ಕರ್ನಾಟಕದ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸುವುದರಿಂದ ಸಾಂಗ್ಲಿ ಮತ್ತು ಕೊಲ್ಹಾಪುರಗಳಲ್ಲಿ ಪ್ರವಾಹ ಸಂಭವಿಸುತ್ತದೆ ಎಂಬ ಮಹಾರಾಷ್ಟ್ರದ ಆಕ್ಷೇಪಣೆಗಳಿಗೆ ಯಾವುದೇ ತಾತ್ವಿಕ ಆಧಾರವಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದರು.
ಈ ಸಂಬಂಧ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಸಚಿವರು, ಆಲಮಟ್ಟಿ ಅಣೆಕಟ್ಟೆ ನಿರ್ಮಾಣಕ್ಕೂ ಮುನ್ನವೇ ಸಾಂಗ್ಲಿ ಪ್ರದೇಶದಲ್ಲಿ ಪ್ರವಾಹಗಳು ಸಂಭವಿಸುತ್ತಿದ್ದವು ಎಂಬುದನ್ನು ದಾಖಲೆಗಳ ಮೂಲಕ ಸಾಬೀತುಪಡಿಸಲಾಗಿದೆ. ಇದರಿಂದಾಗಿ, ಅಣೆಕಟ್ಟೆ ಎತ್ತರವನ್ನು ಹೆಚ್ಚಿಸುವುದು ಪ್ರವಾಹಕ್ಕೆ ಕಾರಣವಾಗುವುದಿಲ್ಲ ಎಂಬುದು ತಿಳಿದುಬಂದಿದೆ ಎಂದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಾಢ್ಯರೊಂದಿಗೆ ಜೊತೆಯಾಗುವುದು ಜನದ್ರೋಹ
ಮಹಾರಾಷ್ಟ್ರ ಸರ್ಕಾರವು ಈ ವಿಷಯದಲ್ಲಿ ಕೃಷ್ಣಾ ನ್ಯಾಯಾಧೀಕರಣ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿತ್ತು. ಆದರೆ, ಈ ವಾದಗಳನ್ನು ತಿರಸ್ಕರಿಸಲಾಗಿದೆ. ಕರ್ನಾಟಕ ಸದಾ ನದಿ ನೀರಿನ ಹಕ್ಕುಗಳಿಗಾಗಿ ಹೋರಾಡುತ್ತಿದ್ದು, ಸೂಕ್ತ ಹಂತಗಳಲ್ಲಿ ತನ್ನ ನಿಲುವು ಸ್ಪಷ್ಟವಾಗಿ ಸ್ಥಾಪಿಸುತ್ತದೆ ಎಂದು ತಿಳಿಸಲಾಗಿದೆ. ಈ ಮೂಲಕ, ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಳವು ಮಹಾರಾಷ್ಟ್ರದ ಪ್ರದೇಶಗಳಿಗೆ ಪ್ರವಾಹಕ್ಕೆ ಕಾರಣವಾಗುವುದಿಲ್ಲ ಎಂಬುದನ್ನು ದೃಢಪಡಿಸಲಾಗಿದೆ ಎಂದು ಹೇಳಿದರು.
#ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519 ಮೀಟರ್ ನಿಂದ 524 ಮೀಟರ್ ಗೆ ಹೆಚ್ಚಿಸುವುದರಿಂದ ಸಾಂಗ್ಲಿ ಮತ್ತು ಕೊಲ್ಹಾಪುರಗಳಲ್ಲಿ ಪ್ರವಾಹವಾಗುತ್ತದೆ ಎಂಬ ಮಹಾರಾಷ್ಟ್ರದ ಆಕ್ಷೇಪಣೆಗೆ ಯಾವುದೇ ತಾತ್ವಿಕ ಆಧಾರವಿಲ್ಲ.
— M B Patil (@MBPatil) August 1, 2025
ಆಲಮಟ್ಟಿ ಅಣೆಕಟ್ಟೆ ನಿರ್ಮಾಣಕ್ಕೂ ಮುನ್ನವೇ ಸಾಂಗ್ಲಿ ಭಾಗದಲ್ಲಿ ಪ್ರವಾಹ ಸಂಭವಿಸುತ್ತಿತ್ತು ಎಂಬುದು ದಾಖಲೆಗಳಿಂದ… pic.twitter.com/JJTPSXBR6Y