ಸೈಬರ್ ಅಪರಾಧ | ‘ಡಿಜಿಟಲ್ ಅರೆಸ್ಟ್‌’ ವಿರುದ್ಧ ‘ಅಭಯ್’ ಹಸ್ತ; ಇರಲಿ ಎಚ್ಚರ

Date:

ಬೆಂಗಳೂರಿನಲ್ಲಿ 74 ವರ್ಷದ ವೃದ್ಧೆ, ನಿವೃತ್ತ ಶಿಕ್ಷಕಿಯನ್ನು ಗುರಿಯಾಗಿಸಿಕೊಂಡು ನಡೆದ ಬರೋಬ್ಬರಿ 24 ಕೋಟಿ ರೂಪಾಯಿಗಳ ಭೀಕರ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣವನ್ನು ಕರ್ನಾಟಕ ಸೈಬರ್ ಪೊಲೀಸರು ಭೇದಿಸಿದ್ದಾರೆ. ಐದು ಜನ ಅಂತಾರಾಜ್ಯ ವಂಚಕರನ್ನು ಬಂಧಿಸಿದ್ದಾರೆ.  ಖದೀಮರು ತಮ್ಮನ್ನು ಕೇಂದ್ರೀಯ ತನಿಖಾ ದಳ (CBI) ಮತ್ತು ಮುಂಬೈ ಪೊಲೀಸರೆಂದು ಪರಿಚಯಿಸಿಕೊಂಡು, ‘ನಿಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ’ ಎಂದು ಬೆದರಿಸಿ, ‘ಡಿಜಿಟಲ್ ಅರೆಸ್ಟ್’ನಲ್ಲಿಟ್ಟು, ಆಕೆಯಿಂದ ಬರೋಬ್ಬರಿ 24 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಹಣ ಮತ್ತು ಚಿನ್ನಾಭರಣಗಳನ್ನು ದೋಚಿದ್ದರು. ಇದು ಕರ್ನಾಟಕದ ಇತಿಹಾಸದಲ್ಲೇ ನಡೆದಿರುವ ಅತ್ಯಂತ ದೊಡ್ಡ ಡಿಜಿಟಲ್ ಅರೆಸ್ಟ್ ಸೈಬರ್ ಹಗರಣವೆಂದು ಸಿಸಿಬಿ ಬಣ್ಣಿಸಿದೆ.

- Advertisement -

ಅದೇ ರೀತಿ, ಮಹಾರಾಷ್ಟ್ರದ ನಾಗ್ಪುರದಲ್ಲಿ ನಿವೃತ್ತ ನರ್ಸ್ ಒಬ್ಬರು ಸೈಬರ್ ಅಪರಾಧಿಗಳ ಕುಟಿಲ ಜಾಲಕ್ಕೆ ಸಿಲುಕಿ ತಮ್ಮ ಜೀವನದ ಒಟ್ಟು ಗಳಿಕೆಯಾದ 90 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಈ ವೃದ್ಧೆಗೆ ಕರೆ ಮಾಡಿದ್ದ ಸೈಬರ್ ವಂಚಕರು, ತಾವು ಮುಂಬೈ ಪೊಲೀಸರು ಮತ್ತು ಟೆಲಿಕಾಂ ಇಲಾಖೆಯ ಉನ್ನತ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ‘ನಿಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ಮತ್ತು ಡ್ರಗ್ಸ್ ಸಾಗಾಟದ ಗಂಭೀರ ದೇಶದ್ರೋಹಿ ಚಟುವಟಿಕೆಗಳ ಆರೋಪಗಳಿವೆ’ ಎಂದು ನಂಬಿಸಿ, ಆಕೆಯನ್ನು ‘ಡಿಜಿಟಲ್ ಅರೆಸ್ಟ್‌’ ಮಾಡಿ, ಹಣ ದೋಚಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಇಂತಹ ‘ಡಿಜಿಟಲ್ ಅರೆಸ್ಟ್‌ ಮತ್ತು ಸೈಬರ್ ವಂಚನೆ’ಯ ಹತ್ತಾರು ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇವೆ. ದೇಶಾದ್ಯಂತ ಹೆಚ್ಚಾಗುತ್ತಿವೆ. ‘ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್’ (NCRP) ನೀಡಿರುವ ಅಧಿಕೃತ ದತ್ತಾಂಶಗಳ ಪ್ರಕಾರ, 2024ರ ಒಂದೇ ವರ್ಷದಲ್ಲಿ ದೇಶಾದ್ಯಂತ ಬರೋಬ್ಬರಿ 1.23 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ವಂಚನೆಗಳ ಮೂಲಕ ಸೈಬರ್ ಅಪರಾಧಿಗಳು ಸಾರ್ವಜನಿಕರಿಂದ ಸುಮಾರು 1.935.51 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ. ಇನ್ನು ಕಳವಳಕಾರಿ ಸಂಗತಿಯೆಂದರೆ, 2025ರ ಆರಂಭದ ಕೇವಲ ಎರಡು ತಿಂಗಳ ಅವಧಿಯಲ್ಲಿಯೇ 17,718 ಪ್ರಕರಣಗಳು ಬೆಳಕಿಗೆ ಬಂದಿದ್ದು, ಜನರು 210.21 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ. ಈ ಭೀಕರ ಜಾಲಕ್ಕೆ ಕೇವಲ ಅನಕ್ಷರಸ್ಥರು ಮಾತ್ರವಲ್ಲದೆ, ದೇಶದ ಸುಶಿಕ್ಷಿತ ನಾಗರಿಕರೂ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.

