ಗಾಜಿನ ಮನೆಯಲ್ಲಿ ಡಿಕೆಶಿ ಪ್ರಮಾಣವಚನ; ರಸ್ತೆಯುದ್ದಕ್ಕೂ ದೊಡ್ಡ ಪರದೆಯಲ್ಲಿಯೇ ನೋಡಿ ಸಂಭ್ರಮಿಸಿದ ಜನ

Date:

ಕಳೆದ ವರ್ಷ ಐಪಿಎಲ್‌ ಕಪ್‌ ಗೆದ್ದ ಆರ್‌ಸಿಬಿ ತಂಡದ ವಿಜಯೋತ್ಸವದಲ್ಲಿ ಬೆಂಗಳೂರು ಸುತ್ತಮುತ್ತಲಿನ ಕ್ರಿಕೆಟ್‌ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ನಗರದಲ್ಲಿ ಜಮಾಯಿಸಿ ಕಾಲ್ತುಳಿತ ಉಂಟಾಗಿ ಹನ್ನೊಂದು ಮಂದಿ ಮೃತಪಟ್ಟ ಘಟನೆಯ ನಂತರ ಸರ್ಕಾರ, ಪೊಲೀಸರು ಭಾರೀ ಎಚ್ಚರಿಕೆಯ ಹೆಜ್ಜೆಯಿಡುತ್ತಿದ್ದಾರೆ. ಅದರ ಪರಿಣಾಮವೇ ನೂತನ ಸಿಎಂ ಡಿ ಕೆ ಶಿವಕುಮಾರ್‌ ಅವರ ಪ್ರಮಾಣವಚನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯದೇ ಲೋಕಭವನದ ಗಾಜಿನ ಮನೆಯಲ್ಲಿ ನಡೆಯಿತು.

