ಈ ದಿನ ಸಂಪಾದಕೀಯ | ಲೈಂಗಿಕ ಹಗರಣದ ಆರೋಪಿಗಳಿಗೆ ಸ್ಥಾನಮಾನ; ನಗೆಪಾಟಲಿಗೀಡಾದ ಮೋದಿಯ ʼಬೇಟಿ ಬಚಾವೋʼ ಘೋಷಣೆ

Date:

ಅಮೆರಿಕದ ಕುಖ್ಯಾತ ಲೈಂಗಿಕ ಹಗರಣದ ಅಪರಾಧಿ ಎಪ್ಸ್ಟೀನ್‌ ಜೊತೆಗೆ ಸಂಪರ್ಕದಲ್ಲಿದ್ದ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ರಾಜೀನಾಮೆ ಕೊಡಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿರುವ ಬೆನ್ನಲ್ಲೇ ಅವರನ್ನು ಮತ್ತೊಂದು ಅವಧಿಗೆ ರಾಜ್ಯಸಭೆಗೆ ಆಯ್ಕೆ ಮಾಡಲು ಮಧ್ಯಪ್ರದೇಶದಿಂದ ಬಿಜೆಪಿ ಟಿಕೆಟ್‌ ನೀಡಿದೆ. ಲೈಂಗಿಕ ಕಿರುಕುಳದ ಆರೋಪ ಎದುರಿಸಿದ್ದ ಬ್ರಿಜ್‌ ಭೂಷಣ್‌ಗೆ ಉತ್ತರಪ್ರದೇಶದಲ್ಲಿ ಪಕ್ಷದ ಜವಾಬ್ದಾರಿ ನೀಡಲಾಗಿದೆ.

- Advertisement -

ತಮ್ಮದು ಮಹಾ ಸಂಸ್ಕಾರಿ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಮತ್ತು ಸಂಘಪರಿವಾರದ ಹಲವು ನಾಯಕರು ಲೈಂಗಿಕ ಹಗರಣ- ಕಿರುಕುಳ ಮುಂತಾದ ಚಾರಿತ್ರ್ಯಹೀನ ಕೃತ್ಯಗಳಲ್ಲಿ ಭಾಗಿಯಾಗಿ ಟೀಕೆಗೆ ಗುರಿಯಾಗಿಯೂ ಅಧಿಕಾರ, ಸ್ಥಾನಮಾನ ಪಡೆಯುತ್ತಿರುವುದು ಅತ್ಯಂತ ಕೆಟ್ಟ ಬೆಳವಣಿಗೆ. ಈ ಒಂದು ವಾರದಲ್ಲಿ ಬಿಜೆಪಿಯಿಂದ ಬಂದಿರುವ ಮೂರು ಸುದ್ದಿಗಳು ಸಾರ್ವಜನಿಕ ಲಜ್ಜೆಗೇಡಿತನಕ್ಕೆ ಸ್ಪಷ್ಟ ಉದಾಹರಣೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಅಮೆರಿಕದ ಕುಖ್ಯಾತ ಲೈಂಗಿಕ ಹಗರಣದ ಅಪರಾಧಿ ಜೆಫ್ರಿ ಎಪ್ಸ್ಟೀನ್‌ ಜೊತೆಗೆ ಸಂಪರ್ಕದಲ್ಲಿದ್ದ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ರಾಜೀನಾಮೆ ಕೊಡಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತದ್ದ ಬೆನ್ನಲ್ಲೇ ಅವರನ್ನು ಮತ್ತೊಂದು ಅವಧಿಗೆ ರಾಜ್ಯಸಭೆಗೆ ಆಯ್ಕೆ ಮಾಡಲು ಮಧ್ಯಪ್ರದೇಶದಿಂದ ಬಿಜೆಪಿ ಟಿಕೆಟ್‌ ನೀಡಿದೆ. ಲೈಂಗಿಕ ಕಿರುಕುಳದ ಆರೋಪ ಎದುರಿಸಿದ್ದ ಬ್ರಿಜ್‌ ಭೂಷಣ್‌ಗೆ ಪಕ್ಷದ ಜವಾಬ್ದಾರಿ ನೀಡಲಾಗಿದೆ. ಕರ್ನಾಟಕ ಮೂಲದ ಆರೆಸ್ಸೆಸ್‌ ಮುಖಂಡರೊಬ್ಬರ ಹೆಸರು ಅಂಕಿತಾ ಭಂಡಾರಿ ಕೊಲೆ ಪ್ರಕರಣದ ʼವಿಐಪಿʼ ಯಾದಿಯಲ್ಲಿ ಕೇಳಿಬಂದಿದೆ..