ವಂಚನೆ ತಡೆಯಲು ಸಿಬಿಐನಿಂದ ಅಭಯ್ ಜಾಟ್‌ಬಾಟ್

ದಿನೇದಿನೇ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ಮತ್ತು ಸೈಬರ್ ವಂಚನೆಗಳ ತಡೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ಸಾರ್ವಜನಿಕರನ್ನು ವಂಚಕರಿಂದ ರಕ್ಷಿಸುವ ಸಲುವಾಗಿ ಎಐ ಆಧಾರಿತ ‘ಅಭಯ್’ (ABHAY) ಎಂಬ ಹೊಸ ಚಾಟ್‌ಬಾಟ್ಅನ್ನು ಸಿಬಿಐ ಅಧಿಕೃತವಾಗಿ ಬಿಡುಗಡೆ ಮಾಡಿದೆ. ‘ಭಯಮುಕ್ತ’ ಎಂಬ ಸಂದೇಶದೊಂದಿಗೆ, ಸಾರ್ವಜನಿಕರಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿ ಅವರಲ್ಲಿನ ಅನಗತ್ಯ ಭಯವನ್ನು ಹೋಗಲಾಡಿಸಲು ‘ಅಭಯ’ ಎಂಬ ಹೆಸರಿಟ್ಟಿರುವುದಾಗಿ ಸಿಬಿಐ ಹೇಳಿಕೊಂಡಿದೆ.

ಈ ಚಾಟ್‌ಬಾಟ್‌ ಬಳಸಿಕೊಂಡು ಸಾರ್ವನಿಕರು ತಮಗೆ ವಂಚಕರು ಇಲಾಖೆಯ ಹೆಸರಿನಲ್ಲಿ ಕಳುಹಿಸುವ ನಕಲಿ ನೋಟಿಸ್‌ಗಳನ್ನು ಆನ್‌ಲೈನ್ ಮೂಲಕವೇ ಪರಿಶೀಲಿಸಬಹುದು ಎಂದು ಸಿಬಿಐ ತಿಳಿಸಿದೆ.

ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಸೈಬರ್ ಭದ್ರತಾ ಸಲಹೆಗಾರರಾದ ರಾಹುಲ್ ಮಿಶ್ರಾ ಹೇಳುವಂತೆ; ಈ ಹೊಸ ವ್ಯವಸ್ಥೆಯು ರಿಯಲ್ ಟೈಮ್ ವೆರಿಫಿಕೇಶನ್ ಪ್ಲಾಟ್‌ಫಾರ್ಮ್ ಆಗಿದ್ದು, ಮುಖ್ಯವಾಗಿ ಸಿಬಿಐ ಹೆಸರಿನಲ್ಲಿ ಬರುವ ನಕಲಿ ನೋಟಿಸ್‌ಗಳನ್ನು ಮಾತ್ರ ಪತ್ತೆಹಚ್ಚಲಿದೆ. ಸಾರ್ವಜನಿಕರು ತಮಗೆ ಬಂದಿರುವ ನೋಟಿಸ್ ಅಸಲಿಯೇ ಅಥವಾ ನಕಲಿಯೇ ಎಂದು ತಿಳಿಯಲು ಮೊದಲು ಸಿಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಲಭ್ಯವಿರುವ ‘ಅಭಯ್’ ಹೆಲ್ಪ್‌ಬಾಟ್ ಲಿಂಕ್ಅನ್ನು ಕ್ಲಿಕ್ ಮಾಡಿ, ಅದರಲ್ಲಿ ಕೇಳಲಾಗುವ ನೋಟಿಸ್ ವಿವರಗಳನ್ನು ನಮೂದಿಸುವ ಮೂಲಕ ಪರಿಶೀಲನೆ ನಡೆಸಬಹುದು. ಇದು ಸಾಮಾನ್ಯ ಚಾಟ್‌ಬಾಟ್‌ನಂತೆ ಬಳಕೆದಾರರೊಂದಿಗೆ ಸಂಭಾಷಣೆ ನಡೆಸುತ್ತಾ ಹಂತ ಹಂತವಾಗಿ ಮಾರ್ಗದರ್ಶನ ನೀಡುತ್ತದೆ. ಈ ಎಐ ತಂತ್ರಜ್ಞಾನವು ನೋಟಿಸ್‌ನ ಬರವಣಿಗೆಯ ಶೈಲಿ, ಫಾರ್ಮ್ಯಾಟ್ ಹಾಗೂ ತಾಂತ್ರಿಕ ವಿವರಗಳನ್ನು ಇಲಾಖೆಯ ಅಧಿಕೃತ ದತ್ತಾಂಶಗಳೊಂದಿಗೆ ಆಳವಾಗಿ ವಿಶ್ಲೇಷಿಸಿ ಶಂಕಾಸ್ಪದ ದಾಖಲೆಗಳನ್ನು ಗುರುತಿಸುತ್ತದೆ. ಮಾಹಿತಿ ನೀಡಿದ ತಕ್ಷಣವೇ ಇದು ಕಾರ್ಯನಿರ್ವಹಿಸುವುದರಿಂದ ಸಮಯದ ಉಳಿತಾಯವಾಗುತ್ತದೆ.

ಈ ಲೇಖನ ಓದಿದ್ದೀರಾ?: ಬಂಗಾಳ | ಬಿಜೆಪಿ ಗೋರಕ್ಷಣೆ ನಾಟಕಕ್ಕೆ ಮುಸ್ಲಿಂ ಯುವಕರ ಪೆಟ್ಟು; ಸಂಕಷ್ಟದಲ್ಲಿ ಹಿಂದು ರೈತರು!

“ಈ ಚಾಟ್‌ಬಾಟ್‌ನ ಸಂಪೂರ್ಣ ನಿಯಂತ್ರಣ ಸಿಬಿಐ ಅಧಿಕಾರಿಗಳ ಬಳಿ ಮಾತ್ರ ಇರುವುದರಿಂದ ಹ್ಯಾಕರ್‌ಗಳು ಅಥವಾ ಸೈಬರ್ ಅಪರಾಧಿಗಳು ಇದನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ಕೃತಕ ಬುದ್ಧಿಮತ್ತೆಯು ದತ್ತಾಂಶಗಳ ಕಲಿಕೆಯ ಆಧಾರದ ಮೇಲೆ ಕೆಲಸ ಮಾಡುವುದರಿಂದ ಅಪರೂಪಕ್ಕೆ ಸಣ್ಣಪುಟ್ಟ ತಾಂತ್ರಿಕ ಲೋಪಗಳು ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗಂಭೀರ ಸಂದರ್ಭಗಳಲ್ಲಿ ಇಲಾಖೆಯ ಅಧಿಕಾರಿಗಳ ಮೂಲಕವೇ ಅಂತಿಮ ಸ್ಪಷ್ಟೀಕರಣ ಪಡೆಯುವುದು ಸೂಕ್ತ. ಮುಂಬರುವ ದಿನಗಳಲ್ಲಿ ಅಗತ್ಯ ಬಿದ್ದರೆ ದೇಶದ ಇತರ ತನಿಖಾ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಗಳೂ ಸಹ ಇಂತಹದೇ ಸ್ವತಂತ್ರ ವೇದಿಕೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಇದು ಮಾದರಿಯಾಗಿದೆ” ಎಂದು ಅವರು ಹೇಳಿದ್ದಾರೆ.

