ‘ಎಚ್3ಎನ್8’ನಿಂದಾಗಿ ಚೀನಾದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇದು ವಿಶ್ವದಲ್ಲೇ ಮೊದಲ ಬಾರಿ ದಾಖಲೆಯಾದ ಸಾವಿನ ಪ್ರಕರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಚೀನಾದ ದಕ್ಷಿಣ ಪ್ರಾಂತ್ಯದ ಗುವಾಂಗ್‌ಡಾಂಗ್‌ನ 56 ವರ್ಷದ ಮಹಿಳೆ ಎಚ್3ಎನ್8 ಸೋಂಕಿಗೆ ಒಳಗಾದ ಮೂರನೇ ವ್ಯಕ್ತಿಯಾಗಿದ್ದಾರೆ. ಅವರು ಮಾರ್ಚ್ 27ರಂದೇ ಮೃತಪಟ್ಟಿದ್ದಾರೆ. ಆದರೆ, ಮಾಹಿತಿ ತಡವಾಗಿ ದೊರೆತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಎಚ್3ಎನ್8 ರೋಗಲಕ್ಷಣಗಳನ್ನು ಹೊಂದಿದ್ದರಿಂದ ಮಹಿಳೆ ಫೆಬ್ರವರಿ 22 ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮಾರ್ಚ್ 3 ರಂದು ಅವರಿಗೆ ನ್ಯುಮೋನಿಯಾ ಸಮಸ್ಯೆ ಎದುರಾಗಿದೆ ಎಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು 2023 ಮಾರ್ಚ್ 16ರಂದು ಮೃತಪಟ್ಟಿದ್ದಾರೆ ಎಂದು ಮಾಹಿತಿ ಬಿಡುಗಡೆ ಮಾಡಿದೆ.
ಎಚ್3ಎನ್8 ಪ್ರಕರಣಗಳು ಹೆಚ್ಚಾಗಿ ಚೀನಾದಲ್ಲಿ ಪತ್ತೆಯಾಗಿವೆ. ಕಳೆದ ವರ್ಷ ಮೊದಲ ಎರಡು ಪ್ರಕರಣಗಳು ವರದಿಯಾಗಿವೆ. ಕಳೆದ ತಿಂಗಳ ಕೊನೆಯಲ್ಲಿ ಮೂರನೇ ಪ್ರಕರಣ ದಾಖಲಾಗಿದೆ ಎಂದು ಗುವಾಂಗ್‌ಡಾಂಗ್ ಪ್ರಾಂತೀಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಹೇಳಿದೆ.
ಎಚ್3ಎನ್8 ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ತೀರ ಕಡಿಮೆ. ಹೀಗಾಗಿ, ಭಯ ಪಡುವ ಅಗತ್ಯವಿಲ್ಲ. ಸದ್ಯ ಮೃತ ಮಹಿಳೆ ಈ ಹಿಂದೆ ಓಡಾಡಿದ್ದ ಸ್ಥಳದಲ್ಲಿದ್ದ ಜನರ ಮಾದರಿಗಳನ್ನು ಪಡೆಯಲಾಗಿದೆ. ಅವರಿಗೂ ಸೋಂಕು ತಗುಲಿದೆಯೇ ಎಂದು ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ?: ದೇಶದಲ್ಲಿ ಕೋವಿಡ್ ಸಂಖ್ಯೆ 7,830 ಏರಿಕೆ; 16 ಮಂದಿ ಮೃತ