ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ/ಹೊರಗುತ್ತಿಗೆ ನೌಕರರ ಬಗ್ಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಅಪಮಾಡಿದ್ದು, ತೀವ್ರ ಲಘುವಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ (ಕೆಸಾಪ್ಸ್) ಗುತ್ತಿಗೆ ನೌಕರರ ಸಂಘ ಆಗ್ರಹಿಸಿದೆ.
ಸರ್ಕಾರಿ ನೌಕರರ ಸಮಸ್ಯೆಗಳು ಮತ್ತು ಅಗತ್ಯ ಸೌಲಭ್ಯಗಳ ಕುರಿತು ಚರ್ಚಿಸಲು ಸರ್ಕಾರಿ ನೌಕರರ ಸಂಘವು ಸರ್ಕಾರಕ್ಕೆ ಅಜೆಂಡಾಗಳ ಪಟ್ಟಿಯನ್ನು ಸಲ್ಲಿಸಿದೆ. ಆ ಪಟ್ಟಿಯಲ್ಲಿ, “ಹೊರಗುತ್ತಿಗೆ/ಗುತ್ತಿಗೆ ನೌಕರರ ಸೇವೆಯಿಂದ ಪ್ರಾಮಾಣಿಕ ಹಾಗೂ ಗುಣಮಟ್ಟದ ಸೇವೆಯನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಈ ರೀತಿಯ ಸೇವೆಯಿಂದ ಪ್ರಾಮಾಣಿಕ ಸರ್ಕಾರಿ ನೌಕರರು ಸಾರ್ವಜನಿಕರ ನಿಂದನೆಗೆ ಗುರಿಯಾಗುತ್ತಿದ್ದಾರೆ. ಅಲ್ಲದೆ, ಜನಸಾಮಾನ್ಯರಿಗೆ ಸರ್ಕಾರದ ಜನಪರ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸಲು ಸಾಧ್ಯವಾಗುತ್ತಿಲ್ಲ” ಎಂದು ಉಲ್ಲೇಖಿಸಿದೆ. ಈ ಅಂಶವನ್ನು ಗುತ್ತಿಗೆ ನೌಕರರು ಆಕ್ಷೇಪಿಸಿದ್ದು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ವಿರುದ್ದ ಗಂಭೀರ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕೆಸಾಪ್ಸ್) ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ದಾವಣಗೆರೆಯ ಜಗದೀಶ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. “ಗುತ್ತಿಗೆ ನೌಕರರನ್ನು ಷಡಾಕ್ಷರಿ ಅವರು ಲಘುವಾಗಿ ಕಂಡಿದ್ದು, ಅಪಮಾನ ಮಾಡಿದ್ದಾರೆ. ಯಾವ ಇಲಾಖೆಯ ಯಾವ ಗುತ್ತಿಗೆ ನೌಕರರು ಅಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಅದರಿಂದ, ಯಾವ ಸರ್ಕಾರಿ ನೌಕರರು ನಿಂದನೆಗೆ ಒಳಗಾಗಿದ್ದಾರೆ. ಯಾವ ಇಲಾಖೆಯಲ್ಲಿ ಗುತ್ತಿಗೆ ನೌಕರರಿಂದಾಗಿ ಸರ್ಕಾರದ ಜನಪರ ಯೋಜನೆಗಳು ಜನರಿಗೆ ತಲುಪಿಲ್ಲ ಎಂಬುದನ್ನು ಷಡಾಕ್ಷರಿ ಅವರು ಲಿಖಿತವಾಗಿ ನೀಡಬೇಕು. ತಮ್ಮ ಹೇಳಿಕೆಯನ್ನು ಸಾಬೀತು ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
“ರಾಜ್ಯದ ಆಡಳಿತವು ಸುಸೂತ್ರವಾಗಿ ನಡೆಯುತ್ತಿರುವುದಕ್ಕೆ ಗುತ್ತಿಗೆ ನೌಕರರು ಕಾರಣ. ಆದರೆ, ಸರ್ಕಾರಿ ನೌಕರರು ಉದ್ದೇಶ ಪೂರ್ವಕವಾಗಿ ಗುತ್ತಿಗೆ ನೌಕರರಿಗೆ ಅಪಮಾನ ಮಾಡಿದ್ದಾರೆ. ಅವರ ವಿರುದ್ದ ತೀವ್ರ ಪ್ರತಿಭಟನೆಗೆ ಕರೆ ಕೊಡುತ್ತೇವೆ” ಎಂದು ಆರೋಪಿಸಿದ್ದಾರೆ.