ವಂಚಕರಿಗೆ ಎಐ ಅಸ್ತ್ರ

ಇತ್ತೀಚಿನ ದಿನಗಳಲ್ಲಿ, ಕೃತಕ ಬುದ್ಧಿಮತ್ತೆ ಆಧಾರಿತ ಸೈಬರ್ ಅಪರಾಧಗಳೂ ಹೆಚ್ಚಾಗಿವೆ. ಸೈಬರ್ ಜಗತ್ತಿನ ದುಷ್ಟ ಶಕ್ತಿಗಳು (ಹ್ಯಾಕರ್ಸ್‌) ತಮ್ಮ ದುರುದ್ದೇಶಪೂರಿತ ಚಟುವಟಿಕೆಗಳನ್ನು ಸ್ವಯಂಚಾಲಿತಗೊಳಿಸಿ, ಸಂತ್ರಸ್ತರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಕೃತಕ ಬುದ್ಧಿಮತ್ತೆ (AI) ಹಾಗೂ ಮಷಿನ್ ಲರ್ನಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇವುಗಳಲ್ಲಿ ಡೀಪ್‌ಫೇಕ್ ವಂಚನೆಗಳು, ಸ್ವಯಂಚಾಲಿತ ಫಿಶಿಂಗ್ ದಾಳಿಗಳು ಹಾಗೂ ಎಐ ಚಾಲಿತ ಮಾಲ್‌ವೇರ್‌ಗಳ (ವೈರಸ್) ಬಳಕೆ ಹೆಚ್ಚಾಗಿದೆ. ಅಪರಾಧಿಗಳು ಜನರೇಟಿವ್ ಎಐ ತಂತ್ರಜ್ಞಾನವನ್ನು ಬಳಸಿ ಧ್ವನಿಗಳನ್ನು ನಕಲು ಮಾಡುತ್ತಿದ್ದಾರೆ. ಉದಾಹರಣೆಗೆ, ನಿರ್ದಿಷ್ಟ ಕುಟುಂಬದ ಸದಸ್ಯರೊಬ್ಬರಂತೆ ಅಥವಾ ಕಂಪನಿಯ ಸಿಇಒಗಳಂತೆ ಧ್ವನಿ ನಕಲು ಮಾಡಿ, ಹಣ ವಸೂಲಿ ಮಾಡಲಾಗುತ್ತಿದೆ.