Advertisements

ಕೆಲ ತಿಂಗಳ ಹಿಂದೆ ಅಮೆರಿಕದ ಕುಖ್ಯಾತ ಮಕ್ಕಳ ಅತ್ಯಾಚಾರಿ, ಶಿಕ್ಷೆಗೊಳಗಾಗಿ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ ಜೆಫ್ರಿ ಎಪ್‌ಸ್ಟೀನ್‌ ಇಮೇಲ್‌ ನಲ್ಲಿ ಭಾರತದ ಕೆಲವು ಉದ್ಯಮಿಗಳು ಮತ್ತು ರಾಜಕಾರಣಿಗಳ ಹೆಸರು ಬಯಲಾಗಿ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಮುಖ್ಯವಾಗಿ ಬಿಜೆಪಿ ರಾಜ್ಯಸಭಾ ಸದಸ್ಯ ಮತ್ತು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಎಪ್‌ಸ್ಟೀನ್‌ನನ್ನು ಭೇಟಿಯಾಗಿರುವ ಬಗ್ಗೆ ಚರ್ಚೆ ನಡೆದಿತ್ತು. ಸಚಿವರ ಪುತ್ರಿಗೆ ಆತನ ಜೊತೆಗೆ ನೇರವಾಗಿ ವ್ಯಾಪಾರ ಸಂಬಂಧ ಹೊಂದಿರುವುದು ಬಯಲಾಗಿತ್ತು. ಫೆಬ್ರವರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಪ್‌ಸ್ಟೀನ್‌ ನ ಪರಿಚಯವಾಗಿದ್ದು ಹೇಗೆ ಎಂಬುದನ್ನು ಪುರಿ ವಿವರಿಸಿದ್ದರು. ಐಪಿಐನಲ್ಲಿ ಅವರ ಆಗಿನ ಮುಖ್ಯಸ್ಥರಾಗಿದ್ದ ಹಿರಿಯ ನಾರ್ವೆಯ ರಾಜತಾಂತ್ರಿಕ ಟೆರ್ಜೆ ರೋಡ್-ಲಾರ್ಸೆನ್ ಅವರಿಗೆ ಎಪ್ಸ್ಟೀನ್ ಪರಿಚಯವಿತ್ತು. ಪುರಿ ಅವರ ಮೊದಲ ಭೇಟಿ ರೋಡ್-ಲಾರ್ಸೆನ್ ನೇತೃತ್ವದ ಐಪಿಐ ನಿಯೋಗದ ಭಾಗವಾಗಿ ನಡೆದಿತ್ತು ಎಂದು ಸಮಜಾಯಿಷಿ ನೀಡಿದ್ದರು. ಆದರೆ ಇದೇ ಅಕ್ಟೋಬರ್‌ 21ರಂದು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಚಿತ್ರದಲ್ಲಿ ಪುರಿ ಅವರು ಎಪ್ಸ್ಟೀನ್ ಎದುರು ಏಕಾಂಗಿಯಾಗಿ ಕುಳಿತಿರುವುದು ಕಂಡುಬಂದಿದೆ. ಇದೀಗ ಅವರನ್ನು ಸಂಪುಟದಿಂದ ಕೈಬಿಡುವುದರ ಬದಲು ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡಲು ಮುಂದಾಗಿರುವುದು ಮೋದಿ ಸರ್ಕಾರದ ನೀಚ ಮನಸ್ಥಿತಿಗೆ ಹಿಡಿದ ಕನ್ನಡಿ.

