ತಡರಾತ್ರಿವರೆಗೂ ಹಾಲ್‌ ಟಿಕೆಟ್‌ ವಿತರಣೆ | ದೇಶಕ್ಕೆ ಕೆಟ್ಟ ಸಂದೇಶ ರವಾನಿಸಿದ ಕೆಪಿಎಸ್‌ಸಿ: ಪ್ರಲ್ಹಾದ ಜೋಶಿ ಕಿಡಿ

Date:

Advertisements

ರಾಜ್ಯದಲ್ಲಿ 384 ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಮೇ 3ರಂದು ಕೆಪಿಎಸ್‌ಸಿ ನಡೆಸುತ್ತಿದ್ದ ಮುಖ್ಯ ಪರೀಕ್ಷೆಗೆ ತಡರಾತ್ರಿವರೆಗೂ ಅರ್ಜಿ ಸಲ್ಲಿಕೆ ಮತ್ತು ಹಾಲ್‌ಟಿಕೆಟ್‌ ವಿತರಿಸಿದ ಕರ್ನಾಟಕ ಸರ್ಕಾರ ದೇಶಕ್ಕೆ ಒಂದು ಕೆಟ್ಟ ಸಂದೇಶ ರವಾನಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗ, 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಿಗೆ ಶುಕ್ರವಾರವೂ ಅರ್ಜಿ ಸ್ವೀಕರಿಸಿ ತಡರಾತ್ರಿವರೆಗೂ ಹಾಲ್‌ಟಿಕೆಟ್‌ ವಿತರಿಸಿದ್ದು, ಪಾರದರ್ಶಕತೆಗೆ ವಿರುದ್ಧ ನಡೆ ಅನುಸರಿಸಿದೆ. ನೇಮಕಾತಿಯಲ್ಲಿ ಒಂದು ಮಾದರಿ ಸಂಸ್ಥೆಯಾಗಿ ಇರಬೇಕಾದ ಕೆಪಿಎಸ್‌ಸಿ ಕಪ್ಪು ಚುಕ್ಕೆಯಾಗಿದೆ. ರಾಜ್ಯ ಸರ್ಕಾರದ ದುರಾಡಳಿತದಲ್ಲಿ ತನ್ನ ಪಾತ್ರವನ್ನೂ ದೇಶಕ್ಕೆ ಪ್ರದರ್ಶಿಸಿದೆ ಎಂದು ಆರೋಪಿಸಿದ್ದಾರೆ.

“ಕೆಪಿಎಸ್‌ಸಿ ಪರೀಕ್ಷೆ ಆರಂಭದ ಮೊದಲಿನಿಂದಲೂ ಗೊಂದಲ ಸೃಷ್ಟಿಸುತ್ತ, ಎಡವಟ್ಟುಗಳನ್ನು ಮಾಡುತ್ತಲೇ ಬಂದಿದೆ. ಪರೀಕ್ಷೆಯಲ್ಲಿ ಸಾಲು ಸಾಲು ತಪ್ಪು, ಎಡವಟ್ಟುಗಳಾಗಿವೆ. ಕನ್ನಡದಲ್ಲಿ ತಪ್ಪು ತಪ್ಪಾಗಿ ಪ್ರಶ್ನೆಗಳ ಪ್ರಕಟ, ಎರಡೆರಡು ಬಾರಿ ಪರೀಕ್ಷೆ, ಅದರಲ್ಲಿಯೂ ಸಾಲು ಸಾಲು ತಪ್ಪುಗಳು ಹೀಗೆ ಲೋಪದೋಷಗಳ ಸರಮಾಲೆಯನ್ನೇ ಹೊದ್ದಿದೆ. ರಾಜ್ಯ ಸರ್ಕಾರದ ಜತೆ ಕೆಪಿಎಸ್‌ಸಿ ಸಹ ದುರಾಡಳಿತದ ಪರಮಾವಧಿ ಮೆರೆದಿದೆ” ಎಂದು ಸಚಿವ ಜೋಶಿ ಹರಿಹಾಯ್ದಿದ್ದಾರೆ.