ಆತಂಕಕಾರಿಯಾಗಿ, ಈ ವಂಚಕರಿಗೆ ‘ಡಾರ್ಕ್ ವೆಬ್’ ಪ್ರಮುಖ ಅಸ್ತ್ರವಾಗಿ ದೊರೆತಿದೆ. ಈ ‘ಡಾರ್ಕ್‌ ವೆನ್‌’ನಂತಹ ಅತ್ಯಾಧುನಿಕ ಎಐ ಪರಿಕರಗಳು ಇಂದು ನಾವು ಬಳಸುವ ಕಾನೂನುಬದ್ಧ ಸಾಫ್ಟ್‌ವೇರ್-ಆಸ್-ಎ-ಸರ್ವೀಸ್ (SaaS) ಪ್ಲಾಟ್‌ಫಾರ್ಮ್‌ಗಳ ಮಾದರಿಯಲ್ಲೇ ಚಂದಾದಾರಿಕೆ ಆಧಾರದ ಮೇಲೆ ಮುಕ್ತವಾಗಿ ವಾಣಿಜ್ಯೀಕರಣಗೊಳ್ಳುತ್ತಿವೆ. ಸೈಬರ್ ಅಪರಾಧಿಗಳು ಈಗ ಕೇವಲ ಒಂದು ಸಾಮಾನ್ಯ ಒಟಿಟಿ ಅಥವಾ ಸ್ಟ್ರೀಮಿಂಗ್ ಸೇವೆಯ ಚಂದಾದಾರಿಕೆ ದರಕ್ಕೆ ಸೈಬರ್ ಅಪರಾಧದ ಎಐ ಪ್ಯಾಕೇಜ್‌ಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ. ಇದು ತಾಂತ್ರಿಕವಾಗಿ ಅತ್ಯಂತ ಕಡಿಮೆ ಜ್ಞಾನವಿರುವ ಸಾಮಾನ್ಯ ಅಪರಾಧಿಗಳೂ ಸಹ ಅತ್ಯಂತ ಘೋರ ಮತ್ತು ಸಂಕೀರ್ಣವಾದ ದಾಳಿಗಳನ್ನು ನಡೆಸಲು ಅನುವಾಗುವಂತೆ ಮಾಡಿದೆ. ಸೈಬರ್ ಅಪರಾಧಿಗಳು ಕಂಪ್ಯೂಟರ್‌ನ ಅತ್ಯಂತ ವೇಗದ ರೇಟಿನಲ್ಲಿ ದಾಳಿ ಮಾಡಲು ಎಐ ಬಳಸುತ್ತಿರುವುದರಿಂದ, ತನಿಖಾ ಸಂಸ್ಥೆಗಳು ಸಹ ಅನಿವಾರ್ಯವಾಗಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕಾರಣಕ್ಕಾಗಿ ಸೈಬರ್ ಭದ್ರತಾ ಸಂಸ್ಥೆಗಳು ಜಾಲಬಂಧಗಳನ್ನು ಸೂಕ್ಷ್ಮವಾಗಿ ಗಮನಿಸಲು, ಅಸಹಜ ಚಟುವಟಿಕೆಗಳನ್ನು ಗುರುತಿಸಲು ಹಾಗೂ ದುರುದ್ದೇಶಪೂರಿತ ಡೊಮೇನ್‌ಗಳು ಅಥವಾ ಫಿಶಿಂಗ್ ದಾಳಿಗಳು ಆರಂಭವಾಗುವ ಮುನ್ನವೇ ಅವುಗಳನ್ನು ಮುಂಜಾಗ್ರತೆಯಾಗಿ ನಿರ್ಬಂಧಿಸಲು ಸ್ವಯಂಚಾಲಿತ ಎಐ ರಕ್ಷಣಾತ್ಮಕ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿವೆ.

ಈ ಪ್ರಸ್ತುತ ಸೈಬರ್ ಭೀತಿಯ ತೀವ್ರತೆಯನ್ನು ಅಳೆಯಲು ‘ಫ್ಲ್ಯಾಶ್‌ಪಾಯಿಂಟ್’ ಎಂಬ ಹೆಸರಾಂತ ಸಂಸ್ಥೆಯು ತನ್ನ ಇತ್ತೀಚಿನ ‘ಎಐ ಥ್ರೆಟ್ ರಿಪೋರ್ಟ್’ (ಎಐ ಭೀತಿಯ ವರದಿ) ಅನ್ನು ಬಿಡುಗಡೆ ಮಾಡಿದೆ. ಸೈಬರ್ ಲೋಕದ ಅಪರಾಧಿಗಳು ಕೃತಕ ಬುದ್ಧಿಮತ್ತೆಯನ್ನು ಕೇವಲ ಭವಿಷ್ಯದ ಪರಿಕಲ್ಪನೆಯಾಗಿ ನೋಡದೆ, ಈಗ ಚಾಲ್ತಿಯಲ್ಲಿರುವ ತಮ್ಮ ದೈನಂದಿನ ನೈಜ ಸೈಬರ್ ಅಪರಾಧ ಚಟುವಟಿಕೆಗಳಲ್ಲಿ ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ಈ ವರದಿಯು ವಿವರವಾಗಿ ಪರಿಶೀಲಿಸಿದೆ. ಉದ್ಯಮಗಳು ಮತ್ತು ವ್ಯವಹಾರಗಳು ಕಡ್ಡಾಯವಾಗಿ ತಿಳಿದುಕೊಂಡಿರಬೇಕಾದ ಪ್ರಮುಖ ಜಾಗತಿಕ ಪ್ರವೃತ್ತಿಗಳನ್ನು ಈ ವರದಿಯಲ್ಲಿ ಹಂಚಿಕೊಳ್ಳಲಾಗಿದೆ.

