ಲೇಖಕ ಖುಷ್ವಂತ್ ಸಿಂಗ್ ಅವರ ‘ಟ್ರೇನ್ ಟು ಪಾಕಿಸ್ತಾನ್’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ ವೈದ್ಯ ಎಂ ಬಿ ರಾಮಮೂರ್ತಿ ಅವರು ನಿಧನರಾಗಿದ್ದಾರೆ.
ವೈದ್ಯರೂ ಆದ ಎಂ ಬಿ ರಾಮಮೂರ್ತಿ ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಹಲವು ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಿರುತ್ತಾರೆ.
ಲೇಖಕ ವೀರಣ್ಣ ಮಡಿವಾಳರ ಹೇಳುವಂತೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಎಂ ಬಿ ರಾಮಮೂರ್ತಿ ಜೀವನಗಾಥೆ ಹೊರತರಲು ಸಿದ್ಧತೆ ನಡೆಸಲಾಗುತ್ತಿತ್ತು.
ಇದನ್ನು ಓದಿದ್ದೀರಾ? ಕನ್ನಡ ಸಿನಿಮಾ ನಿರ್ದೇಶಕ ಎ ಟಿ ರಘು ನಿಧನ
“ನನ್ನಲ್ಲಿ ಸಾಹಿತ್ಯಾಸಕ್ತಿ ಮೂಡಲು ನನ್ನ ಸಾಂಸ್ಕೃತಿಕ ಗುರುಗಳಾದ ಲಂಕೇಶ್ ಮೇಷ್ಟು ಕಾರಣರಾದರೆ, ಗೆಳತಿ ಗೌರಿ ಲಂಕೇಶರು ನನ್ನಲ್ಲಿ ಸಾಹಿತ್ಯ ಪ್ರೀತಿ ಹೆಚ್ಚಾಗುವಂತೆ ಮಾಡಿದ್ದಾರೆ” ಎಂದು ರಾಮಮೂರ್ತಿ ಈ ಹಿಂದೆ ಹೇಳಿದ್ದರು.
ಟ್ರೇನ್ ಟು ಪಾಕಿಸ್ತಾನ್ ಖುಷ್ವಂತ್ ಅವರ ಮೊದಲ ಕಾದಂಬರಿ ಆಗಿರುವಂತೆ ರಾಮಮೂರ್ತಿ ಅವರ ಮೊದಲ ಕನ್ನಡ ಅನುವಾದಿತ ಕಾದಂಬರಿಯಾಗಿದೆ. ಈ ಕಾದಂಬರಿಗೆ ಪತ್ರಕರ್ತೆ ಗೌರಿ ಲಂಕೇಶ್ ಅವರು ಮುನ್ನುಡಿ ಬರೆದಿದ್ದಾರೆ. ‘ಕೋಶ ಓದು ದೇಶ ನೋಡು’ ಬಳಗ 2018ರಲ್ಲಿ ಓದು ಅಭಿಯಾನ ಆರಂಭಿಸಿದ ಬಳಿಕ ಟ್ರೇನ್ ಟು ಪಾಕಿಸ್ತಾನ್ ಹೆಚ್ಚು ಯುವಕರನ್ನು ಸೆಳೆಯಿತು.
