ಇಂದು ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಈದಿನ ಡಾಟ್ ಕಾಮ್‌ನ ‘ನಮ್ಮ ಕರ್ನಾಟಕ’ (ನಡೆದ 50 ಹೆಜ್ಜೆ, ಮುಂದಿನ ನಡೆ) – ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು. ಜೊತೆಗೆ ಈದಿನ ನ್ಯೂಸ್ ಆ್ಯಪ್ ಬಿಡುಗಡೆ ಮಾಡಲಾಯಿತು. ಕುವೆಂಪು ಜನ್ಮ ದಿನ ಪ್ರಯುಕ್ತ ಇಂದೇ ಸಂಚಿಕೆ ಮತ್ತು ನ್ಯೂಸ್ ಆ್ಯಪ್ ಬಿಡುಗಡೆ ಮಾಡಲಾಯಿತು.
ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಜಿಲ್ಲೆಯ ಪತ್ರಕರ್ತರ ಭವನದಲ್ಲಿ ಬೆಳಗ್ಗೆ 10.30ಕ್ಕೆ ವಿಶೇಷ ಸಂಚಿಕೆ ಮತ್ತು ಈದಿನ ನ್ಯೂಸ್ ಆ್ಯಪ್ ಅನ್ನು ದಲಿತ ಸಂಘರ್ಷ ಸಮಿತಿ (ದಸಂಸ) ಸ್ಥಾಪಕ ಸದಸ್ಯರು ಎನ್ ವೆಂಕಟೇಶ್ (ಗಡ್ಡಂ) ಬಿಡುಗಡೆ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ಕೋ ಡಿ ರಂಗಪ್ಪ ವಿಶೇಷ ಉಪನ್ಯಾಸ ನೀಡಿದರು. ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆರ್ ಆಂಜನೇಯ ರೆಡ್ಡಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಜಾಯತ್ ಮಾಜಿ ಅಧ್ಯಕ್ಷ ಎಚ್ ವಿ ಮಂಜುನಾಥ್, ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಎಂ ಜಯರಾಮ್, ಜಮಾ ಅತೆ ಇಸ್ಲಾಮ್ ಆಡಳಿತಾಧಿಕಾರಿ ಹೈದರ್ ಆಲಿ, ದಲಿತ ಮುಖಂಡರಾದ ಸುಧಾ ವೆಂಕಟೇಶ್, ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮೀ ದೇವಮ್ಮ, ಈದಿನ ಡಾಟ್ ಕಾಮ್‌ನ ರಾಜಶೇಖರ್ ಅಕ್ಕಿ ಮುಖ್ಯ ಅತಿಥಿಗಳಾಗಿ ವೇದಿಕೆ ಹಂಚಿಕೊಂಡರು. ವಿವಿಧ ಪ್ರಗತಿಪರ, ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದರು.

ಬೆಳಗಾವಿ
ಬೆಳಗಾವಿಯ ಕೊಲ್ಲಾಪುರ ಸರ್ಕಲ್ ಬಳಿಯಿರುವ ಮಾನವ ಬಂಧುತ್ವ ವೇದಿಕೆಯಲ್ಲಿ ಬೆಳಗ್ಗೆ ವಿಶೇಷ ಸಂಚಿಕೆ ಮತ್ತು ಈದಿನ ನ್ಯೂಸ್ ಆ್ಯಪ್ ಬಿಡುಗಡೆ ಮಾಡಲಾಯಿತು. ಈ ದಿನ ಸಂಚಿಕೆಯನ್ನು ಬೆಳಗಾವಿ ಉತ್ತರ ಶಾಸಕರಾದ ಆಸಿಫ್ ಸೇಠ್ ಅವರು ಬಿಡುಗಡೆ ಮಾಡಿದರು. ರೈತ ಮುಖಂಡ ಸಿದಗೌಡ ಮೋದಗಿ ಈ ದಿನ ಆ್ಯಪ್ ಬಿಡುಗಡೆ ಮಾಡಿದರು. ಜಮಾತ್ ಎ ಇಸ್ಲಾಮಿ ಹಿಂದ್‌ನ ಮೆಹಬೂಬ್ ಖಾನ್ ಪಠಾಣ ಅಧ್ಯಕ್ಷತೆ ವಹಿಸಿದರು.
