2013ರಲ್ಲಿ ಕೆಲವು ರಾಜ್ಯ ಸರಕಾರಗಳು ಭೂಸ್ವಾಧೀನ ಕಾಯಿದೆ ಅಂಗೀಕರಿಸಿವೆ. ಸರಕಾರ ಕೈಗಾರಿಕ ಉದ್ದೇಶಕ್ಕೆ ಸ್ವಾಧೀನ ಮಾಡಿಕೊಳ್ಳಬೇಕಾದರೆ, ಶೇ.70ರಷ್ಟು ಜನ ರೈತರು ಒಪ್ಪಿಗೆ ನೀಡಬೇಕು. ಜೊತೆಗೆ ಜೀವನ ಭದ್ರತೆ ಸೇರಿದಂತೆ ಎಲ್ಲ ಅಂಶಗಳನ್ನು ಒಳಗೊಳ್ಳಬೇಕು ಎಂದು ಹೇಳುತ್ತದೆ. ಆದರೆ, ದೇವನಹಳ್ಳಿಯಲ್ಲಿ ಶೇ.80ರಷ್ಟು ಜನ ಭೂಮಿ ಕೊಡಲ್ಲ ಅಂತ ಬರೆದುಕೊಟ್ಟಿದ್ದಾರೆ. ಸರ್ಕಾರಕ್ಕೆ ಕಿವಿಯಿಲ್ಲವೇ ಎಂದು ಸಂಯಕ್ತ ಕಿಸಾನ್ ಮೋರ್ಚಾದ ನಾಯಕ ದರ್ಶನ್ ಪಾಲ್ ಟೀಕಿಸಿದರು.
ಬೆಂಗಳೂರು ಗ್ರಾಮಾಂತಾರ ಜಿಲ್ಲೆಯ ದೇವನಹಳ್ಳಿಯ ಸಾವಿರಾರು ಜನ ಭೂಸ್ವಾಧೀನವಿರೋಧಿಸಿ 1185 ದಿನಗಳ ಹೋರಾಟಕ್ಕೆ ಬೆಂಬಲ ಘೋಷಿಸಿ ಮಾತನಾಡಿದರು.
“ರೈತರ ಒಪ್ಪಿಗೆ ಇಲ್ಲದೇ ಒಂದಿಂಚು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗದು. ನಾನು ಸಂಯಕ್ತ ಕಿಸಾನ್ ಮೋರ್ಚಾದ ಪರವಾಗಿ ಇಲ್ಲಿನ ರೈತರ ಪರವಾಗಿ ಬಂದಿದ್ದೇನೆ. 2020ನ 20ರಂದು ದೆಹಲಿಯಲ್ಲಿ ಸೇರಿದಂತೆ ರೈತಸಂಘಟನೆಗಳ ಒಕ್ಕೂಟ ಒಂದು ಹೋರಾಟಟ ನಡೆಸಲು ತೀರ್ಮಾನ ಮಾಡುತ್ತದೆ. ಮೋದಿ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಮುಂದಾಗಿತ್ತು. ಕಾನೂನಿನ ವಿರುದ್ಧ 13ತಿಂಗಳ ಸುದೀರ್ಘ ಹೊರಾಟಕ್ಕೆ ಮಣಿದ ಮೋದಿ ಸರಕಾರ ಕೃಷಿ ವಿರೋಧಿ ಕಾನೂನುಗಳನ್ನು ವಾಪಸ್ಸು ಪಡೆದುಕೊಂಡಿತು. ಅದೇ ಉತ್ಸಾಹದಲ್ಲಿ ಈ ಹೋರಾಟವೂ ನಡೆಯುತ್ತಿದೆ” ಎಂದರು.
