ಬೀದರ್‌ | ಕನೇರಿ ಸ್ವಾಮಿ ಬಸವಕಲ್ಯಾಣ ಪ್ರವೇಶಿಸಕೂಡದು: ಬಸವಪರ ಸಂಘಟನೆಗಳ ನಿರ್ಣಯ

Date:

ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ಜೂನ್ 28ರಂದು ಆಯೋಜಿಸಿರುವ ‘ಬಸವಾದಿ ಶಿವಶರಣರ ಹಿಂದೂ ಸಮಾವೇಶʼದಲ್ಲಿ ಪಾಲ್ಗೊಳ್ಳಲು ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ಬಸವಕಲ್ಯಾಣದಲ್ಲಿ ಪಾದಾರ್ಪಣೆ ಮಾಡಲು ಬಿಡಬಾರದು ಎಂದು ಜಿಲ್ಲೆಯ ಪ್ರಮುಖ ಮಠಾಧೀಶರು, ಬಸವಪರ ಸಂಘಟನೆಗಳ ಮುಖಂಡರು ಹಾಗೂ ಬಸವಾನುಯಾಯಿಗಳು ಒಮ್ಮತದ ನಿರ್ಣಯ ತೆಗೆದುಕೊಂಡರು.

- Advertisement -

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ನೇತ್ರತ್ವದಲ್ಲಿ ಬೀದರ್ ನಗರದ ಗಾಂಧಿ ಗಂಜ ಬಸವೇಶ್ವರ ದೇವಸ್ಥಾನದಲ್ಲಿ ಕನೇರಿ ಶ್ರೀ ಬಸವಕಲ್ಯಾಣ ಪ್ರವೇಶ ವಿರೋಧಿಸಿ ಭಾನುವಾರ ಸಂಜೆ ಕರೆದ ಪ್ರತಿಭಟನೆ ಪೂರ್ವಭಾವಿ ಸಭೆಯಲ್ಲಿ ಒಕ್ಕೊರಲ ತೀರ್ಮಾನ ಕೈಗೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಬಸವಲಿಂಗ ಪಟ್ಟದ್ದೇವರು ಸಭೆಯ ಸಾನಿಧ್ಯ ವಹಿಸಿ ಮಾತನಾಡಿ, ” ಬಸವಾದಿ ಶಿವಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ನಡೆಸಲು ಶರಣ ಭೂಮಿ, ತ್ಯಾಗ, ಬಲಿದಾನದ ಬಸವಕಲ್ಯಾಣದಲ್ಲಿ ಕನೇರಿ ಸ್ವಾಮೀಜಿಯ ಅಪವಿತ್ರ ಪಾದಾರ್ಪಣೆ ಯಾವುದೇ ಕಾರಣಕ್ಕೂ ಆಗಬಾರದು. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಪ್ರತಿರೋಧ ಮಾಡಬೇಕಿದೆ” ಎಂದು ಕರೆ ನೀಡಿದರು.

“ಈ ಹಿಂದೆ ದಸರಾ ದರ್ಬಾರ್‌ ಹೆಸರಿನಲ್ಲಿ ಬಸವಕಲ್ಯಾಣದಲ್ಲಿ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಮುಂದಾಗಿದಾಗ ನಾವೆಲ್ಲರೂ ಅದನ್ನು ತೀವ್ರವಾಗಿ ವಿರೋಧಿಸಿದಕ್ಕೆ ಅಡ್ಡಪಲ್ಲಕ್ಕಿ ಉತ್ಸವ ನಡೆಸುವ ನಿರ್ಧಾರ ವಾಪಸ್‌ ಪಡೆದಿದ್ದರು. ಈಚೆಗೆ ಲಿಂಗಾಯತ ಪರಂಪರೆಯ ಕಾಡಸಿದ್ದೇಶ್ವರ ಮಠದ ಕನೇರಿ ಸ್ವಾಮೀಜಿ ಬಸವತತ್ವ ಹಾಗೂ ಲಿಂಗಾಯತ ಮಠಾಧೀಶರನ್ನು ಅಪಮಾನಿಸುತ್ತಿರುವುದು ಅಪಾಯಕಾರಿಯಾಗಿದೆ. ಇದು ನಾವೆಲ್ಲರೂ ಖಂಡಿಸಬೇಕಿದೆ. ಜೂ.28ರಂದು ಆಯೋಜಿಸಿರುವ ‘ಬಸವಾದಿ ಶಿವಶರಣರ ಹಿಂದೂ ಸಮಾವೇಶʼದಲ್ಲಿ ಪಾಲ್ಗೊಳ್ಳಲು ಆಗಮಿಸುವ ಕನೇರಿ ಮಠದ ಸ್ವಾಮೀಜಿಯನ್ನು ಬಸವಕಲ್ಯಾಣಕ್ಕೆ ಪ್ರವೇಶಿಸದಂತೆ ನಾವೆಲ್ಲರೂ ಒಗ್ಗಟ್ಟು ಪ್ರದರ್ಶಿಸಿ ಈ ಗಂಡಾಂತರ ತಡೆಯೋಣ” ಎಂದರು.