ಹಿರಿಯ ಪತ್ರಕರ್ತ ಋಷಿಕೇಷ್ ಬಹುದ್ದೂರ್ ದೇಸಾಯಿ, ಲೇಖಕ ಪ್ರದೀಪ್ ಮಾಲ್ಗುಡಿ, ನಾಟಕಕಾರ ಡಾ.ಡಿ.ಎಸ್.ಚೌವಗಲೆ ಮಾತನಾಡಿದರು. ಭೀಮವಾದ ಸಂಘಟನೆ ಮುಖಂಡ ಸಿದ್ಧಾರ್ಥ ಸಿಂಗೆ, ಜಾಗತಿಕ ಲಿಂಗಾಯತ ಮಹಾ ಸಭಾ ಮುಖಂಡ ಬಸವರಾಜ ರೊಟ್ಟಿ, ಸಿಪಿಐಎಂ ಮುಖಂಡ ಮಂದಾ ನೇವಗಿ, ಎಪಿಎಂಸಿ ವರ್ತಕರ ಸಂಘದ ಸತೀಶ್ ಪಾಟೀಲ್, ದಲಿತ ಸಂಘಟನೆಯ ಕಲ್ಲಪ್ಪ ಕಾಂಬ್ಲೆ ಉಪಸ್ಥಿತರಿದ್ದರು.

ದಾವಣಗೆರೆ
ನಮ್ಮ ಕರ್ನಾಟಕ ನಡೆದ 50 ಹೆಜ್ಜೆ ಮುಂದಿನ ದಾರಿ, ಈದಿನ ವಿಶೇಷ ಸಂಚಿಕೆ ಮತ್ತು ನ್ಯೂಸ್ ಆ್ಯಪ್ ಬಿಡುಗಡೆ ಕಾರ್ಯಕ್ರಮ ಇಂದು ದಾವಣಗೆರೆ ರೋಟರಿ ಬಾಲಭವನದಲ್ಲಿ ನೆರವೇರಿತು. ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಸತೀಶ್ ಅರವಿಂದ್, ಪುಸ್ತಕ ಕುರಿತು ಮುಖ್ಯ ಆಡಳಿತಾಧಿಕಾರಿ ಶ್ರೀನಿವಾಸ್ ಮಾತನಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಫಕ್ರುದ್ದೀನ್ ಅಧ್ಯಕ್ಷತೆ ವಹಿಸಿದರು. ಅತಿಥಿಗಳಾಗಿ ಆರೋಗ್ಯ ಇಲಾಖೆ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ರೈತ ಮುಖಂಡ ತೇಜಸ್ವಿ ಪಟೇಲ್, ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ದಸಂಸ ಮುಖಂಡ ಮಂಜುನಾಥ ಕುಂದುವಾಡ, ದಲಿತ ಹಿರಿಯ ನಾಯಕ ಬಿಎಂ ಹನುಮಂತಪ್ಪ, ಜಬೀನ ಖಾನಂ, ಅನೀಶ್ ಪಾಷಾ, ಪ್ರಕಾಶ್ ಸೇರಿದಂತೆ ರೈತ ಸಂಘ, ಕಾರ್ಮಿಕ ಸಂಘಟನೆ, ಗ್ರಾಕೂಸ್, ಜನಶಕ್ತಿ ಇತರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ಶಿವಮೊಗ್ಗ
ಶಿವಮೊಗ್ಗದ ಪತ್ರಿಕಾ ಭವನದ ಎದುರು ಇರುವ ಶ್ರೀಕಲಾ ಕೌಶಲ್ಯಭಿವೃದ್ಧಿ ಕೇಂದ್ರದಲ್ಲಿ ಬೆಳಗ್ಗೆ 10:30ಕ್ಕೆ ವಿಶೇಷ ಸಂಚಿಕೆ ಮತ್ತು ಈದಿನ ನ್ಯೂಸ್ ಆ್ಯಪ್ ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಐಎಎಸ್) ಹೇಮಂತ್ ಎನ್, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಖ್ಯಾತ ಸಾಹಿತಿ ಡಾ. ಶ್ರೀಕಂಠ ಕೂಡಿಗೆ, ಲೇಖಕಿ ಡಾ.ಸಬಿತ ಬನ್ನಾಡಿ, ಡಾ. ಪೂರ್ಣನಂದ, ಡಾ. ಸಿರಾಜ್ ಅಹಮದ್ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.


ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲೆಯ ಕುವೆಂಪು ಕಲಾ ಮಂದಿರ, ಹೇಮಾಂಗಣದಲ್ಲಿ ಬೆಳಗ್ಗೆ 10:30ಕ್ಕೆ ವಿಶೇಷ ಸಂಚಿಕೆ ಮತ್ತು ಈದಿನ ನ್ಯೂಸ್ ಆ್ಯಪ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಸಂಚಿಕೆ ಬಿಡುಗಡೆಯನ್ನು ಎದ್ದೇಳು ಕರ್ನಾಟಕ ಮುಖ್ಯಸ್ಥರು ತಾರ ರಾವ್, ಈದಿನ ಆ್ಯಪ್ ಹಾಗೂ ಸಹಾಯವಾಣಿ ಬಿಡುಗಡೆಯನ್ನು ಕರ್ನಾಟಕ ಜನಶಕ್ತಿ ರಾಜ್ಯ ಉಪಾಧ್ಯಕ್ಷ ಗೌಸ್ ಮೋಹದ್ಧಿನ್ ಮಾಡಿದರು. ಮುಖ್ಯ ಅತಿಥಿಗಳಾಗಿ ಪರಿಸರವಾದಿ, ಸಾಮಾಜಿಕ ಕಾರ್ಯಕರ್ತ ಡಾ. ಕಲ್ಕುಳಿ ವಿಠಲ್ ಹೆಗ್ಡೆ, ರಾಜ್ಯ ರೈತ ಸಂಘ ತಾಲ್ಲೂಕು ಅಧ್ಯಕ್ಷರು ಸುರೇಶ್ ಭಟ್ ಭಾಗವಹಿಸಿದರು. ವಿಶೇಷ ಸಂಚಿಕೆ ಉಪನ್ಯಾಸವನ್ನು ಮಲೆನಾಡು ಉಳಿಸಿ ಅಭಿಯಾನದ ರಾಜ್ಯ ಸಂಚಾಲಕರು ಕೆ ಎಲ್ ಅಶೋಕ್ ಅವರು ಮಾಡಿದರು.

ಉಡುಪಿ
ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‌ನ ಅವೆ ಮರಿಯಾ ಹಾಲ್‌ನಲ್ಲಿ ಇಂದು ‘ನಮ್ಮ ಕರ್ನಾಟಕ’ ವಿಶೇಷ ಸಂಚಿಕೆ ಮತ್ತು ಈದಿನ ನ್ಯೂಸ್ ಆ್ಯಪ್ ಬಿಡುಗಡೆ ಮಾಡಲಾಯಿತು. ರಾಷ್ಟ್ರ ಕವಿ ಕುವೆಂಪುರವರ ಜನ್ಮದಿನದ ಪ್ರಯುಕ್ತ ನಾಡ ಗೀತೆ ಹಾಡುವ ಮೂಲಕ ಕಾರ್ಯಕ್ರಮ ಪಾರಂಭಿಸಲಾಯಿತು. ಈದಿನ.ಕಾಮ್ ಉಡುಪಿ ಜಿಲ್ಲಾ ಸಂಯೋಜಕರಾದ ಶಾರೂಕ್ ತೀರ್ಥಹಳ್ಳಿ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಗಣನಾಥ ಶೆಟ್ಟಿ ಎಕ್ಕಾರು ಸಾಹಿತಿಗಳು, ಮತ್ತು ಫಾದರ್ ವಿಲಿಯಂ ಮಾರ್ಟಿಸ್ ಧರ್ಮಗಳು ಉಡುಪಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ರಾಜೇಶ್ ಶೆಟ್ಟಿ ಅಲೆವೂರು ಈದಿನ ಆ್ಯಪ್ ಬಿಡುಗಡೆಗೊಳಿಸಿದರು. ಸಹಬಾಳ್ವೆ ಉಡುಪಿ ಜಿಲ್ಲೆಯ ಸಂಚಾಲಕರಾದ ಪ್ರೋ ಪಣಿರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಯೋಜಕರಾದ ಸುಂದರ್ ಮಾಸ್ಟರ್, ಜಮಾ ಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಹುಮೈರಾ ಕಾರ್ಕಳ, ಈದಿನ.ಕಾಮ್ ಸೆಂಟರ್ ಕೋ ಆರ್ಡಿನೇಟರ್ ಸಂತೋಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಮಾಂಜಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತು.


