ಕರ್ನಾಟಕದಲ್ಲಿ ಕಾಂಗ್ರೆಸ್‌ ಆಡಳಿತ ಆಘಾತ ತಂದಿದೆ: ತೀಸ್ತಾ ಸೆಟಲ್ವಾಡ್

Date:

ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಆಳ್ವಿಕೆ ಬಗ್ಗೆ ನಮಗೆ ಅಘಾತ-ಅಚ್ಚರಿಯಾಗುತ್ತಿದೆ. ಇಲ್ಲಿ ಜಾತ್ಯತೀತ ಸರ್ಕಾರ ಇದೆ ಎಂದು ನಾವು ಅಂದುಕೊಂಡಿದ್ದೆವು. ಆದರೆ, ಇಲ್ಲಿ ಪ್ಯಾಲೆಸ್ತೀನ್ ಪರ ಹೋರಾಟಕ್ಕೆ ಅವಕಾಶ ನೀಡುತ್ತಿಲ್ಲ. ದ್ವೇಷ ಭಾಷಣಗಳನ್ನು ತಡೆಯಲು, ಅಲ್ಪಸಂಖ್ಯಾತರ ಪರ ಕ್ರಮಗಳನ್ನು ತೆಗೆದುಕೊಳ್ಳಲು ಈ ಸರ್ಕಾರ ಮುಂದಾಗುತ್ತಿಲ್ಲ” ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹೇಳಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ದಿ. ಸ್ವಾತಂತ್ರ್ಯ ಸೇನಾನಿ ಎಚ್‌.ಎಸ್‌ ದೊರೆಸ್ವಾಮಿ ಅವರಿಗೆ ಕರ್ನಾಟಕದ ಗೌರವಾರ್ಪಣೆ ಕಾರ್ಯದಲ್ಲಿ ಅವರು ಮಾತನಾಡಿದರು. “ಸ್ವಾತಂತ್ರ್ಯ ಬಂದಾಗ ಎಚ್‌.ಎಸ್‌. ದೊರೆಸ್ವಾಮಿ ಅವರಿಗೆ 25 ವರ್ಷ ವಯಸ್ಸು. ಸ್ವಾತಂತ್ರ್ಯ ನಂತರವೂ ನೂರು ವರ್ಷ ವಯಸ್ಸನ್ನೂ ಪೂರೈಸಿದಾಗಲೂ ಅವರು ಹೋರಾಡುತ್ತಲೇ ಜೀವಿಸಿದರು. ಅವರು ಗಾಂಧಿವಾದಿಯೂ ಆಗಿದ್ದರು, ಕಮ್ಯುನಿಸ್ಟರೂ ಆಗಿದ್ದರು” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

“ದೊರೆಸ್ವಾಮಿ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ತೀವ್ರ ಸ್ವರೂಪದ ಹೋರಾಟಗಳನ್ನೂ ಮಾಡಿದ್ದರು. ಬಾಂಬುಗಳನ್ನೂ ತಯಾರಿಸುತ್ತಿದ್ದರು. ಅವುಗಳು ಯಾರನ್ನೂ ಕೊಲ್ಲಲು ಅಲ್ಲ. ಬ್ರಿಟಿಷರ ದಾಖಲೆಗಳನ್ನು ನಾಶ ಮಾಡಲು. ಇದಕ್ಕಾಗಿ, ಸೆರೆವಾಸವನ್ನೂ ಅನುಭವಿಸಿದರು” ಎಂದು ತಿಳಿಸಿದ್ದಾರೆ.

 “ದೊರೆಸ್ವಾಮಿ ಅವರು ತಮ್ಮ ಇಳಿವಯಸ್ಸಿನಲ್ಲೂ ಕರ್ನಾಟಕದಲ್ಲಿ ನಡೆದ ಭೂ ವಂಚಿತರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಕನಿಷ್ಟ ಒಂದು ಲಕ್ಷ ಹೆಕ್ಟೇರ್‌ ಭೂಮಿ ಬಡವರಿಗೆ ಹಂಚಿಕೆಯಾಗಬೇಕು ಎಂಬುದು ಅವರ ಆಗ್ರಹವಾಗಿತ್ತು. ಸರ್ಕಾರಿ ಜಾಗವು ಜನರ ಜಾಗ ಎಂಬ ನಿಲುವು ಅವರದಾಗಿತ್ತು” ಎಂದು ತೀಸ್ತಾ ತಿಳಿಸಿದ್ದಾರೆ.

