ಸ್ತ್ರೀವಾದದ ಆವರಣಕ್ಕೆ ಬಂದ ಮೇಲೆ ನಿಜವಾದ ಅರ್ಥದಲ್ಲಿ ನನ್ನನ್ನು ನಾನು ಅರಿಯಲು ಆರಂಭಿಸಿದೆ : ಡಾ ಎಚ್‌ ಎಸ್‌ ಶ್ರೀಮತಿ

Date:

Advertisements

“ನನ್ನ ಬದುಕಿನ ಒಂದು ಹಂತದಲ್ಲಿ ಸ್ತ್ರೀವಾದ ಎಂಬ ಅರಿವಿನ ವಲಯಕ್ಕೆ ನನಗೆ ಪ್ರವೇಶ ದೊರೆಯಿತು. ಒಬ್ಬ ಹೆಣ್ಣಿನ ಕಷ್ಟ ಸುಖಗಳನ್ನು ಅರಿಯುವುದು, ಸಂತೇಯಸುವುದು ಬೇರೆ. ಇಡೀ ಹೆಣ್ನು ಸಮುದಾಯಕ್ಕೆ ಅನ್ವಯಿಸಿದಂತೆ ಅಧ್ಯಯನ ನಡೆಸಿ ಅವಳ ಮೂಲ ಚಹರೆಗಳನ್ನು ಅರಿಯುವಲ್ಲಿ ನೆರವಾಗಿ ನಿಲ್ಲುವುದೇ ಬೇರೆ. ಸ್ತ್ರೀವಾದದ ಆವರಣಕ್ಕೆ ಬಂದ ಮೇಲೆ ನಿಜವಾದ ಅರ್ಥದಲ್ಲಿ ನನ್ನನ್ನು ನಾನು ಅರಿಯಲು ಆರಂಭಿಸಿದ್ದು” ಎಂದು ಡಾ. ಎಸ್‌ ಎಸ್‌ ಶ್ರೀಮತಿ ಹೇಳಿದರು.

ಕರ್ನಾಟಕ ಲೇಖಕಿಯರ ಸಂಘ ಇಂದು ಮತ್ತು ನಾಳೆ ಆಯೋಜಿಸಿರುವ ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ನನ್ನ ಈ ಕತೆಯನ್ನು ಹೇಳಲು ಇಲ್ಲಿ ಕಾರಣವಿದೆ. ಎಪ್ಪತ್ತೈದರ ವಯಸ್ಸಿಗೆ ಕಡೆದು ಕಟ್ಟೆ ಹಾಕಿದ್ದಾದರೂ ಏನು ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಆದರೆ ಮನಸ್ಸು ಮಾಡಿದರೆ ಏನನ್ನಾದರೂ ಮಾಡಬಹುದು ಎಂಬ ಆತ್ಮವಿಶ್ವಾಸ ಈಗೀಗಷ್ಟೇ ಮೊಳೆಯುತ್ತಿದೆ. ಆದರೆ, ನನ್ನಲ್ಲಿ ಹೆಚ್ಚಿನ ಸಮಯವಿಲ್ಲ. ಇದಕ್ಕೆ ನಾನು ಪಶ್ಚಾತ್ತಾಪವೇನೂ ಪಡುವುದಿಲ್ಲ. ಆದರೆ, ನಾವು ಹಿರಿಯರು ಎಳವೆಯಲ್ಲಿ ಗೊತ್ತುಗುರಿ ಇಲ್ಲದೇ, ಕ್ರಮವೂ ಇಲ್ಲದೇ ನಮ್ಮ ಅಗತ್ಯಗಳಿಗಾಗಿ ಹೋರಾಡಿದೆವು. ಹೋರಾಟ ಎಂದರೆ ಚಂಡಿ ಹಿಡಿಯುವುದು ಅಷ್ಟೇ. ಈ ಬಗೆಯ ಗಳಿಕೆ ಅಧಿಕಾರ ಸ್ಥಾನವು ಕೊಡುವ ದಾನ ಎನಿಸಬಹುದೇ ಹೊರತು, ಇದರಲ್ಲಿ ನಮ್ಮ ಸಾಧನೆ, ನಮ್ಮ ಚಹರೆ ಎಂಬ ಯಾವ ಸ್ವಂತಿಕೆಯೂ ಇಲ್ಲ. ಆದರೆ, ನಮ್ಮ ದಾರಿಯ ಅನುಭವಗಳನ್ನು ಕಿರಿಯರಿಗೆ, ಮಹಿಳೆಯರು-ಪುರುಷರು ಎಲ್ಲರಿಗೂ ದಾಟಿಸುವುದರಿಂದ ಅವರು ಚಿಕ್ಕ ವಯಸ್ಸಿನಲ್ಲೆ ತಮ್ಮ ಸ್ವಂತದ ಚಹರೆಯನ್ನು ಅರಿಯುತ್ತಾರೆ ಮತ್ತು ಅವರು ಹೆಚ್ಚು ಕಾಲ ಸ್ವಂತದ ಚಹರೆಯ ಆನಂದ, ತೃಪ್ತಿಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

