“ಕೆಎಎಸ್ ಹುದ್ದೆಯ ಪರೀಕ್ಷೆಗೆ ರಾತ್ರಿ 12 ಗಂಟೆವರೆಗೂ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಹಾಲ್ ಟಿಕೆಟ್ ಪಡೆದು ಬೆಳಗ್ಗೆ ಪರೀಕ್ಷೆ ಬರೆಯಿರಿ…“
ಇದು ಕೆಪಿಎಸ್‌ಸಿ ಮೇ 3ರಂದು ನಡೆಸಲಿರುವ ಕೆಎಎಸ್ ಮುಖ್ಯ ಪರೀಕ್ಷೆಗೆ ಮೇ 2ರಂದು ಸಂಜೆ ಹೊರಡಿಸಿರುವ ಪ್ರಕಟಣೆ.
ಹೌದು. ನೀವು ಇದನ್ನು ನಂಬಲೇಬೇಕು. ಆ ಮೂಲಕ ಅಭ್ಯರ್ಥಿಗಳಿಗೆ ಶಾಕ್ ನೀಡಿದೆ.
ಮೇ 2ರಂದು ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಆಘಾತ ನೀಡಿದೆ. ಮೇ 3ರಂದು ನಡೆಯಲಿರುವ ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳಲು ಹೈಕೋರ್ಟ್ ಅನುಮತಿ ನೀಡಿದೆ. ಕಳೆದ ಡಿಸೆಂಬರ್ ನಲ್ಲಿ ನಡೆದಿದ್ದ ಇದೇ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳ ಭಾಷಾಂತರದ ಗೊಂದಲದಿಂದಾಗಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯದವರ ನೆರವಿಗೆ ಬಂದಿದ್ದ ಹೈಕೋರ್ಟ್ ಸುಮಾರು 120 ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಅನುಮತಿ ನೀಡಿದೆ. ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ್ದ ಕೆಪಿಎಸ್ಸಿ, ಈ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಿ, ಮೇ 2ರಂದೇ ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ನೀಡುವುದಾಗಿ ಇತ್ತೀಚೆಗೆ ಪ್ರಕಟಿಸಿತ್ತು.
ಅದರಂತೆ, ಮೇ 2ರಂದು ಮಧ್ಯಾಹ್ನ 3ರೊಳಗೆ ಶುಲ್ಕ ಸಹಿತ ಅರ್ಜಿ ಸಲ್ಲಿಸಬೇಕು ಎಂದು ಅಭ್ಯರ್ಥಿಗಳಿಗೆ ಸೂಚಿಸಿತ್ತು. ಹೀಗೆ ಅರ್ಜಿ ಸಲ್ಲಿಸಿದವರಿಗೆ ಕೆಪಿಎಸ್ಸಿ ಕಚೇರಿಯಲ್ಲೇ ಸಂಜೆ 5.30ರವರೆಗೆ ಹಾಲ್ ಟಿಕೆಟ್ ನೀಡುವುದಾಗಿ ಸೂಚಿಸಲಾಗಿತ್ತು. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಕಸ್ತೂರ್ ಬಾ ನಗರದಲ್ಲಿರುವ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮರುದಿನ 8 ಗಂಟೆಗೆ ಹೋಗಿ ಹಾಲ್ ಟಿಕೆಟ್ ಪಡೆದುಕೊಂಡು ಪರೀಕ್ಷೆ ಬರೆಯಬೇಕು ಎಂದು ಸೂಚಿಸಿತ್ತು.
ಆದರೆ, ಮೇ 2ರಂದು ಮಧ್ಯಾಹ್ನ 3 ಗಂಟೆಯೊಳಗೆ ಅರ್ಜಿಗಳನ್ನು ಸ್ವೀಕರಿಸಬೇಕಿದ್ದ ಕೆಪಿಎಸ್ಸಿ, ಮಧ್ಯರಾತ್ರಿಯಾದರೂ ಅರ್ಜಿಗಳನ್ನು ಸ್ವೀಕರಿಸುತ್ತಲೇ ಇದೆ. ರಾತ್ರಿ ವೇಳೆಗೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆಯೊಂದನ್ನು ಹೊರಡಿಸಿದ ಕೆಪಿಎಸ್ಸಿ, ರಾತ್ರಿ 12ರವರೆಗೆ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿಯನ್ನು ಸಲ್ಲಿಸುವವರು ಅರ್ಜಿ ಸಲ್ಲಿಸಿದ ಕೂಡಲೇ ಹಾಲ್ ಟಿಕೆಟ್ ಪಡೆದು ಮರುದಿನ ಬೆಂಗಳೂರಿನ ಕಸ್ತೂರ್ ಬಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಿದೆ. ಇದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಾಳಿನ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕೆಎಎಸ್ ಮೇನ್ ಪರೀಕ್ಷೆಗೆ ಬೆಂಗಳೂರು ಮತ್ತು ಧಾರವಾಡ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಿರುತ್ತದೆ ಹಾಗೂ ನಾಳೆ ಬೆಳಗ್ಗೆ ಏಳು ಗಂಟೆವರೆಗೆ ಪ್ರಶ್ನೆ ಪತ್ರಿಕೆಗಳು ಸದರಿ ಧಾರವಾಡ ಹಾಗೂ ಬೆಂಗಳೂರಿನ ಕೆಪಿಎಸ್ಸಿ ಕಚೇರಿಯಲ್ಲಿ ಇರುತ್ತದೆ.ಇಂತಹ ಸಂದರ್ಭದಲ್ಲಿ 270 ಅಭ್ಯರ್ಥಿಗಳನ್ನು ತನ್ನ ಕಚೇರಿ ಒಳಗಡೆ ಇರಿಸಿಕೊಂಡಿರುವಂತದು ಪ್ರಶ್ನೆ ಪತ್ರಿಕೆ ಸೋರಿಕೆ ಎಂತಹ ಅನುಮಾನಗಳಿಗೂ ಕಾರಣವಾಗಿದೆ.
