ಬೆಂಗಳೂರು | ಸಜ್ಜನರ ಸಲ್ಲಾಪ – 3: ತಿಂಗಳ ಅತಿಥಿಯಾಗಿ ಬಿ.ಟಿ.ಲಲಿತಾನಾಯಕ್

Date:

Advertisements

ಬಾಲ್ಯದ ದಿನಗಳಲ್ಲಿಯೇ ವ್ಯಾಸಂಗದಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಂಡಿದ್ದೆ. ಸಾಂಸಾರಿಕ ತೊಂದರೆಯಿಂದ 8ನೇ ತರಗತಿಗೆ ಶಾಲೆ ಬಿಟ್ಟು ಸಂಸಾರದ ಕೆಲ ಸಂಗತಿಗಳನ್ನೇ ಬರಹ ರೂಪದಲ್ಲಿ ತಂದೆ. ಬಹುಮುಖ್ಯವಾಗಿ ವೈಚಾರಿಕ ನೆಲಗಟ್ಟಿನಲ್ಲಿ ಚಿಂತಿಸುತ್ತಾ ಈ ಕುರಿತಾಗಿ ಹೆಚ್ಚು ಬರಹಗಳನ್ನು ಬರೆಯಲು ಉತ್ಸುಕಳಾದೆ ಎಂದು ಹಿರಿಯ ಲೇಖಕಿ ಡಾ.ಬಿ.ಟಿ ಲಲಿತಾನಾಯಕ್‌ ತಮ್ಮ ಬಾಲ್ಯವನ್ನು ನೆನೆಸಿಕೊಂಡರು.

ಅವರು ಮಂಗಳವಾರ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಕರ್ನಾಟಕ ಸರ್ಕಾರದ ವತಿಯಿಂದ ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರದಲ್ಲಿ ಕಳತಾವೂರ್‌ ಮಳಾವ್‌ -03 (ಸಜ್ಜನರ ಸಲ್ಲಾಪ -03) ಮೀನಾರೋ ಪಾಮಣೋ(ತಿಂಗಳ ಅತಿಥಿ) ಸಮಾರಂಭದಲ್ಲಿ ತಿಂಗಳ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನನ್ನ ಬರಹಕ್ಕೆ ನನ್ನ ತಂದೆಯ ಒತ್ತಾಸೆ ಇತ್ತು‌ ಹಾಗೂ ಮೊದಲ ವೇದಿಕೆಯಾಗಿದ್ದು, ಲಂಕೇಶ್‌ನಂತಹ ಪತ್ರಿಕೆಗಳನ್ನು ಮರೆಯುವಂತಿಲ್ಲ ಎಂದು ತಿಳಿಸಿದರು.

ರಾಜಕೀಯ ಕ್ಷೇತ್ರಕ್ಕೆ ಬಂದು ಕೆಲವರ ಪಿತೂರಿಗಳಿಂದ ಅಧಿಕಾರ ಕಳೆದುಕೊಂಡೆ. ನನಗೆ ಆದರ್ಶವಾಗಿದ್ದವರು ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್‌ ಎಂಬುದನ್ನು ಹೆಮ್ಮೆಯಿಂದ ಹೇಳುವೆ. ನಜೀರ್‌ ಸಾಬ್ ನನ್ನನ್ನು ಎಂ.ಎಲ್.ಸಿ ಮಾಡಲು ಕಾರಣರಾದರು, ಆ ನಂತರ ಸಚಿವೆಯಾದೆ. ಈ ಸಂದರ್ಭದಲ್ಲೂ ಕೂಡ ನನಗೆ ಸಾಹಿತ್ಯ ರಚನೆ ಬಗ್ಗೆಯೇ ಹೆಚ್ಚಿನ ತುಡಿತವಿತ್ತು. ಜೊತೆಗೆ ನನ್ನ ಸತ್ಯನಿಷ್ಠೆ, ಸರಳ ಜೀವನ ಇವುಗಳು ಸಚಿವೆಯಾಗಿ ಹೆಚ್ಚು ದಿನ ಮುಂದುವರೆಯದಂತೆ ಮಾಡಿದವು. ಆದರೂ ಧೃತಿಗೆಡಲಿಲ್ಲ, ಹಲವು ಬಗೆಯಲ್ಲಿ ಸಮಾಜ ಸೇವೆಗೆ ತೊಡಗಿಸಿ ಕೊಂಡಿರುವೆ ಎಂದು ಹೇಳಿದರು.