“ಎಸ್‌.ಎಸ್‌ ದೊರೆಸ್ವಾಮಿ ಅವರ ಸ್ಮರಣೆಯಲ್ಲಿ ಸ್ಮಾರಕ ಭವನ ಆಗಬೇಕು. ಅದು ಎಲ್ಲ ಪ್ರಜಾತಾಂತ್ರಿಕ ಚಟುವಟಿಕೆಗಳ ಕೇಂದ್ರವಾಗಿರಬೇಕು” ಎಂದು ಒತ್ತಾಯಿಸಿದ್ದಾರೆ.

“ಸಾಮಾಜಿಕ ಕಾರ್ಯಕರ್ತರಾಗಿ ನಾವಿಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಾಗರಿಕ ಸಮಾಜ ಎಂಬ ಪದವನ್ನು ನಾನು ಬಳಸುವುದಿಲ್ಲ. ಆದರೆ, ಈ ಸಮಾಜ ಕರ್ನಾಟಕದಲ್ಲಿ ಅದ್ಭುತ ರೀತಿಯಲ್ಲಿ ಕೆಲಸ ಮಾಡುತ್ತಾ ಬಂದಿದೆ. ಬಾಬಾ ಬುಡನ್‌ ಗಿರಿ, ಹಿಜಾಬ್‌, ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಸೇರಿದಂತೆ ಹಲವಾರು ವಿಷಯದಲ್ಲಿ ಇಲ್ಲಿನ ಸಮಾಜ ದನಿ ಎತ್ತುತ್ತಾ ಬಂದಿದೆ. ಈ ಸಮಾಜವು ಜನರ ಹಕ್ಕುಗಳಿಗಾಗಿಯೂ ದನಿ ಎತ್ತುವ ಅಗತ್ಯವಿದೆ” ಎಂದು ಹೇಳಿದ್ದಾರೆ.

 “ಪ್ರಸ್ತುತ ಕಾಂಗ್ರೆಸ್ಸಿನ ಆಳ್ವಿಕೆ ಬಗ್ಗೆ ನಮಗೆ ಅಚ್ಚರಿಯಾಗುತ್ತಿದೆ. ಇಲ್ಲಿ ಜಾತ್ಯತೀತ ಸರ್ಕಾರ ಇದೆ ಎಂದು ನಾವು ಅಂದುಕೊಂಡಿದ್ದೆವು. ಆದರೆ, ಸರ್ಕಾರವು ದಲಿತರಿಗೆ ಮೀಸಲಾದ ಹಣವನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸುತ್ತಿದೆ.  ಇಲ್ಲಿ ಪ್ಯಾಲೆಸ್ತೀನ್ ಪರ ಹೋರಾಟಕ್ಕೆ ಅವಕಾಶ ನೀಡುತ್ತಿಲ್ಲ. ದ್ವೇಷ ಭಾಷಣಗಳನ್ನು ತಡೆಯಲು, ಅಲ್ಪಸಂಖ್ಯಾತರ ಪರ ಕ್ರಮಗಳನ್ನು ತೆಗೆದುಕೊಳ್ಳಲು ಈ ಸರ್ಕಾರ ಮುಂದಾಗುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ನನಗೆ ನೆನಪಿದೆ. ಅಲ್ಪಸಂಖ್ಯಾತರ ವಿರೋಧಿಯಾದ ಜಾನುವಾರು ಹತ್ಯೆ ತಿದ್ದುಪಡಿ ಕಾಯ್ದೆ ಮತ್ತು ಮತಾಂತರ ಕಾಯ್ದೆ ನಿಶೇಧ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಕಾಂಗ್ರೆಸ್‌ ಹೇಳಿತ್ತು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಮೌನವಾಗಿದೆ. ಸರ್ಕಾರವು ಈ ಕಾಯ್ದೆಗಳನ್ನು ಹಿಂಪಡೆಯಲೇಬೇಕು” ಎಂದು ಆಗ್ರಹಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಸೈಬರ್ ಅಪರಾಧ | ‘ಡಿಜಿಟಲ್ ಅರೆಸ್ಟ್‌’ ವಿರುದ್ಧ ‘ಅಭಯ್’ ಹಸ್ತ; ಇರಲಿ ಎಚ್ಚರ