  • ಮೊದಲನೆಯದಾಗಿ, ಎಐ ಬಳಕೆ ಈಗ ಕೇವಲ ಪ್ರಯೋಗವಾಗಿ ಉಳಿಯದೆ ಸಂಪೂರ್ಣ ಕಾರ್ಯಾಚರಣೆಯ ರೂಪ ಪಡೆದುಕೊಂಡಿದೆ. ಅಪರಾಧಿಗಳು ಕೇವಲ ಕುತೂಹಲಕ್ಕಾಗಿ ಎಐ ಬಳಸುವುದನ್ನು ಬಿಟ್ಟು, ತಮ್ಮ ದಾಳಿಗಳ ವೇಗ, ವ್ಯಾಪ್ತಿ ಹಾಗೂ ದಕ್ಷತೆಯನ್ನು ಹೆಚ್ಚಿಸುವ ಪ್ರಾಯೋಗಿಕ ಕೆಲಸಗಳಿಗಾಗಿ ಇದನ್ನು ಬಳಸುತ್ತಿದ್ದಾರೆ.
  • ಎರಡನೆಯದಾಗಿ, ಜನರ ಮನಸ್ಥಿತಿಯೊಂದಿಗೆ ಆಟವಾಡಿ ವಂಚಿಸುವ ಸಾಮಾಜಿಕ ತಂತ್ರಗಾರಿಕೆಯೇ ಇಂದಿಗೂ ಅವರ ಪ್ರಮುಖ ಗುರಿಯಾಗಿದೆ. ಎಐ ನೆರವಿನಿಂದ ದಾಳಿಕೋರರು ಹೆಚ್ಚು ನಂಬಿಕಸ್ಥವಾಗಿ ಕಾಣುವ ಫಿಶಿಂಗ್ ಆಮಿಷಗಳನ್ನು, ಇನ್ನೊಬ್ಬರಂತೆ ನಟಿಸುವ ಡೀಪ್‌ಫೇಕ್‌ಗಳು ಮತ್ತು ಬಹುಭಾಷಾ ವಿಷಯಗಳನ್ನು ಸೃಷ್ಟಿಸುತ್ತಿದ್ದಾರೆ.
  • ಮೂರನೆಯದಾಗಿ, ಎಐ ಆಧಾರಿತ ಹಣಕಾಸು ವಂಚನೆಗಳು ನಿರಂತರವಾಗಿ ವಿಕಸನಗೊಳ್ಳುತ್ತಿವೆ. ಅಪರಾಧಿಗಳ ಸಮುದಾಯಗಳು ಹಣಕಾಸಿನ ಲಾಭಕ್ಕಾಗಿ ವಂಚನೆಗಳನ್ನು ಮಾಡಲು ಮತ್ತು ಗುರುತನ್ನು ಮರೆಮಾಚಿ ಜನರನ್ನು ದಾರಿ ತಪ್ಪಿಸಲು ಎಐ ಪರಿಕರಗಳನ್ನು ಬಳಸುವ ಕುರಿತು ಪರಸ್ಪರ ಚರ್ಚಿಸುತ್ತಾ ಹಂಚಿಕೊಳ್ಳುತ್ತಿದ್ದಾರೆ.
  • ನಾಲ್ಕನೆಯದಾಗಿ, ಈ ವಂಚಕರು ತಂತ್ರಜ್ಞಾನಕ್ಕೆ ಅತ್ಯಂತ ವೇಗವಾಗಿ ಒಗ್ಗಿಕೊಳ್ಳುತ್ತಿವೆ. ಮುಖ್ಯವಾಹಿನಿಯ ಪ್ರಮುಖ ಎಐ ಪ್ಲಾಟ್‌ಫಾರ್ಮ್‌ಗಳಲ್ಲಿರುವ ಸುರಕ್ಷತಾ ನಿಯಮಗಳು ಮತ್ತು ನಿರ್ಬಂಧಗಳನ್ನು ಮುರಿದು ಮುನ್ನುಗ್ಗಲು ಬೇಕಾಗುವ ತಂತ್ರಗಳನ್ನು ಸೈಬರ್ ಅಪರಾಧಿಗಳ ಫೋರಮ್‌ಗಳು ನಿರಂತರವಾಗಿ ಶೋಧಿಸುತ್ತಿವೆ.
  • ಐದನೆಯದಾಗಿ, ಸೈಬರ್ ವಂಚನೆಗಳನ್ನು ತಡೆಯಲು ಹೋರಾಡುವ ಭದ್ರತಾ ಸಂಸ್ಥೆಗಳು ನಿರಂತರವಾಗಿ ಬದಲಾಗುತ್ತಿರುವ ಸವಾಲುಗಳನ್ನು ಎದುರಿಸುತ್ತಿವೆ. ಕೃತಕ ಬುದ್ಧಿಮತ್ತೆಯ ಮೂಲಕ ನಡೆಯುವ ಅನೇಕ ದಾಳಿಗಳು ಇನ್ನೂ ಹಳೆಯ ತಂತ್ರಗಳನ್ನೇ ಅವಲಂಬಿಸಿದ್ದರೂ ಸಹ, ಈ ತಂತ್ರಜ್ಞಾನವು ಅಪರಾಧ ಜಗತ್ತಿನ ತಡೆಗೋಡೆಗಳೇ ಇಲ್ಲದಂತೆ ಮಾಡಿದೆ. ದುರುದ್ದೇಶಪೂರಿತ ಚಟುವಟಿಕೆಗಳಿಗೆ ಭಾರಿ ವೇಗವನ್ನು ನೀಡಿದೆ.