WhatsApp Image 2026 06 08 at 5.20.54 PM
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿ ಮಾತನಾಡಿದರು.

“ಈ ಸಂಬಂಧ ಜಿಲ್ಲೆಯವರೇ ಆದ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಕನೇರಿ ಶ್ರೀ ಬಸವಕಲ್ಯಾಣ ಪ್ರವೇಶಿಸದಂತೆ ತಡೆಯೊಡ್ಡಬೇಕು ಎಂದು ಮನವಿ ಸಲ್ಲಿಸುವ ಮುಖಾಂತರ ಸರ್ಕಾರದ ಮೇಲೆ ಒತ್ತಡ ಹಾಕೋಣ. ಅದಕ್ಕೂ ಸ್ಪಂದನೆ ಸಿಗದಿದ್ದರೆ ಬಸವಕಲ್ಯಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಸವಾನುಯಾಯಿಗಳು ಸೇರಿ ಬೃಹತ್ ಪ್ರತಿಭಟನೆ ನಡೆಸೋಣ. ಈ ಪ್ರತಿಭಟನೆಯಲ್ಲಿ ಜಿಲ್ಲೆ ಅಲ್ಲದೆ ಅನ್ಯ ಜಿಲ್ಲೆಯ ಬಸವಪರ ಸಂಘಟನೆಗಳ ಮಠಾಧೀಶರು, ಜನಪರ ಚಳವಳಿಯ ಪ್ರಮುಖರು ಪಾಲ್ಗೊಳ್ಳುವಂತೆ ಸಿದ್ಧತೆ ನಡೆಸಬೇಕಿದೆ” ಎಂದು ಸಲಹೆ ನೀಡಿದರು.

ಆಳಂದ ತೋಂಟದಾರ್ಯ ಅನುಭವ ಮಂಟದ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, “ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಹೋರಾಟವೇ ರಾಷ್ಟ್ರೀಯವಾದವಾಗಿದೆ. ಹೀಗಾಗಿ ನಮಗೆ ಹಿಂದೂ, ಹಿಂದುತ್ವ ಬಗ್ಗೆ ಯಾರೇ ಪಾಠ ಕಲಿಸುವ ಅಗತ್ಯವಿಲ್ಲ. ಬಸವಾದಿ ಶಿವಶರಣರ ಹೆಸರಿನಲ್ಲಿ ನಡೆಸುತ್ತಿರುವ ಹಿಂದೂ ಸಮಾವೇಶದಲ್ಲಿ ಒಂದೇ ಒಂದು ವಚನ ಹೇಳದ ಕನೇರಿ ಸ್ವಾಮೀಜಿ ಹಿಂದುತ್ವದ ಹೆಸರಿನಲ್ಲಿ ವಿಷಬೀಜ ಬಿತ್ತುವ ಕೆಲಸದಲ್ಲಿ ತೊಡಗಿದ್ದಾರೆ. ಇದರಿಂದ ಲಿಂಗಾಯತ ಯುವ ಸಮೂಹ ಎಚ್ಚರದಿಂದ ಇರಬೇಕು. ಈ ಸಮಾವೇಶ ಹಿಂದಿನ ಉದ್ದೇಶ ಏನೆಂಬುದು ಅರಿತು ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ” ಎಂದು ಹೇಳಿದರು.

WhatsApp Image 2026 06 08 at 5.21.51 PM
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿದರು.

ಬಸವಕಲ್ಯಾಣದ ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿ ಮಾತನಾಡಿ, “ಬಸವ ತತ್ತ್ವವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು, ನಾಡಿನ ಉದ್ದಾರಕ್ಕಾಗಿ ಅದರ ಮೌಲ್ಯಗಳನ್ನು ಬಿತ್ತಿ ಬೆಳೆಸುತ್ತಿರುವ ಲಿಂಗಾಯತ ಮಠಗಳ ಸ್ವಾಮೀಜಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಪ್ರೀಂ ಕೋರ್ಟ್‌ನಿಂದ ಛೀಮಾರಿಗೆ ಒಳಗಾಗಿರುವ ಕನೇರಿ ಸ್ವಾಮೀಜಿ, ಬಸವ ಚಿಂತಕರು ಹಾಗೂ ಬಸವ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ʼಬಸವ ತಾಲಿಬಾನಿʼ ಎಂಬ ಪದಪ್ರಯೋಗ ಮಾಡಿರುವುದು ತೀವ್ರ ಖಂಡನೀಯ. ನಾವೆಲ್ಲರೂ ಈ ಸಮಾವೇಶವನ್ನು ಒಕ್ಕೊರಲಿನಿಂದ ವಿರೋಧಿಸೋಣ” ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, “ಬಸವ ತಾಲಿಬಾನಿಗಳು ಎಂಬ ಪದಪ್ರಯೋಗ ಮಾಡಿರುವ ಕನೇರಿ ಶ್ರೀಗಳನ್ನು ಬಸವಕಲ್ಯಾಣಕ್ಕೆ ಪ್ರವೇಶಿಸಲು ಬಿಡಬಾರದು. ವಿಶ್ವದ ಎಲ್ಲೆಡೆ ಬಸವತತ್ವ ಬೆಳಗುತ್ತಿರುವ ಈ ಹೊತ್ತಿನಲ್ಲಿ ಬಸವತತ್ವ ಅಪಮಾನಕ್ಕೆ ಒಳಗಾಗುವಾಗ ನಾವೆಲ್ಲರೂ ಜೀವದ ಹಂಗು ತೊರೆದು ರಕ್ಷಣೆಗೆ ಮುಂದಾಗಬೇಕಿದೆ. ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಅಪಮಾನಿಸಿರುವ ಕನೇರಿ ಸ್ವಾಮಿ ದಂಡ ನಮಸ್ಕಾರ ಹಾಕಿ ಬಸವ ಭಕ್ತರಲ್ಲಿ ಕ್ಷಮೆಯಾಚಿಸಬೇಕು. ಕನೇರಿ ಸ್ವಾಮಿ ಪವಿತ್ರವಾದ ಬಸವಕಲ್ಯಾಣದಲ್ಲಿ ಕಾಲಿಡಲು ಯಾವುದೇ ಕಾರಣಕ್ಕೂ ಬಿಡಬಾರದು. ಅದಕ್ಕಾಗಿ ನಾವೆಲ್ಲರೂ ಹೋರಾಟಕ್ಕೆ ಸಿದ್ಧರಾಗೋಣ” ಎಂದು ಹೇಳಿದರು.

WhatsApp Image 2026 06 08 at 5.22.14 PM
ಬಸವಕಲ್ಯಾಣದ ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿ ಮಾತನಾಡಿದರು.

ಬೆಲ್ದಾಳ ಸಿದ್ಧರಾಮ ಶರಣರು, ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ, ಬಸವ ಧರ್ಮ ಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಮಂಟಪದ ಮಾತೆ ಸತ್ಯದೇವಿ, ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ, ಜಾಗತಿಕ ಲಿಂಗಾಯತ ಮಹಾಸಭಾದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಜಿ. ಶೆಟಕಾರ, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಸಾಹಿತಿ ವಿಜಯಲಕ್ಷ್ಮಿ ಗಡ್ಡೆ, ಹೋರಾಟಗಾರ ವಿನಯಕುಮಾರ ಮಾಳಗೆ, ಬಸವಕಲ್ಯಾಣ ರಾಷ್ಟ್ರೀಯ ಬಸವದಳ ತಾಲೂಕಾಧ್ಯಕ್ಷ ರವೀಂದ್ರ ಕೋಳಕೂರ ಸೇರಿ ಮತ್ತಿತರರು ಮಾತನಾಡಿ ಪ್ರತಿಭಟನೆಯ ಕುರಿತು ತಮ್ಮ ಸಲಹೆ ಸೂಚನೆಗಳನ್ನು ತಿಳಿಸಿದರು.

WhatsApp Image 2026 06 08 at 5.22.59 PM
ಬಸವಕಲ್ಯಾಣ ರಾಷ್ಟ್ರೀಯ ಬಸವದಳ ತಾಲೂಕಾಧ್ಯಕ್ಷ ರವೀಂದ್ರ ಕೋಳಕೂರ ಮಾತನಾಡಿದರು.

ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಮಹಾಲಿಂಗ ದೇವರು, ಪ್ರಭುಲಿಂಗ ಸ್ವಾಮೀಜಿ, ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮೀಜಿ, ಮಾತೆ ಲಾವಣ್ಯ, ಅನಿಲ ಮಹಾರಾಜ, ಬಸವಪ್ರಿಯ ಸ್ವಾಮೀಜಿ, ಸಿದ್ದಬಸವ ಸ್ವಾಮೀಜಿ, ಬಸವದೇವರು, ಶಿವಬಸವ ಸ್ವಾಮೀಜಿ, ಲೋಕೇಶ ಗುರೂಜಿ, ಶ್ರೀಶೈಲ ದೇವರು, ಕಲ್ಯಾಣಮ್ಮ ನೇತೃತ್ವ ವಹಿಸಿದ್ದರು.

ಇದನ್ನೂ ಓದಿ : ಪಂಚಮಸಾಲಿ ಪೀಠಗಳ ಗೊಂದಲ-ಭಾಗ 13 | ಮಠ ಪರಂಪರೆಯ ಹಿನ್ನೆಲೆ ಇಲ್ಲದ ಬಸವ ತತ್ವ ಪ್ರಚಾರಕ ಲಿಂಗಾನಂದ ಸ್ವಾಮಿ

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಮುಖಂಡರಾದ ಶಿವರಾಜ ಪಾಟೀಲ, ಜೈರಾಜ ಖಂಡ್ರೆ, ಸಿದ್ದಯ್ಯ ಕಾವಡಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮಿರ್ಚೆ, ಕಾರ್ಯದರ್ಶಿ ಜಯದೇವಿ ಯದಲಾಪುರೆ, ಸಂಘಟನಾ ಕಾರ್ಯದರ್ಶಿ ಸುವರ್ಣಾ ಧನ್ನೂರ, ಬಸವ ಕೇಂದ್ರದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ, ಡಾ. ಬಸವರಾಜ ಬಲ್ಲೂರು, ರಾಷ್ಟ್ರೀಯ ಬಸವ ದಳದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಜುಕುಮಾರ ಪಾಟೀಲ, ನಗರ ಘಟಕದ ಅಧ್ಯಕ್ಷ ವಿವೇಕಾನಂದ ಧನ್ನೂರ, ಕಂಟೆಪ್ಪ ಗಂದಿಗುಡಿ, ವಿಜಯಕುಮಾರ ಪಾಟೀಲ ಯರನಳ್ಳಿ, ರಮೇಶ ಪಾಟೀಲ ಚಿಟ್ಟಾವಾಡಿ, ಗಣೇಶ ಬಿರಾದಾರ, ಮಲ್ಲಿಕಾರ್ಜುನ ಪಂಚಾಕ್ಷರಿ, ಉಮೇಶ ಗಾಯತೊಂಡೆ, ಪ್ರವೀಣ ಕಾಡಾದಿ ಹುಲಸೂರು, ವಿನಯ ಮಾಳಗೆ, ಕಲಬುರಗಿಯ ರಾಜಶೇಖರ ಎನಕಂಚಿ, ಯೋಗೇಂದ್ರ ಯದಲಾಪುರೆ, ರವಿ ಪಾಪಡೆ, ಓಂಪ್ರಕಾಶ್ ರೊಟ್ಟೆ, ರಾಜಕುಮಾರ ಕಮಠಾಣೆ, ಜಗದೀಶ್ವರ ಬಿರಾದರ್‌, ವಿವೇಕ್ ಪಟ್ನೆ, ಶಿವಶರಣಪ್ಪ ಹುಗ್ಗಿ ಪಾಟೀಲ, ಯೋಗೇಶ ಶ್ರೀಗಿರೆ, ಅರವಿಂದ ಕಾರಬಾರಿ, ಗುರುನಾಥ ಬಿರಾದಾರ, ಚಂದ್ರಕಾಂತ ಹಿಪ್ಪಳಗಾಂವ, ಬಸವರಾಜ ಮರೆ, ಮಹೇಶ ಗೋರನಾಳಕರ್‌, ಬಸವರಾಜ ಜನವಾಡೆ, ವೀರಶೆಟ್ಟಿ ಪಾಟೀಲ, ಶಿವಾನಂದ ಮಹಾದೇವ, ಸುಶೀಲಕುಮಾರ ಜಿವಣಿ ಸೇರಿದಂತೆ ಜಿಲ್ಲೆಯ ಎಲ್ಲ ಪ್ರಮುಖ ಮಠಾಧೀಶರು ಹಾಗೂ ಬಸವಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಎಲ್ಲ ಪೂಜ್ಯರು, ಬಸವಾನುಯಾಯಿಗಳು ಕನೇರಿ ಸ್ವಾಮೀಜಿ ವಿರುದ್ಧ ಪ್ರತಿರೋಧ ವ್ಯಕ್ಯಪಡಿಸಿದರು.


eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಂಧ್ರಪ್ರದೇಶ | ರಸ್ತೆ ಕಾಮಗಾರಿ ವೇಳೆ ಜೆಲಾಟಿನ್ ಸ್ಫೋಟ; ಶಾಲಾ ಶಿಕ್ಷಕಿ ಸೇರಿದಂತೆ ಹಲವರ ಸಾವು

ರಸ್ತೆ ಕಾಮಗಾರಿಗಾಗಿ ಬಳಸಲಾಗುತ್ತಿದ್ದ ಜೆಲಾಟಿನ್ ಸ್ಟಿಕ್‌ಗಳು ಅನಿರೀಕ್ಷಿತವಾಗಿ ಸ್ಫೋಟಗೊಂಡು, ಶಾಲಾ ಶಿಕ್ಷಕಿಯೊಬ್ಬರು...

ಬಸವಕಲ್ಯಾಣ ಅನುಭವ ಮಂಟಪ ನಿರ್ಮಾಣ ಕಾರ್ಯ ವರ್ಷದೊಳಗೆ ಪೂರ್ಣ : ಸಚಿವ ಈಶ್ವರ ಖಂಡ್ರೆ

ವಿಶ್ವಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳನ್ನು ನೀಡಿದ ಬಸವಣ್ಣನವರು ಮನುಕುಲದ...

ಮಕ್ಕಳಿಗೆ ಇಂಟರ್ನೆಟ್‌ ನಿರ್ಬಂಧ | ಸ್ವಾತಂತ್ರ್ಯಕ್ಕೆ ಕಡಿವಾಣವಲ್ಲ, ಡಿಜಿಟಲ್ ಜಗತ್ತಿಗೆ ಹೊಣೆಗಾರಿಕೆಯ ಚೌಕಟ್ಟು ಅಗತ್ಯ

ಇಂಟರ್ನೆಟ್ ಪ್ರವೇಶವನ್ನು ಕೇವಲ ತಾಂತ್ರಿಕ ಸೌಲಭ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಇದೇ ಡಿಜಿಟಲ್...

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...