ಫ್ರೀಡಂ ಪಾರ್ಕ್‌ಗೆ ಬನ್ನಿ ಕೂತು ಮಾತಾಡೋಣ: ಕನ್ನಡದ ಮಕ್ಕಳಿಗೆ ನಟ ಕಿಶೋರ್ ಕರೆ

Date:

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಮುಖ್ಯವಾಗಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ನೀಟ್ ಅಕ್ರಮ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಲ್ಲಿನ ಪೊಲೀಸರು ನಡೆಸಿದ ಲಾಠಿಚಾರ್ಜ್ ಮತ್ತು ಬಲವಂತದ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಈ ಒಗ್ಗಟ್ಟಿನ ಧರಣಿ ನಡೆಯುತ್ತಿದೆ. ಆದರೆ ಈ ಧರಣಿ, ಪ್ರತಿಭಟನೆಗಳಲ್ಲಿ ಕನ್ನಡದ ಮಕ್ಕಳ ಕೊರತೆಯನ್ನು ನಟ ಕಿಶೋರ್ ಕುಮಾರ್ ಬೊಟ್ಟು ಮಾಡಿದ್ದಾರೆ. “ಫ್ರೀಡಂ ಪಾರ್ಕ್‌ಗೆ ಬನ್ನಿ ಕೂತು ಮಾತಾಡೋಣ” ಎಂದು ಕನ್ನಡದ ಮಕ್ಕಳಿಗೆ ನಟ ಕಿಶೋರ್ ಕರೆ ನೀಡಿದ್ದಾರೆ.

- Advertisement -

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿರುವ ನಟ ಕಿಶೋರ್ ಕುಮಾರ್, “ನನ್ನ ಕನ್ನಡದ ಮಕ್ಕಳಿಗಾಗಿ ನಾನು ಈ ವಿಡಿಯೋ ಮಾಡಲೇಬೇಕಾಯಿತು. ಮೂರು ದಿನದಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೆ ತಮ್ಮದೇ ಹೋರಾಟದಲ್ಲಿ ಕನ್ನಡದ ಮಕ್ಕಳ ಕೊರತೆ ಇರುವುದನ್ನು ನಾನು ಗಮನಿಸಿದ್ದೇನೆ. ಯಾಕೆ ಮಕ್ಕಳೇ, ಏನಾಗಿದೆ” ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಇದನ್ನೂ ಓದಿ: ಹಕ್ಕಿಗಾಗಿ ಬೀದಿಗಿಳಿದಿರುವ ಯುವ ಸಮೂಹ; ಮೈದಾನ ತೊರೆದು ಮುಖೇಡಿಯಾದ ಮುಖ್ಯವಾಹಿನಿ ಮಾಧ್ಯಮ!

ಹಾಗೆಯೇ, “ನಿಮ್ಮ ರಾಜಕೀಯ, ಧಾರ್ಮಿಕ ನಿಲುವು ಏನೇ ಆದರೂ ಪರವಾಗಿಲ್ಲ. ನೀವು ನನ್ನನ್ನು, ಆ ಪ್ರತಿಭಟನೆ ಮಾಡುವ ಮಕ್ಕಳನ್ನು ದೇಶದ್ರೋಹಿಗಳು ಎಂದು ಕರೆಯುತ್ತಿದ್ದರೂ ಪರವಾಗಿಲ್ಲ. ನಿಮ್ಮ ಉದ್ದೇಶ, ನಿಮ್ಮ ದೇಶಪ್ರೇಮದ ಬಗ್ಗೆ ನನಗೆ ಖಂಡಿತ ಅನುಮಾನವಿಲ್ಲ. ನಮ್ಮ ನಿಮ್ಮ ದಾರಿಯಲ್ಲಿ ಅಂತರವಿರಬಹುದು. ನಾವು ವೈರಿಗಳಲ್ಲ. ಯಾರ ಪ್ರಭಾವವೋ ಒಬ್ಬರ ಮೇಲೆ ಹೆಚ್ಚು ಇರಬಹುದು, ಕಡಿಮೆ ಇರಬಹುದು ಅಷ್ಟೇ” ಎಂದು ಹೇಳಿದ್ದಾರೆ.

