ಕರ್ನಾಟಕ ಅರಣ್ಯ ಇಲಾಖೆಯ ಪಡೆಗಳ ಮುಖ್ಯಸ್ಥರಾಗಿ ಐಎಫ್‌ಎಸ್ ಅಧಿಕಾರಿ ಮೀನಾಕ್ಷಿ ನೇಗಿ ನೇಮಕ

Date:

Advertisements

ಕರ್ನಾಟಕ ಅರಣ್ಯ ಇಲಾಖೆಯ ಪಡೆಗಳ ಮುಖ್ಯಸ್ಥರಾಗಿ ( ಎಚ್‌ಒಎಫ್‌ಎಫ್) ಹಿರಿಯ ಐಎಫ್‌ಎಸ್ ಅಧಿಕಾರಿ ಮೀನಾಕ್ಷಿ ನೇಗಿ ನೇಮಕಗೊಂಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ಹಲವಾರು ಮಹಿಳೆಯರು ಸೇವೆ ಸಲ್ಲಿಸಿದ್ದಾರೆ. ಐಎಫ್‌ಎಸ್‌ ಮಹಿಳಾ ಅಧಿಕಾರಿಗಳು ಕೂಡ ಕೆಲಸ ಮಾಡಿದ್ದಾರೆ. ಆದರೆ ಈವರೆಗೂ ಇಲಾಖೆಯ ಅತ್ಯುನ್ನತ ಹುದ್ದೆಯನ್ನು ಮಹಿಳೆಯೊಬ್ಬರು ಅಲಂಕರಿಸಿರಲಿಲ್ಲ.

ಇದೇ ಮೊದಲ ಬಾರಿಗೆ ಕರ್ನಾಟಕದ ಅರಣ್ಯ ಪಡೆಗಳ ಮುಖ್ಯಸ್ಥರಾಗಿ ಐಎಫ್‌ಎಸ್ ಹಿರಿಯ ಮಹಿಳಾ ಅಧಿಕಾರಿ ಮೀನಾಕ್ಷಿ ನೇಗಿ ಚುಕ್ಕಾಣಿ ಹಿಡಿಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

Advertisements

ಮೀನಾಕ್ಷಿ ನೇಗಿ ಯಾರು?

ಮೀನಾಕ್ಷಿ ನೇಗಿ ಅವರು ಮೂಲತಃ ಉತ್ತರಖಂಡ ರಾಜ್ಯದವರು. ಐಎಫ್‌ಎಸ್ ಅಧಿಕಾರಿಯಾಗಿ ಕರ್ನಾಟಕಕ್ಕೆ ನಿಯೋಜನೆಗೊಂಡವರು. 1989ರ ಬ್ಯಾಚ್‌ ಕರ್ನಾಟಕ ಕೇಡರ್‌ ಅಧಿಕಾರಿಯಾಗಿ ಮೂರೂವರೆ ದಶಕದಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಮೀನಾಕ್ಷಿ ನೇಗಿ ಅವರು ಅವರು ಅರಣ್ಯ ಪಡೆಗಳ ಮುಖ್ಯಸ್ಥರಾಗುವ ಮೊದಲು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿದ್ದರು. ಕರ್ನಾಟಕ ಅರಣ್ಯ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಕುರಿತು ಉನ್ನತ ಮಟ್ಟದ ಸಮಿತಿ ಸಭೆ ಸೇರಿ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಈಗ ಅವರು ಕರ್ನಾಟಕ ಸೇವೆಗೆ ಮರಳಿದ್ದಾರೆ.