- Advertisement -

ಹಾಗಾಗಿ ದೂರದೂರುಗಳಿಂದ ಬಸ್‌ ಮಾಡಿ ಜನ ತರುವ ಅವಕಾಶ ಇರಲಿಲ್ಲ. ಪಾಸ್‌ ಇದ್ದವರಿಗೆ ಮಾತ್ರ ಗಾಜಿನ ಮನೆಗೆ ಪ್ರವೇಶ ಇತ್ತು. ಅಲ್ಲದೇ ಲೋಕಭವನದ ಒಂದು ಕಿಲೋ ಮೀಟರ್‌ ಒಳಗೆ ನಿಷೇಧಾಜ್ಞೆ ಜಾರಿಯಾಗಿತ್ತು. ಈ ಎಲ್ಲ ನಿಯಮ ಜಾರಿಯಾಗಿದ್ದರೂ ವಿಧಾನಸೌಧದಿಂದ ಲೋಕಭವನ ರಸ್ತೆಯವರೆಗೂ ಇಕ್ಕೆಲಗಳಲ್ಲಿ ಜನ ನೆರೆದಿದ್ದರು. ಲೋಕಭವನದ ಗೇಟಿನವರೆಗೂ ಹತ್ತಾರು ದೊಡ್ಡ ದೊಡ್ಡ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿತ್ತು. ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು, ಸಚಿವರ ಬೆಂಬಲಿಗರು ಎಲ್ಲರೂ ಫುಟ್‌ಪಾತಿನಲ್ಲೇ ನಿಂತು ದೊಡ್ಡ ಪರದೆಯಲ್ಲಿಯೇ ಕಾರ್ಯಕ್ರಮ ವೀಕ್ಷಣೆ ಮಾಡಿ ಶಿಳ್ಳೆ ಹೊಡೆಯುತ್ತಿದ್ದರು. “ಡಿಕೆ ಡಿಕೆ…” ಎಂದು ಕೂಗುತ್ತಿದ್ದರು. ಡಿಕೆ ಗಾಜಿನ ಮನೆಯಲ್ಲಿ ಅತಿಥಿಗಳನ್ನು ಭೇಟಿಯಾಗಿ ಕೈ ಕುಲುಕುತ್ತಿದ್ದರೆ ಆ ಕ್ಷಣಗಳನ್ನು ಪರದೆಯಲ್ಲಿಯೇ ನೋಡಿ ಕಣ್ತುಂಬಿಕೊಂಡರು. ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರನ್ನು ನೋಡಿ ಖುಷಿಗೊಂಡರು. ಆಗಾಗ “ಭಾರತ್‌ ಮಾತಾ ಕೀ ಜೈ, ಜೈ ಕಾಂಗ್ರೆಸ್‌” ಘೋಷಣೆ ಒಟ್ಟಾಗಿ ಕೇಳಿ ಬಂತು. ಗಾಜಿನ ಮನೆಯಲ್ಲಿ ಪ್ರಮಾಣವಚನ ಪ್ರಕ್ರಿಯೆಯ ಆರಂಭ ಮತ್ತು ಅಂತ್ಯದಲ್ಲಿ ರಾಷ್ಟ್ರಗೀತೆ, ನಾಡಗೀತೆಗೆ ಎದ್ದು ನಿಂತು ಗೌರವಿಸುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರ ಕರೆಗೆ ರಸ್ತೆಯುದ್ದಕ್ಕೂ ಎದ್ದು ನಿಂತು ಗೌರವ ಸಲ್ಲಿಸಿದರು. ರಸ್ತೆಯುದ್ದಕ್ಕೂ ಜಾತ್ರೆಯ ವಾತಾವರಣ, ಸಡಗರ ಮನೆ ಮಾಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಸರಿಯಾಗಿ ಏಳು ವರ್ಷಗಳ ಹಿಂದೆ ಇಂದಿನ ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರನ್ನು ಮೋದಿ ಸರ್ಕಾರ ದ್ವೇಷ ರಾಜಕಾರಣದ ಖೆಡ್ಡಕ್ಕೆ ಕೆಡವಿ ತಿಹಾರ್‌ ಜೈಲಿಗಟ್ಟಿತ್ತು. ಐದು ವರ್ಷ ಪೂರೈಸಿದ್ದ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೆ ಬಹುಮತ ಬರದೇ ಜೆಡಿಎಸ್‌ ಜೊತೆಗೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಹದಿಮೂರು ತಿಂಗಳಲ್ಲಿ ಆಪರೇಷನ್‌ ಕಮಲಕ್ಕೆ ತುತ್ತಾಗಿತ್ತು. ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ನಡೆದ ಬೆಳವಣಿಗೆಯಲ್ಲಿ ಡಿಕೆ ಶಿವಕುಮಾರ್‌ ಅವರನ್ನು ಇಡಿ ಬಂಧಿಸಿ ತಿಂಗಳ ಕಾಲ ತಿಹಾರ ಜೈಲಿನಲ್ಲಿಟ್ಟಿತ್ತು. ಡಿಕೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬೆಂಗಳೂರಿಗೆ ಬರುವಾಗ ಅವರ ಸಾವಿರಾರು ಅಭಿಮಾನಿಗಳು ಸ್ವಾಗತಿಸಿದ್ದು, ಆ ನಂತರ ಶಪಥ ಮಾಡಿ ಗಡ್ಡ ಬಿಟ್ಟು ಮುಖದ ಚಹರೆ ಬದಲಿಸಿಕೊಂಡಿದ್ದ ಡಿಕೆ ಕೇವಲ ನಾಲ್ಕೇ ವರ್ಷದಲ್ಲಿ ಪಕ್ಷವನ್ನು ಕಟ್ಟಿದ ರೀತಿ, ಮೇಕೆದಾಟು ಪಾದಯಾತ್ರೆ, ಭಾರತ್‌ ಜೋಡೋ ಯಾತ್ರೆ, ಬಿಜೆಪಿ ಸರ್ಕಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಸಿದ್ದರಾಮಯ್ಯ ಅವರ ಜೋಡಿಯಾಗಿ ನಡೆಸಿದ ಹೋರಾಟ 2023ರಲ್ಲಿ ಪಕ್ಷದ ಅಭೂತಪೂರ್ವ ಗೆಲುವಿಗೆ ಕಾರಣವಾಗಿತ್ತು. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಸಿಎಂ ಪಟ್ಟಕ್ಕೆ ಪಟ್ಟು ಹಿಡಿದು ಹೈಕಮಾಂಡ್‌ ನಿರ್ಧಾರದಂತೆ ಡಿಸಿಎಂ ಆಗುವ ಸಂದರ್ಭ ಬಂದಿತ್ತು. ಅದಾದ ನಂತರ ಸಿಎಂ ಆಗುವ ಅವರ ಪ್ರಯತ್ನ ನಡೆಯುತ್ತಲೇ ಇತ್ತು. ಕಡೆಗೂ ಅವರು ಸಿಎಂ ಆಗಿದ್ದಾರೆ.