“ಅರಿವೆಂಬುದು ಬಿಡುಗಡೆ ಎಂಬುದು ಈ ಸಮ್ಮೇಳನದ ಆಶಯ ವಾಕ್ಯ. ಸ್ವಂತದ ಚಹರೆಯ ಅರಿವಿನಿಂದಲೇ ನಮ್ಮ ಈ ಅರಿವಿನ ಪಯಣ ಮೊದಲಾಗಬೇಕಾಗುತ್ತದೆ. ಹಾಗಲ್ಲದೇ ಪಡೆದ ಅರಿವು ಹೆಚ್ಚೆಂದರೆ ಬೌದ್ಧಿಕ ನೆಲೆ ತಲುಪಬಹುದೇ ಹೊರತು ನಮ್ಮ ಬದುಕಿನ ಭಾಗವಾಗಿ ಉಳಿಯಲಾರದು. ಸ್ವಂತ ಚಹರೆ ಎಂದರೆ ನಾನು ಯಾರು ಎಂಬ ಅರಿವು. ಆದರೆ, ನಮಗೆ ಈ ಅರಿವು ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಸ್ವಂತದ ಚಹರೆಯನ್ನು ಅರಿಯುವ ಹಾದಿಯಲ್ಲಿ ನಡೆಯುವುದಕ್ಕೂ ಮೊದಲು ನಾವು ತಿಳಿದಿರಬೇಕಾದ ಕೆಲವು ಪ್ರಾಥಮಿಕ ಸಂಗತಿಗಳಿವೆ. ಹುಟ್ಟಿನಿಂದ ಪ್ರಕೃತಿದತ್ತವಾಗಿ ನಮಗೆ ಒಂದು ಚಹರೆ ಬರುತ್ತದೆ. ಹುಟ್ಟಿನ ದೇಹಲಕ್ಷಣಗಳನ್ನು ವಿಸೇಷವಾಗಿ ಲೈಂಗಿಕ ಅಂಗಲಕ್ಷಣಗಳನ್ನು ಹಿಡಿದು ನಾವೆಲ್ಲರೂ ಹೆಣ್ಣು ಗಂಡು ಎಂಬ ಒಂದು ಚಹರೆಯನ್ನು ಪಡೆಯುತ್ತೇವೆ. ಸಾಮಾನ್ಯವಾಗಿ ಹುಟ್ಟಿನಿಂದ ಪ್ರಕೃತಿದತ್ತವಾಗಿ ಬರುವ ಈ ಚಹರೆಯು ನಮ್ಮ ಆಯ್ಕೆಯದೇನೂ ಅಲ್ಲವಾದರೂ ನಮಗೆ ಆಪ್ತವೆನಿಸುತ್ತದೆ. ಆನಂದ, ತೃಪ್ತಿಗಳನ್ನೂ ನೀಡುತ್ತದೆ. ಆದರೆ, ಇದು ತೀರಾ ಸ್ಥೂಲವಾದ ಒಂದು ವಿವರಣೆ ಮಾತ್ರ. ಏಕೆಂದರೆ ಕೆಲವೊಮ್ಮೆ ವ್ಯಕ್ತಿಗಳಿಗೆ ತಮ್ಮ ದೇಹಲಕ್ಷಣಗಳು ತೋರುವ ಚಹರೆಗಳು ನಮ್ಮವಲ್ಲ ಎಂದು ತೀವ್ರವಾಗಿ ಅನುಭವವಾಗುತ್ತದೆ. ದೇಹಲಕ್ಷಣವು ತಮ್ಮ ಆಂತರಿಕ ವ್ಯಕ್ತಿತ್ವದೊಂದಿಗೆ ಮೇಳೈಕೆ ಆಗುತ್ತಿಲ್ಲ ಎಂಬ ಅನುಭವಕ್ಕೆ ತುತ್ತಾಗುತ್ತಾರೆ. ಈ ಚಹರೆಯೊಂದಿಗೆ ಆಪ್ತತೆ, ಜೀವನಾನಂದ ತೃಪ್ತಿಗಳನ್ನು ಕಾಣಲಾರದೆ ಹೋಗುತ್ತಾರೆ. ಅಂಥವರಲ್ಲಿ ಚಹರೆಯ ಬಗೆಗಿನ ತೊಳಲಾಟ ಆಗಲೇ ಮೊದಲಾಗುತ್ತದೆ. ಉಳಿದವರಿಗೆ ಈ ಚಡಪಡಿಕೆಯು ಬಹುಶಃ ಪ್ರೌಢ ವಯಸ್ಕರಾಗುವ ವೇಳೆಗೆ ಮೊದಲಾಗುತ್ತದೆ.