Meenakshi Negi 1

ಭಾರತದ ಆಡಳಿತ ವಲಯದಲ್ಲಿ ಅತ್ಯುತ್ತಮ ಹಾಗೂ ದಕ್ಷ ಅಧಿಕಾರಿ ಎಂದೇ ಅವರು ಹೆಸರು ಮಾಡಿದವರು. ಕರ್ನಾಟಕದ ಬಳ್ಳಾರಿ, ಮಂಡ್ಯ, ಚಿಕ್ಕಮಗಳೂರಿನಲ್ಲಿ ಡಿಸಿಎಫ್ ಆಗಿ ಸೇವೆ ಸಲ್ಲಿಸಿದವರು. ಬಳ್ಳಾರಿಯಲ್ಲಿ ಡಿಸಿಎಫ್ ಆಗಿ ಆವರು ಮಾಡಿದ ಕೆಲಸವನ್ನು ಈಗಲೂ ಆ ಭಾಗದವರು ನೆನಪಿಸಿಕೊಳ್ಳುತ್ತಾರೆ. ನಾಲ್ಕು ವರ್ಷ ಮಂಡ್ಯದಲ್ಲೂ ಡಿಸಿಎಫ್ ಆಗಿ ಗಮನ ಸೆಳೆಯುವ ಕೆಲಸ ಮಾಡಿದವರು ಮೀನಾಕ್ಷಿ ನೇಗಿ, ಟಿಂಬರ್ ಮಾರಾಟಕ್ಕೆ ಆನ್‌ಲೈನ್ ಸ್ವರೂಪ ನೀಡಿದವರು. ಆನಂತರ ಕೇಂದ್ರ ಸೇವೆಗೆ ತೆರಳಿ ಅಲ್ಲಿ ಆಯುಷ್ ಇಲಾಖೆ ಜಂಟಿ ಕಾರ್ಯದರ್ಶಿಯಾಗಿದ್ದವರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ವಿಳಂಬ, ನಜೀರ್ ಸಾಬ್‌ರಿಗೆ ಬಗೆದ ದ್ರೋಹವಲ್ಲವೇ?

ಕರ್ನಾಟಕದ ಆಯುಷ್ ಇಲಾಖೆ ಆಯುಕ್ತರಾಗಿ ಸೇವೆ ಸಲ್ಲಿಸಿ ಇಲಾಖೆಯಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದವರು. ಎರಡನೇ ಬಾರಿ ಕೇಂದ್ರ ಸೇವೆಗೆ ಮರಳಿದ ಮೀನಾಕ್ಷಿ ಅವರು ಎರಡು ವರ್ಷದಿಂದ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಹಿಳೆಯರ ಹಕ್ಕುಗಳು, ಅವರ ಆರೋಗ್ಯ ಸಂಬಂಧಿಸಿ ಆಯೋಗ ಕೈಗೊಂಡ ಸುಧಾರಣೆ ಕ್ರಮದ ಹಿಂದೆ ಇದ್ದವರು ಮೀನಾಕ್ಷಿ. ಇದಕ್ಕಾಗಿ ಚೇಂಜ್ ಮೇಕರ್ ಪ್ರಶಸ್ತಿಯೂ ಅವರಿಗೆ ಲಭಿಸಿದೆ. ತಿಂಗಳ ಹಿಂದೆಯಷ್ಟೇ ಮೀನಾಕ್ಷಿ ನೇಗಿ ಅವರನ್ನು ಭಾರತ ಸರ್ಕಾರದಲ್ಲಿ ಕಾರ್ಯದರ್ಶಿ/ಕಾರ್ಯದರ್ಶಿ ಸಮಾನ ಹುದ್ದೆಗಳನ್ನು ಅಲಂಕರಿಸಲು ಆಯ್ಕೆ ಮಾಡಲಾಗಿತ್ತು.

ಐಎಫ್‌ಎಸ್‌ ದಂಪತಿ

ಮೀನಾಕ್ಷಿ ನೇಗಿ ಅವರ ಪತಿ ವಿಜಯ ಶರ್ಮ ಕೂಡ ಕರ್ನಾಟಕ ಕೇಡರ್ ಐಎಫ್‌ಎಸ್‌ ಅಧಿಕಾರಿಯಾಗಿದ್ದರು. ಅತ್ಯುತ್ತಮ ಅಧಿಕಾರಿಯಾಗಿ ಹೆಸರು ಮಾಡಿದವರು. ಕರ್ನಾಟಕ ಸರ್ಕಾರಿ ಸ್ವಾಮ್ಯದ ಜಂಗಲ್ ರೆಸಾರ್ಟ್ ಎಂಡಿಯಾಗಿ ಅದಕ್ಕೆ ಹೊಸ ರೂಪ ನೀಡಿದವರು. ಅವರು ಜನವರಿಯಲ್ಲಿ ನಿವೃತ್ತರಾಗಿದ್ದಾರೆ.

