ರೈತ ಸಂಘದ ರಾಜ್ಯಾಧ್ಯಕ್ಷರಾಗಿ ಬಡಗಲಪುರ ನಾಗೇಂದ್ರ ಪುನರ್‌ ಆಯ್ಕೆ

Date:

Advertisements

ಕರ್ನಾಟಕ ರಾಜ್ಯ ರೈತ ಸಂಘದ (ಕೆಆರ್‌ಆರ್‌ಎಸ್‌) ರಾಜ್ಯಾಧ್ಯಕ್ಷರಾಗಿ ಬಡಗಲಪುರ ನಾಗೇಂದ್ರ ಅವರು ಪುನರ್‌ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಚಾಮರಸ ಮೀಲೀ ಪಾಟೀಲ್ ಮರುಆಯ್ಕೆಯಾಗಿದ್ದಾರೆ ಎಂದು ಕೆಆರ್‌ಆರ್‌ಎಸ್‌ ತಿಳಿಸಿದೆ.

ಚಿತ್ರದುರ್ಗದಲ್ಲಿ ಭಾನುವಾರ ನಡೆದ ರೈತ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ರೈತ ಸಂಘದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ರೈತ ಸಂಘವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮತ್ತೊಮ್ಮೆ ಬಡಗಲಪುರ ನಾಗೇಂದ್ರ ಅವರಿಗೆ ನೀಡಲಾಗಿದೆ.

ರೈತ ಸಂಘದ ವರಿಷ್ಠ ಮಂಡಳಿಗೆ ಸುನೀತಾ ಪುಟ್ಟಣ್ಣಯ್ಯ ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಧಾನ ಕಾರ್ಯದರ್ಶಿಗಳಾಗಿ ರವಿಕಿರಣ್‌ ಪುಣಚ ಮತ್ತು ಎನ್‌.ಡಿ ವಸಂತ್‌ಕುಮಾರ್‌ ಆಯ್ಕೆಯಾಗಿದ್ದಾರೆ.

Advertisements

ರೈತ ಸಂಘದ ಕಾರ್ಯದರ್ಶಿಗಳಾಗಿ ಜೆ.ಎಂ ವೀರಸಂಗಯ್ಯ, ಎ ಗೋವಿಂದ ರಾಜು ಹಾಗೂ ಎ.ಎಂ ಮಹೇಶ್ ಪ್ರಭು ಆಯ್ಕೆಯಾಗಿದ್ದಾರೆ. ಸಂಘಟನೆಯ ಉಪಾಧ್ಯಕ್ಷರಾಗಿ ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಕೆ.ಪಿ ಬೂತಯ್ಯ, ಶಿವಾನಂದ ಕುಗ್ವೆ, ಕೆ ಮಲ್ಲಯ್ಯ, ಎ.ಎಲ್‌ ಕೆಂಪೂಗೌಡ, ಮುತ್ತಪ್ಪ ಕೋಮಾರಿ, ಗಣಚಾರಿ, ಮಂಜುಳ ಎಸ್‌ ಅಕ್ಕಿ, ಸುರೇಶ್‌ಬಾಬು, ಅಮರಣ್ಣ ಗುಡಿಯಾಳ್‌, ದೊಡ್ಡಬಸವನಗೌಡ ಬಲ್ಲಟಗಿ, ನಾಗಪ್ಪ ಉಚಿಡಿ ಹಾಗೂ ಖಾಸಿಂ ಆಲಿ ಆಯ್ಕೆಯಾಗಿದ್ದಾರೆ.

ಸಂಘಟನೆಯ ಕಾರ್ಯದರ್ಶಿಗಳಾಗಿ ಗೋಪಾಲ್ ಪಾಲೇಗೌಡ, ಅರುಣ್‌ಕುಮಾರ್ ಕುರುಡಿ, ಸುಗುರಯ್ಯ ಆರ್‌.ಎಡ್ ಮಠ, ಸಂಘಟನಾ ಕಾರ್ಯದರ್ಶಿಗಳಾಗಿ ಗೋಣಿ ಬಸಪ್ಪ, ಶಿವಾನಂದ ಇಟಗಿ ಹಾಗೂ ಖಜಾಂಚಿಯಾಗಿ ಪ್ರಸನ್ನ ಎಚ್‌ ಗೌಡ ಆಯ್ಕೆಗೊಂಡಿದ್ದಾರೆ.