500 ಅಭ್ಯರ್ಥಿಗಳಲ್ಲಿ ಕೇವಲ 119 ಅಭ್ಯರ್ಥಿಗಳ ಹೆಸರನ್ನು ಕೆಪಿಎಸ್‌ಸಿ ತನ್ನ ವೆಬ್ಸೈಟ್ನಲ್ಲಿ ಪ್ರಕಟ ಮಾಡಿರುತ್ತದೆ ಕೋರ್ಟ್ ಆದೇಶದಂತೆ ಇನ್ನುಳಿದ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳ ಹೆಸರನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟ ಮಾಡಲಾಗಿರುವುದಿಲ್ಲ
ಇದಲ್ಲದೆ ಇಂದು ಮಧ್ಯರಾತ್ರಿ 12ರವರೆಗೂ ಅಭ್ಯರ್ಥಿಗಳಿಂದ ದಾಖಲೆಗಳನ್ನು ಪಡೆದು ಪ್ರವೇಶ ಪತ್ರವನ್ನು ನೀಡುತ್ತೇವೆಂದು ರಾತ್ರಿ 9:40 ರಲ್ಲಿ ಪ್ರಕಟಣೆಯನ್ನು ಹೊರಡಿಸಿರುತ್ತದೆ. ಹೀಗಿದ್ದಾಗ 500ರಲ್ಲಿ ಉತ್ತರ ಕರ್ನಾಟಕದ ಅಭ್ಯರ್ಥಿಗಳು ಅಥವಾ ದೂರದ ಊರಿಂದ ಬರುವಂತಹ ಅಭ್ಯರ್ಥಿಗಳು ಕೆಪಿಎಸ್ಸಿಗೆ ಹೇಗೆ ತಲುಪಲು ಸಾಧ್ಯ ಎಂಬ ಪ್ರಶ್ನೆ ಕೂಡ ಎದ್ದಿದೆ.
ಇಷ್ಟು ತರಾತುರಿಯಲ್ಲಿ ಕೆ ಎಸ್ ಪರೀಕ್ಷೆಯನ್ನು ನಡೆಸಲು ಕಾರಣವಾದರೂ ಏನು ಎಂದು ಸಂತ್ರಸ್ತ ಅಭ್ಯರ್ಥಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನಿಸುತ್ತಿದ್ದಾರೆ.
ಪ್ರಮುಖ ವಿಚಾರವೆಂದರೆ ಅಭ್ಯರ್ಥಿಗಳ ಬಳಿ ಕೇವಲ ಹೆಸರನ್ನು ಕೇಳಿ ಅಭ್ಯರ್ಥಿಗಳ ಎದುರುಗಡೆ ಪ್ರವೇಶ ಪತ್ರವನ್ನು ಟೈಪ್ ಮಾಡಿ ನೀಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಇದಕ್ಕೆ ಯಾವುದೇ ದಾಖಲೆಗಳನ್ನು ಪಡೆಯುತ್ತಿಲ್ಲ ಅಭ್ಯರ್ಥಿಗಳ ಫೋಟೋವನ್ನು ಕೇಳುತ್ತಿಲ್ಲ. ಹೀಗಿದ್ದಾಗ ನಾಳೆ ಒಬ್ಬ ಅಭ್ಯರ್ಥಿಯ ಬದಲಾಗಿ ಮತ್ತೊಬ್ಬರು ಪರೀಕ್ಷೆಯನ್ನು ಬರೆಯುವ ಸಾಧ್ಯತೆ ಹೆಚ್ಚಿದೆ ಎಂದು ಹಲವರು ಆರೋಪಿಸಿದ್ದಾರೆ.
ಸರ್ಕಾರದ ಇತ್ತೀಚಿನ ಕಾನೂನಿನ ಪ್ರಕಾರ ಪ್ರತಿ ಪರೀಕ್ಷೆಗೂ ಪ್ರವೇಶ ಪ್ರತಿಯಲ್ಲಿ ಕ್ಯೂಆರ್ ಕೋಡ್ ಕಡ್ಡಾಯವಾಗಿದೆ. ಆದರೆ ರಾಜ್ಯದ ಪ್ರಥಮ ದರ್ಜೆಯ ಹುದ್ದೆಗಳ ಮೇನ್ಸ್ ಪರೀಕ್ಷೆಗೆ ಮುಖ್ಯ ಪರೀಕ್ಷೆಗೆ ಕ್ಯೂ ಆರ್ ಕೋಡ್ ಇಲ್ಲದೆ ಪ್ರವೇಶ ಪತ್ರವನ್ನು ನೀಡುತ್ತಿದೆ. ಇಷ್ಟೊಂದು ಗಡಿಬಿಡಿಯಲ್ಲಿ ಪರೀಕ್ಷೆ ನಡೆಸುವ ಅವಶ್ಯಕತೆ ಇದೆಯಾ? ಮುಂದೂಡುವುದಕ್ಕೆ ಇರುವ ಅಡ್ಡಿ ಏನು ಹಲವಾರು ಮಂದಿ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ 270 ಅಭ್ಯರ್ಥಿಗಳನ್ನು ತನ್ನ ಕಚೇರಿ ಒಳಗಡೆ ಇರಿಸಿಕೊಂಡಿರುವಂತದು ಪ್ರಶ್ನೆ ಪತ್ರಿಕೆ ಸೋರಿಕೆ ಎಂತಹ ಅನುಮಾನಗಳಿಗೂ ಕಾರಣವಾಗುತ್ತದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.