Advertisements

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾದ ಡಾ.ಎ.ಆರ್ ಗೋವಿಂದಸ್ವಾಮಿ ಮಾತನಾಡಿ, ಕಳೆದ ಆರು ತಿಂಗಳಿಂದ ಅಕಾಡೆಮಿಯು ನಿರಂತರ 28ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ನಡೆಸಿದ ಕಾರ್ಯ ಚಟುವಟಿಕೆ ವಿವರಿಸುತ್ತಾ ಪ್ರಸ್ತುತ ಬಂಜಾರ ವಿಶ್ವಕೋಶ (ಎನ್ಸೈಕ್ಲೋಪೀಡಿಯಾ) ರಚಿಸುವ ಅಕಾಡೆಮಿ ತೊಡಗಿದ್ದು ನಾಡೋಜ ಪ್ರೋ. ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಂಜಾರ ಸಮುದಾಯದ ಪ್ರಥಮ ಸಾಹಿತಿ ಹಾಗೂ ಕಲಾವಿದರ ಬಗ್ಗೆ ಸಾಕ್ಷ್ಯ ಚಿತ್ರ ನಿರ್ಮಾಣವಾಗುತ್ತಿವೆ. ರಾಜ್ಯದ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಬಂಜಾರ ಯುವಕ ಯುವತಿಯರಿಗೆ ಕಸೂತಿ ತರಬೇತಿ ಶಿಬಿರ ಆಯೋಜಿಸಲಾಗಿದೆ. ವಿಜಯಪುರದಲ್ಲಿ ಹತ್ತು ದಿನಗಳ ಬಂಜಾರ ಆಭರಣ ತಯಾರಿಕೆ ಕಾರ್ಯಾಗಾರ ನಡೆಸಲಾಗಿದೆ. ಬೆಂಗಳೂರು ನಗರದಲ್ಲಿ ಪ್ರತಿ ತಿಂಗಳು ನಾಡಿನ ಸಾಹಿತಿಗಳು ಚಿಂತಕರು, ಸಮುದಾಯದ ಎಲೆಮರೆ ಕಾಯಿಗಳು ಮತ್ತು ಗಣ್ಯ ವ್ಯಕ್ತಿಗಳನ್ನು ಕರೆಸಿ ತಿಂಗಳ ಅತಿಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇವುಗಳ ಜೊತೆಗೆ ಅಕಾಡೆಮಿಯು ಬಂಜಾರ ಸಮುದಾಯದ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಗೌರವಗಳನ್ನು ನೀಡುವ, ಕೊಡಿಸುವ ಕೆಲಸವನ್ನು ಮಾಡುತ್ತಿದೆ. ಬಂಜಾರ ಮ್ಯೂಸಿಯಂ ಹಾಗೂ ಮಾದರಿ ತಾಂಡ ಅಲ್ಲದೆ ಲಿಪಿ ಇಲ್ಲದ ಬಂಜಾರ ಭಾಷೆಯನ್ನು ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿಯೂ ಮತ್ತು ರಾಷ್ಟ್ರಮಟ್ಟದಲ್ಲಿ ನಾಗರೀ ಲಿಪಿಯಲ್ಲಿ ಬರೆಯುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಆಂಗ್ಲ ಭಾಷೆ ಬಳಕೆ ಇದೆ. ಇದನ್ನೇ ಅನೇಕ ಬಂಜಾರ ಭಾಷಾ ತಜ್ಞರು ಅಖೈರು ಗೊಳಿಸಲು ತಮ್ಮ ಸಮರ್ಥನೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅಕಾಡೆಮಿ ಹೆಚ್ಚಿನ ಸಂಶೋಧನೆ ಮಾಡಲಿದೆ ಎಂದರು.

ದಿನೇಶ್‌ ಅಮಿನ್‌ ಮಟ್ಟು ಮಾತನಾಡಿ, ಲಲಿತನಾಯಕ್‌ ಸಾಹಿತಿಯಾಗಿ ಗುರುತಿಸಿಕೊಂಡು ಆನಂತರ ರಾಜಕಾರಣಿಯಾದವರು. ಅನುವಾದಕಿ ಕೂಡ ಆಗಿದ್ದರು. ಅವರು ಒಬ್ಬರು ರಾಜಕಾರಣಿ, ಸಾಹಿತಿ, ಪತ್ರಕರ್ತೆ ಅಂತ ತಿಳಿದುಕೊಂಡರೆ ಅಷ್ಟೇ ಅಲ್ಲ, ಎಲ್ಲವನ್ನು ಒಳಗೊಂಡು ಸಾರ್ವಜನಿಕ ಹಿತಕ್ಕಾಗಿ ಯಾವ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆಯೋ ಆ ಎಲ್ಲಾ ಕ್ಷೇತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅವರು ಮೊದಲ ಬಾರಿ ಸಚಿವರಾಗಿದ್ದಾಗ ಬಹಳ ದೊಡ್ಡ ಸಂಚು ನಡೆದು ಅದನ್ನು ಕಳೆದುಕೊಳ್ಳಬೇಕಾಯಿತು ಎಂದರು.

ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕೆ. ಎಲ್‌. ಮುಕುಂದ್‌ ರಾಜ್‌, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಾನಸ, ಶಿಕ್ಷಣ ತಜ್ಞ ಪ್ರೊ. ಪಾಂಡುನಾಯಕ್‌, ಪತ್ರಕರ್ತೆ ಮಂಜು ಶ್ರೀ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಉತ್ತಮ್‌ ರಾಥೋಡ್ ಹಾಗೂ ಇತರೆ ಸದಸ್ಯರು, ದಲಿತ ಕಾರ್ಮಿಕ ಮುಖಂಡರಾದ ಗವಿಕುಮಾರ್‌, ಸಾಹಿತಿ ಬಾಲುನಾಯಕ್‌ ಮುಂತಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X