ಕಡಿಮೆ ನಿದ್ದೆ ಮಾಡುವವರು ಓದಲೇ ಬೇಕಾದ ಸುದ್ದಿ | 10 ಮುಖ್ಯ ಅಂಶ

Date:

Advertisements
ನೀವು ದಿನದಲ್ಲಿ ಎಷ್ಟು ಗಂಟೆಗಳ ಕಾಲ ನಿದ್ರಿಸುತ್ತೀರಾ?… ಒಂದು ವೇಳೆ ಏಳು ಗಂಟೆಗಳಿಗೂ ಕಡಿಮೆ ನಿದ್ರಿಸುತ್ತಿದ್ದರೆ,  ನಿದ್ರಾಹೀನತೆ ಉಂಟಾಗುವ ಅಪಾಯವಿದೆ. ಹಾಗಾದರೆ ಅದರಿಂದ ಉಂಟಾಗುವ ಪರಿಣಾಮದ ಬಗ್ಗೆ ಇಲ್ಲಿದೆ ಮಾಹಿತಿ…
  • ನಮ್ಮ ದೇಹಕ್ಕೆ ಪ್ರತಿದಿನ ಸುಮಾರು ಏಳರಿಂದ ಎಂಟು ಗಂಟೆಗಳ ನಿದ್ರೆಯ ಅಗತ್ಯವಿದೆ. ಹೀಗಾಗಿ ಬೇರೆ ಪ್ರಕ್ರಿಯೆಗಿಂತಲೂ ಅಧಿಕ ಕಾಲವನ್ನು ನಾವು ನಿದ್ರೆಯಲ್ಲಿ ಕಳೆಯುತ್ತೇವೆ. ನಿದ್ರೆ ಕಡಿಮೆಯಾದಾಗ ಮನಃಸ್ಥಿತಿ ಅಯೋಮಯವಾಗಿರುತ್ತದೆ. ಎಷ್ಟು ಸುಖವಾಗಿ ನಿದ್ರಿಸುತ್ತೇವೆ ಎಂಬುದರ ಮೇಲೆ ದೇಹದ ಮತ್ತು ಮನಸ್ಸಿನ ಆರೋಗ್ಯ ನಿರ್ಧಾರವಾಗುತ್ತದೆ.
  • ಇತ್ತೀಚಿನ ದಿನಗಳಲ್ಲಿ ಮನುಷ್ಯ ಕೀಲಿಕೊಟ್ಟ ಬೊಂಬೆಯಂತೆ ನಿದ್ರೆಗೂ ಸಹ ಪೂರ್ಣ ಸಮಯ ಕೊಡದೆ ದುಡಿಯುತ್ತಿದ್ದಾನೆ. ಆದರೆ, ಇಂತಹ ನಿದ್ರಾಹೀನತೆಯೂ ಪಿತ್ತಜನಕಾಂಗದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚಿಸಿ ಅಪಾಯಕಾರಿ ಸಮಸ್ಯೆಯನ್ನಾಗಿ ಮಾರ್ಪಾಡು ಮಾಡುತ್ತದೆ ಎಂದು ಜಪಾನ್‌ನ ಸಂಶೋಧನೆಯೊಂದು ಹೇಳುತ್ತದೆ.
  • 2018 ರಲ್ಲಿ, ‘ಜಪಾನ್‌ನ ಟೋಕಿಯೊದ ಟೊಹೊ ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಮೆಡಿಸಿನ್‌’ ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಅಸರ್ಮಪಕ ನಿದ್ರೆಯಿಂದಾಗುವ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸಲಾಯಿತು.
  • ಇಲಿಗಳು ಸಾಮಾನ್ಯವಾಗಿ 12 ಗಂಟೆಗಳ ಕಾಲ ನಿದ್ರಿಸುತ್ತವೆ. ಆದರೆ, ಸಂಶೋಧನ ಕೇಂದ್ರವು ಇಲಿಗಳು 6 ಗಂಟೆಗಳ ಕಾಲ ಮಲಗುವಂತೆ ಕ್ರಮ ಕೈಗೊಂಡು ಅಸರ್ಮಪಕ ನಿದ್ರೆಯಿಂದಾಗುವ ಅಪಾಯಕಾರಿ ಪರಿಣಾಮವನ್ನು ಪತ್ತೆ ಹಚ್ಚಲು ಮುಂದಾಗಿದೆ.
  • ಮುಂದುವರೆದು ‘ಕ್ಸಿನ್‌ಜಿಯಾಂಗ್ ವೈದ್ಯಕೀಯ ವಿಶ್ವವಿದ್ಯಾಲಯದ ಚೀನೀ ಸಂಶೋಧಕರು’ ಸಹ ಇದೇ ಮಾದರಿಯಲ್ಲಿ ಸಂಶೋಧನೆ ಇಲಿಗಳ ಮೇಲೆ ನಡೆಸಿದಾಗ, ಆರುಗಂಟೆಗೂ ಕಡಿಮೆ ನಿದ್ದೆ ಮಾಡಿದರೆ ಯಕೃತ್ತಿನ ಸಮಸ್ಯೆ ಮತ್ತು ಯಕೃತ್ತಿನ ಜೀವಕೋಶಗಳಲ್ಲಿ ಕೊಬ್ಬಿನ ಅಂಶ ಹೆಚ್ಚಳವಾಗುತ್ತದೆ ಎಂದು ಹೇಳಲಾಗಿದೆ.
  • ಕಡಿಮೆ ನಿದ್ದೆ ಮಾಡುವವರಲ್ಲಿ ಶೇ.24ರಷ್ಟು ಪಿತ್ತಜನಕಾಂಗದ ಕೊಬ್ಬಿನಾಂಶ ಹೆಚ್ಚಾಗುತ್ತದೆ ಇದು ಅಪಾಯಕಾರಿಯಾಗಿ ಪರಿಣಮಿಸುತ್ತದೆ ಎಂದು ಹೇಳಲಾಗಿದೆ.
  • ಈ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಸಲು ನಿದ್ರಾಹೀನತೆಯಿಂದ ಬಳಲುತ್ತಿರುವ 10,000 ಮಂದಿಯ ಸಮೀಕ್ಷೆ ನಡೆಸಿದಾಗ ಅವರಲ್ಲಿ 14 ಮಂದಿಗೆ ಅಸರ್ಮಪಕ ನಿದ್ರೆಯಿಂದ ಯಕೃತ್ತಿನಲ್ಲಿ ಕೊಬ್ಬಿನಾಂಶ ಕಂಡುಬಂದಿತ್ತು. ಮದ್ಯಪಾನ ವ್ಯಸನಿಗಳಲ್ಲದ ಆರು ಮಂದಿಗೆ ಯಕೃತ್ತಿನ ಸಮಸ್ಯೆ ಉಂಟಾಗಿತ್ತು ಎಂದು ಸಂಶೋಧನೆ ಹೇಳುತ್ತದೆ
  • ಮದ್ಯಪಾನ ವ್ಯಸನಿಗಳಲ್ಲದವರಲ್ಲೂ ಸಹ ನಿದ್ರಾಹೀನತೆಯಿಂದಾಗಿ ಪಿತ್ತಜನಕಾಂಗದ ತೊಂದರೆ ಕಾಣಿಸಿಕೊಳ್ಳುತ್ತದೆ ಎಂದು ಜಪಾನ್‌ ಮತ್ತು ಚೀನಾದ ಸಂಶೋಧನೆಗಳು ಮಾಹಿತಿ ನೀಡಿವೆ.
  • ಯುರೋಪಿನ 55,500 ಮಂದಿಯೊಂದಿಗೆ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿರರುವ ಅಂಶವೆಂದರೆ ಏಳರಿಂದ ಎಂಟು ಗಂಟೆ ನಿದ್ದೆ ಮಾಡುವವರು ನಿದ್ರಾಹೀನತೆ ಇರುವವರಿಗಿಂತ ಹೆಚ್ಚು ಕಾಲ ಬದುಕುಳಿಯುತ್ತಾರೆ ಎನ್ನಲಾಗಿದೆ.
  • ರಾತ್ರಿಯಿಡೀ ಮೋಜು ಮಾಡಿ, ಹಗಲಿನಲ್ಲಿ ಕೆಲವು ಗಂಟೆಗಳ ಕಾಲ ಮಾತ್ರ ಮಲಗುವ ಜನರು ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಯಾವುದೋ ಕೆಲಸ ಇಲ್ಲವೇ ಹವ್ಯಾಸಕ್ಕೆ ಸಿಲುಕಿ, ನಿದ್ರೆಯ ಸಮಯವನ್ನು ಕಡಿಮೆ ಮಾಡಿಕೊಳ್ಳುವುದು ನಿದ್ರಾಹೀನತೆಗೆ ಸಮಾನವಾದದ್ದು. ಎಷ್ಟೆ ಪ್ರಯತ್ನ ಮಾಡಿದರೂ ನಿದ್ರೆ ಬಾರದವರು ಇದ್ದಾರೆ.
  • ನಿದ್ರಾಹೀನತೆಗೆ ಔಷಧಗಳನ್ನು ಬಳಸುವ ಬದಲಿಗೆ ಇಂತಹವರು ತಮ್ಮ ಜೀವನಶೈಲಿಯಲ್ಲಿ, ಆಹಾರ ವಿಧಾನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇಂದಿನ ಯುಗದಲ್ಲಿ ದೀರ್ಘಾವಧಿಯ ಕೆಲಸದ ಸಮಯ, ಒತ್ತಡವೂ ಜೀವನಶೈಲಿಯ ಮೇಲೆ ಪ್ರಭಾವ ಬೀರುತ್ತದೆ.  
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೋನಾ ಸಮಯದಲ್ಲಿ ತಬ್ಲಿಘಿ ಸಭೆ: 70 ಜನರ ವಿರುದ್ಧದ FIR ರದ್ದು; ಕೋರ್ಟ್‌ ಆದೇಶ

ದೇಶದಲ್ಲಿ ಕೊರೋನಾ ಆಕ್ರಮಣ ಆರಂಭವಾಗಿದ್ದ ಸಮಯ 2020ರ ಮಾರ್ಚ್‌ನಲ್ಲಿ ದೆಹಲಿಯಲ್ಲಿ ತಬ್ಲಿಘಿ...

ದಾವಣಗೆರೆ | ಹೃದಯಾಘಾತಕ್ಕೆ ಯುವಕ ಬಲಿ

ದಾವಣಗೆರೆಯ ಉದ್ಯಮಿಯೊಬ್ಬರ ಪುತ್ರ ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ (Heart Attack) ಕುಸಿದು...

ಮಹಿಳೆಯರನ್ನು ಗರ್ಭಕೋಶ ಕ್ಯಾನ್ಸರ್‌ನಿಂದ ರಕ್ಷಿಸಲು ಎಚ್‌ಪಿವಿ ಲಸಿಕೆ ಅತ್ಯಗತ್ಯ: ಡಾ. ಮಂಗಳ

ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಯಿಂದ ರಕ್ಷಣೆ ಪಡೆಯಲು...

ಕೋವಿಡ್ ಲಸಿಕೆಗೂ ಹಠಾತ್ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ: ಆರೋಗ್ಯ ಸಚಿವಾಲಯ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ...

Download Eedina App Android / iOS

X