ಚಿತ್ರದುರ್ಗ: ಶೋಷಿತರ ಜಾಗೃತಿ ಸಮಾವೇಶಕ್ಕೆ ಕ್ಷಣಗಣನೆ, ಬಿಗಿ ಬಂದೋಬಸ್ತ್‌

Date:

Advertisements

ಚಿತ್ರದುರ್ಗ: ಇಲ್ಲಿನ ಬಸವಮೂರ್ತಿ ಮಾದರ ಚನ್ನಯ್ಯ ಪೀಠದ ಪಕ್ಕದ ಮೈದಾನದಲ್ಲಿ ಇಂದು (ಜನವರಿ 28) ನಡೆಯಲಿರುವ ’ಶೋಷಿತರ ಜಾಗೃತಿ ಸಮಾವೇಶ’ಕ್ಕಾಗಿ ವೇದಿಕೆ ಸಜ್ಜಾಗಿದೆ.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿರುವ ಈ ಬೃಹತ್‌ ಸಮಾವೇಶದಲ್ಲಿ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ.

ಕಾಂತರಾಜ ಆಯೋಗ ವರದಿಯನ್ನು ಬಿಡುಗಡೆ ಮಾಡಿ ಜಾರಿಗೆ ತರಬೇಕು, ಇಡಬ್ಲ್ಯುಎಸ್‌ ಮೀಸಲಾತಿಯನ್ನು ರದ್ದುಗೊಳಿಸಬೇಕು, ಕೇಂದ್ರ ಸರ್ಕಾರವು ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸಬೇಕು ಸೇರಿದಂತೆ ಹಲವು ಮಹತ್ವದ ಆಗ್ರಹಗಳನ್ನು ಈ ಸಮಾವೇಶ ಮಾಡುತ್ತಿದೆ.

Advertisements

ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ ಮತ್ತು ಸ್ವಾಭಿಮಾನದ ಸಂರಕ್ಷಣೆಗಾಗಿ ಈ ಜಾಗೃತಿ ಸಮಾವೇಶ ನಡೆಯುತ್ತಿದ್ದು, ಶನಿವಾರ ರಾತ್ರಿಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ಮೂಲಗಳ ಪ್ರಕಾರ, ಇಬ್ಬರು ಐಜಿಗಳು, ಎಸ್‌ಪಿ- ಎಎಸ್‌ಪಿ ಸೇರಿ ಎಂಟು ಮಂದಿ, 72 ಮಂದಿ ಇನ್ಸ್‌ಪೆಕ್ಟರ್‌, 189 ಸಬ್‌ಇನ್ಸ್‌ಪೆಕ್ಟರ್‌, 387 ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌‌, ಕಾನ್ಸ್‌ಸ್ಟೆಬಲ್‌, ಹೆಡ್‌ ಕಾನ್ಸ್‌ಸ್ಟೆಬಲ್ ಸೇರಿ 3,000 ಮಂದಿ, 600 ಮಂದಿ ಹೋಮ್‌ ಗಾರ್ಡ್ಸ್,  10 ಕೆಎಸ್‌ಆರ್‌ಪಿ  ನಿಯೋಜನೆ ಮಾಡಲಾಗಿದೆ.

ಶನಿವಾರ ಸಂಜೆ ಸ್ಥಳ ವೀಕ್ಷಣೆಗೆ ಬಂದಿದ್ದ ವೇಳೆ ‘ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌, “ನಮ್ಮ ಮುಖ್ಯಮಂತ್ರಿಯವರು, ಉಪಮುಖ್ಯಮಂತ್ರಿಯವರು ಆಗಮಿಸಲಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದೆ. ಕಾಂತರಾಜ ಆಯೋಗದ ವರದಿ ಸರ್ಕಾರದ ಮುಂದೆ ಇದೆ. ಎಲ್ಲ ಸಮಾಜಗಳು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿವೆ. ಶೋಷಿತ ಸಮುದಾಯಗಳು ವರದಿ ಜಾರಿಗಾಗಿ ಆಗ್ರಹಿಸುತ್ತಿವೆ. ಈ ಕುರಿತು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ತೀರ್ಮಾನ ಮಾಡಲಿದ್ದಾರೆ” ಎಂದು ತಿಳಿಸಿದರು.

d sudhakar
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ

ಸ್ಥಳಕ್ಕೆ ಆಗಮಿಸಿದ್ದ ಮಾಜಿ ಸಚಿವರಾದ ಎಚ್.ಆಂಜನೇಯ ಅವರು ‘ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿ, “ನೂರು ಎಕರೆ ಪ್ರದೇಶದಲ್ಲಿ ಹಾಕಿರುವ ಪೆಂಡಲ್‌ನಲ್ಲಿ ಲಕ್ಷಾಂತರ ಜನರು ಬಂದು ಸಮಾವೇಶಗೊಳ್ಳಲಿದ್ದಾರೆ. ಎಲ್ಲಾ ಜಾತಿಗಳಲ್ಲೂ ಶೋಷಿತರಿದ್ದಾರೆ. ನಾನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ  ಸಚಿವನಾಗಿದ್ದ ಸಮಯದಲ್ಲಿ 2015ರಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಲಾಯಿತು. ಅದಕ್ಕೆ ಜಾತಿ ಗಣತಿ ಎಂಬ ಹಣೆಪಟ್ಟಿ ಕೂಡ ಹಚ್ಚಿದ್ದಾರೆ. ಮನೆಮನೆಗೂ ಹೋಗಿ ಎಲ್ಲ ಮಾಹಿತಿ ಪಡೆದಿದ್ದೇವೆ. ಅತ್ಯುತ್ತಮ ವರದಿ ಅದಾಗಿದೆ. ಇಡೀ ದೇಶಕ್ಕೆ ಮಾದರಿಯಾಗಿದೆ. ರಾಜ್ಯದಲ್ಲಿ ಎಂಟುನೂರು ಜಾತಿಗಳಿವೆ. ಎಷ್ಟೋ ಜಾತಿಗಳು ಪಟ್ಟಿಯಲ್ಲೇ ಇರಲಿಲ್ಲ. ಕಾಂತರಾಜ ಆಯೋಗದ ವರದಿ ಅಂತಹ ಜಾತಿಗಳನ್ನು ಪಟ್ಟಿ ಮಾಡಿದೆ” ಎಂದು ಮಾಹಿತಿ ನೀಡಿದರು.

anjaneya 2
ಮಾಜಿ ಸಚಿವ ಎಚ್.ಆಂಜನೇಯ

“ಎಲ್ಲರ ಆರ್ಥಿಕ, ಶೈಕ್ಷಣಿಕ ಸ್ಥಿತಿಗಳಳನ್ನು ತಿಳಿಯಸಲಾಗಿದೆ. ಈ ರಾಜ್ಯದಲ್ಲಿ ಬಡವರು ಎಷ್ಟು ಮಂದಿ ಇದ್ದಾರೆ, ಎಷ್ಟು ಜನರಿಗೆ ಭೂಮಿ ಇಲ್ಲ, ಎಷ್ಟು ಜನರಿಗೆ ಮನೆ ಇಲ್ಲ ಎಂಬುದೆಲ್ಲ, ಉಳ್ಳವರು ಇದ್ದಾರೆ ಎಂಬುದನ್ನು ನಿಖರವಾದ ಮಾಹಿತಿಯು ಸಿಗುತ್ತದೆ. ಈ ವರದಿಯನ್ನು ಕೆಲವರು ವಿರೋಧ ಮಾಡುತ್ತಿದ್ದಾರೆ. ವಿರೋಧ ಮಾಡುವ ಅಗತ್ಯವಿಲ್ಲ. ವರದಿ ಹೊರಗೆ ಬಂದ ಮೇಲೆ ಬೇಕಾದರೆ ಲೋಷವಿದ್ದರೆ ಎತ್ತಿ ಹೇಳಿ, ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

‘ಒಳಮೀಸಲಾತಿ’ ಕುರಿತು ಪ್ರತಿಕ್ರಿಯಿಸಿದ ಅವರು, “ಮಾದಿಗರು ಅಸ್ಪೃಶ್ಯರಲ್ಲೇ ಅಸ್ಪೃಶ್ಯರು. ಪ್ರತ್ಯೇಕವಾದ ಮೀಸಲಾತಿ ಕೊಡಿ ಎಂದು ದಶಕದಿಂದ ಅಗ್ರಹ ಮಾಡುತ್ತಿದ್ದಾರೆ. ಎಲ್ಲರನ್ನೂ ಮನವೊಲಿಸಿ ಒಳಮೀಸಲಾತಿಗೆ ಒಪ್ಪಿಸಿ ಸಂವಿಧಾನಿಕ ತಿದ್ದುಪಡಿ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ. ಈಗ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕಿದೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X