ಎಐಗೆ ಸಂಬಂಧಿಸಿದ ಈ ಕರಾಳ ಚಟುವಟಿಕೆಗಳಿಗೆ ಸಂಬಂಧಿಸಿದ 2026ರ ಏಪ್ರಿಲ್ ತಿಂಗಳ ಅಂಕಿ-ಅಂಶಗಳ ಪ್ರಕಾರ, ಎಐ ಆಧಾರಿತ ವಂಚನೆ ಚಟುವಟಿಕೆಗಳು ಕೇವಲ ಕೆಲವು ಸೀಮಿತ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರ ಹೆಚ್ಚಾಗಿ ಕಂಡುಬಂದಿವೆ. ಈ ಕೃತ್ಯಗಳಿಗೆ ‘ಟೆಲಿಗ್ರಾಂ’ ಆ್ಯಪ್ ಹೆಚ್ಚಾಗಿ ಬಳಕೆಯಾಗುತ್ತಿದ್ದರೆ, ರೆಡ್ಡಿಟ್, ಗಿಟ್‌ಹಬ್ ಗಿಸ್ಟ್, ಪೇಸ್ಟ್‌ಬಿನ್, ಡಿಸ್ಕಾರ್ಡ್ ಹಾಗೂ ಇತರ ಸಣ್ಣಪುಟ್ಟ ಇಂಟರ್‌ನೆಟ್ ಫೋರಮ್‌ಗಳೂ ಬಳಕೆಯ ತಾಣವಾಗಿವೆ.

ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆಗಳು

ಒಂದು ನೋಟಿಸ್ ನಕಲಿ ಎಂಬುದನ್ನು ಗುರುತಿಸಲು ಕೆಲವು ಪ್ರಮುಖ ಸಂಕೇತಗಳಿವೆ. ತಕ್ಷಣವೇ ಹಣ ಜಮಾ ಮಾಡುವಂತೆ ಅತಿಯಾದ ಒತ್ತಡ ಹೇರುವುದು, ಜೈಲಿಗೆ ಕಳುಹಿಸುವುದಾಗಿ ಭಯಾನಕ ಭಾಷೆ ಬಳಸುವುದು, ಸರ್ಕಾರದ ಅಧಿಕೃತ ಖಾತೆಗಳ ಬದಲಿಗೆ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ಕೇಳುವುದು, ವಿಡಿಯೋ ಕಾಲ್ ಮೂಲಕ ‘ರಹಸ್ಯ ತನಿಖೆ’ ಎಂದು ಬಿಂಬಿಸಿ ಯಾರಿಗೂ ತಿಳಿಸದಂತೆ ನಿರ್ಬಂಧಿಸುವುದು ಹಾಗೂ ಕಳಪೆ ವ್ಯಾಕರಣ ಮತ್ತು ತಪ್ಪುಗಳು ನಕಲಿ ನೋಟಿಸ್‌ನ ಲಕ್ಷಣಗಳಾಗಿವೆ. ಭಾರತದ ಯಾವುದೇ ಕಾನೂನುಬದ್ಧ ಸಂಸ್ಥೆಗಳು ವಿಡಿಯೋ ಕಾಲ್ ಮೂಲಕ ಆನ್‌ಲೈನ್ ಬಂಧನ ಮಾಡುವುದಿಲ್ಲ ಅಥವಾ ಹಣದ ಬೇಡಿಕೆ ಇಡುವುದಿಲ್ಲ. ಆದ್ದರಿಂದ, ಎಂತಹದ್ದೇ ತುರ್ತು ಪರಿಸ್ಥಿತಿ ಎದುರಾದರೂ ಮೊಬೈಲ್‌ಗೆ ಬರುವ ಒಟಿಪಿ, ಬ್ಯಾಂಕ್ ವಿವರಗಳು ಅಥವಾ ರಹಸ್ಯ ಪಾಸ್‌ವರ್ಡ್‌ಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು.

ಒಂದು ವೇಳೆ ಇಂತಹ ಶಂಕಾಸ್ಪದ ಕರೆಗಳು ಬಂದರೆ ಯಾವುದೇ ಕಾರಣಕ್ಕೂ ಗಾಬರಿಯಾಗಬಾರದು ಹಾಗೂ ವಂಚಕರು ಹೇಳಿದ ತಕ್ಷಣ ಮೊಬೈಲ್‌ನಲ್ಲಿ ಸ್ಕ್ರೀನ್ ಶೇರಿಂಗ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು. ಇದರಿಂದ ಅವರು ನಿಮ್ಮ ಇಡೀ ಫೋನ್‌ನ ನಿಯಂತ್ರಣ ಪಡೆದು ಹಣ ಕದಿಯುವ ಅಪಾಯವಿರುತ್ತದೆ.

ಇಂದಿನ ದಿನಗಳಲ್ಲಿ ವಯಸ್ಸಾದ ಹಿರಿಯ ನಾಗರಿಕರೇ ಈ ವಂಚಕರ ಪ್ರಮುಖ ಬಲಿಪಶುಗಳಾಗುತ್ತಿರುವುದರಿಂದ, ಮೊದಲು ಅವರಲ್ಲಿ ಧೈರ್ಯ ತುಂಬಬೇಕು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕುಟುಂಬದ ಸದಸ್ಯರಿಗೆ ವಿಷಯ ತಿಳಿಸುವಂತೆ ಸೂಚಿಸಬೇಕು. ಒಂದು ವೇಳೆ, ವಂಚನೆ ನಡೆದಿರುವುದು ಕಂಡುಬಂದರೆ ತಕ್ಷಣವೇ ಸೈಬರ್ ಅಪರಾಧ ತಡೆ ಇಲಾಖೆಯ ಅಧಿಕೃತ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ಅಥವಾ ಸೈಬರ್ ಕ್ರೈಮ್ ವೆಬ್‌ಸೈಟ್‌ನಲ್ಲಿ ದೂರನ್ನು ದಾಖಲಿಸಬೇಕು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಈ ದಿನ ಸಂಪಾದಕೀಯ | ರಾಜಧಾನಿ ದೆಹಲಿಗೆ ದಿಗ್ಬಂಧನ- ಸಹಸ್ರಾರು ಯುವಜನರ ಬಂಧನ, ಇದೇನು ತುರ್ತುಪರಿಸ್ಥಿತಿಯೇ?

ದೇಶದ ರಾಜಧಾನಿಗೇ ದಿಗ್ಬಂಧನ ಹಾಕಲಾಗಿದೆ. ಇದೇನು ತುರ್ತುಪರಿಸ್ಥಿತಿಯೇ? ಯುದ್ಧದ ಭೀತಿಯೇ? ಏನೂ...

ಉಪಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ಟಿವಿಕೆ, ಬಂಗಾಳದಲ್ಲಿ ಬಿಜೆಪಿಗೆ ಜಯ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು...