ಕರ್ನಾಟಕದ ಔಷಧ ಪರೀಕ್ಷಾ ಪ್ರಯೋಗಾಲಯವು ಕೆಲವು ಔಷಧಗಳು ಮತ್ತು ಸೌಂದರ್ಯವರ್ಧಕಗಳನ್ನು ‘ಪ್ರಮಾಣೀಕೃತ ಗುಣಮಟ್ಟದಲ್ಲಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್, “ಎಲ್ಲ ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳು ಈ ಉತ್ಪನ್ನಗಳನ್ನು ಸಂಗ್ರಹಿಸುವುದು/ಮಾರಾಟ ಮಾಡುವುದು/ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಸಚಿವರು ಮನವಿ ಮಾಡಿದ್ದಾರೆ.
“ಆಸ್ಪತ್ರೆ, ಔಷಧ ಮಳಿಗೆಗಳಲ್ಲಿ ಯಾವುದೇ ಸಂಗ್ರಹ ಇದ್ದರೆ, ನಿಮ್ಮ ಸ್ಥಳೀಯ ಔಷಧ ನಿರೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರಿಗೆ ತಕ್ಷಣವೇ ತಿಳಿಸಿ. ನಿಮ್ಮ ಸುರಕ್ಷತೆ ನಮ್ಮ ಆದ್ಯತೆ. ದಯವಿಟ್ಟು ಈ ಕೆಳಗೆ ಪಟ್ಟಿ ಮಾಡಲಾದ ಬ್ಯಾಚ್‌ನ ಔಷಧಗಳು/ಸೌಂದರ್ಯವರ್ಧಕಗಳನ್ನು ಬಳಸಬೇಡಿ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ.
ಕರ್ನಾಟಕದ ಔಷಧ ಪರೀಕ್ಷಾ ಪ್ರಯೋಗಾಲಯವು ಈ ಕೆಳಗಿನ ಔಷಧಗಳು/ಸೌಂದರ್ಯವರ್ಧಕಗಳನ್ನು 'ಪ್ರಮಾಣೀಕೃತ ಗುಣಮಟ್ಟದಲ್ಲಿಲ್ಲ' ಎಂದು ಅಭಿಪ್ರಾಯಪಟ್ಟಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 25, 2025
ಎಲ್ಲಾ ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಈ ಉತ್ಪನ್ನಗಳನ್ನು ಸಂಗ್ರಹಿಸುವುದು/ಮಾರಾಟ ಮಾಡುವುದು/ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾನು ಮನವಿ… pic.twitter.com/qbbu00r0pp