Advertisements
೪

“ಈ ಮೊದಲ ಚಹರೆಯ ನಂತರದಲ್ಲಿ ಅಥವಾ ಇದರ ಜೊತೆ ಜೊತೆಗೆ ನಾವು ನಮ್ಮ ನಮ್ಮ ಸಾಮಾಜಿಕ ಚಹರೆಗಳನ್ನು ಪಡೆದುಕೊಳ್ಳುತ್ತೇವೆ. ಇದನ್ನು ನಮ್ಮ ಮೇಲೆ ಹೇರಲಾಗುತ್ತದೆ. ಇದರಲ್ಲಿ ನಮಗೆ ಆಯ್ಕೆಯ ಅವಕಾಶವೇನೂ ಇಲ್ಲ. ಮತ್ತು ಬೇಕೆಂದರೂ, ಬೇಡವೆಂದರೂ ಇದು ನಮಗೆ ಅಂಟಿಕೊಂಡೇ ಉಳಿಯುತ್ತದೆ. ಸಾಮಾಜಿಕ ಚಹರೆ ಎಂಬುದು ನಮ್ಮನ್ನು ಆವರಿಸಿರುವ ವ್ಯವಸ್ಥೆಯು ತನ್ನ ಆಳ್ವಿಕೆಯ ಪ್ರಾಬಲ್ಯಕ್ಕಾಗಿ ರೂಪಿಸಿ ಜಾರಿಗೊಳಿಸುವ ಒಂದು ರಾಜಕಾರಣ. ಒಂದು ತಂತ್ರಗಾರಿಕೆ. ಮನುಷ್ಯ ಚಹರೆಯ ಒಂದು ಹಂತದಲ್ಲಿ ಪಿತೃಪ್ರಧಾನತೆಯು ಪ್ರಭಾವಶಾಲಿಯಾಗಿ ನೆಲೆಸಿದ ನಂತರದಲ್ಲಿ ಸಾಮಾಜಿಕ ಚಹರೆ ಎಂಬ ಈ ತಂತ್ರಗಾರಿಕೆಯು ನಮ್ಮೆಲ್ಲರ ಮೇಲೂ ಅಧಿಕಾರವನ್ನು ಸ್ಥಾಪಿಸಿಬಿಟ್ಟಿದೆ. ಇದರ ಸಾಧನೆಗಾಗಿ ಅದು ಪ್ರತ್ಯೇಕೀಕರಣ ತಂತ್ರವನ್ನು ಬಳಸುತ್ತದೆ. ಅಂದರೆ ನಮ್ಮ ನಮ್ಮಲ್ಲೇ ಶ್ರೇಣೀಕರಣವನ್ನು ಏರ್ಪಡಿಸಿ, ನಾವು ಪರಸ್ಪರ ದ್ವೇಷದಲ್ಲಿ ಬೀಳುವಂತೆ ಮಾಡುತ್ತದೆ. ನಮ್ಮೆಲ್ಲರ ಬದುಕುಗಳ ವೈಯಕ್ತಿಕ ಹಾಗೂ ಸಾಮಾಜಿಕ ತೊಳಲಾಡಗಳೂ ಇಲ್ಲಿಂದಲೇ ಮೊದಲುಗೊಳ್ಳುತ್ತದೆ” ಎಂದರು.