ಮಾಸ್‌ ಲೀಡರ್‌, ಅಹಿಂದ ಐಕಾನ್‌ ಸಿದ್ದರಾಮಯ್ಯ ಅವರಿಗೆ ಇರುವಂತೆಯೇ ಶಿವಕುಮಾರ್‌ ಅವರಿಗೂ ಭಾರೀ ಜನ ಬೆಂಬಲ ಇದೆ ಎಂಬುದಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶವೇ ಇಲ್ಲದಿದ್ದರೂ ಸೇರಿದ ಸಾಮಾನ್ಯ ಜನರೇ ಸಾಕ್ಷಿ. ವಾಸ್ತವದಲ್ಲಿ ಸಾಮಾನ್ಯ ಜನರಿಗೆ ರಾಜಕಾರಣಿಗಳಿಂದ ನೇರವಾಗಿ ಯಾವುದೇ ಪ್ರಯೋಜನ ಸಿಗದಿದ್ದರೂ ಜನ ರಾಜಕೀಯ ನಾಯಕರನ್ನು “ಇವ ನಮ್ಮವ…” ಎಂದು ಅಭಿಮಾನಿಸುತ್ತಾರೆ, ಗದ್ದುಗೆಯೇರಿದಾಗ ತಮಗೇ ಅಧಿಕಾರ ಸಿಕ್ಕಂತೆ ಸಂಭ್ರಮಿಸುತ್ತಾರೆ. ಮನಸಾರೆ ಹಾರೈಸುತ್ತಾರೆ. ಅಧಿಕಾರಕ್ಕೇರಿದವರು ತಲೆಗೆ ಮದ ಏರಿಸಿಕೊಳ್ಳದೇ ಕಟ್ಟ ಕಡೆಯ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿದರೆ ಸಾರ್ಥಕ.

ಡಿ ಕೆ ಶಿವಕುಮಾರ್‌ ಅವರು ಈಗಾಗಲೇ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಾರಿಗೆ ತಂದು ಜನ ಕಲ್ಯಾಣದ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಧಕ್ಕೆಯಾಗದಂತೆ ಇನ್ನು ಎರಡು ವರ್ಷ ಮುನ್ನಡೆಸಬೇಕಿದೆ. ಗ್ಯಾರಂಟಿ ಯೋಜನೆಗಳ ಪರಾಮರ್ಶೆ ಬಗ್ಗೆ ಒಂದೆರಡು ಬಾರಿ ಡಿಕೆಶಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡಿದ್ದರು. ಆದರೆ, ಸದ್ಯ ಕಾಂಗ್ರೆಸ್‌ಗೆ ದೊಡ್ಡ ಬಲ ಇರುವುದು ಸರ್ಕಾರ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು.

ಡಿಕೆ ಸಿಎಂ ಕುರ್ಚಿಗೇರುತ್ತಿರುವ ಈ ಹೊತ್ತು, ಬಹಳ ಕ್ಲಿಷ್ಟಕರವಾಗಿದೆ. ಒಂದು ಕಡೆ ಮೋದಿ ಸರ್ಕಾರದಿಂದ ಈ ದೇಶದ ಮತದಾರರ ಹಕ್ಕುಗಳನ್ನು ಮೊಟಕುಗೊಳಿಸುವ ಎಸ್‌ಐಆರ್‌ ಎಂಬ ಭೀಕರ ಯಜ್ಞ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಕೊನೆಗೂ ಅವರು ಎಸ್‌ಐರ್‌ ಅನ್ನು ಗಂಭೀರವಾಗಿ ಪರಿಗಣಿಸಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಬೂತ್‌ ಮಟ್ಟದಲ್ಲಿ ಜನರಿಗೆ ನೆರವಾಗಬೇಕು ಎಂದು ಸೂಚನೆ ನೀಡಿದ್ದಾರೆ. ಎಸ್‌ಐಆರ್‌ ಅನ್ನು ಕಾಂಗ್ರೆಸ್‌ ಸರ್ಕಾರ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಎದುರಿಸಬೇಕಿದೆ.

ಅತ್ತ ಡಿಕೆಯವರ ಕನಸಿನ ಯೋಜನೆ ಬಿಡದಿ ಟೌನ್‌ಶಿಪ್‌‌ ಈ ನೆಲದ ರೈತರ ಅನ್ನವನ್ನೇ ಕಿತ್ತುಕೊಳ್ಳುವ ಆತಂಕ ಎದುರಾಗಿದೆ. ರೈತರ ಕೋಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸಲಿದೆ. ಯೋಜನೆ ಕೈ ಬಿಡುವುದಕ್ಕಿಂತ ಬೇರೆ ಪರಿಹಾರ ಇಲ್ಲ.