ಹಿಂದೆ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಸಚಿವರಾಗಿದ್ದ ಎಲ್‌ ಮುರುಗನ್‌ ಅವರು ಇತ್ತೀಚೆಗಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿನಿಮಾ ನಟಿಯೊಬ್ಬರಿಗೆ ವಾಟ್ಸ್ಯಾಪ್‌ನಲ್ಲಿ ಪದೇ ಪದೇ ಸಂದೇಶ ಕಳಿಸಿರುವ ಬಗ್ಗೆ ನಟಿ ಸರ್ಕಾರದ ಗಮನಕ್ಕೆ ತಂದ ನಂತರ ಮುರುಗನ್‌ ರಾಜೀನಾಮೆ ಕೊಟ್ಟು ಹೊರ ನಡೆದಿದ್ದಾರೆ. ಆ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಈಗ ಹರ್ದೀಪ್‌ ಪುರಿ ಸ್ಪರ್ಧಿಸುತ್ತಿರುವುದು ನೀಚತನದ ಪರಮಾವಧಿ.

ಇನ್ನು 2023ರಲ್ಲಿ ದೇಶದಲ್ಲಿ ಕುಸ್ತಿಪಟುಗಳ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದ ವ್ಯಕ್ತಿ ಉತ್ತರಪ್ರದೇಶದ ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌. ಯುಪಿಯಲ್ಲಿ ಬೃಹತ್‌ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಈ ಪ್ರಭಾವಿಯು ಕುಸ್ತಿ ಫೆಡರೇಷನ್‌ ಅಧ್ಯಕ್ಷನಾಗಿದ್ದ. ಆತನ ವಿರುದ್ಧ ಒಲಿಂಪಿಕ್‌, ಏಷ್ಯನ್‌ ಗೇಮ್ಸ್‌ ಪದಕವಿಜೇತ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಪೊಲೀಸರು ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಲು ಹಿಂದೇಟು ಹಾಕಿದ ಕಾರಣಕ್ಕೆ ಕುಸ್ತಿ ಪಟು ವಿನೇಶಾ ಪೋಗಟ್‌, ಸಾಕ್ಷಿ ಮಲ್ಲಿಕ್‌ ಸಹಿತ ಹಲವು ಮಹಿಳಾ ಕುಸ್ತಿಪಟುಗಳು ಒಂದು ತಿಂಗಳ ಕಾಲ ಜಂತರ್‌ ಮಂತರ್‌ನಲ್ಲಿ ಧರಣಿ ನಡೆಸಿದ್ದರು. ಕಡೆಗೂ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಆದರೂ ಆತನ ರಾಜೀನಾಮೆ ಪಡೆಯುವ ಅಥವಾ ಪಕ್ಷದಿಂದ ಉಚ್ಛಾಟಿಸುವ ಕೆಲಸ ಮೋದಿಯಾಗಲಿ, ಬಿಜೆಪಿಯಾಗಲಿ ಮಾಡಲಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ಬ್ರಿಜ್‌ಭೂಷಣ್‌ ಬದಲಿಗೆ ಆತನ ಮಗನಿಗೆ ಬಿಜೆಪಿ ಟಿಕೆಟ್‌ ನೀಡಿತ್ತು. ಲೈಂಗಿಕ ಕಿರುಕುಳ ಪ್ರಕರಣದಿಂದ ತಿಂಗಳ ಹಿಂದೆ ಕೋರ್ಟ್‌ ಆತನನ್ನು ಖುಲಾಸೆಗೊಳಿಸಿದೆ. ಇದೀಗ ಅದಕ್ಕೆ ಬಹುಮಾನವಾಗಿ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದೆ!