ಮಹಿಳೆಗೆ ಮೊದಲ ಅವಕಾಶ

ಕರ್ನಾಟಕದಲ್ಲಿ ಮಧುಶರ್ಮಾ, ರೀತು ಕಕ್ಕರ್ ಅವರು ಹಿಂದೆ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ( ಪಿಸಿಸಿಎಫ್) ಆಗಿ ಸೇವೆ ಸಲ್ಲಿಸಿದ್ದಾರೆ. ಅರಣ್ಯ ಪಡೆಗಳ ಮುಖ್ಯಸ್ಥರಾಗುವ ಅವಕಾಶ ಸಿಗಲಿಲ್ಲ. ಈಗ ಇಲಾಖೆಯಲ್ಲಿ ಹಿರಿತನ ಹೊಂದಿರುವ ಮೀನಾಕ್ಷಿ ನೇಗಿ ಅವರಿಗೆ ಈ ಅವಕಾಶ ಒದಗಿ ಬಂದಿದೆ.

ಕರ್ನಾಟಕ ಅರಣ್ಯ ಇಲಾಖೆ ಸೇವೆಯಲ್ಲಿ ಸದ್ಯ 25ಕ್ಕೂ ಐಎಫ್‌ಎಸ್ ದರ್ಜೆಯ ಅಧಿಕಾರಿಗಳು ಇದ್ದಾರೆ. ಅದರಲ್ಲಿ ಪಿಸಿಸಿಎಫ್ ಹುದ್ದೆಯಲ್ಲಿಯೇ ಮೂವರು ಇರುವುದು ವಿಶೇಷ. ಕರ್ನಾಟಕದಲ್ಲಿ ಒಟ್ಟು ಎಂಟು ಪಿಸಿಸಿಎಫ್ ಹುದ್ದೆಗಳಿವೆ. ಸದ್ಯ ಮೀನಾಕ್ಷಿ ನೇಗಿ ಅವರೊಟ್ಟಿಗೆ ಸೀಮಾಗರ್ಗ್, ರಾಧಾದೇವಿ ಕೂಡ ಇದ್ದಾರೆ. ಮೀನಾಕ್ಷಿ ನೇಗಿ ಅವರ ನಂತರ ರಾಧಾದೇವಿ, ಸದ್ಯ ಎಪಿಸಿಸಿಎಫ್ ಆಗಿರುವ ಸ್ಮಿತಾ ಬಿಜೂರು ಕೂಡ ಅರಣ್ಯ ಪಡೆಗಳ ಮುಖ್ಯಸ್ಥರ ಹುದ್ದೆ ಅಲಂಕರಿಸುವರು.

ಹಲವು ರಾಜ್ಯಗಳಲ್ಲಿ ಮಹಿಳಾ ಸಾರಥ್ಯ

ಭಾರತದ ಹಲವು ರಾಜ್ಯಗಳಲ್ಲಿ ಅರಣ್ಯ ಪಡೆಗಳ ಮುಖ್ಯಸ್ಥರಾಗಿ ಮಹಿಳೆಯರು ಈ ಹಿಂದೆ ಸೇವೆ ಸಲ್ಲಿಸಿದ್ದಾರೆ. ರಾಜಸ್ಥಾನದಲ್ಲಿ ಸವಿತಾ ಆನಂದ್‌, ಡಾ.ಶೃತಿ ಶರ್ಮ, ತೆಲಂಗಾಣದಲ್ಲಿ ಶೋಭಾ, ಹಿಮಾಚಲ ಪ್ರದೇಶದಲ್ಲಿ ಡಾ.ಸವಿತಾ, ಉತ್ತರಾಖಂಡದಲ್ಲಿ ರಂಜನಾ ಕಾಲ, ವೀಣಾ ಸೇಖಾರಿ, ಹರಿಯಾಣದಲ್ಲಿ ಡಾ.ಅಮರಿಂದರ್ ಕೌರ್ ಅವರು ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X