“ಮೂರು ವರ್ಷದ ಸುದೀರ್ಘ ಹೋರಾಟ ಎಂದರೆ ಕಡಿಮೆ ಸಮಯವಲ್ಲ. ಈ ಸುದೀರ್ಘ ಹೋರಾಟಕ್ಕೆ ಸಂಯುಕ್ತ ಹೋರಾಟ ಬೆಂಬಲ ನೀಡುತ್ತಿದೆ. ಇದರ ಭಾಗವಾಗಿ ರೈತರು ಒಂದಿಂಚು ಭೂಮಿಯನ್ನು ಕೊಡುವುದಿಲ್ಲ ಎಂದು ಒಗ್ಗಟ್ಟಾಗಿ ನಿಂತಿರುವುದು ಅಭಿನಂದನಾರ್ಹವಾದದ್ದು. ಅಲ್ಲಿ ಇರುವ ಅರ್ಧ ಎಕರೆ, ಒಂದು ಎಕರೆ ಭೂಮಿಯಲ್ಲಿ ರೈತರು ತರಕಾರಿ, ಹಣ್ಣು ಹಂಪಲ ಬೆಳೆಯುತ್ತಿದ್ದಾರೆ. ಅದನ್ನು ಈಗ ಕಿತ್ತುಕೊಳ್ಳಲು ಹೊರಟಿದೆ. ಈಗ ಒಂದಿಂಚು ಭೂಮಿಯನ್ನು ಕೂಡ ಕೊಡುವುದಿಲ್ಲ ಎಂದು ತೀರ್ಮಾನ ಮಾಡಿರುವುದು ಸಂತೋಷ” ಎಂದು ಹೇಳಿದರು.
“ದೆಹಲಿಯ ಗಡಿಗಳಲ್ಲಿ ಸರಕಾರ ಪ್ರತಿಭಟನೆ ಮಾಡುವಾಗ, ಪಂಜಾಬ್‌ನಲ್ಲಿ ಕಾಂಗ್ರೆಸ್ ಸರಕಾರ ಇತ್ತು. ಆಗ ಬಿಜೆಪಿ ಸರಕಾರ ರೈತರ ವಿರುದ್ಧ ದಾಳಿ ಮಾಡುತ್ತಿತ್ತು. ಪಂಜಾಬ್ ಸರಕಾರ ಎಲ್ಲ ರೀತಿಯಲ್ಲೂ ನೈತಿಕವಾಗಿ, ಹಣಕಾಸಿನ ಮೂಲಕ ಸೇರಿದಂತೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಿತ್ತು. ಆ ಹೋರಾಟದಲ್ಲಿ 700 ಜನ ರೈತರು ಪ್ರಾಣ ಕಳೆದುಕೊಂಡರು. ಪ್ರಾಣ ಕಳೆದುಕೊಂಡ ರೈತರಿಗೆ ಎಲ್ಲರಿಗೂ ತಲಾ 5 ಲಕ್ಷ ರೂ ಪರಿಹಾರ ಮತ್ತು ಮನೆಗೊಂದು ಸರಕಾರದ ಕೆಲಸ ಕೊಡುತ್ತೇವೆ ಎಂದು ಘೋಷಣೆ ಮಾಡುತ್ತು. ಅದರೆ ಕರ್ನಾಟಕದಲ್ಲಿ ಇಲ್ಲಿನ ಸರಕಾರ ಯಾಕೆ ಹೀಗೆ ಈ ರೀತಿಯಲ್ಲಿ ನಡೆದುಕೊಳ್ಳುತ್ತಿದೆ” ಎಂದು ಪ್ರಶ್ನಿಸಿದರು.
“ಸಿದ್ದರಾಮಯ್ಯ ಸರಕಾರ ಬಿಜೆಪಿ ಯಾವ ಪಾತ್ರವನ್ನು ನಿರ್ವಹಿಸಿತ್ತೋ ಅದೇ ರೀತಿ ಕರ್ನಾಟಕದಲ್ಲಿ ಇದೆ. ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ರೈತರು ಇದ್ದಾರೆ. ಆದುದರಿಂದ ರಾಜ್ಯದಲ್ಲಿ ಈ ಹೋರಾಟಕ್ಕೆ ಸರಕಾರ ಮಣಿದು, ರೈತರ ಭೂಮಿ ಪಡೆದುಕೊಳ್ಳಲ್ಲ ಎಂದು ಘೋಷಣೆ ಮಾಡದಿದ್ದರೆ, ದೇಶಾದ್ಯಂತ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.