ವೇದಿಕೆಯಲ್ಲಿ ಹಿರಿಯ ಸಾಹಿತಿ ರಾಜೇಂದ್ರ ಚನ್ನಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ ಎಚ್‌ ಎಲ್‌ ಪುಷ್ಪಾ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಡಾ ವೂಡೇ ಪಿ ಕೃಷ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಅಗ್ರಹಾರ ಕೃಷ್ಣಮೂರ್ತಿ, ಬಿ ಟಿ ಲಲಿತನಾಯಕ್‌, ಹೇಮಾ ಪಟ್ಟಣ ಶೆಟ್ಟಿ, ಶಶಿಕಲಾ ವಸ್ತ್ರದ, ಡಾ ಕೆ ನಾರಾಯಣ, ಡಾ ಹಂಪನಾ, ಡಾ ಮನು ಬಳಿಗಾರ್‌, ಡಾ ವಿಜಯಮ್ಮ, ಕಲೇಸಂನ ಮಾಜಿ ಅಧ್ಯಕ್ಷರುಗಳಾದ ಹೇಮಲತಾ ಮಹಿಷಿ, ಡಾ ಸಂಧ್ಯಾ ರೆಡ್ಡಿ, ಡಾ. ನಾಗಮಣಿ ಎಸ್‌ ರಾವ್‌, ವನಮಾಲಾ ಸಂಪನ್ನಕುಮಾರ್‌, ಡಾ ವಸುಂಧರಾ ಭೂಪತಿ ಸೇರಿದಂತೆ ರಾಜ್ಯದ ಪ್ರಮುಖ ಸಾಹಿತಿಗಳು ಉಪಸ್ಥಿತರಿದ್ದರು.

05b4125da454a168537d9df817254267
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ: SIT ತನಿಖೆ ನಿಷ್ಪಕ್ಷಪಾತವಾಗಿ ಮುಂದುವರಿಸಲು ಸರ್ಕಾರಕ್ಕೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಬರ್ಬರ ಕೊಲೆಗಳ ಪ್ರಕರಣಗಳ...

ಪಿಒಪಿ ಬಳಸಲ್ಲ ಎಂದು ಗಣೇಶೋತ್ಸವ ಸಮಿತಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಿ: ಈಶ್ವರ ಖಂಡ್ರೆ ಸೂಚನೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್‌ಗೆ ಅನುಮತಿ ನೀಡುವ...

ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್‌ ವಶಕ್ಕೆ, ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತ ಒಂದು ದಿನದ ನಿಷೇಧಾಜ್ಞೆ ಜಾರಿ

ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ವಿಚಾರಣೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ...

Download Eedina App Android / iOS

X