ರೈತ ಸಂಘದ ಮೈಸೂರು ವಿಭಾಗದ ಉಪಾಧ್ಯಕ್ಷರಾಗಿ ಬೋರಾಪುರ ಶಂಕರೇಗೌಡ, ಕಾರ್ಯದರ್ಶಿಯಾಗಿ ಸಿದ್ದರಾಜು ಜ್ಯೋತಿಗೌಡನ ಪುರ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಹೊಸಕೋಟೆ ಬಸವರಾಜು ಆಯ್ಕೆಯಾಗಿದ್ದಾರೆ.

ಬೆಂಗಳೂರು ವಿಭಾಗಕ್ಕೆ ಸಂಘಟನೆಯ ಉಪಾಧ್ಯಕ್ಷರಾಗಿ ಲಕ್ಷ್ಮಿನಾರಾಯ, ಕಾರ್ಯದರ್ಶಿಯಾಗಿ ನಾಯಂಡಳ್ಳಿ ಚಂದ್ರಶೇಖರ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ದೊಡ್ಡಮಾಳಿಗಯ್ಯ ಆಯ್ಕೆಯಾಗಿದ್ದಾರೆ.  ಕಲಬುರಗಿ ವಿಭಾಗಕ್ಕೆ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಸತ್ಯೆ, ಕಾರ್ಯದರ್ಶಿಯಾಗಿ ಎಂ.ಎಲ್‌.ಕೆ ನಾಯ್ದು, ಸಂಘಟನಾ ಕಾರ್ಯದರ್ಶಿಯಾಗಿ ಯಂಕಪ್ಪ ಕಾರುಬಾರಿ, ಮಹಂತೇಶ್ ಮಡಿವಾಳ ಆಯ್ಕೆಗೊಂಡಿದ್ದಾರೆ.

ಮಧ್ಯ ಕರ್ನಾಟಕ ವಿಭಾಗಕ್ಕೆ ಉಪಾಧ್ಯಕ್ಷರಾಗಿ ವರಕೆರಪ್ಪ, ಸಂಘಟನಾ ಕಾರ್ಯದರ್ಶಿ ಜಯಪ್ಪಗೌಡ ಆಯ್ಕೆಯಾಗಿದ್ದರೆ, ಬೆಳಗಾವಿ ವಿಭಾಗಕ್ಕೆ ಉಪಾಧ್ಯಕ್ಷರಾಗಿ ಬಸವನಗೌಡ ದರ್ಮಗೊಂಡ, ಕಾರ್ಯದರ್ಶಿಯಾಗಿ ಎಫ್‌ಡಿಎಂ ನಗಾಪ ಆಯ್ಕೆಯಾಗಿದ್ದಾರೆ.

ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿ ನಾಗರತ್ನಮ್ಮ ವಿ ಪಾಟೀಲ್ ಆಯ್ಕೆಯಾಗಿದ್ದಾರೆ. ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇತ್ರಾವತಿ, ರಮ್ಯ ರಾಮಣ್ಣ ಆಯ್ಕೆಗೊಂಡಿದ್ದಾರೆ. ಕಾರ್ಯಾಧ್ಯಕ್ಷರಾಗಿ ಯದುಶೈಲ ಸಂಪತ್, ಉಪಾಧ್ಯಕ್ಷರಾಗಿ ಶಾಂತಮ್ಮ ಬಾಯಿ, ಪ್ರೇಮ ಕಂದಗಾಲ ಹಾಗೂ ಕಾರ್ಯದರ್ಶಿಗಳಾಗಿ ಮಮತ ಮತ್ತು ರತ್ನಮ್ಮ  ಆಯ್ಕೆಯಾಗಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X