ದೆಹಲಿ ಸಿಎಂ ರೇಖಾ ಗುಪ್ತಾಗೆ ನೀಡಿದ್ದ ಝಡ್‌ ಕೆಟಗರಿ ಸಿಆರ್‌ಪಿಎಫ್‌ ಭದ್ರತೆ ವಾಪಸ್‌ ಪಡೆದ ಕೇಂದ್ರ ಸರ್ಕಾರ

Date:

Advertisements

ರಾಷ್ಟ್ರ ರಾಜಧಾನಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ನಡೆದ ದಾಳಿಯ ನಂತರ ಅವರಿಗೆ ನೀಡಲಾಗಿದ್ದ ಝಡ್‌ ಕೆಟಗರಿ ಸಿಆರ್‌ಪಿಎಫ್‌ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.

ಅವರ ಭದ್ರತೆಯನ್ನು ಮತ್ತೆ ದೆಹಲಿ ಪೊಲೀಸರಿಗೆ ವಹಿಸಲಾಗಿದೆ. 51 ವರ್ಷದ ಗುಪ್ತಾ ಅವರ ಮೇಲೆ ಆಗಸ್ಟ್‌ 20 ರಂದು ಬೆಳಿಗ್ಗೆ ಸಿವಿಲ್‌ ಲೈನ್ಸ್‌ ಪ್ರದೇಶದ ಅವರ ಕ್ಯಾಂಪ್‌ ಕಚೇರಿಯಲ್ಲಿ ನಡೆದ ಜನ ಸಂವಾದ ಕಾರ್ಯಕ್ರಮದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದು, ಈ ಹಲ್ಲೆಯನ್ನು ಅವರನ್ನು ಕೊಲ್ಲಲು ಯೋಜಿತ ಪಿತೂರಿಯ ಭಾಗ ಎಂದು ಅವರ ಕಚೇರಿ ಹೇಳಿತ್ತು.

ಕೊಲೆ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಗುಜರಾತ್‌ ನ ರಾಜ್‌ಕೋಟ್ ನಿವಾಸಿ ಸಕರಿಯಾ ರಾಜೇಶ್‌ಭಾಯಿ ಖಿಮ್ಮಿಭಾಯಿ (41) ಎಂಬುವವನನ್ನು ಬಂಧಿಸಿ, ಎಫ್‌ಐಆರ್ ದಾಖಲಿಸಿದ್ದರು.

Advertisements

ಒಂದು ದಿನದ ನಂತರ, ಕೇಂದ್ರ ಗೃಹ ಸಚಿವಾಲಯವು ಕೇಂದ್ರದ ಝಡ್‌ ಕೆಟಗರಿ ರಕ್ಷಣಾ ಪ್ರೋಟೋಕಾಲ್‌ನ ಭಾಗವಾಗಿ ಅವರಿಗೆ ತನ್ನ ರಕ್ಷಣೆಯನ್ನು ವಿಸ್ತರಿಸಲು ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ವಿಐಪಿ ಭದ್ರತಾ ವಿಭಾಗವನ್ನು ಕೇಳಿದೆ.ಸಿಆರ್‌ಪಿಎಫ್‌ ರಕ್ಷಣೆಯನ್ನು ಹಿಂತೆಗೆದುಕೊಳ್ಳಲಾಗಿದೆ ಮತ್ತು ದೆಹಲಿ ಪೊಲೀಸರು ಈಗ ದೆಹಲಿ ಸಿಎಂಗೆ ಭದ್ರತೆಯನ್ನು ಒದಗಿಸುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಎಂ ಸ್ಥಾನ ಸಿಗುತ್ತೆ ಎಂದರೆ ನಾನು ಕೂಡ ಆರ್‌ಎಸ್‌ಎಸ್‌ ಗೀತೆ ಹಾಡುತ್ತೇನೆ: ಸಚಿವ ಸತೀಶ್ ಜಾರಕಿಹೊಳಿ

ಆರ್‌ಎಸ್‌ಎಸ್‌ ಗೀತೆ ಹಾಡಿದರೆ ಮುಖ್ಯಮಂತ್ರಿ ಸ್ಥಾನ ಸಿಗುತ್ತೆ ಎಂದರೆ ನಾನು, ಶಾಸಕ...

ರಾಜ್ಯದಲ್ಲಿರುವ ಶೇ.85ರಷ್ಟು ವಲಸೆ ಕಾರ್ಮಿಕರು ಈ ಆರು ರಾಜ್ಯಗಳಿಗೆ ಸೇರಿದವರು

ಇಡೀ ದೇಶದಲ್ಲೇ ಸುಮಾರು ಒಂದು ಲಕ್ಷ ನೋಂದಾಯಿತ ವಲಸೆ ಕಾರ್ಮಿಕರಿಗೆ ನೆಲೆಯಾಗಿರುವ...

‘ಅವರು RSS ಗೀತೆ ಹಾಡಬಹುದು, ಶಾ ಜೊತೆ ಕೂರಬಹುದು’; ಡಿಕೆಶಿ ವಿರುದ್ಧ ರಾಜಣ್ಣ ವಾಗ್ದಾಳಿ

“ಅವರು (ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್) ಆರ್‌ಎಸ್‌ಎಸ್‌ ಗೀತೆ ಹಾಡಬಹುದು, ಖಾಸಗಿ ಕಾರ್ಯಕ್ರಮದಲ್ಲಿ ಬಿಜೆಪಿ...

ಬಾನು ಮುಷ್ತಾಕ್‌ ದಸರಾ ಉದ್ಘಾಟಿಸುವುದು ಅವರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧ: ಯತ್ನಾಳ್‌

ನಾನು ವೈಯಕ್ತಿಕವಾಗಿ ಬಾನು ಮುಷ್ತಾಕ್‌ ಅವರನ್ನು ಲೇಖಕಿ ಹಾಗೂ ಹೋರಾಟಗಾರ್ತಿಯಾಗಿ ಗೌರವಿಸುತ್ತೇನೆ....

Download Eedina App Android / iOS

X