“ಕಾಯಂ ನೌಕರರು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆಯಲ್ಲಿ ಮಕ್ಕಳ ಬಿಸಿಯೂಟ ಸಾಮಗ್ರಿಗಳನ್ನು ಮನೆಗೆ ಸಾಗಿಸುವ ಮತ್ತು ಕಾಯಂ ಶಿಕ್ಷಕರು ವಿದ್ಯಾರ್ಥಿಗಳಿಗೆ ಸರಿಯಾಗಿ ಬೋಧನೆ ಮಾಡದೇ ಇರುವುದು ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಕಾಯಂ ನೌಕರರು ಸರಿಯಾಗಿ ಸೇವೆ ಸಲ್ಲಿಸುತ್ತಿಲ್ಲ ಎಂಬ ಆರೋಪಗಳಿವೆ. ಅಲ್ಲದೆ, ಈವರೆಗೆ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದಿರುವ ಎಲ್ಲ ನೌಕರರೂ ಸರ್ಕಾರಿ ನೌಕರರೇ ಆಗಿದ್ದಾರೆ. ಯಾವೊಬ್ಬ ಗುತ್ತಿಗೆ/ಹೊರಗುತ್ತಿಗೆ ನೌಕರರೂ ಭ್ರಷ್ಟಾಚಾರ ಆರೋಪದಲ್ಲಿ ಸಿಕ್ಕಿಕೊಂಡಿಲ್ಲ. ಅಂದರೆ, ಸರ್ಕಾರಿ ನೌಕರರೇ ಅಪ್ರಮಾಣಿಕರು, ಗುತ್ತಿಗೆ ಕಾರ್ಮಿಕರಲ್ಲ ಎಂಬುದನ್ನು ಇದು ಸೂಚಿಸುತ್ತದೆ” ಎಂದು ಹೇಳಿದ್ದಾರೆ
ಪ್ರಕರಣ ಸಂಬಂಧ ಈದಿನ.ಕಾಮ್ ಜೊತೆಗೆ ಮಾತನಾಡಿದ ಕೆಸಾಪ್ಸ್) ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಜಗದೀಶ್, “ಸರ್ಕಾರಿ ನೌಕರರ ಹೇಳಿಕೆ ಖಂಡನಾರ್ಹ. ಈ ಬಗ್ಗೆ ಚರ್ಚಿಸಲು ಷಡಾಕ್ಷರಿ ಅವರಿಗೆ ಕರೆ ಮಾಡಿದ್ದೆವು. ಆದರೆ, ಅವರು ಆ ಅಜೆಂಡಾಗಳಿಗೆ ನಾನು ಸಹಿ ಮಾಡಿಲ್ಲವೆಂದು ಹೇಳಿ ಜಾರಿಕೊಂಡಿದ್ದಾರೆ. ಅವರು ಸಹಿ ಮಾಡದೇ, ಸರ್ಕಾರಕ್ಕೆ ಕಳಿಸಿದೇ ಅದು ಮುಖ್ಯ ಕಾರ್ಯದರ್ಶಿಗಳ ಬಳಿಗೆ ಹೋಗಲು ಸಾಧ್ಯವಿಲ್ಲ. ನೌಕರರ ವರ್ಗದಲ್ಲಿನ ಖದೀಮರು, ಭ್ರಷ್ಟರು ಎಲ್ಲರೂ ಕಾಯಂ ನೌಕರರೇ ಆಗಿದ್ದಾರೆ. ಗುತ್ತಿಗೆ ನೌಕರರು ಯಾವುದೇ ಲಂಚ ಪಡೆದು, ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿಲ್ಲ. ಆದರೆ, ಅವರು ಗುತ್ತಿಗೆ ನೌಕರರನ್ನೇ ದೂರುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವರದಿ ಓದಿದ್ದೀರಾ?: 2024ರಲ್ಲಿ ದ್ವೇಷ ಭಾಷಣಗಳ ಸಂಖ್ಯೆ 74.4% ಹೆಚ್ಚಳ; ಬಿಜೆಪಿಗರೇ ಪ್ರಮುಖ ಆರೋಪಿಗಳು!
“ನಾನು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ಕಾಯಂ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಪರೀಕ್ಷಿಸಿದೆ, ಚಿಕಿತ್ಸೆ ನೀಡದೆ ತಮ್ಮ ಸಂತ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹಣದ ಗೀಳಿಗೆ ಬಿದ್ದಿದ್ದಾರೆ. ಆದರೆ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಎಲ್ಲ ರೀತಿಯ ಸೇವೆ ಒದಗಿಸುವವರು ಗುತ್ತಿಗೆ ನೌಕರರು. ಇದು, ಆರೋಗ್ಯ ಇಲಾಖೆ ಮಾತ್ರವಲ್ಲ, ಎಲ್ಲ ಇಲಾಖೆಗಳಲ್ಲೂ ಹೆಚ್ಚಿನ ಕೆಲಸ ಮಾಡುವವರು ಗುತ್ತಿಗೆ ನೌಕರರೇ ಆಗಿದ್ದಾರೆ. ಸರ್ಕಾರ ನೌಕರರು ಕೇವಲ ದಬ್ಬಾಳಿಕೆ ಮಾಡಿಕೊಂಡು, ಅಡ್ಡಾಡುತ್ತಿದ್ದಾರೆ. ಲಕ್ಷ-ಲಕ್ಷ ವೇತನ ಪಡೆಯುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಗುತ್ತಿಗೆ/ಹೊರ ಗುತ್ತಿಗೆ ನೌಕರರ ಮೇಲೆ ಸರ್ಕಾರಿ ನೌಕರರು ಮಾಡಿರುವ ಆರೋಪಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಸ್ಪಷ್ಟನೆ ಪಡೆಯಬೇಕು. ಒಂದು ವೇಳೆ, ಗುತ್ತಿಗೆ ನೌಕರರು ತಪ್ಪು ಮಾಡಿದ್ದಲ್ಲಿ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರಿ ನೌಕರರ ಕರ್ಮಕಾಂಡಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಅವರ ವಿರುದ್ಧ ಕ್ರಮ ಜರುಗಿಸಬೇಕು. ಗುತ್ತಿಗೆ ನೌಕರರ ಭಾವನೆಗೆ ದಕ್ಕೆ ತರುವಂತಹ ಅಜೆಂಡಾಗಳನ್ನು ನೀಡದೆಂತೆ ಎಚ್ಚರಿಕೆ ನೀಡಬೇಕು” ಎಂದು ಮುಖ್ಯಕಾರ್ಯದರ್ಶಿಗಳನ್ನು ಆಗ್ರಹಿಸಿದ್ದಾರೆ.
Horaguthige nuokararige three month salary haladikke heli amele mathdi sir sumsumne matu baruthe antha mathadabaradu sir nimma kelasa nimige namma kelasa namige salary agilla andhru kelasa madthivi ade nimigella one month salary agilla andre summane eruthira avagale gothagodu novu