ಈಗ ಬೇಟಿ ಬಚಾವೋ ಯಾರಿಂದ ಎಂಬ ಪ್ರಶ್ನೆಯನ್ನು ಬಿಜೆಪಿಗೆ ಕೇಳಬೇಕಿದೆ. ಮಹಿಳೆಯರನ್ನು ಮಾತೆಯರು, ದೇವರಿಗೆ ಸಮಾನ ಎಂದು ಹೇಳುತ್ತಾ ಬಂದಿರುವ ಸಂಘಪರಿವಾರ, ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಹೆಣ್ಣುಮಕ್ಕಳನ್ನು ಭೋಗದ ವಸ್ತು ಎಂದು ಭಾವಿಸುವ, ಎರಡನೇ ದರ್ಜೆಯ ಪ್ರಜೆಯಾಗಿ ಪರಿಗಣಿಸಿರುವ ಈ ಸಮಾಜದಲ್ಲಿ ಜನಪ್ರತಿನಿಧಿಗಳು ಎಂತಹ ಮಾದರಿಯನ್ನು ಅನುಸರಿಸುತ್ತಿದ್ದಾರೆ? ಸ್ತ್ರೀಪೀಡಕರಿಗೆ ಬಿಜೆಪಿಯಲ್ಲಿ ಸ್ಥಾನಮಾನ ಕೊಡುತ್ತಿರುವುದರ ಸಂದೇಶವೇನು? ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುಗಳಿಗೇ ಕುಸ್ತಿ ಫೆಡರೇಷನ್‌ ಮುಖ್ಯಸ್ಥ, ಬಿಜೆಪಿ ಸಂಸದನಾಗಿರುವ ವ್ಯಕ್ತಿ ಕಿರುಕುಳ ಕೊಟ್ಟ ಆರೋಪ ಬಂದಾಗ ಕನಿಷ್ಠ ಪಕ್ಷ ಆತನ ವಿರುದ್ಧ ಶಿಸ್ತು ಕ್ರಮ ಜರುಗಿಸದ, ಎಪ್ಸ್ಟೀನ್‌ ಫೈಲ್ಸ್‌ನಲ್ಲಿ ಇರುವ ವ್ಯಕ್ತಿಗೆ ಮತ್ತೊಂದು ಅವಧಿಗೆ ರಾಜ್ಯಸಭೆಗೆ ಅವಕಾಶ ಕೊಡಲು ಹೊರಟಿರುವ ಬಿಜೆಪಿ ಮತ್ತು ಮೋದಿಯವರ ಮುಖವಾಡ ಬಯಲಾಗಿದೆ.

ಹೆಣ್ಣುಮಕ್ಕಳ ವಿಚಾರದಲ್ಲಿ ಮೋದಿಯವರದ್ದು ಚುನಾವಣೆಯ ಸಮಯದಲ್ಲಿ ಭಾವನಾತ್ಮಕವಾಗಿ ಸೆಳೆಯುವ ನಾಟಕವೇ ಹೊರತು ನಿಜವಾದ ಕಾಳಜಿ ಅಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಕನಿಷ್ಠ ಹೆಣ್ಣುಮಕ್ಕಳನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕಿದೆ. ಎಪ್ಸ್ಟೀನ್‌ ಜೊತೆಗಿನ ವೈಯಕ್ತಿಕ ಫೋಟೋ ಬಯಲಾದ ಮೇಲೂ ಹರ್ದೀಪ್‌ ಪುರಿ ಅವರನ್ನು ರಾಜ್ಯಸಭೆಗೆ ಪುನರಾಯ್ಕೆ ಮಾಡಿಕೊಳ್ಳುವ ದರ್ದು ಮೋದಿಯವರಿಗೆ ಯಾಕಿದೆ ಎಂಬುದು ಪ್ರಶ್ನಾರ್ಹ.

+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ, ಊರಲ್ಲಿ ಪಡಿತರವೂ ಇಲ್ಲ!

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು...

ಹೊಸನಗರ | ರೂ. 4 ಲಕ್ಷ ಮೌಲ್ಯದ ಸಾಗುವಾನಿ ನಾಟ ವಶ!

ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಂದೂರು ಗ್ರಾಮದಲ್ಲಿ...

ಯುಪಿ | ಬ್ರಿಜ್ ಭೂಷಣ್‌ಗೆ ಬಿಜೆಪಿ ಮತ್ತೆ ಮಣೆ; ಚುನಾವಣೆಗೆ ಮುನ್ನ ಟಾಪ್ ಟೀಮ್‌ನಲ್ಲಿ ಸ್ಥಾನ!

ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡ ಕೆಲವೇ ತಿಂಗಳ...