ಇದೇ ಏ.26ರಂದು ದಾವಣಗೆರೆಯಲ್ಲಿ ಎದ್ದೇಳು ಕರ್ನಾಟಕದ ವತಿಯಿಂದ ನಡೆಯುತ್ತಿರುವ ಸಂವಿಧಾನ ಸಂರಕ್ಷಕರ ಸಮಾವೇಶದಲ್ಲಿ ರಾಜ್ಯದ 120ಕ್ಕೂ ಹೆಚ್ಚು ಸಾಮಾಜಿಕ ಚಳವಳಿಗಳು, ವಿವಿಧ ಜಾತಿ, ಸಮುದಾಯಗಳ ಸಂಘಟನೆಗಳು ಭಾಗಿಯಾಗಲಿವೆ.
ಸಂವಿಧಾನ ಸಂರಕ್ಷಕರ ಮಹಾಸಮಾವೇಶವನ್ನು ಖ್ಯಾತ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಉದ್ಘಾಟಿಸಲಿದ್ದಾರೆ. ಸರಕಾರದ ಯೋಜನಾ ಆಯೋಗದ ಮುಖ್ಯಸ್ಥರಾದ ಬಿ.ಆರ್.ಪಾಟೀಲ್, ಚಿತ್ರ ನಟ ಪ್ರಕಾಶ್ ರಾಜ್, ಗುಜರಾತಿನ ಶಾಸಕ ಹಾಗೂ ಹೋರಾಟಗಾರ ಜಿಗ್ನೇಶ್ ಮೇವಾನಿ, ಪ್ರಖರ ಚಿಂತಕರಾದ ಪರಕಾಲ ಪ್ರಭಾಕರ್, ಮುಸ್ಲಿಂ ಸಮುದಾಯದ ರಾಷ್ಟ್ರೀಯ ನಾಯಕರಾದ ಮೊಹಮ್ಮದ್ ಸಲೀಂ, ಸಂಯುಕ್ತ ಕಿಸಾನ್ ಮೋರ್ಚಾದ ಡಾ.ಸುನೀಲಮ್, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ.ರಾಮಚಂದ್ರಪ್ಪ, ರೈತ ಚಳವಳಿಯ ಮುಂದಾಳುಗಳಾದ ಹೆಚ್.ಆರ್.ಬಸವರಾಜಪ್ಪ, ಬಡಗಲಪುರ ನಾಗೇಂದ್ರ, ದಲಿತ ಚಳವಳಿಯ ಹಿರಿಯ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಎನ್.ವೆಂಕಟೇಶ್, ಮಾವಳ್ಳಿ ಶಂಕರ್, ವಿ.ನಾಗರಾಜ್, ಕ್ರೈಸ್ತ ಸಮುದಾಯದ ಮುಖಂಡರಾದ ಫಾ.ವೀರೇಸ್ ಮೋರೆಸ್, ಫಾ.ಜೆರಾಲ್ಡ್, ಮಾನವ ಬಂಧುತ್ವ ವೇದಿಕೆಯ ಎ.ಬಿ.ರಾಮಚಂದ್ರಪ್ಪ, ರವಿ ನಾಯ್ಕರ್, ಜನಪರ ಚಿಂತಕ-ಹೋರಾಟಗಾರ ಪಾಟೀಲ್ ಇನ್ನು ಮುಂತಾದ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ
ದೇಶದ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಅನೇಕ ಗಣ್ಯ ಮಹನೀಯರು ಈ ಕಾರ್ಯಕ್ರಮದಲ್ಲಿ ಸಂವಿಧಾನ ಸಂರಕ್ಷಕರು ರಾಜ್ಯವನ್ನು, ದೇಶವನ್ನು ಕಟ್ಟುವ ಸಂಕಲ್ಪವನ್ನು ಮಾಡಲಿದ್ದಾರೆ. ದಾವಣಗೆರೆಯ ಕಾರ್ಯಕ್ರಮಕ್ಕೆ ಜಾತಿ, ಧರ್ಮಗಳ ಬೇಧವಿಲ್ಲದೆ ರಾಜ್ಯ ಮತ್ತು ದೇಶದ ಬೇರೆ ಬೇರೆ ಕಡೆಗಳಿಂದ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಸಂವಿಧಾನದ ಕುರಿತು ಚಿಂತನೆಯನ್ನು ಮಾಡಲಿಕ್ಕಿದ್ದಾರೆ. ಸಂವಿಧಾನದ ಕುರಿತು ಅರಿವನ್ನು ಮೂಡಿಸಲಿಕ್ಕಿದ್ದಾರೆ. ಸಂವಿಧಾನ ರಕ್ಷಿಸುವ ಕುರಿತು ವಿಚಾರ ವಿನಿಮಯ ನಡೆಯಲಿದೆ.
ಈ ಪ್ರಯುಕ್ತ ಏ.14ರಿಂದ ಪ್ರಾರಂಭವಾಗಿರುವ ದೇಶಪ್ರೇಮಿ ಯುವಾಂದೋಲನ ಬೈಕ್ ಜಾಥಾ ಕೊನೆ ದಿನವಾದ ನಾಳೆ
(ಏ.25) ದಾವಣಗೆರೆ ಪ್ರವೇಶಿಸಲಿದ್ದು, ಅಲ್ಲಿನ ಯುವಕ-ಯುವತಿಯರು ಅದ್ದೂರಿ ಸ್ವಾಗತ ಕೊರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗದಿಂದ ಸುಮಾರು 10,000ಕ್ಕೂ ಹೆಚ್ಚು ಸಂವಿಧಾನ ಸಂರಕ್ಷಕ ಹೋರಾಟಗಾರರು ಭಾಗವಹಿಸಲಿದ್ದಾರೆ. ಈ ಸಮಾವೇಶದ ಕುರಿತು ಜನರಿಗೆ ಮಾಹಿತಿ ಮತ್ತು ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಇದೇ ಏ.14ರಿಂದ ಬೈಕ್ ಯಾನವು ಅಂಬೇಡ್ಕರ್ ಭೇಟಿ ನೀಡಿದ ಸ್ಥಳವಾದ ಗುಲ್ಬರ್ಗ ಜಿಲ್ಲೆಯ ವಾಡಿಯಿಂದ ಪ್ರಾರಂಭವಾಗಿದ್ದು ಅದೀಗ ಅದು ರಾಜ್ಯದ ಸುಮಾರು 20 ಜಿಲ್ಲೆಗಳ ಮೂಲಕ ಹಾದು, ಸರಿ ಸುಮಾರು 2000 ಕಿ.ಮೀ. ಕ್ರಮಿಸಿ ನಾಳೆ ದಾವಣಗೆರೆಗೆ ಆಗಮಿಸಲಿದೆ.
ಸಮಾವೇಶ ನಡೆಯುವ ಸ್ಥಳ : ಬೀರಲಿಂಗೇಶ್ವರ ದೇವಸ್ಥಾನದ ಆವರಣ, ಹೈಸ್ಕೂಲ್ ಫೀಲ್ಡ್ , ದಾವಣಗೆರೆ. ಸಮಯ: ಏ.26 ಬೆಳಿಗ್ಗೆ 11.