Advertisements

ಕರ್ನಾಟಕದ ಪಾಲಿಗೆ ಪಾಪದ ಸಂಸ್ಥೆ

“ಕರ್ನಾಟಕ ಲೋಕಸೇವಾ ಆಯೋಗ ಸದ್ಯ ಕರ್ನಾಟಕ ಮತ್ತು ಕನ್ನಡಿಗರ ಪಾಲಿಗೆ ಒಂದು ಶಾಪದ ಸಂಸ್ಥೆಯಾಗಿದೆ. ರಾತ್ರೋರಾತ್ರಿ ಹಾಲ್‌ಟಿಕೆಟ್‌ ವಿತರಿಸಿದರೆ ಅಭ್ಯರ್ಥಿಗಳು ಬರುವುದಾದರೂ ಹೇಗೆ? ಮಹಿಳಾ ಅಭ್ಯರ್ಥಿಗಳು ದೂರದ ಊರುಗಳಿಂದ ಬೆಂಗಳೂರಿಗೆ ಬರಲು ಹೇಗೆ ಸಾಧ್ಯ? ಕೆಪಿಎಸ್‌ಸಿ ಇದ್ಯಾವುದರ ಅರಿವೂ ಇಲ್ಲದಂತೆ ನಡೆದುಕೊಂಡಿದೆ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಲ್ಲಿ ನಡೆಯಿತು ಸರ್ವಪಕ್ಷ ಸಭೆ?

“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಕೆಪಿಎಸ್‌ಸಿ ವಿಚಾರವಾಗಿ ಸದನದಲ್ಲಿ “ಸರ್ವಪಕ್ಷ ಸಭೆ ಕರೆಯುತ್ತೇನೆ. ಎಲ್ಲರಿಂದಲೂ ಅಭಿಪ್ರಾಯ ಪಡೆಯುತ್ತೇನೆ.. ಕನ್ನಡಿಗರಿಗೆ ಅನ್ಯಾಯ ಆಗಲು ಬಿಡುವುದಿಲ್ಲಾ…” ಎಂದೆಲ್ಲಾ ಹೇಳಿದ್ದೀರಿ. ಎಲ್ಲಿ ನಡೆಸಿದ್ದೀರಿ ಸರ್ವಪಕ್ಷ ಸಭೆ? ಮತ್ತೂ ಕನ್ನಡಿಗರಿಗೆ ತಾವು ಮಾಡಿದ್ದೇನು” ಎಂದು ಪ್ರಶ್ನಿಸಿದ್ದಾರೆ.

ತಮ್ಮ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ದುರಾಡಳಿತ ಮಿತಿ ಮೀರಿದೆ. ಕೆಪಿಎಸ್‌ಸಿ ದೇಶಕ್ಕೆ ಕಪ್ಪು ಚುಕ್ಕೆಯಾಗಿರುವುದು ಅತ್ಯಂತ ದುರಾದೃಷ್ಟಕರ ಮತ್ತು ಸರ್ಕಾರದ ಅತಿ ದೊಡ್ಡ ವೈಫಲ್ಯವೂ ಆಗಿದೆ. ರಾತ್ರೋರಾತ್ರಿ ಹಾಲ್ ಟಿಕೆಟ್ ವಿತರಿಸಲು ಮುಂದಾಗುತ್ತಿರುವ ನಿಮಗೆ ಸ್ವಲ್ಪವಾದರೂ ನಾಚಿಕೆ, ಮಾನ-ಮರ್ಯಾದೆ ಇಲ್ಲವೇ? ಸಾರ್ವಜನಿಕ ಸೇವೆಯಲ್ಲಿ ತೊಡಗಬೇಕೆಂಬ ಅಭ್ಯರ್ಥಿಗಳ ಜೀವನದ ಜತೆ ಹೀಗೆ ಚೆಲ್ಲಾಟವಾಡುತ್ತ ದುರಾಡಳಿತದಲ್ಲೇ ತೊಡಗಿರುವ ತಮ್ಮ ಸರ್ಕಾರ ರಾಜ್ಯದ ಜನತೆಗೆ ಬೇಡವಾಗಿದೆ. ನಿಮ್ಮ ರಾಜೀನಾಮೆಯಿಂದ ಮಾತ್ರ ರಾಜ್ಯಕ್ಕೆ ನ್ಯಾಯ ಸಿಗಲು ಸಾಧ್ಯ. ಹಾಗಾಗಿ ಮೊದಲು ರಾಜೀನಾಮೆ ನೀಡಿ ಮನೆಗೆ ಹೋಗಿ” ಎಂದು ಆಗ್ರಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X