ಕೋಮುವಾದದ ಬೇರುಗಳು ಈಗಾಗಲೇ ಆಳವಾಗಿ ಬೇರೂರಿದೆ. ಎರಡನೇ ಅವಧಿಯಲ್ಲಿ ಸಿದ್ದರಾಮಯ್ಯ ಕೂಡ ಕೋಮುವಾದಿಗಳನ್ನು ಬುಡಮಟ್ಟ ಹಾಕಲು ಮನಸ್ಸು ಮಾಡಲಿಲ್ಲ. ಬಹಳ ಸದ್ದು ಮಾಡಿದ್ದ ಧರ್ಮಸ್ಥಳದ ಅಕ್ರಮ ಶವ ಹೂತ ಪ್ರಕರಣ, ಸೌಜನ್ಯ ಸೇರಿದಂತೆ ಹಲವು ಯುವತಿಯ ಅತ್ಯಾಚಾರ ಕೊಲೆ ಪ್ರಕರಣದ ವಿರುದ್ಧ ತಮ್ಮದೇ ಸರ್ಕಾರ ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಯುತ್ತಿದ್ದಾಗ, ಧರ್ಮಸ್ಥಳದ ರಕ್ಷಣೆಗೆ ನೂರು ಶಿವಕುಮಾರರು ಇದ್ದಾರೆ ಎಂಬ ಹೇಳಿಕೆ ಈ ನಾಡಿನ ಸಾಮಾಜಿಕ ಹೋರಾಟದ ಸಂಗಾತಿಗಳಿಗೆ ಆಘಾತ ನೀಡಿದ್ದರು. ಇದೀಗ ಡಿಕೆ ಸಿಎಂ ಆಗುತ್ತಿದ್ದಂತೆ ಎಸ್‌ಐಟಿ ತನಿಖೆ ನೇತ್ರಾವತಿ ಒಡಲು ಸೇರುವ ಅನುಮಾನ ದಟ್ಟವಾಗಿದೆ. ಎಸ್‌ಐಟಿ ತನಿಖೆಯ ಸಾರ ಏನೇ ಆಗಿರಲಿ, ಅದನ್ನು ಬಹಿರಂಗಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಸರ್ಕಾರ ಹಿಂದೇಟು ಹಾಕಬಾರದು.

ಮುಖ್ಯವಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಲವು ಹಗರಣದ ತನಿಖೆ ನಡೆಸಲು ಎಸ್‌ಐಟಿ, ನ್ಯಾಯಮೂರ್ತಿಗಳ ಆಯೋಗ ವಹಿಸಲಾಗಿದೆ. ಆ ತನಿಖಾ ವರದಿಗಳೆಲ್ಲ ಹೊರಬೀಳಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ವಿರೋಧಿಗಳನ್ನು ಮಣಿಸಲು ಇರುವ ಸುವರ್ಣಾವಕಾಶವನ್ನು ಕೈಚೆಲ್ಲ ಬಾರದು. ಇನ್ನಿರುವ ಎರಡು ವರ್ಷಗಳು ಹಗರಣ ಮುಕ್ತ ಆಡಳಿತ ನೀಡಿದರೆ ಅದೇ ಕಾಂಗ್ರೆಸ್‌ನ ದೊಡ್ಡ ಸಾಧನೆ ಎನಿಸಲಿದೆ. ಡಿಕೆ ಶಿವಕುಮಾರ್‌ ಬಗ್ಗೆ ಇರುವ ನೆಗೆಟಿವ್‌ ಇಮೇಜ್‌ ಬದಲಾಗಲು ಇದೊಂದು ಸುವರ್ಣಾವಕಾಶ. ತಾವು ಉದ್ಯಮಿಯಲ್ಲ ಈ ನಾಡಿನ ಮುಖ್ಯಮಂತ್ರಿ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಮನಸ್ಸಿಗೆ ತಂದುಕೊಳ್ಳಬೇಕಿದೆ.

a71d07b5bd5d836dcc8d9f6e0431618b502c4dbb6bb3f88fc7df55ead8b958a2?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಬಲೇಶ್ವರ ನಾಕಾ ರಸ್ತೆ ಕಾಮಗಾರಿ ವಿಳಂಬಕ್ಕೆ ಆಪ್ ಆಕ್ರೋಶ; ಪಾಲಿಕೆಗೆ ಒಂದು ವಾರ ಗಡುವು

ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಬಬಲೇಶ್ವರ ನಾಕಾದಿಂದ ನಾಯರಾ ಪೆಟ್ರೋಲ್ ಪಂಪ್‌ವರೆಗಿನ ರಸ್ತೆಯ...

ಭಾರತ & ಚೀನಾದ H-1B ಉದ್ಯೋಗಿಗಳಿಂದ ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು; ಸಂಸದ ರಿಲೆ ಮೂರ್ ಆರೋಪ

ಅಮೆರಿಕದ ಕಂಪ್ಯೂಟರ್‌ ಸೈನ್ಸ್‌ ಪದವೀಧರರ ಉದ್ಯೋಗಾವಕಾಶಗಳನ್ನು ಭಾರತ ಮತ್ತು ಚೀನಾದಿಂದ ಬರುವ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ; ಸುಪ್ರೀಂನದ್ದು ದ್ವಂದ್ವ ನಿಲುವಲ್ಲವೇ?

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ...

ದೇಶ ತೊರೆಯುವಂತೆ ನೋಟಿಸ್‌; ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ...