ಕರ್ನಾಟಕದಲ್ಲಿ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಸಂಚಿವ ಸಂಪುಟದಲ್ಲಿ ಅಂಗೀಕರಿಸಿದ್ದ ಮಸೂದೆಯನ್ನು ಸದ್ಯ, ಸದನದಲ್ಲಿ ಮಂಡಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಈ ನಡುವೆ, ಉದ್ಯೋಗ ಮೀಸಲಾತಿಗೆ ಖಾಸಗಿ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ.
ಉದ್ಯೋಗ ಮೀಸಲಾತಿಯನ್ನು ಖಂಡಿಸುವ ಭರದಲ್ಲಿ ಫೋನ್‌ಪೇ ಸಿಇಒ ಸಮೀರ್ ನಿಗಮ್, “ನಾವು ಯಾವುದೇ ರಾಜ್ಯದಲ್ಲಿ 15 ವರ್ಷಕ್ಕಿಂತ ಹೆಚ್ಚು ವಾಸಿಸಿಲ್ಲ. ನಾನು ಕಂಪನಿಗಳನ್ನು ನಿರ್ಮಿಸಿದ್ದು, ಭಾರತದಾದ್ಯಂತ 25000+ ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ! ನನ್ನ ಮಕ್ಕಳು ತಮ್ಮ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?” ಎಂದು ಹೇಳುವ ಮೂಲಕ ವಿವಾದ ಸೃಷ್ಠಿಸಿದ್ದಾರೆ.
ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಿಗರು, ಸಾಮಾಜಿಕ ಜಾಲತಾಣದಲ್ಲಿ ‘ಬಾಯ್‌ಕಾಟ್ ಫೋನ್‌ಪೇ’ ಅಭಿಯಾನ ನಡೆಸುತ್ತಿದ್ದಾರೆ. ಅಲ್ಲದೆ, ಕಾಯ್ದೆ ಜಾರಿಗೆ ತರುವುದಾಗಿ ಹೇಳಿ, ಮಸೂದೆಯನ್ನು ತಡೆಹಿಡಿದಿರುವ ಸರ್ಕಾರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಣಧೀರ ಪಡೆಯ ಮುಖಂಡ ಹರೀಶ್ ಭೈರಪ್ಪ ಅವರು, “ಕನ್ನಡಿಗರ ಅನ್ನ ತಿಂದು ದ್ರೋಹ ಬಗೆಯುವ ಈ ಫೋನ್ ಪೇ ಮಾಲೀಕನಿಗೆ ಸರಿಯಾಗಿ ಬುದ್ಧಿ ಕಲಿಸೋಣ. ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕೊಡುವುದನ್ನು ವಿರೋಧಿಸುತ್ತಾನಂತೆ , ಇವನ App ಅನ್ನು ನನ್ನ ಜೀವಮಾನದಲ್ಲಿ ಉಪಯೋಗಿಸುವುದಿಲ್ಲ. ಕರ್ನಾಟಕದಿಂದ ಇವನನ್ನು ಓಡಿಸುವ ಕೆಲಸ ಮೊದಲು ಮಾಡೋಣ” ಎಂದು ಟ್ವೀಟ್ ಮಾಡಿದ್ದಾರೆ.
#UninstallPhonepay
ಬಡ್ಡಿ ಮಗ ಇಲ್ಲಿನ ಕನ್ನಡಿಗರ ಅನ್ನ ತಿಂದು ದ್ರೋಹ ಬಗೆಯುವ ಈ ಫೋನ್ ಪೇ ಮಾಲೀಕನಿಗೆ ಸರಿಯಾಗಿ ಬುದ್ಧಿ ಕಲಿಸೋಣ.ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕೊಡುವುದನ್ನು ವಿರೋಧಿಸುತ್ತಾನಂತೆ , ಇವನ App ಅನ್ನು ನನ್ನ ಜೀವಮಾನದಲ್ಲಿ ಉಪಯೋಗಿಸುವುದಿಲ್ಲ .
ಕರ್ನಾಟಕದಿಂದ ಇವನನ್ನು ಓಡಿಸುವ ಕೆಲಸ ಮೊದಲು ಮಾಡೋಣ. pic.twitter.com/0fKj8dWeVv
— ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) July 19, 2024
ಉದಯ್ ಕುಮಾರ್ ಆರ್ ಎಂಬವರು, “ಮೊದಲು ಫೋನ್ ಪೇ ಅಪ್ಲಿಕೇಷನ್ ಅಲ್ಲಿ ಅಕೌಂಟ್ ಡಿ ಆಕ್ಟಿವೇಟ್ ಮಾಡಿ ಆಮೇಲೆ ಪ್ಲೇ ಸ್ಟೋರ್ ಅಲ್ಲಿ 1* ರೇಟಿಂಗ್ ಕೊಟ್ಟು ಅನ್ ಇನ್ಸ್ಟಾಲ್ ಮಾಡಿ” ಎಂದು ಫೇನ್‌ಪೇ ವಿರುದ್ಧ ಕಿಡಿಕಾರಿದ್ದಾರೆ.
#Karnataka #Bengaluru ಬೇಕು ಆದರೆ #Kannada ಬೇಡ್ವಾ? @PhonePe ಈ ಮೊಂಡಾಟ , ಅಸಡ್ಡೆ ಜಾಸ್ತಿ ದಿನ ಉಳಿಯಲಿಲ್ಲ….
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ 💛♥️ #UninstallPhonePay
Kannadigaru fighting in Karnataka against companies ignorance towards them😌 . Learn to respect the land where you are. pic.twitter.com/WHUjcbJhw4— Tweet Karnataka (@TweetKarnataka) July 19, 2024