“ಕೂತು, ಕಲಿತು ಮಾತನಾಡಿದರೆ ಮನುಷ್ಯನ ಮನಸ್ಸಿಗೆ ಅರ್ಥವಾಗದೆ ಇರುವುದು ಯಾವುದೂ ಇಲ್ಲ. ದಯವಿಟ್ಟು ಬನ್ನಿ. ಅಲ್ಲಿ ನಿಮ್ಮೊಂದಿಗೆ ಚರ್ಚಿಸೋಕೆ ಈ ವಿಚಾರದ ಬಗ್ಗೆ ಆಳವಾಗಿ ತಿಳಿದಿರುವ ತಜ್ಞರಿದ್ದಾರೆ. ಅನುಭವದ ಗಣಿಗಳಾದ ಹಿರಿಯರಿದ್ದಾರೆ. ನೇರ ಅನುಭವಿಸಿದ, ನಿಮ್ಮದೇ ವಯಸ್ಸಿನ ದೇಶದ ಎಲ್ಲ ಕಡೆಗಳಿಂದ ಬಂದ ಮಕ್ಕಳಿದ್ದಾರೆ. ಬನ್ನಿ, ಈ ಅವಕಾಶವನ್ನ ಮಾತಾಡೋಕೆ, ಚರ್ಚಿಸೋಕೆ ಬಳಸಿಕೊಳ್ಳೋಣ” ಎಂದು ತಿಳಿಸಿದ್ದಾರೆ.

“ಕಡೆಪಕ್ಷ ನನ್ನನ್ನು ಎದುರಲ್ಲಿ ನೋಡಿ ಬೈದು ನಿಮ್ಮ ಕೋಪ ತೀರಿಸಿಕೊಳ್ಳೋದಕ್ಕಾದರೂ ಬನ್ನಿ. ಕೋಪ ತೀರಿದ ಮೇಲಾದರೂ ಕೂತು ಮಾತಾಡೋಣ. ಜತೆ ಜತೆಯಾಗಿ, ಸತ್ಯವನ್ನು ಅರಿತುಕೊಳ್ಳೋಣ. ಇದು ನಿಮ್ಮ ಹೋರಾಟ, ನಿಮ್ಮ ನಾಳಿನ ಹೋರಾಟ. ದೇಶದ ಭವಿಷ್ಯದ ಹೋರಾಟ. ಶಾಂತಿಯ, ಪ್ರೀತಿಯ ಹೋರಾಟ. ನಿಜವಾದ ಧರ್ಮದ ದಾರಿಯ ಹೋರಾಟ. ಬನ್ನಿ ಒಟ್ಟಾಗಿ ಸೇರಿ ಸುಂದರ ನಾಳೆಯನ್ನು ಕಣ್ಣೋಣ. ಇಂಕ್ವಿಲಾಬ್ ಜಿಂದಾಬಾದ್” ಎಂದಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಮೈಗೂಡಿಸಿಕೊಳ್ಳಿ : ಜಯಕುಮಾರ ಶಿಂಧೆ

ಸಮಯ ಪ್ರಜ್ಞೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು...

ಮುದ್ದೇಬಿಹಾಳದಲ್ಲಿ ತೀವ್ರ ಬರ; ಕಾಲುವೆಗಳಿಗೆ ನೀರು ಹರಿಸಲು ಶಾಸಕ ನಾಡಗೌಡ ಮನವಿ

ಬರದ ಬಿಸಿಲಿಗೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಗ್ರಾಮೀಣ ಬದುಕು ತತ್ತರಿಸುತ್ತಿರುವ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಪದೇ ಪದೇ ಬಂಧನವಾದರೂ ಹಿಂಜರಿಯದ ವಿಪಕ್ಷಗಳು: ಮತ್ತೆ ಜಂತರ್ ಮಂತರ್‌ನತ್ತ ಹೆಜ್ಜೆಯಿಟ್ಟ ಇಂಡಿಯಾ ಒಕ್ಕೂಟ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸೇರಿದಂತೆ ಚುನಾವಣಾ...