ಧಾರವಾಡ
ಧಾರವಾಡದ ನಿವೃತ್ತ ನೌಕಕರ ಭವನದಲ್ಲಿ ಬೆಳಗ್ಗೆ ಈದಿನ ವಿಶೇಷ ಸಂಚಿಕೆ ಮತ್ತು ಈದಿನ ನ್ಯೂಸ್ ಆ್ಯಪ್ ಬಿಡುಗಡೆ ಮಾಡಲಾಯಿತು. ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಚಂದ್ರ ಪೂಜಾರಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು. ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ಧಣ್ಣ ತೇಜಿ ಈದಿನ ನ್ಯೂಸ್ ಆ್ಯಪ್ ಬಿಡುಗಡೆ ಮಾಡಿದರು.
ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೆಂಕನಗೌಡ ಪಾಟೀಲ್ ‘ನಮ್ಮ ಕರ್ನಾಟಕ ನಡೆದ 50 ಹಾಗು ಹೆಜ್ಜೆ, ಮುಂದಿನ ದಿಕ್ಕು’ ಮತ್ತು ಕುವೆಂಪು ಕುರಿತು ಮಾತನಾಡಿದರು. ಕರ್ನಾಟಕ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಬಸವರಾಜ ಗೊರವರ, ಗ್ರಾಮೀಣ ಕೂಲಿಕಾರರ ಸಂಘಟನೆ ಸಂಚಾಲಕಿ ನಿಂಗಮ್ಮ ಸವಣೂರ ಜನರನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಂಘಟನೆಗಳ ಸಂಘಟಕರು, ವಿವಿಧ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಮಂಡ್ಯ
ಈದಿನ ವಿಶೇಷ ಸಂಚಿಕೆ, ಆ್ಯಪ್ ಬಿಡುಗಡೆ ಹಾಗೂ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ ಇಂದು ಸಂಜೆ ಶ್ರೀರಂಗಪಟ್ಟಣದ ಸಂಜಯ ಪ್ರಕಾಶನದಲ್ಲಿ ನಡೆಯಿತು. ಸಾಮಾಜಿಕ ಹೋರಾಟಗಾರ ನ.ಲಿ.ಕೃಷ್ಣ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಉಪನ್ಯಾಸಕರಾದ ಚಲುವರಾಜು ಕುವೆಂಪು ಕುರಿತು ಉಪನ್ಯಾಸ ನೀಡಿದರು. ದಸಂಸ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಈದಿನ ಆ್ಯಪ್ ಬಿಡುಗಡೆ ಮಾಡಿದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಕೊಡಗು
ಕೊಡಗಿನ ಹೊದ್ದೂರು ಗ್ರಾಮ ಪಂಚಾಯಿತಿಯ ಪೆಗ್ಗೋಲಿಯಲ್ಲಿ ಇಂದು ಬೆಳಗ್ಗೆ ಈದಿನ ವಿಶೇಷ ಸಂಚಿಕೆ ಮತ್ತು ಈದಿನ ನ್ಯೂಸ್ ಆ್ಯಪ್ ಬಿಡುಗಡೆ ಮಾಡಲಾಯಿತು. ಬಹುಜನ ಕಾರ್ಮಿಕ ಸಂಘ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡರಾದ ಕೆ ಮೊಣ್ಣಪ್ಪ ಅಧ್ಯಕ್ಷತೆ ವಹಿಸಿದರು. ಈದಿನ ಡಾಟ್ ಕಾಮ್ ಫೀಲ್ಡ್ ಕೋ ಆರ್ಡಿನೇಟರ್ ಮೋಹನ್ ಮೈಸೂರು ಸಂಚಿಕೆ ಕುರಿತಾಗಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಿಪಿಐಎಂಎಲ್ ರಾಜ್ಯ ಮುಖಂಡ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಮುಖಂಡರಾದ ನಿರ್ವಾಣ್ಣಪ್ಪ, ಸಾಹಿತಿ ಹಾಗೂ ಉಪನ್ಯಾಸಕರು ಅರ್ಜುನ್ ಮೌರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕುಸುಮಾವತಿ ಗ್ರಾಮ ಪಂಚಾಯಿತಿ ಸದಸ್ಯರಾದ ಹಮೀದ್, ಲಕ್ಷ್ಮಿ, ಆದಿವಾಸಿ ಮುಖಂಡರು ಅಣ್ಣಪ್ಪ, ದಲಿತ ಮುಖಂಡರಾದ ಪ್ರಕಾಶ್, ಮಂಜು ಉಪಸ್ಥಿತರಿದ್ದರು.


ವಿಜಯಪುರ
ವಿಜಯಪುರದ ಕಂದಾಯ ಇಲಾಖೆ ನೌಕರರ ಭವನದಲ್ಲಿ ಬೆಳಗ್ಗೆ ಈದಿನ ವಿಶೇಷ ಸಂಚಿಕೆ ಮತ್ತು ಈದಿನ ನ್ಯೂಸ್ ಆ್ಯಪ್ ಬಿಡುಗಡೆ ಮಾಡಲಾಯಿತು. ಕುವೆಂಪು ಅವರ ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರ ಬನ್ನಿ ಹಾಡು ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಸಂವಿಧಾನ ಪೀಠಕೆ ಓದಲಾಯಿತು. ಮಾಜಿ ಶಾಸಕರು ಪ್ರೊ. ರಾಜು ಆಲಗೂರ, ಅಹಿಂದ ಮುಖಂಡರು ಎಸ್. ಎಂ. ಪಾಟೀಲ (ಗಣಿಹಾರ) ಸಂಚಿಕೆ ಮತ್ತು ಆ್ಯಪ್ ಬಿಡುಗಡೆ ಮಾಡಿದರು. ಅತಿಥಿಗಳಾದ ಲೇಖಕಿ ವಿದ್ಯಾವತಿ ಅಂಕಲಗಿ ಮತ್ತು ಅಬ್ದುಲ್ ರೆಹಮಾನ್ ಬೀದರಕುಂದಿ ಮಾತನಾಡಿದರು. ಸಂಜು ಕಂಬಾಗಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಅಕ್ಷಯಕುಮಾರ ಅಜಮನಿ ನಿರ್ವಹಿಸಿದರು. ಚೆನ್ನು ಕಟ್ಟಿಮನಿ, ಸಿದ್ದು ರಾಯಣ್ಣವರ, ಕೆ. ಎಫ್.ಅಂಕಲಿಗಿ, ಪ್ರಭುಗೌಡ ಪಾಟೀಲ ಜಿಲ್ಲೆಯ ವಿವಿಧ ದಲಿತ ಪರ, ಪ್ರಗತಿಪರ ಸಂಘಟನೆ ಭಾಗಿಯಾಗಿದ್ದರು.

