ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 12 ಸಾವಿರ ನೌಕರರನ್ನು ವಜಾಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ದಂತೆ ಈಗಾಗಲೇ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸನ್ ರೈಸ್ ಕಂಪನಿಗಳಿಗೆ ಸಾಧಾರಣವಾಗಿ ರಾಜ್ಯ ಸರ್ಕಾರ ಹಲವು ರೀತಿಯ ನೆರವು ಕೊಟ್ಟಿರುತ್ತದೆ. ಅವರು ನಮ್ಮ ಗಮನಕ್ಕೆ ತಂದೇ ನೌಕರರನ್ನು ವಜಾ ಮಾಡುವ ಷರತ್ತನ್ನೂ ಆ ಸಂದರ್ಭದಲ್ಲಿ ವಿಧಿಸಿರುತ್ತೇವೆ. ಹೀಗಾಗಿ ಟಿಸಿಎಸ್‌ನ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವ ಪ್ರಯತ್ನಗಳು ನಡೆದಿವೆ. ಇನ್ನು ಮುಂದೆ ನೌಕರರ ವಜಾ ಮಾಡುವ ಮುನ್ನ ಸರ್ಕಾರದ ಗಮನಕ್ಕೆ ತರಲೇಬೇಕು ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ಉತ್ತರ ಕನ್ನಡ | ಅಸಂಘಟಿತ ಕಾರ್ಮಿಕ ಮಂಡಳಿಗೆ ಸೆಸ್‌ನಲ್ಲಿ ಪಾಲು: ಸಚಿವ ಸಂತೋಷ್ ಲಾಡ್
ಹೊರಗುತ್ತಿಗೆ ಕಾರ್ಮಿಕರ ಸೊಸೈಟಿ ಸ್ಥಾಪನೆ
ಹೊರಗುತ್ತಿಗೆ ಏಜೆನ್ಸಿಗಳ ಬದಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೊಸೈಟಿ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಹೊರಗುತ್ತಿಗೆ ಕಾರ್ಮಿಕರ ಮೇಲೆ ಕೆಲ ಗುತ್ತಿಗೆ ಏಜೆನ್ಸಿಗಳಿಂದ ಕಿರುಕುಳ, ಒತ್ತಡ ಇರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸೊಸೈಟಿ ಸ್ಥಾಪಿಸಲು ಚಿಂತಿಸಲಾಗಿದೆ ಎಂದರು.