ದೇಶದಲ್ಲಿ ಸನಾತನ ಧರ್ಮವೊಂದೇ ಇರುವುದು, ಉಳಿದೆಲ್ಲವೂ ಗುಂಪುಗಳಷ್ಟೇ. ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಗುಂಪುಗಳನ್ನು ವರ್ತಮಾನದ ಆಯುಧಗಳನ್ನು ಹಿಡಿದು ನಾಶಪಡಿಸಿ, ಕೊಲ್ಲಿ ಎಂದು ಬೆಂಗಳೂರಿನ ಸಮರ್ಥ ಶ್ರೀಧರರಾಶ್ರಮ ಟ್ರಸ್ಟ್‌ನ ಆತ್ಮಾನಂದ ಸರಸ್ವತಿ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಸಂಬಂಧ ಅವರ ವಿರುದ್ಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಸ್ವಾಮೀಜಿಯ ವಿವಾದಾತ್ಮಕ ಹೇಳಿಕೆಯ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಈ ವರದಿ ಆಧಾರದಲ್ಲಿ ಪೊಲೀಸರು ಆತ್ಮಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಸುವೋಮೋಟೋ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ 2023 – 196(1), 351(2) ಅಡಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿದ್ದೀರಾ? ಥಗ್ ಲೈಫ್ ಸಿನಿಮಾ ನಿಷೇಧ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ದುಷ್ಟರನ್ನು ನಾಶಪಡಿಸುವುದಕ್ಕೆಂದೇ ಹಿಂದೂ ಧರ್ಮವಿದೆ. ಆದ್ದರಿಂತ ಯಾವುದೇ ಕರುಣೆಯಿಲ್ಲದೆ ದುಷ್ಟರನ್ನು ಕೊಲ್ಲಬೇಕು. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ವಾಮೀಜಿ ಹೇಳಿದ್ದರು.
ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಗುಂಪುಗಳನ್ನು ದಯೆಯಿಲ್ಲದೆ ಕೊಚ್ಚಿ ಹಾಕಿ. ಇಂತಹವರು ನಮ್ಮ ದೇಶ, ಧರ್ಮವನ್ನು ಶಾಂತಿಯಾಗಿರಲು ಬಿಡುವುದಿಲ್ಲ. ಹಿಂದಿನ ಮಹಾನಾಯಕರು ದಯೆ ಇಟ್ಟುಕೊಂಡು ಇಂತಹವನ್ನು ಕೊಲ್ಲದೆ ಬಿಟ್ಟರು. ಈಗಿದು ಮುಗಿದುಹೋಗಬೇಕು, ಪುನಃ ಮಹಾಭಾರತ ಆಗುವ ಅವಶ್ಯಕತೆಯಿಲ್ಲ. ಪುನಃ ಸಮರ್ಥರು ಬರಬೇಕು ಅಥವಾ ಶಿವಾಜಿ ಬರಬೇಕು ಎಂಬ ಅವಶ್ಯಕತೆಯಿಲ್ಲ. ನಾವೇ ಪ್ರತಿಯೊಬ್ಬರೂ ಶಿವಾಜಿಯಾಗಿ ಹೊರಬರಬೇಕು. ನಾನು ಹಿಂದೂ ಸಮಾಜಕ್ಕೆ ಕರೆ ಕೊಡುತ್ತಿದ್ದೇನೆ ಎಂದೂ ಪ್ರಚೋದಾನಾಕಾರಿ ಹೇಳಿಕೆ ನೀಡಿದ್ದರು.