“ಎಸ್‌ಐಆರ್‌ ಹೆಸರಿನಲ್ಲಿ ಭಾರತದ ನಾಗರಿಕರ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಇದು ಕಾನುನು ಬಾಹಿರ ಮತ್ತು ಸಂವಿಧಾನ ವಿರೋಧಿ ಪ್ರಕ್ರಿಯೆ. ಅನೇಕ ದೋಷಗಳಿಂದ ಕೂಡಿದೆ. ಭಾರತೀಯರಲ್ಲದವರಿಗೆ ಮತದಾನದ ಹಕ್ಕು ಇರಲು ಸಾಧ್ಯವಿಲ್ಲ ಎಂಬುದು ಸರಿ. ಆದರೆ, ನಾಗರೀಕತ್ವವನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಇದರ ಜೊತೆ ಬೆಸೆಯುವುದು ಸರಿಯಲ್ಲ. ಮತದಾರರ ಪಟ್ಟಿ ಗ್ರಾಮ ಸಭೆ ಮತ್ತು ವಾರ್ಡ್‌ ಸಭೆಗಳಲ್ಲಿ ಸಾರ್ವಜನಿಕ ಪರಿಶೀಲನೆಗೆ ಒಳಗಾಗಬೇಕು. ಮತಪಟ್ಟಿಗಳ ಡ್ರಾಫ್ಟ್‌ಗಳನ್ನು ರೀಡಬಲ್‌ ಫಾರ್ಮ್ಯಾಟ್‌ ನಲ್ಲಿ ಕೊಡಬೇಕು” ಎಂದು ಆಗ್ರಹಿಸಿದ್ದಾರೆ.

“ಎಸ್‌ಐಆರ್‌ನಿಂದ ಅಲ್ಪಸಂಖ್ಯಾತರ ಮತಗಳು ಮಾತ್ರವಲ್ಲ, ಎಲ್ಲ ಧರ್ಮೀಯರ ಮತಗಳು ಡಿಲೀಟ್‌ ಆಗಿವೆ. ಅಲ್ಪಸಂಖ್ಯಾತರನ್ನು ಮತದಾನದಿಂದ ತೆಗೆದರೆ ಏನಾಗುತ್ತದೆ ಎಂದು ಕೆಲವರು ಮಾತನಾಡುತ್ತಾರೆ. ಇದು ಅತಿ ಅಪಾಯಕಾರಿ ಆಲೋಚನೆ. ಇದರ ವಿರುದ್ಧ ಗಟ್ಟಿ ದನಿಯೆತ್ತುವ ಅಗತ್ಯವಿದೆ” ಎಂದು ಕರೆ ಕೊಟ್ಟಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ರೈತರ ಸಾಲಮನ್ನಾ, ಕ್ಷೇಮಾಭಿವೃದ್ಧಿ ಮಂಡಳಿ ರಚನೆಗೆ ಕಿಸಾನ್ ಸಭಾ ಒತ್ತಾಯ

ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಗಳಿಗೆ ತುರ್ತಾಗಿ ಪರಿಹಾರ ಕಲ್ಪಿಸಬೇಕು. ರೈತರ...

ಸಿಜೆಪಿ ಪ್ರತಿಭಟನೆ ವೇಳೆ ವಕೀಲರ ಬಂಧನ: ಮಧ್ಯಪ್ರವೇಶಿಸಿ ಬಿಡುಗಡೆಗೆ ಸೂಚಿಸಿದ ಸುಪ್ರೀಂ ಕೋರ್ಟ್

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ನ್ಯಾಯಮೂರ್ತಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ...

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಹಣ ವಸೂಲಿ: ಆರೋಪಿ ಸಿಐಎಸ್‌ಎಫ್‌ ಬಲೆಗೆ

ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದ...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700 ಕೋಟಿ ನಾಮ!

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ...